ಎಲ್ಲಿಯದೋ ಒಂದು ಧ್ವನಿ ಅನುರಣುಸುತ್ತಿದೆ, ಎದೆಯ ಆಳದಲಿ ನಿತ್ಯ ನೂತನದ ತಂಗಾಳಿಯ ಅಲೆಗಳು ಅಪ್ಪಳಿಸಿವೆ ನದಿಯ ದಂಡೆಯಲಿ. ಕೇದಿಗೆ ಅರಳಿ ಘಮ್ಮೆಂದು ಸೂಸಿದ ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ ಹರಿದು ಮೂರು ಸಂಜೆಯ ಹೊತ್ತು ನೀಲಾಂಜನದ ಬೆಳಕು ಹರಡಿದ ...

ನಮ್ಮ ನೆಲವಿದು ಕನ್ನಡ ನಮ್ಮ ಜಲವಿದು ಕನ್ನಡ ನಮ್ಮ ನಾಡಿದು ಕನ್ನಡ ಕನ್ನಡ ಕನ್ನಡ || ಶಿಲ್ಪ ಕಲ್ಪತಲ್ಪವಲ್ಲಿ ಅಂದ ಚೆಂದ ಒಲ್ಮೆಯಲಿ ಒಲುಮೆ ಚಿಲುಮೆ ನಲುಮೆ ತಂಗಾಳಿಯಲಿ ತಂಪ ಸೂಸಿ ಇಂಪಾಗಿ ಕೇಳ ಬರುವ ಕನ್ನಡ || ಸುಂದರ ಸುಮಧುರ ಕನ್ನಡ ಗಿರಿಧಾಮಗಳೆ...

ದೇವಿ ನೀನು ಈ ಜಗವನ್ನ ಆಡಿಸುವಾಕೆ ನೀನೇ ಮಾಯೆ ಸಕಲ ಜೀವಾತ್ಮಗಳ ತಾಯೆ ನೀನೇ ಕಾಯ ಮೋಡಗಳ ಮರೆಯಲಿ ಚಂದ್ರ ಅವಿತರೆ ಇಲ್ಲವಾದನೇ ರಾತ್ರಿಯ ಕತ್ತಲಿನಲಿ ಸೂರ್‍ಯ ಕಾಣದಾದರೆ ಕರಗಿದನೇ ಹುಚ್ಚು ಭ್ರಮೆಗೆ ಮನುಜ ಲೋಕವೆ ಸತ್ಯವೆಂದಿಹನು ಉಸಿರು ನಿಂತರಾಯ್ತು...

ಶಂಕರರಾಯನಿಗೆ ಪುನಹೆಯ ಡಾಕ್ಟರುಗಳು ಮಾಡಿದ ಚಿಕಿತ್ಸೆಯಿಂದ ಸ್ವಲ್ಪವೂ ಗುಣವಾಗಲಿಲ್ಲವೆಂದು ಹಿಂದೆಯೇ ಹೇಳಿದ್ದೇವಷ್ಟೆ. ಅತನ ರೋಗದಸಮಾಚಾರವು ಗವರ್ನರ` ಸಾಹೇಬನಿಗೆ ಮುಟ್ಟಿ ಆತನು ತನ್ನ ಸ್ವಂತ ವೈದ್ಯನಾದ ಕಾಕ್ಸ್ ಎಂಬುವನನ್ನು ಕಳುಹಿಸಿ ಕೊಟ್ಟನು. ...

ಒಳುಬೇರಿನಲ್ಲೆ ಕಡುಬೇರೆಯಾಗಿ ಚೊಕ್ಕಾದ ರೂಪವಾಂತು ವರ ಬೇಡಿಕೊಂಬ ಸ್ಥಿರಲಗ್ನ ಬಂತು ಹತ್ತಿರಕೆ ಹೊತ್ತು ಬಂತು ಹೇ ದೊರೆಯೆ ನಿನ್ನ ವಿಜಯಕ್ಕೆ ತಕ್ಕ ಮತಿಯೇರುವಂತೆ ಮಾಡು ಸಟಿ ತಳ್ಳಿ ನಿನ್ನ ದಿಟದಲ್ಲಿ ಮೂಡಿ ಬರುವಂಥ ಬಲವ ನೀಡು *****...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...