(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ ಎಲ್ಲ ಎಲ್ಲ ಬದುಕಲಿ ನಮ್ಮ ಸಾವು ನೋಡಿ ...

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ ತುಂಬಿ ಹರಿಯುತ್ತಿದ್ದ ನದಿಗ...

ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿ...

ಸುಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆಗಿದ್ದ ಶ್ರೀ – ರಾಯರ ಸಂದರ್ಶನ ತೆಗೆದುಕೊಳ್ಳುವದಕ್ಕೆಂದು ಮೊದಲೇ ನಿಗದಿಯಾದಂತೆ ನನ್ನ ಮಿತ್ರ ಆನಂದನ ಜತೆ ಗೂಡಿ ಅವರ ಮನೆಯನ್ನು ಹತ್ತು ನಿಮಿಷ ಮೊದಲೇ ತಲುಪಿದ್ದಾಗಿತ್ತು. ಹೆಸರಾಂತ ಮಂದಿಯ ಸಂದರ್ಶನ ಮಾಡ...

ಕಸಿಯುತ್ತಾರೆ ಅನ್ನ ಕಾಣುತ್ತಾರೆ ಜೀತದಾಳಿನಂತೆ ಚಿಗುರುವ ಮುನ್ನ ಹಿಸುಕುತ್ತಾರೆ ಮೊಳಕೆಯಲಿ ತೊಗಲು ಸುಲಿವಂಗೆ ಎಲ್ಲುಂಟು ಮಾನವೀಯತೆ ರೆಕ್ಕೆ ಕತ್ತರಿಸಲು ಹಾತೊರೆಯುವ ಅಮಲಿನ ಜನ ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ ಪೂಜಾರಿ ಮುಂದೆ ದೇವನಾಟವೇ? ವಿಜ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...