ಭಾರತದ ಸಂತನ ಕತೆ

ಭಾರತದ ಸಂತನ ಕತೆ

ಭವ್ಯ ಭಾರತದ ನಿಜವಾದ ಸಂತ ಭಾರತದ ಕ್ಷಿಪಣಿ ಪಿತಾಮಹ ಭಾರತದ ಮಿಸೈಲ್ ಮ್ಯಾನ್… ವೀರ ಸನ್ಯಾಸಿ ಮಹಾ ಸಾಧಕ ನಡೆದಾಡುವ ಬುದ್ಧದೇವನೆಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ದಿನಾಂಕ ೨೭-೦೭-೨೦೧೫ ರಂದು ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಅವರೊಬ್ಬ ಆಜನ್ಮ ಬ್ರಹ್ಮಾಚಾರಿಯಾಗಿದ್ದರು! ಸರಳರೂ ಸಜ್ಜನರೂ ಪ್ರಾಮಾಣಿಕರಾಗಿದ್ದರು. ಮಹಾ ಬುದ್ಧಿವಂತರಿದ್ದರು. ಭವ್ಯ ಭಾರತದ ಕನಸುಗಾರರಾಗಿದ್ದರು. ಮಹಾ ಮಾನವತಾವಾದಿಯಿದ್ದರು ಮಕ್ಕಳೊಂದಿಗೆ ಮಕ್ಕಳಾಗಿರುತ್ತಿದ್ದರು. ಚಿಕ್ಕ ದೊಡ್ಡ ಶಾಲೆಗಳು ಎಂಬುದನ್ನು ಲೆಕ್ಕಿಸದೆ ಭಾರತದ ಉದ್ದಗಲಕ್ಕೂ ಸಂಚರಿಸಿ… ನಾನು ದೇಶಕ್ಕಾಗಿ ದೇಹವನ್ನು ಮನಸ್ಸನ್ನು ಮುಡಿಪಾಗಿಡುತ್ತೇನೆಂದು ಕಲಾಂ ಅವರು ಮಕ್ಕಳಿಗೆಲ್ಲ ಹೇಳಿಕೊಟ್ಟು ಬಲು ಸಂಭ್ರಮಿಸುತ್ತಿದ್ದರು. ನಮ್ಮ ಯುವ ಪೀಳಿಗೆಯಿಂದಲೇ ಭಾರತ ಬದಲಾವಣೆ ಕಾಣಲು ಸಾಧ್ಯವೆಂದು ನಂಬಿದ್ದವರು. ನಾಳೆಗಳ ಬಗ್ಗೆ ಚಿಂತಿಸುತ್ತಿದ್ದರು.

ತಾವು ಇಹಲೋಕ ತ್ಯಜಿಸುವ ಮುನ್ನ ಶಿಲ್ಲಾಂಗ್‌ನ ಭವ್ಯ ಭಾರತೀಯ ನಿರ್ವಹಣಾ ಮಹಾಸಂಸ್ಥೆಯಲ್ಲಿ ಅವರು ಒಂದು ತಾಸಿನಿಂದ ಅದ್ಭುತವಾದ ಅಮೋಘವಾದ ವಿಶೇಷ ಮಹಾ ಉಪನ್ಯಾಸ ನೀಡುತ್ತಲೇ ಇದ್ದರು. ಆಗ ವೇಳೆ ಸಂಜೆ ೦೬.೩೦ ಆಗಿತ್ತು! ಅವರು ಇದಕ್ಕಿದ್ದಂತೆ ಕುಸಿದು ಬಿದ್ದರು! ಅವರಿಗೆ ಹೃದಯಾಘಾತವಾಗಿತ್ತು. ಅವರು ಈಗಾಗಲೇ ಬಹಳ ಸಾರಿ ಹೇಳುತ್ತಲೇ ಬಂದಿದ್ದರು.

“ನನ್ನ ಸಾವಿಗೆ ರಜೆ ಘೋಷಿಸಬೇಡಿ!” ಎಂದೂ…

ಅಬ್ಬಾ! ಬಹು ದೊಡ್ಡ ಬಹು ಜನಪ್ರಿಯ ವ್ಯಕ್ತಿ, ವ್ಯಕ್ತಿತ್ವ ಅವರದು. ಹೀಗಾಗಿ ಅವರ ಗೌರವಾರ್‍ಥ ಏಳು ದಿನಗಳ ಕಾಲ ಶೋಕಾಚರಣೆಗೆ ಇಂಬು ನೀಡಿದೆಯಲ್ಲದೆ ಇಡೀ ಭಾರತದ ಉದ್ದಗಲಕ್ಕೂ ಪ್ರತಿ ಊರು, ಪ್ರತಿ ಗಲ್ಲಿಗಲ್ಲಿ, ಶಾಲೆ, ಕಾಲೇಜು, ಕಛೇರಿ ಮನೆ, ಮನದಲ್ಲಿ ಅವರ ಭಾವಚಿತ್ರ ಅನಾವರಣಗೊಂಡಿದೆ.

