Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ನವೆಂಬರ ೨೮, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ನವೆಂಬರ ೨೮, ೧೯೪೨

ಪ್ರೀತಿಯ ಕಿಟಿ,

ನಾವು ರೇಷನ್‌ಗಿಂತ ವಿದ್ಯುತ್‌ನ್ನೆ ಹೆಚ್ಚು ಬಳಸಿದ್ದೇವೆ. ಅದರ ಫಲಿತಾಂಶ. ಉಳಿತಾಯ ಎಕಾನಮಿಯಾಗಿ ವಿದ್ಯುತ್‌ನ್ನು ಕಡಿತಗೊಳಿಸುವುದು, ಇನ್ನು ಹದಿನೈದು ದಿನಗಳಿಗೆ ವಿದ್ಯುತ್ತಿಲ್ಲ. ಒಳ್ಳೆಯ ವಿಚಾರ. ಆದರೆ ಅದು ಒಳ್ಳೆಯದೆಂಬುದು ಹೇಗೆ? ಪೂರ್ವಾಹ್ನ ನಾಲ್ಕು ಇಲ್ಲ ನಾಲ್ಕೂವರೆ ಆಗುತ್ತಾ ಓದಲಾಗದಷ್ಟು ಕತ್ತಲಾಗುತ್ತದೆ. ಹುಚ್ಚು ಆಟಗಳಿಂದ ನಾವು ಸಮಯ ಕಳೆಯುತ್ತೇವೆ. ಒಗಟುಗಳನ್ನು ಕೇಳುವುದು, ಕತ್ತಲಲ್ಲಿ ದೈಹಿಕ ಕಸರತ್ತು ಮಾಡುವುದು, ಇಂಗ್ಲಿಷ, ಫ್ರೆಂಚ್ ಮಾತಾಡುವುದು, ಪುಸ್ತಕಗಳ ವಿಮರ್ಶೆ ಮಾಡುವುದು ಇತ್ಯಾದಿ. ಆದರೆ ಇದೆಲ್ಲ ಮುಗಿದು ಕೊನೆಯಲ್ಲಿ ಮತ್ತೆ ಶೂನ್ಯತೆ ಕಾಡುತ್ತದೆ.

ನಿನ್ನೆ ಸಂಜೆ ನಾನು ಹೊಸದೊಂದನ್ನು ಕಂಡುಹಿಡಿದೆ. ನಮ್ಮ ಕಟ್ಟಡದ ಹಿಂಭಾಗದಲ್ಲಿ ದೀಪಗಳಿಂದ ಕಂಗೊಳಿಸುತ್ತಿರುವ ಮನೆಯ ಕಡೆ ಬೈನಾಕೂಲರ ಮೂಲಕ ಇಣುಕತೊಡಗಿದೆ. ದಿನದ ಹೊತ್ತಿನಲ್ಲಿ ಮನೆಯ ಕರ್ಟನ್ನುಗಳನ್ನು ಒಂದು ಸೆಂಟಿಮೀಟರ್‌ನಷ್ಟು ಸರಿಸಿ ನೋಡಲು ಅವಕಾಶವಿರಲಿಲ್ಲ. ಆದರೆ ರಾತ್ರಿಯಲ್ಲಿ ಹಾಗೇ ನೋಡಿದ್ದಲ್ಲಿ ಯಾವ ತೊಂದರೆ ಇರಲಿಲ್ಲ. ಪಕ್ಕದ ಮನೆಯ ಜನ ಇಷ್ಟು ಆಸಕ್ತಿಕರವಾಗಿರುವರೆಂದು ನನಗೆ ಈ ಮೊದಲು ತಿಳಿದಿರಲಿಲ್ಲ. ಒಂದು ಜೋಡಿ ಉಣ್ಣುತ್ತಿತ್ತು, ಇನ್ನೊಂದು ಕುಟುಂಬದ ವರ್ತನೆ ನೋಡಿದರೆ ರಂಗಾಯಣವೇ ಆಗಿತ್ತು: ಇದಕ್ಕೆ ತೀರಾ ವಿರುದ್ದ ದಿಕ್ಕಿನಲ್ಲಿ ಆ ದಂತವೈದ್ಯ ವೃದ್ದ ಹೆಂಗಸೊಬ್ಬಳನ್ನು ಪರೀಕ್ಷಿಸುತ್ತಿದ್ದ, ಆಕೆ ಭಯಂಕರ ಹೆದರಿದ್ದಳು.

