(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ ಎಲ್ಲ ಎಲ್ಲ ಬದುಕಲಿ ನಮ್ಮ ಸಾವು ನೋಡಿ ...

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ ತುಂಬಿ ಹರಿಯುತ್ತಿದ್ದ ನದಿಗ...

ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿ...

ಸುಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆಗಿದ್ದ ಶ್ರೀ – ರಾಯರ ಸಂದರ್ಶನ ತೆಗೆದುಕೊಳ್ಳುವದಕ್ಕೆಂದು ಮೊದಲೇ ನಿಗದಿಯಾದಂತೆ ನನ್ನ ಮಿತ್ರ ಆನಂದನ ಜತೆ ಗೂಡಿ ಅವರ ಮನೆಯನ್ನು ಹತ್ತು ನಿಮಿಷ ಮೊದಲೇ ತಲುಪಿದ್ದಾಗಿತ್ತು. ಹೆಸರಾಂತ ಮಂದಿಯ ಸಂದರ್ಶನ ಮಾಡ...

ಕಸಿಯುತ್ತಾರೆ ಅನ್ನ ಕಾಣುತ್ತಾರೆ ಜೀತದಾಳಿನಂತೆ ಚಿಗುರುವ ಮುನ್ನ ಹಿಸುಕುತ್ತಾರೆ ಮೊಳಕೆಯಲಿ ತೊಗಲು ಸುಲಿವಂಗೆ ಎಲ್ಲುಂಟು ಮಾನವೀಯತೆ ರೆಕ್ಕೆ ಕತ್ತರಿಸಲು ಹಾತೊರೆಯುವ ಅಮಲಿನ ಜನ ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ ಪೂಜಾರಿ ಮುಂದೆ ದೇವನಾಟವೇ? ವಿಜ...

ಪುರುಷರೇ, ನಿಮ್ಮಂತೆ ನಮ್ಮೊಳಗೂ ಇರುವುದೊಂದು ಅಂತರಂಗ! ಲಾಕರಿನಲ್ಲಿಟ್ಟ ಒಡವೆಯಂತೆ ಜೋಪಾನವಾಗಿಟ್ಟಿರುವೆವು- ಅಲ್ಲಿಗೆ ಪರಪುರುಷರ ಪ್ರವೇಶವಾಗದಿರಲೆಂದು ಪುರುಷತ್ವದ ಬಲಾತ್ಕಾರದ ಒತ್ತು ಬೀಳದಿರಲೆಂದು ಬಹಳ ಜೋಪಾನವಾಗಿಟ್ಟಿರುವೆವು! ಕೀಲಿ ಕೈ ಎರಡು...

ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು? ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ ಹಾಗಿಲ್ಲ ಎನುವ ಲೋಕದ ಮಾತಿಗೇನರ್‍ಥ? ಅರ್...

ತಿಮ್ಮರಾಯಪ್ಪನ ಮೆಚ್ಚಿಕೆ ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ಪ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರ...

ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು ಸಂತೋಷದ ತಮಟೆ ಬಾರಿಸಲಿಲ್ಲ ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ ಖರ್‍ಚು ಜಾಸ್ತಿ ಎಂದು ನೊಂದರು ರ್‍ಯಾಂಕ್ ಪಡೆದಳೆಂದು ಬೀಗಿ ತಮಟೆ ಬಾರಿಸಲಿಲ್ಲ ಹೆಚ್ಚು ಓದಿದವನನ್ನು ಹುಡುಕಬೇಕಲ್ಲ ಬೆವರಿಳಿಸತೊಡಗ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....