ಕಸಿಯುತ್ತಾರೆ ಅನ್ನ
ಕಾಣುತ್ತಾರೆ ಜೀತದಾಳಿನಂತೆ
ಚಿಗುರುವ ಮುನ್ನ
ಹಿಸುಕುತ್ತಾರೆ ಮೊಳಕೆಯಲಿ
ತೊಗಲು ಸುಲಿವಂಗೆ
ಎಲ್ಲುಂಟು ಮಾನವೀಯತೆ
ರೆಕ್ಕೆ ಕತ್ತರಿಸಲು
ಹಾತೊರೆಯುವ ಅಮಲಿನ ಜನ
ನಡೆಸುತ್ತಾರೆ ಕಬಳಿಕೆ ದಬ್ಬಾಳಿಕೆ
ಪೂಜಾರಿ ಮುಂದೆ
ದೇವನಾಟವೇ?
ವಿಜೃಂಭಿಸುತಿದೆ
ಸಂಚು ಹೊಂಚು
ಅತ್ಯಾಚಾರ ಅನಾಚಾರ
ಗಣಿ ಧನ ದಾಹ
ದೇಶದಲಿ ಏನುಂಟು ಏನಿಲ್ಲ
ತಣಿಯದ ಅಧಿಕಾರ ದಾಹ
ಕುರ್‍ಚಿ ಅಲುಗಾಡುತಿದೆ
ಬಿಡಲುಂಟೆ ಕುರ್‍ಚಿ ವ್ಯಾಮೋಹ
ಮೆರೆಯುವುದು
ಕ್ರೌರ್‍ಯ ಸ್ವಾರ್‍ಥ ಬ್ರಷ್ಟಾಚಾರ
ಅಭಿವೃದ್ಧಿ ನೆಪದಲಿ
ಬಡ ರೈತರ ಜೀವಕೆ ಸಂಚಕಾರ
ಜಾತಿ ಅಂಧಕಾರದಲಿ
ಮಾತು ಗೋಸುಂಬೆ
ಅತೃಪ್ತರೇ ತುಂಬಿ
ತುಳುಕುತ್ತಿರುವ
ಜಗತ್ತಿನಲಿ
ಎಲ್ಲಾ ಮುಳ್ಳು ಮುಳ್ಳು
*****