ಡಸೆಲ್ ಮಕ್ಕಳೊಂದಿಗೆ ಬಹು ಚೆನ್ನಾಗಿ ಹೊಂದಿಕೊಳ್ಳುವರೆಂದು ಎಲ್ಲರು ಹೇಳುತ್ತಿದ್ದರು. ಅದು ಅವರು ಮಕ್ಕಳನ್ನು ಬಹು ಪ್ರೀತಿಸುವಂತೆ ಮಾಡಿತು. ಈಗ ಅವರ ನಿಜ ಸ್ವಭಾವ ಅರಿವಾಗುತ್ತಿದೆ. ಅದೇ ಹಳೆಯ ಸಂಪ್ರದಾಯದ ಕಟ್ಟುಪಾಡುಗಳಿಗೆ ಪಕ್ಕಾದವರು. ಮತ್ತು ರೀತಿ ನೀತಿಗಳ ಬಗ್ಗೆ ಯಾವಾಗಲೂ ಉಪದೇಶ ಕೊಡುವವರು.

ನನ್ನ ಬೆಡ್‌ರೂಮನ್ನು ಇನ್ನೊಬ್ಬರೊಂದಿಗೆ ಶೇರ್ ಮಾಡಬೇಕಾದ ದುರಾದೃಷ್ಟ ನನ್ನದಾಗಿದೆ. ಅಯ್ಯೋ! ಅಷ್ಟು ಸಣ್ಣ ಕೋಣೆ! ಜೊತೆಗೆ ಆತನ ಪ್ರವಾದಿತನ, ಇದರೊಂದಿಗೆ ಮನೆಯಲ್ಲಿ ಅದಾಗಲೇ ಇರುವ ಮೂವರು ಎಳೆಯರಲ್ಲಿ ನಾನಾಗಲೇ ಕೆಟ್ಟ ವರ್ತನೆಗಳಿಗಾಗಿ ಗುರುತಿಸಲ್ಪಟ್ಟವಳು. ಎಷ್ಟೆಲ್ಲ ಸಂಗತಿಗಳ ನಾನು ಸಹಿಸಿಕೊಳ್ಳಬೇಕಿತ್ತು. ಅವರ ಹಳೆಯ ರೀತಿ ನೀತಿಗಳು, ಎಚ್ಚರಿಕೆಯ ಮಾತುಗಳು, ಹೇಳಿದ್ದನ್ನೆ ಹೇಳುವುದನ್ನು ಕೇಳುವುದನ್ನು ತಪ್ಪಿಸಿಕೊಳ್ಳಲು ನಾನು ಕಿವುಡಾದಂತೆ ವರ್ತಿಸಬೇಕಾಗಿದೆ. ಹೇಳದೇ ಕೇಳದೇ ಕದ್ದು ಓಡುವ ಗುಣದವರಾಗಿರದಿದ್ದರೆ ಅವರ ರೀತಿ ಕೆಟ್ಟದ್ದಾಗಿರಲಿಕ್ಕಿಲ್ಲ. ಮತ್ತು ಎಲ್ಲ ಸಮಯದಲ್ಲೂ ಹೇಳದೇ ಓಡುವ ಜನರ ರೀತಿಗೆ ಅವರು ಕೇವಲ ಮಮ್ಮಿಯನ್ನೆ ಜವಾಬ್ದಾರಳನ್ನಾಗಿಸುವುದಿಲ್ಲ.. ಯಾವಾಗ ನಾನು ಡಸೆಲ್‌ರಿಂದ ಬೈಗುಳಕ್ಕೆ ಒಳಗಾದಾಗಲೆಲ್ಲ, ಮಮ್ಮಿ ಅದನ್ನು ಮತ್ತೆ ವಿಶ್ಲೇಷಿಸುತ್ತಾರೆ. ಹಾಗಾಗಿ ನಾನು ದೂರದ ಮತ್ತು ಹತ್ತಿರದ ಎರಡೂ ಬಿರುಗಾಳಿಗಳನ್ನು ಎದುರಿಸಬೇಕಾಗುತ್ತದೆ. ಆಮೇಲೆ ನನ್ನ ಅದೃಷ್ಟ ಚೆನ್ನಾಗಿದ್ದರೆ, ಮಿಸೆಸ್ ವ್ಯಾನ್ಡ್ಯಾನ್‌ರಿಗೆ ಮತ್ತೊಮ್ಮೆ ಆದ ಘಟನೆಯ ಎಲ್ಲ ಸಂಗತಿಗಳನ್ನು ಒಪ್ಪಿಸಬೇಕು. ಆಗಂತೂ ನಾನು ಯಥಾರ್ಥದಲ್ಲಿ ಚಂಡಮಾರುತವನ್ನೆ ಎದುರುಗೊಳ್ಳುತ್ತೇನೆ.

