ಮನಸ್ಸು ಮೈ ಹೊರೆ ಎನಿಸಿದಾಗ ನಿನ್ನೆಡೆಗೆ ಹೊರಳುತ್ತೇನೆ. ಈ ವೇಳೆಯಲಿ ಸಾಕಷ್ಟು ಹೇಳುವದಿದೆ. ಅನಿಸಿಕೆಗಳು ನಿವೇದನೆಗಳಾಗಿ, ಸಾವಿನಾಚೆಯ ಬೆಳಕು. ಈ ಬದುಕು ದುಡಿಮೆಗೆ ಸಿಗದ ಮಜೂರಿ, ನೊಂದಣಿಗೆ ಸಿಗದ ದಿನದ ಜೀಕುಗಳು, ಕಂಡದ್ದು ಕಂಡಂತೆ...
ಬಿರು ಬೇಸಿಗೆಯ ಮಧ್ಯಾಹ್ನ ದೂರದಲ್ಲಿ ಎಲ್ಲೋ ಚಹಾದ ಅಂಗಡಿಯಲಿ ರೇಡಿಯೋ ಹಾಡುತ್ತಿದೆ. ರಸ್ತೆ ಇಲ್ಲದ ಊರ ಬಯಲಿನ ತುಂಬ ಸೂರ್ಯ ಚಾಪೆ ಹಾಸಿದ್ದಾನೆ. ಮಾವಿನ ಮರದಲ್ಲಿ ಹಕ್ಕಿಗಳು ನೆರಳಿಗೆ ಕುಳಿತಿವೆ. ಮತ್ತು ಅಂಗಳದ ನೆರಳಿನಲ್ಲಿ...
ಪ್ರತಿನಿತ್ಯ ಒಂದು ಹೊಸ ಅನುಭವ ಹೊತ್ತ ಸೂರ್ಯ ಹುಟ್ಟಿ, ಜಗದ ಜನರ ನೆರೆ ಕೂದಲ ಮಧ್ಯೆ ಒಂದು ನಗೆ, ಒಂದು ಹಾಡು, ಮಲ್ಲಿಗೆ ಅರಳುತ್ತವೆ ಘಮ್ಮಗೆ. ಒಲ್ಲದ ಮನಸ್ಸು ರಾತ್ರಿ ಕಳೆದು, ಬಿಳಿ ಹಕ್ಕಿ...
ನಿನ್ನ ಅರಸಿ ಎಲ್ಲೆಲ್ಲೇ ತಿರುಗಾಡಿದೆ, ನೀ ಮಾತ್ರ ನನ್ನ ಅಂಗಳದ ರಂಗೋಲಿಯಲಿ ಅರಳಿದೆ. ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ, ನೀ ಮನೆಯ ಮುಂದಿನ ಇಬ್ಬನಿಯಲಿ ಪ್ರತಿಬಿಂಬಿಸಿದೆ. ಬಯಲ ಗಾಳಿ ನದಿ ಹಳ್ಳಕೊಳ್ಳದಲಿ ಮಿಂದ...
ಚಲನೆಯ ಗತಿಯಲ್ಲಿ ನಿನ್ನ ನಾದ ಹೂವುಗಳ ಅರಳಿಸಿ ಗಂಧ ತೀಡಿ, ತೊಟ್ಟಿಲ ಜೀಕಿ ನಡೆದ ದಾರಿ ತುಂಬ, ಎಚ್ಚರದ ಹೆಜ್ಜೆಗಳು. ನದಿಯಲ್ಲಿ ನಾವಿಕನ ಹುಟ್ಟಿ ದೀರ್ಘ ಅಲೆಗಳು. ಕಾಲಬೆರಳ ಸಂದಿಯಲಿ ಹುಲ್ಲುಗರಿ ಚಿತ್ತಾರವ ಅರಳಿಸಿ,...
ಅಪರಿಮಿತ ಕತ್ತಲೊಳಗೆ ಬೆಳಕ ಕಿರಣಗಳ ಹುಡುಕಿದೆ. ಒಂದು ಕವಿತೆ ಶಕ್ತಿಯಾಗಿ ಎದೆಗೆ ದಕ್ಕಿತು. ಅಲ್ಲಿ ವಿಶೇಷ ಪರಿಪೂರ್ಣ ಪ್ರೀತಿ ಅರಳಿತು. ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ....
ಬೆಳ್ಳಕ್ಕಿ ಹಿಂಡು ಸೂರ್ಯ ಕಂತುವ ಸಮಯದಲ್ಲಿ ನೆತ್ತಿ ಸವರಿ ಹಾರಿವೆ ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ ದೇವರ ಮನೆಯಲ್ಲಿ ನಂದಾದೀಪ ಉರಿದಿದೆ. ಮರಗಳ ಮೌನಗೀತೆಯನ್ನು ಹಕ್ಕಿಗಳು ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ ಪಾರಿಜಾತ...
ಕತ್ತಲೆಯಲ್ಲಿ ಕತ್ತಲೆ ಆವರಿಸಿದ ರಾತ್ರಿ ನಕ್ಷತ್ರಗಳು ನೆತ್ತಿಯ ಮೇಲೆ ಕುಣಿದಾಡುತ್ತಿವೆ ವಾಸನೆ ಹೊತ್ತ ತಲೆದಿಂಬ ಅವರ ಸುಖನಿದ್ರೆ ಆವರಿಸಿದೆ ಎಣ್ಣೆಯ ಕಮಟು ವಾಸನೆಯಲಿ. ದೂರದಲ್ಲಿ ಎಲ್ಲೋ ನಾಯಿ ಬೆಚ್ಚಿ ಬೊಗಳಿದೆ ಗೂರ್ಖಾನ ಸೀಟಿ ಅರೆಮಂಪರಿನಲಿ...