ವಿಶ್ವ ಮಟ್ಟದ ಕೊರಿಯಾದ ಇಂಚಿಯಾನ್‌ಗಳಲ್ಲಿ ಜರುಗಿದ ೨೦೧೪ ರ ಏಷ್ಯನ್ ಗೇಮ್ಸ್‌ನ ರಿಲೆಯಲ್ಲಿ ಬಂಗಾರದ ಸಾಧನೆ ಮಾಡಿರುವ ರಾಜ್ಯದ ಹೆಮ್ಮೆಯ ಓಟಗಾರ್‍ತಿ ಚಿನ್ನದ ಜಿಂಕೆಯೆಂದೇ ಖ್ಯಾತರಾಗಿರುವ ಎಂ.ಆರ್‌. ಪೂವಮ್ಮ ಅವರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಂದಿದೆ.

ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ೨೦೧೪ ರ ಏಷ್ಯನ್ ಗೇಮ್ಸ್‌ನಲ್ಲಿ ಮಿಂಚಿದ ಮಹಾಸಾಧಕಿ ಚಿನ್ನದ ರಾಣಿ ಎಂ.ಆರ್‌. ಪೂವಮ್ಮ ೪೦೦ ಮೀ ಓಟದಲ್ಲಿ ಕಂಚು ಹಾಗೂ ೪೦೦ x ೪ ಮೀ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ ವಿಖ್ಯಾತಿ ಇವರದು!

ಎಂ.ಆರ್. ಪೂವಮ್ಮ ೨೦೧೩ ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿಯೂ ೪೦೦ ಮೀ ಓಟದಲ್ಲಿ ಬೆಳ್ಳಿ ಹಾಗೂ ರಿಲೆಯಲ್ಲಿ ಬಂಗಾರ ಪದಕವನ್ನು ತಮ್ಮ ಸ್ವಂತ ಮಾಡಿಕೊಂಡಿರುವರು.

ಇನ್ನು ತಮ್ಮ ಭುಜದ ಮೇಲೆ ಗಾಯದ ಸಮಸ್ಯೆಯ ಮಧ್ಯೆಯೂ ಏಷ್ಯನ್ ಗೇಮ್ಸ್‌ನಲ್ಲಿ ಹುರುಪಲಿ ಸ್ಪರ್ಧಿಸಿದ್ದ ಪ್ಯಾರಾ ಈಜು ಪಟು ಭವ್ಯ ಭಾರತೀಯ ಎಂಬ ನವ ಇತಿಹಾಸ ಬರೆದ ಬೆಂಗಳೂರಿನ ಶರತ್‌ಗಾಯಕ್ವಾಡ್ ಅವರಿಗೂ ಕನ್ನಡ ನಾಡಿನ ಹೆಮ್ಮೆಯ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಂದಿದೆ.

ಶ್ರೀಯುತರು- ಈ ಗೇಮ್ಸ್‌ನಲ್ಲಿ ಆರು ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಈ ಹಿಂದೆ ಇದೇ ಗೇಮ್ಸ್‌ನಲ್ಲಿ ಅತ್ಲೀಟ್ ಚಿನ್ನದ ರಾಣಿ ಪಿ.ಟಿ. ಉಷಾ ಅವರು ಗೆದ್ದಿದ್ದ ಐದು ಪದಕಗಳ ದಾಖಲೆಯನ್ನೂ ಇವರು ಮುರಿದು, ಅತ್ಯಾಮೋಘ ಸಾಧನೆ ಮಾಡಿ ಮಹಾಸಾಧಕರ ಪಟ್ಟಿಗೆ ಸೇರ್ಪಡೆಯಾಗಿರುವರು.

ಮುದ್ದು ಪುಟಾಣಿಗಳೆ… ನಾನು ಇಂಜಿನಿಯರ್, ಡಾಕ್ಟರ್, ಐ‌ಎ‌ಎಸ್, ಐಪಿ‌ಎಸ್…. ಆಗುವನೆಂದು ಗುರಿ ಹೊಂದಬೇಡಿ! ನಾನು ಒಳ್ಳೆಯ ಕ್ರೀಡಾ ಪಟುವಾಗುವೆ. ದೇಶಕ್ಕೆ ಕೀರ್ತಿ ತರುವೆ. ವಿಶ್ವಮಟ್ಟದಲ್ಲಿ ಭವ್ಯ ಭಾರತದ ಕೀರ್ತಿಪಾತಕೆಯನ್ನು ಮುಗಿಲಿಗೇರಿಸುವೆ ಎಂಬ ಗುರಿನೂ ಹೊಂದಿರಿ. ಅಲ್ಲವೇ??
*****