Home / ಲೇಖನ / ಭಾಷೆ

ಭಾಷೆ

ಭಾಷೆ ಬಹಳ ಹಗುರಾದ ಸಾಧನವಾದ್ದರಿಂದ ಅದರ ಪ್ರಶ್ನೆ ಬಂದಾಗಲೆಲ್ಲ ಅದನ್ನು ನಾವು ಏನುಬೇಕಾದರೂ ಮಾಡಬಹುದು ಎಂದು ತಿಳಿಯುತ್ತೇವೆ. ಅದು ಸಾಧ್ಯವಿಲ್ಲ ಅನಿಸಿದಾಗ ಯಾರು ಯಾರನ್ನೋ ದೂರುತ್ತೇವೆ. ಫರ್ಡಿನಾಂಡ್ ದ ಸಸ್ಸ್ಯೂರ್ ತನ್ನ A Course in General...

ಯಾವುದೇ ಜೀವಂತ ಸಂಸ್ಕೃತಿಗೆ ಎಲ್ಲಾ ಕಾಲದಲ್ಲಿಯೂ ಸವಾಲುಗಳು ಇದ್ದದ್ದೇ. ಅದು ಸಹಜ ಮತ್ತು ಸ್ವಾಭಾವಿಕ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕನ್ನಡಕ್ಕೂ ತನ್ನ ಎಲ್ಲಾ ಕಾಲಗಳಲ್ಲಿಯೂ ಸವಾಲುಗಳು ಇದ್ದವು ಮತ್ತು ಅವು ಇಂದಿಗೂ ಇವೆ. ಇಂತಹ ಸವಾಲುಗಳನ್...

ಕನ್ನಡದ ಆತಂಕಗಳು ಅಸಂಖ್ಯ. ಇದು ಸಾವಿರ ವರ್ಷಗಳ ಚಾರಿತ್ರಿಕ ಸತ್ಯ. ಅದರಲ್ಲೊಂದು-ಆಂಗ್ಲ ಕಂಪ್ಯೂಟರ್. ಇದು ಈ ಹೊತ್ತಿನ ಆತಂಕ. ಅಂತರರಾಷ್ಟ್ರೀಯ ವಲಯದಲ್ಲಿ ಕಂಪ್ಯೂಟರ್ ಒಂದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಚಕ್ರಾಧಿಪತ್ಯವನ್ನು ಅಮೆರಿ...

ನಮ್ಮ ನ್ಯೆಸರ್ಗಿಕ ಭಾಷೆ ವಿದ್ಯಮಾನೀಯ (phenomenal) ಜಗತ್ತಿಗೆ ಸೇರಿದುದು. ವಿದ್ಯಮಾನೀಯ ಜಗತ್ತೆಂದರೆ ನಮಗೆ ಸಾಮಾನ್ಯವಾಗಿ ತೋರುವ, ಭಾಸವಾಗುವ ಹಾಗೂ ಅನುಭವಕ್ಕೆ ಬರುವ ವಿಷಯಗಳಿಂದ ರೂಪಿತವಾದುದು. ಉದಾಹರಣೆಗೆ, ನಮ್ಮ ಭಾಷೆಗಳು ಹುಟ್ಟುವಾಗ ಜಗತ್...

ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕರ್ನಾಟಕ ಶಿಕ್ಷಣ ಅಧಿನಿಯಮ ೧೯೮೩ರ ೨ನೇ ಪರಿಚ್ಛೇದದ ೨೫ನೇ ವಿಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಎಂದರೆ ‘ಈ ಅಧಿನಿಯಮದ ಪ್ರಕಾರ ನಿಗದಿಗೊಳಿಸಿದ ತರಗತಿಗಳ ಶಿಕ್ಷಣ ಎಂದು ...

ಕಾವೇರಿ ನದಿಯ ನೀರಿಗೆ ರಾಜಕೀಯ ಶಕ್ತಿ ಬಂದಿದೆ; ಯಾಕೆಂದರೆ ಆ ನೀರಿಗೆ ರೈತರಿಗೆ ಬೆಳಕಾಗುವ ಜೀವಶಕ್ತಿಯಿದೆ. ಕೃಷ್ಣಾನದಿಗೂ ಅಷ್ಟೆ, ಕಾವೇರಿಯ ವಿಷಯದಲ್ಲಿ ತಮಿಳುನಾಡಿನ ಜೊತೆ, ಕೃಷ್ಣಾ ವಿಷಯದಲ್ಲಿ ಆಂಧ್ರದ ಜೊತೆ ಜಗಳ ಬಂದಾಗಲೆಲ್ಲ ರೈತರನ್ನೂ ಒಳಗೊ...

‘ಆಳ ನಿರಾಳ’ದ ಈ ಕಾಲಮಿನಲ್ಲಿ ನಾನು ಹಲವಾರು ವಿಷಯಗಳ ಕುರಿತು ಬರೆಯುತ್ತಿದ್ದೇನೆ. ವಾರ ವಾರವೂ ಬರೆಯುವಾಗ ಈ ತರದ ವೈವಿಧ್ಯತೆ ಅನಿವಾರ್ಯವಾಗಿ ಬಂದೇ ಬರುತ್ತದೆ. ಸಾಹಿತ್ಯ, ಭಾಷೆ, ಶಿಕ್ಷಣ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಸಂಸ್ಕೃತಿ ಮುಂತಾದ...

ಈ ಜಗತ್ತಿನಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂದು ಲೆಕ್ಕ ಹಾಕಿದವರಿಲ್ಲ; ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಲೋಕಭಾಷೆಗಳ ಕುರಿತಾಗಿ ಕೆನೆತ್ ಕಟ್ಝ್ನರ್ ಬರೆದ The Languages of the World ಎಂಬ ಮಾಹಿತಿಪೂರ್ಣ ಪುಸ್ತಕವೊಂದಿದೆ. ಅದರ ಪ್ರಕಾರ ಸು...

ಅಂತೂ ಹದಿಮೂರು ವರ್ಷಗಳ ದೀರ್ಘ ಗರ್ಭಧಾರಣೆ ನಂತರ ರಾಜ್ಯದ ಉಚ್ಛ ನ್ಯಾಯಾಲಯವು ಕಡೆಗೂ ಕೂಸು ಹಡೆದಿದೆ. ಆದರೆ ಅದು ಕನ್ನಡದ ಕೂಸಲ್ಲ. ಮಾತೃ ಮೂಲ ಮಗುವೂ ಅಲ್ಲ. ಯಾಕೆಂದರೆ ಮಾತೃ ಭಾಷಾ ಮಾಧ್ಯಮಕ್ಕೆ ವಿರುದ್ಧವಾದ ವಿಚಿತ್ರ ವಾದಗಳ ಹೊರೆ ಹೊತ್ತ ‘ನ್ಯಾ...

ಯಾವುದೇ ಚಳವಳಿಯ ಹಿಂದಿನ ಆಶಯಗಳು ಆಯಾ ಪ್ರದೇಶ ಹಾಗೂ ಸನ್ನಿವೇಶದ ಹಿನ್ನೆಲೆಯನ್ನು ಪಡೆದಿರುತ್ತವೆ. ಆದ್ದರಿಂದ ಕನ್ನಡ ಚಳವಳಿಯು ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿಲ್ಲ ಎಂದಾಗಲಿ, ತಮಿಳುನಾಡಿನ ರೀತಿಯಲ್ಲಿಲ್ಲ ಎಂದಾಗಲಿ ನಾವು ಕೊರಗ ಬೇಕಾಗಿಲ್ಲ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...