Home / ಲೇಖನ / ವ್ಯಕ್ತಿ / ನರಸಿಂಹರಾಜು

ನರಸಿಂಹರಾಜು

ನಾನು ಮೊತ್ತ ಮೊದಲು ಹಾಸ್ಯ ನಟ ವರನಟ ಅಪ್ಪಟ ಕಲಾವಿದ ನರಸಿಂಹರಾಜು ಅವರನ್ನು ಕಂಡಿದ್ದು ನನ್ನಳ್ಳಿಯ ಟೆಂಟಿನಲ್ಲಿ. ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಹೊಟ್ಟೆಗೆ ಇಲ್ಲದಿದ್ದರೂ ಕನ್ನಡ-ತೆಲುಗು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದ ಆ ಕಾಲದಲ್ಲಿ ನಮ್ಮೂರು ಟೆಂಟಿಗೆ ಸತ್ಯ ಹರಿಶ್ಚಂದ್ರ-ರತ್ನಗಿರಿ ರಹಸ್ಯ ಸಿನಿಮಾದಲ್ಲಿ ನರಸಿಂಹರಾಜು ಕಾಣಿಸಿಕೊಂಡರೆ ಸಾಕು ಭಲೇ ಖುಷಿ ಪಡುತ್ತಿದ್ದ ಕಾಲವದು !

ಡಾ|| ರಾಜಕುಮಾರ್‌ ನರಸಿಂಹರಾಜು ಅವರ ಜೋಡಿಯಂತೂ ಸೂಪರ್ ಆಗಿತ್ತು.

ನರಸಿಂಹರಾಜು ಅವರನ್ನು ಕಂಡವರು ನಗದವರಿದ್ದರೆ ಹೇಳಿ ? ಅವರ ಹಾವಭಾವ ಭಂಗಿ ಸಪೂರ ಶರೀರ ಹಾಸ್ಯ ಉಕ್ಕುವ ನಟನೆ ಮಾತು ಮುಖಭಾವ ನಿಲ್ಲುವ ಶೈಲಿ. ಇವೆಲ್ಲ ನಮ್ಮನ್ನು ನಗೆಯ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಅವರಿದ್ದರೆ ಸಿನಿಮಾ ಬಲು ಪ್ರಿಯವಾಗುತ್ತಿತ್ತು.

ದಿನಾಂಕ ೨೪-೦೭-೧೯೨೩ ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿದರು.

ತಂದೆ – ರಾಮರಾಜು

ತಾಯಿ- ವೆಂಕಟಲಕ್ಷ್ಮೀ.

ತಂದೆ- ಪೋಲೀಸ್, ಮನೆಯಲ್ಲಿ ನರಸಿಂಹರಾಜು ಹಿರಿಯರು, ಬಹಳ ಸೋಜಿಗದ ಸಂಗತಿಯೆಂದರೆ ಇವರು ಓದಲೇ ಇಲ್ಲ.

ಈ ವೇಳೆಯಲ್ಲೇ ತಂದೆಯ ತಮ್ಮ ಚಿಕ್ಕಪ್ಪ ಲಕ್ಷ್ಮೀಪತಿರಾಜು ತನ್ನಣ್ಣ ತನ್ನತ್ತಿಗೆಯನ್ನು ಕೇಳಿ ಇವರೇ ಸಾಕಿದ್ದಲ್ಲ… ರಂಗ ಕಲಾವಿದನನ್ನಾಗಿ ಮಾಡಲು ಶ್ರಮಿಸಿದರು.

ಸಣ್ಣ ಹುಡುಗನಿಗೆ ಬಣ್ಣ ಹಚ್ಚಿ ನಾಟಕದಲ್ಲಿ ಬಾಲ ಕಲಾವಿದನಾಗಿ ನೋಡಿದರು.

ಮಲ್ಲಪ್ಪನವರ ಶ್ರೀ ಚಂದ್ರ ಮೌಳೇಶ್ವರ ನಾಟಕ ಕಂಪನಿಯಲ್ಲಿ ಎಡ ತೊರೆಯ ಕಂಪನಿ ಹಿರಣ್ಣಯ್ಯನವರ ಮಿತ್ರ ಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚನ್ನಬಸವೇಶ್ವರ ನಾಟಕ ಕಂಪನಿ… ಗಳಲ್ಲಿ ಸುಮಾರು ಮೂರು ದಶಕಗಳವರೆಗೆ ಕಲಾವಿದರಾಗಿ ಪಳಗಿದರು.

ನರಸಿಂಹ ರಾಜು ಅವರು ನಟಿಸಿದ ಬೇಡರ ಕಣ್ಣಪ್ಪ ನಾಟಕವಂತೂ ಸಾವಿರಾರು ಪ್ರದರ್ಶನ ಕಂಡಿತು. ಅವರ ಕಾಶಿಪಾತ್ರವಾಗಲಿ ನಕ್ಷತ್ರಿಕನಾಗಿ ನಟಿಸಿದ ಸತ್ಯ ಹರಿಶ್ಚಂದ್ರವಾಗಲಿ ನಾವಿನ್ನೂ ಮರೆತಿಲ್ಲ. ನಾಯಕ ನಟರಾಗಿ ಪ್ರೊಫೆಸರ್ ಹುಚ್ಚುರಾಯ… ಹೀಗೆ ಒಂದಲ್ಲ ಎರಡಲ್ಲ ೨೫೫ ಚಿತ್ರಗಳಲ್ಲಿ ನಟಿಸಿ ಸೈಸೈ ಜೈಜೈ ಎನಿಸಿಕೊಂಡ ಮೇರು ನಟರಾಗಿದ್ದರು. ಅವರು ತೀರಿದರೆಂದರೆ ಯಾರು ನಂಬರು…

ಸುಮಾರು ಮೂರು ದಶಕಗಳವರೆಗೆ ರಜತ ಪರದೆಯನ್ನು ಆಳಿದರು. ಜನರನ್ನು ನಕ್ಕು ನಗಿಸಿದರು. ಈಗಲೂ ನಮ್ಮ ಮಧ್ಯೆ ಇರುವರು. ಆಗಿನ ಜನರೂ ಹಾಗಿದ್ದರೂ! ನರಸಿಂಹರಾಜುರವರೂ ಹಾಗಿದ್ದರು. ಕಲೆಗೆ ಬೆಲೆಯಿತ್ತು. ಕಲಾವಿದರನ್ನು ಬೆನ್ನು ತಟ್ಟಿ ಜೀವಿಸುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...