(ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪) ಹರಿವ ಮುಗಿಲ ನೌಕೆಯೇರಿ ಬರುವ ಚಂದ್ರ ಗಗನ ಸಾರಿ ಅರ್ಧ ಮುಳುಗಿ ಅರ್ಧ ಬೆಳಗಿ ನಗುವ ರಜನಿಗೂಡೆಯನಾಗಿ ಕಳೆಯ ಕೊಟ್ಟು ಬೆಳಕನುಟ್ಟು ಉಡುಗಣಂಗಳೊಂದಿಗಿಟ್ಟು ಜಗವನಪ್ಪಿ ನಭವನೊಪ್ಪಿ ಜೀವಕೊಂದು...
ಕಾಣುವ ಕಣ್ಣಿಗೆ ಎಲ್ಲಾ ಬೆರಗು ಕಾಣುವ ಕಣ್ಣಿಗೆ ಎಲ್ಲೆಲ್ಲೂ ಸೊಬಗು ದಿನ ದಿನ ಮೂಡುವ ನಸುಕಿನ ಬೆಳಕಿನ ದಿನ ದಿನ ಮಾಯುವ ಸಂಜೆಯ ಥಳಕಿನ ರಾತ್ರಿಯ ಭವ್ಯಾಕಾಶದ ಗಹನ ಕೋಟಿ ದೀಪಗಳ ದೀಪಾರಾಧನ ಮಳೆಬಿಸಿಲ...
ಹೂ ದಂಡಿ ಹೆಣೆದ ನೀವು ಮಂದಾರವನ್ನೇ ತಂದಿರಲ್ಲಾ ಅಕ್ಕಾ ನಿಮ್ಮದೆಂಥಾ ಸುಮನಸು ತಲುಪಿದೆ ನಿಮ್ಮ ಪುಸ್ತಕ ಸೇರಿದೆ ನನ್ನ ಮಸ್ತಕ ಸಹೋದರಿ ಎಂದಿರಿ ಅದ ರಿಂದ ಸಲುಗೆ ಈ ಪರಿ ಸಾಲುಸಾಲೂ ಕಾವ್ಯ ಗದ್ಯವೋ...
ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ. ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ. ಕೂಲಿ ಕಾರ್ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ. ಬೆವರದಿದ್ದರೆ- ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು ಮನಕ್ಕೆ...
ಸೃಷ್ಟಿ ಚೈತನ್ಯಮೂಡಿ ಕಣಕಣವೂ ಚಿಗುರೊಡೆದು ಮೈತುಂಬಾ ಬಂಗಾರ ಹುಡಿ ಅಂಕುಡೊಂಕು ಗುಡ್ಡ ಬೆಟ್ಟ ಕೊಳ್ಳಗಳ ಗೋಜಲು ಗದ್ದಲಗಳ ದಾಟಿ ಸುಳಿದಾಡಿ ನಿರುಮ್ಮಳ ಹರಿವ ಜೀವನ್ಮುಖಿ ಹೊಲಗದ್ದೆ ಹಸಿರು ಹೂಗಳ ಮೇಲೆಲ್ಲ ಇಬ್ಬನಿ ಕೋಶ ಒಡೆದು...