ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್

ನಂಬಿಕೆ

ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ. ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ ನೋಟ ಕೂರಾಗುವುದು, ನಿಲವು ದೃಢವಾಗುವುದು, ತುಂಬಿ ಹರಿಯುವ ಗಾಳಿ ಬಗೆ ಸೋಸಿ […]

ಪ್ರಾರ್‍ಥನೆ

ಯಾರೋ ಬಂದರು ಯಾರೋ ಹೋದರು ಗೋಡೆ ಮೇಲೆಲ್ಲ ನೆರಳು, ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು ಯಾರದೋ ನುಣುಪು ಬೆರಳು, ಬಂದಿದ್ದರು, ನಿಂತಿದ್ದರು, ನುಡಿಸಲು ಎಣಿಸಿದ್ದರು ಎಂಬ ಭಾವವೊಂದೆ ಉಳಿದಿದೆ, […]

ಊರ್ಮಿಳೆ

ಕರೆದರೂ ತಿರುಗದೆ ಜಿಗಿದು ಓಡಿದಳಲ್ಲ, ಯಾರಿವಳು ಎರಳೆಮರಿ ಎಂದಿರೆ? ಇವಳೆ ಊರ್ಮಿಳೆ, ತುಂಬುಜಂಬುನೇರಳೆ ನಮ್ಮ ಮಲೆನಾಡ ಸಿಹಿಪೇರಲೆ. ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ ನನ್ನ […]

ತೀ ನಂ ಶ್ರೀ

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು […]

ಭೂಮಿ ಗುಂಡಾಗಿದೆ ನಿಜತಾನೆ?

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು […]

ಪರಮಹಂಸ

ಏನಿದೀ ಜಿಗಿದಾಟ ಕಿವಿಹರಿವ ಕೂಗಾಟ ಇದುವರೆಗು ಕೇಳರಿಯದೀ ಆರ್ಭಟ? ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ ಇವನಾಡುವಾಟ! ಅವರಿವರ ನಾಲಗೆಯ ಕಿತ್ತು ತಲೆಯೊಳು ನೆಟ್ಟು ಬೆಳೆಸಿಹನು ಇವನೊಂದು […]

ಅಪಘಾತ

ಸ್ವಾಮಿ, ಇದೆ ಕಡೆಗೀಟು; ತಲೆತಲಾಂತರದಿಂದ ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ ಎಂಥ ಘನ ಬಾದರಾಯಣ ದೈತ್ಯಬಂಧವೂ ದಾಟಬಾರದ ಕಟ್ಟಕಡೆಗಟ್ಟು ಇದರೀಚೆ ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ […]

ಪದ್ಮಗಣ – ಒಂದು ಟಿಪ್ಪಣಿ

ಪ್ರೊ. ತೀ.ನಂ. ಶ್ರೀಯವರು ನವೋದಯ ಕಾವ್ಯದಲ್ಲಿ ಬಳಕೆಯಾದ ಛಂದೋವಿನ್ಯಾಸಗಳನ್ನು ಕುರಿತ ತಮ್ಮ ಮೂರು ಲೇಖನಗಳಲ್ಲಿ ಅನೇಕ ಮೌಲಿಕವಾದ ಅಂಶಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. (ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, […]

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ, ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ, ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು, ಉಂಡದ್ದು ಉದರ […]

ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ […]