ಡಾ || ಯಲ್ಲಪ್ಪ ಕೆ ಕೆ ಪುರ

#ಸಣ್ಣ ಕಥೆ

ಹಳ್ಳಿ…

0

ಬಂಗಾರ ಬಣ್ಣದ ಕಾರು, ವೇಗವಾಗಿ… ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ? ಅತ್ಯಾಕರ್ಷಕವಾದ ಸ್ಪಿಯರಿಂಗ್, ಮೃದುವಾದ ಗೇರುಗಳು, ಚಾಲಕನ ರಕ್ಷಣೆಗೆಂದೇ ಏರ್‍ಬ್ಯಾಗ್ ಕಂಡು, ರೆಕ್ಕೆ ಬಂದ ಹಕ್ಕಿಯಾಗಿ, ಲೆಕ್ಕತಪ್ಪಿದ ವೇಗದಲ್ಲಿ ಕಾರು ಓಡಿಸತೊಡಗಿದ. ಅದಕ್ಕಿಂತ ವೇಗವಾಗಿ ತನ್ನ ಮನಸ್ಸು ಓಡುತ್ತಿತ್ತು. […]

#ಸಣ್ಣ ಕಥೆ

ಡಿಪೋದೊಳಗಣ ಕಿಚ್ಚು…

ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು… ಡೆವಿಲ್ ವರ್ಕ್‌ಶಾಪು…!! ಯಾರಿಗ್ಯಾರಿಲ್ಲ. ಎಲ್ಲನೂ ಮ್ಯಾನೇಜರ್ ಕುತ್ತಿಗೆಗೆ. ಪುಣ್ಯ ಮಾಡಿ ಇಂಥಾ ನೌಕರಿಗೆ ಬ೦ದಿದ್ದೆನೆಂದು’ ಗೊನಗುತ್ತಾ… ಮನೋಜ್ ಪಾಟೀಲರು, ಗೇಟೊಳಕ್ಕೆ ಬಲಗಾಲಿಟ್ಟರು. ಜನ್ರ ಮನವಿ ಪತ್ರ ನೀಡಿದ್ದು ಓದಿ… ‘ಈ […]

#ಸಣ್ಣ ಕಥೆ

ಅಮ್ಮ

0

‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ… ಕುತ್ರೂಸಾ… ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ…’ ಸೇಕ್ರಿ, ಕ್ರಿಷ್ಣಾ… ಕೊನ್ತೆಮ್ಮ… ಜಂಟಿ… ಜಂಟಿಯಾಗಿ ದೂರ್ವಾಣಿ ಮೂಲ್ಕ ತೀರಾ ಅತಾಸೆಯಿಂದ್ದೇ ವಬ್ರಾದ್ಮೇಲೆ ವಬ್ರು… ಯದ್ಬಿಳಂಗೆ ಮಾತಾಡಿ, ನನ್ನ ಯದ್ಗುಂಡ್ಗೆ ದೆಬ್ಬೆನ ಯೆಚ್ಗೆ ಮಾಡಿದ್ರು. ಅಮ್ಮನೇ ಪ್ರಾಣ, ಅಮ್ಮನಿಗೇ […]

#ಸಣ್ಣ ಕಥೆ

ಮಾದಿತನ

0

ಮುಂಗೋಳಿ… ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ… ವಂದೇ ಸಮ್ನೆ ಅಳುತ್ತಾ, ವುರೀಲೋ… ಬ್ಯಾಡೋ… ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ ಕಡ್ದೆಂಗೆ, ಕೇರಿಗ್ರ ಮಾತುಗ್ಳು ಸಿಟ್ಗಿಮುಳ್ಳಾಗಿದ್ದುವು. ಕುಂತ್ರು… ನಿಂತ್ರು.. ಅವೆಂಥಾ ಮಾತುಗ್ಳು??… ವಮ್ಮೆ, ಅಂದ್ಕೊಂಡಿದ್ದು ಯಷ್ಟೆ ಕಷ್ಟವಾಗ್ಲಿ, ಜಲ್ದಿ ಜಲ್ದಿ… ಮಾಡಿ, ಮುಗ್ಸಿ ಬಿಡ್ತಿವೋ…? ಅಷ್ಟು ವಳ್ಳೆದೆಂದೂ… ಪೆರ್‍ಲಜ್ಜ, […]

#ಸಣ್ಣ ಕಥೆ

ಯಿದು ನಿಜದಿ ಕತೀ…

0

ಯೀ ಕತೀನ ನಾ… ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ…  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು… ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ…’ ಅಂಬಂಗೆ,  ವುಗಾದಿ ಕಳ್ದೆ ಮೂರ್ನೆ ದಿನ್ದ, ಶನಿವಾರದ ಸರಿ ರಾತ್ರಿ ವತ್ತಿನಾಗೆ, ಕೇರಿ ನಾಯ್ಗಳ ಯಿಂಡ್ನಿ ಜೊತ್ಗೆ… ಮನೆ ನಾಯ್ಗಿಳು… ನಾಲ್ಕು ಕೂಡಾ, ಕಂಡಾಬಟ್ಟೆ ಬೊಗ್ಳುತ್ತಿವೆ. ಕೇರಿ ಯಜ್ಮಾನ ಸಣ್ಣಯಲ್ಲಪ್ಪ, […]