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ದಿನಾಂಕ ೧೫-೧೦-೧೯೩೧ ರಲ್ಲಿ ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ರಾಮೇಶ್ವರದಲ್ಲಿ ಹುಟ್ಟಿದ್ದರು. ಬಡ ಕುಟುಂಬವೊಂದರಲ್ಲಿ…

ತಂದೆ- ಜೈನುಲಾಬ್ಡಿನ್ ಮರಾಕಯಾರ್

ತಾಯಿ- ಅಸಿಯಮ್ಮಾ ಜೈನುಲಾಬ್ಡಿನ್

ಮನೆಯಲ್ಲಿ ತುಂಬಾ ಬಡತನವಿದ್ದರಿಂದ ವಿದ್ಯಾಭ್ಯಾಸ ಮಾಡುತ್ತಾ, ಮನೆಮನೆಗೆ ಪೇಪರ್ ಹಾಕಿ ಗಳಿಸಿ ಜ್ಞಾನ ಗಳಿಸಿದರು.

ತಿರುಚಿನಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು.

ಕ್ರಮೇಣ ಮದ್ರಾಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಭೌತವಿಜ್ಞಾನದ ಪದವಿ ಪಡೆದರು. ನಂತರ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮದ್ರಾಸ್‌ನಲ್ಲಿ ಪದವಿ ಪಡೆದರು. ಅವರು ವೃತ್ತಿ ಜೀವನವನ್ನು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿ‌ಆರ್‌ಡಿ‌ಒ) ಆರಂಭಿಸಿದರು. ಅಲ್ಲಿ ಅವರು ರಾಕೇಟ್ ಕ್ಷಿಪಣಿ (ಮಿಸೈಲ್)- ಹೆಲಿಕಾಪ್ಟರ್‌ಗಳನ್ನು ರೂಪಿಸುವಲ್ಲಿ ಉತ್ಸಾಹಿಗಳಾದರು. ನಂತರ ಇಸ್ರೋ ಸಂಸ್ಥೆಗೆ ಸೇರಿದರು.

ಅಲ್ಲಿಂದ ನಾಸಾಕ್ಕೆ ಭೇಟಿ ನೀಡಿ ಸ್ಫೂರ್‍ತಿ ಪಡೆದರು. ಅನಂತರ ಭಾರತದ ಮೊದಲ “ರೋಹಿಣಿ” ಉಪಗ್ರಹವನ್ನು ಮೇಲಕ್ಕೆತ್ತಿದ ರಾಕೆಟ್ಟನ್ನು ತಯಾರಿಸಿದ್ದು ಇವರ ನಿರ್ದೇಶನದಲ್ಲೇ.

ಪೋಖ್ರ್‍ಆನ್-೨ ರ ಸ್ಪೋಟವು ಇವರ ನಿರ್ದೇಶನದಲ್ಲಿ ಆಗಿತ್ತು !

೧೯೯೮ ರಲ್ಲಿ “ಕಲಾಂ ರಾಜು ಸ್ಟೆಂಟ್” ಎಂಬ ಸಾಧನವನ್ನು ಸೋಮಾರಾಜು ಎಂಬ ಹೃದ್ರೋಗ ತಜ್ಞರೊಂದಿಗೆ ಇವರೂ ಸೇರಿ ಅಲ್ಪವೆಚ್ಚದ ಸ್ಟೆಂಟ್‌ಗಳನ್ನೂ ರೂಪಿಸಿದ್ದರವರು. ಭವ್ಯ ಭಾರತದ ಉಪಗ್ರಹ ಯೋಜನೆ- ಖಂಡಾಂತರ ಕ್ಷಿಪಣೆ ಯೋಜನೆ, ಪರಮಾಣು ಶಸ್ತ್ರಾಸ್ತ್ರ ಕಾರ್‍ಯಕ್ರಮ, ಹಗುರ ಯುದ್ಧ ವಿಮಾನ ಯೋಜನೆಗೆ ಮಾರ್‍ಗದರ್‍ಶನ ಮಾಡಿದರು.