ಅಡಗುತಾಣದಲ್ಲಿ ಇರುವ ತೀರಾ ತೋರಿಕೆಯ ಕುಟುಂಬದ ತೀರಾ ಕೆಟ್ಟದಾಗಿ ಬೆಳೆದ ಮುಖ್ಯ ಪಾತ್ರವಾಗುವುದು ಕಷ್ಟವಲ್ಲ ಎಂದು ನೀವಂದುಕೊಳ್ಳಬೇಕಿಲ್ಲ. ರಾತ್ರಿ ಸಮಯದಲ್ಲಿ ಹಾಸಿಗೆಯಲ್ಲಿ ಉರುಳಿಕೊಂಡಾಗಲೆಲ್ಲಾ ನನ್ನಿಂದಾಗಿರಬಹುದಾದ ಪಾಪಗಳು, ತಪ್ಪುಗಳ ಕುರಿತು ಯೋಚಿಸುತ್ತೇನೆ. ನನಗೆ ನಗಬೇಕೋ ಅಳಬೇಕೋ ತಿಳಿಯದಾಗುತ್ತದೆ. ಅದು ಆ ಕ್ಷಣ ನಾನ್ಯಾವ ಮನಸ್ಥಿತಿಯಲ್ಲಿದ್ದೆ ಎಂಬುದರ ಮೇಲೆ ಅವಲಂಬಿಸಿರುತ್ತವೆ.

ನಾನೇನಾಗಿರುವೇನೋ ಅಥವಾ ಏನಾಗಬೇಕೆಂದು ಬಯಸುವೆನೋ ಅದಕ್ಕೆ ವಿರುದ್ಧವಾಗಿ ಇರಬೇಕೆಂಬ ಹುಚ್ಚು ಯೋಚನೆ ಮಾಡುತ್ತಾ ನಿದ್ದೆಗೆ ಜಾರುತ್ತೇನೆ. ಬಹುಶಃ ನಾನು ಹೇಗೇ ವರ್ತಿಸಬೇಕೋ ಅದಕ್ಕೆ ಭಿನ್ನವಾಗಿ ವರ್ತಿಸಬೇಕಾಗಬಹುದೇನೋ

ಓ.. ದೇವರೇ. ನಾನು ನಿನ್ನ ಗೊಂದಲಕ್ಕೆ ಈಡುಮಾಡುತ್ತಿದ್ದೇನೆ. ಕ್ಷಮಿಸು. ನಾನು ಹೆಚ್ಚು ಎಳೆಯುವುದಿಲ್ಲ. ಇತ್ತೀಚೆಗೆ ಪೇಪರನ ಕೊರತೆ ಕಾರಣ ನಾವೀಗ ಪೇಪರಗಳನ್ನು ಹೊರಗೆಸೆಯುವಂತಿಲ್ಲ.

ಮತ್ತೇನೆಂದರೆ ಇಲ್ಲಿಯ ಕೊನೆಕೊನೆಯ ಸಾಲುಗಳನ್ನು ನೀನು ಓದಬೇಡ. ನಿನಗೇನೂ ತಿಳಿಯಲು ಸಾಧ್ಯವಿಲ್ಲ. ಅದರಲ್ಲಿ ನೀನು ಯಶಸ್ವಿಯಾಗಲು ಸಾಧ್ಯವಿಲ್ಲ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...