#ಸಣ್ಣ ಕಥೆ

ವರ್ಗಿನೋರು

0

ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ… ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ… ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ ಬೆಂಕಿಯಲ್ಲಿಟ್ಟಂಗೆ. ಬಿಸ್ಲೇನು… ಜನ್ರೂ ಬುಸ್… ಬುಸ್. ಮಾತು ಕೆಂಡ ವುಗ್ದಂಗೆ. ಯಿನ್ನೂ ವುಗಾದಿಯ ಯೆಡ ಬಲ್ದ ಬಿಸ್ಲಿಗೆ ರವ್ವಾಟು ‘ರಾವು’ ಜಾಸ್ತಿಯಷ್ಟೆ. ಪೆರ್ಲಜ್ಜ ಯಂದಿನಂತೆ ಮಧ್ಯಾಹ್ನಕ್ಕೆಲ್ಲ ಗಳೇವು […]

#ಸಣ್ಣ ಕಥೆ

ಕೇರೀಜಂ…

0

ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ… ಮಸ್ಗೆಲ್ಗೆ ಆಕಿ, ಗಸ್ಗಾಸಾ… ನುಣ್ಗೆ ತ್ವಟ್ವಟ್ಟೇ… ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ… ಕಟ್ದಿ ತುರ್ಬು, ಗಲ್ಗಂಟೆ ಅಲ್ಡಾದಂಗೆ, ಅತ್ತಿಂದತ್ತಾ… ಯಿತ್ತಿಂದತ್ತಾ ಅಲ್ಹಾಡ್ತಿದ್ರೆ, ಕರ್ಮೈ ಯಳ್ಬಿಸ್ಲಿಗೆ ಮಿಣ್ಮಿಣಿ… ತಾರ್ಹೆಣ್ಣಿಂಗೇ ಮಿಂಚುತ್ತಿತ್ತು! ತಾ ಸುತ್ತಿಕೊಂಡಿದ್ದ, ಮಾಸ್ದಿ ಬಿಳ್ಪಿಂಚೆ ಸಜ್ಜಿ ದೋಸಿಯಂಗೇ ವೂರ್ಗಲ್ವಾಗಿ, ಅಲ್ಲಲ್ಲಿ ಗಂಟ್ಗುಂಟು ತೇಪ್ತೇಪೆಯಾಗಿದ್ದರೆ […]

#ಕವಿತೆ

ಅಂದು – ಇಂದು

0

ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು… ಹುಲ್ಲು, ದವನದಾ ಕೃಷಿಗೇ… ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದೇ ನೆಲ, ಜಲದ ಬಳ್ಳಿಯ ಹೂವುಗಳಿವು! ಒಂದೆದೆಯ ಹಾಲು ಕುಡಿದವರು, ಕೆಲವರು: ದೈವ ಸಮಾನರು! ಅಂದು… ಸೀತೆ ಶ್ರೀರಾಮನಿಂದೇ ಕಾಡಿಗೆ! ಇಂದು… […]

#ಕವಿತೆ

ತಮಾಷೆ ಪದ್ಯಗಳು

0

ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ… ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು… ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ… ಹೆಂಚು ತಿರಿಗಿಸಲು ಸಾಧ್ಯನೇನು?? ಹಾಕಿದ ಹಿಟ್ಟಿಗೆ- ದೋಸೆ ಆಗುವುದೆಂದೇ ಗೊತ್ತು!! ೩ ಹೆಂಚು ಕಪ್ಪೆಂದು, ದೋಸೆ ಹೊರಕ್ಕೆ ಜಿಗಿವುದೇ?? ತೂತಾಗದೇ?! ಹೆಂಚು […]

#ಕವಿತೆ

ಹನಿಗಳು

0

ಕಾದು ಕಾದು ಕೇರಿ ದೂರ ಸರಿತು ಊರಿಂದ! * ಊರೆಂಬಾ… ಬ್ರಹ್ಮ ರಕ್ಕಸನಿಗೆ- ಕೇರೆಂಬಾ… ಬೇತಾಳ! * ಈ ಊರುಕೇರಿ ಎರಡು ಕಣ್ಣುಗಳು! ಒಂದು-ಮೆಳ್ಳಗಣ್ಣು, ಮತ್ತೊಂದು- ಕುರುಡುಗಣ್ಣು! * ಈ ಊರು ಈ ಕೇರಿ ನದಿಯ ಎರಡೂ ದಡಗಳು! ಒಂದು: ಹೊಲಸು ಮತ್ತೊಂದು: ಮಡುಸು! * ಕವಿತೆಯೆಂದರೆ… ಊರು ಕೇರಿ! ಸೂರ್‍ಯ ಚಂದ್ರ ಹಗಲು ಇರುಳು! […]