ಏನೆಲ್ಲ ಎಷ್ಟೆಲ್ಲ ಅವಿರತ ಕೆಲಸ ಕಾರ್‍ಯಗಳ ಮಧ್ಯೆ ಒತ್ತಡದ ನಡುವೆಯು ಇವರು ಕೆಲವು ಅಮೂಲ್ಯ ಕೃತಿಗಳನ್ನು ರಚಿಸಿರುವರು.

೧. ವಿಂಗ್ಸ್ ಆಫ್ ಫೈರ್ (ಆತ್ಮಕತೆ)

೨. ಟರ್‍ನಿಂಗ್ ಪಾಯಿಂಟ್ಸ್ ಟಾರ್‍ಗೆಟ್ ತ್ರಿ ಬಿಲಿಯನ್

೩. ಇಗ್ನೈಟೆಡ್ ಮೈಂಡ್ಸ್ ಮಿಷನ್ ಇಂಡಿಯಾ

೪. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ವೈಜ್ಞಾನಿಕ ಮಹಾ ಪ್ರಬಂಧಗಳು ಲೇಖನಗಳು ಬೆಳಕು ಕಂಡಿವೆ. ಇವರ ಕುರಿತು ನೂರಾರು ಕೃತಿಗಳು ಎಲ್ಲ ಭಾಷೆಗಳಲ್ಲಿ ಹೊರ ಬಂದಿವೆ.

ಇವರ ವ್ಯಕ್ತಿತ್ವ ಪ್ರತಿಭೆಯನ್ನು ಕಂಡು ಹಲವು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.

೧. ಭಾರತ ರತ್ನ

೨. ಪದ್ಮ ವಿಭೂಷಣ

೩. ಪದ್ಮ ಭೂಷಣ

೪. ಇಂದಿರಾಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ

೫. ಅಮೇರಿಕಾದ ಹೂವರ್ ಪ್ರಶಸ್ತಿ

೬. ಲಂಡನ್ ರಾಯಲ್ ಸೊಸೈಟಿಯ ಕಿಂಗ್ ಚಾರ್‍ಲ್ಸ್ ಪದಕ

೭. ವೀರ ಸಾವರ್‍ಕರ್ ಪ್ರಶಸ್ತಿ- ಹೀಗೆ ಪ್ರಶಸ್ತಿ ಗೌರವಗಳು ಸಾಲು ಸಾಲು

ದೇಶವಿದೇಶಗಳಿಂದ ಹತ್ತಾರು ಗೌರವ ಡಾಕ್ಟರೇಟ್‌ಗಳೂ ಬಂದಿವೆ.

ದಿನಾಂಕ ೧೮-೦೭-೨೦೦೨ ರಂದು ಶ್ರೀಯುತರು ಭವ್ಯ ಭಾರತದ ೧೧ ನೆಯ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ನಿಜಕ್ಕೂ ೧೧ ನೆಯ ಅವತಾರ ಪುರುಷ ಸಿಂಹ, ಸೀಮಾ ಪುರುಷ, ರಾಷ್ಟ್ರಪತಿಯಾಗಿ ಕುರ್‍ಚಿಗೆ ಅಂಟಿಕೊಳ್ಳದೆ, ಕುರ್‍ಚಿಗೂ ದೊಡ್ಡ ವ್ಯಕ್ತಿಯಾಗಿ ಹೆಸರು ಮಾಡಿದರು. ಪೇಪರ್ ಹಾಕುವ ಹುಡುಗ ವಿಶ್ವಚೇತನವಾಗಿ ಹೊರ ಹೊಮ್ಮಲು ಭಾರತದಲ್ಲಿ ಮಾತ್ರ ಸಾಧ್ಯ…

ದೇಶ ವಿದೇಶಗಳ ಸುತ್ತಿ ಸುಳಿದು ವಿಶ್ವ ಶಾಂತಿಗಾಗಿ ಶ್ರಮಿಸಿದ ನಿಜದಿ ಸಂತನೆನಿಸಿದರು. ಅವರಿಗೆ ವಿಶ್ವ ಶಾಂತಿ ನೊಬೆಲ್ ಬಹುಮಾನ ಸಲ್ಲಬೇಕಾಗಿತ್ತು! ಆದರೆ ಯಾಕೋ ಅವರನ್ನು ಮರೆತರು. ನಷ್ಟ ಮಾಡಿಕೊಂಡರು. ಹೌದು! ಅವರೊಬ್ಬ ವಿಶ್ವ ಮಾನವರು ನಿಜಕ್ಕೂ ಅವರೇ ನೊಬೆಲ್ ಮ್ಯಾನ್!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೩,೫೦೦,೦೦೦
Next post ಮಡಿಕೇರೀಲಿ ಮಂಜು

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…