ಅಳ್ದ್ಮೇಲೆ ವುಳ್ದಿವ್ರ ಪಾಡು….

ಅಳ್ದ್ಮೇಲೆ ವುಳ್ದಿವ್ರ ಪಾಡು….

ಚಿತ್ರ: ಪೆಗ್ಗಿ ಅಂಡ್ ಮಾರ್ಕೋ ಲಚ್ಮಣ್ ಅಂಕ್
ಚಿತ್ರ: ಪೆಗ್ಗಿ ಅಂಡ್ ಮಾರ್ಕೋ ಲಚ್ಮಣ್ ಅಂಕ್

ಮಟ್ಮಾಟಾ ಮಧ್ಯಾನ್ದತ್ತು….ವುರ್ರೀರ್ರೀ….ಬಿಸ್ಲು. ನೆಲ್ದ್ಮೇಲೆ ಕೆಂಡಾರ್ವಿದಂಗೆ. ವುಗಾದಿಯ ಬಿಸ್ಲೆಂದ್ರೆ….ಅದ್ರಲ್ಲಿ…. ಬಳ್ಳಾರಿ ಬಿಸ್ಲೆಂದ್ರೆ…. ಯೇಳ್ದೇ ಬ್ಯಾಡಾ! ಸಿವ್ನ ಮೂರ್ನೇ ಕಣ್ಣು ಬಿಟ್ಟಂಗೇ….ಯೆಲ್ಲ ಸುಟ್ಟು ಸುರ್ಮಂಡ್ಲಾನೇ….ಯಿಂಥಾ ವುರ್ಬಿಸ್ಲೆಲ್ಲಿ….ಬರ್ಗಿಲ್ಗಾ ಯೇದ್ಸುರು ಬಿಟ್ಗಾಂತಾ ಕರಿಯಣ್ಣ, ಅಂಗ್ಡಿ ಮಲ್ಲಣ್ಣನ ಮನೆತ್ರಕೆ ಯೆದ್ನೋ…..ಬಿದ್ನೋ….ಅಂತಾ ವೋಡೋಡಿ ಬಂದು…. ’ಸಣ್ಣೆಲ್ಲೆಪ್ಪ ಸತ್ತ! ಅಂತಾ, ಸಿಡ್ಲುಬಂಡ್ದೆಂಗೆ ಸುದ್ದಿ ಮುಟ್ಸಿದ.

ಅಂಗ್ಡಿಯಂದ್ಮೇಲೆ ಅಲ್ಲಿ ಸಪ್ರಾದಾಗೆ, ಅತ್ತಾರು ಜನ್ರು ಕುಂತು…. ನಿಂತು, ಕಾಫಿ, ಟೀ, ಕುಡಿತಾ, ಬೀಡಿ, ಸಿಗ್ರೆಟು ಸೇದ್ತಾ…ಕಾಡಾರ್ಟೆಲ್ದಿವ್ರಿಗೆ ಕರೆಂಟ್ ಹೊಡ್ದೆಂಗಾತು!

‘ಯಾರು? ಮಣೆಗಾರ….ಕೇರಿಯಜ್ಮಾನ…ಸಣ್ಣಕುಲ್ಡಪ್ನೆ?!’ ಅಂಗ್ಡಿಮಲ್ಲಣ್ಣ ಮಕ ಚಿಪ್ಪು ಮಾಡ್ಕಿಂಡು…ನಂಬ್ಕಾಗ್ದೆ ಮತ್ತ್ತೇ ಕೇಳಿ, ಅವುದಿಲ್ಲೋ ಅಂತಾ ನಿಕ್ಕಿ ಮಾಡ್ಕೊಂಡ.

‘ಅಪ್ದು! ಸಣ್ಣೆಲ್ಲೆಪ್ನೇ…ಯೀಗ್ಸತ್ತ!’ ಕರಿಯಣ್ಣ, ಮಕ್ಸಣ್ದು ಮಾಡ್ಕೊಂಡು, ಮತ್ತೇ ಅದೇ ಮಾತಂದ.

‘ಸಾವೆಂದ್ರೆ…ಯಿಡೀ ಜೀವಜಲ್ವೆಲ್ಲ ತಣ್ಣಾವುದಲ್ಲ ಯಾಕೆ….?!’

ಆ ಕ್ಷಣ ಜನ್ರು ಅತ್ಲುಕೊತ್ಲಾದ್ರು….
‘ಟೀ ಯಿಳಿಯದ, ಮುದಿ ಗಂಟ್ಲಿಗೆ, ದನ್ದ ಮೂಳ್ಗೆ ತುರ್ಕಿದಂಗಾತು’ ತಿಮ್ಮಣ್ಣ ಕೇರಿ ಯಜ್ಮಾನ ಸತ್ತ ಸಣ್ಣೆಲ್ಲೆಪ್ಪನ್ಗಿಂತಾ ಯಿರ್ಕಿ ಮೇಲ್ಗೆ ಬಾಯ್ಮಿಟ್ಟ.

‘ಛೇ….ಛೇ…..ಯಂತ್ಕೆಲ್ಸವಾಯ್ತು! ವಳ್ಳೇನಿದ್ದ, ಐದಾರು ಸಣ್ಪುಟ್ಟ ಮಕ್ಳು ಮರಿ ಯೆಂಡ್ತಿ ಸುಂಕೇ ಅಡ್ವಿ ಪಾಲಾದ್ರು….’ ಕಪ್ಪೂರು ಸೋಮಣ್ಣ ಬ್ಯಾಸ್ರಾದಿಂದ ತಲ್ಗೆ ಕೈವತ್ತು….ಪಿಳ್ಪಿಳಿ ಕಣ್ಬುಡಿತಾ…ತಣ್ಗೇ ಕುಂತ.

‘ಯೇ ನೆನ್ನೆ ಭೇಷಿದ್ದ! ಯಿದಂಥಾ ಸುದ್ದಿಲೇ? ಮುಂಜಾಲಿ ವರ್ಕೆಡ್ಗೆ ಬಂದಾಗ…. ಗಾವೇ ಮರ್ಗಳ್ತಾಗೆ ಮಾತಾಡ್ಸಿದ್ದೆ! ಕುವ್ಹಾಡ್ದ್ಮಾತ್ ಹಾಡ್ದಿ. ಅಂತ ಜಲ್ದಿ ಯಂಗೆ ಸತ್ಲೇ?’ ಅಂಗ್ಡಿ ಮಲ್ಲಣ್ಣ ಆತಂಕದಿಂದ್ಲೇ ಜನ್ರ್ಮಕ ಗಿಬ್ರಾಡ್ದಿ.

‘ಅವ್ದು! ಕೈಯಾಗ್ಳ ಕಡ್ಲೆ ಹಾರ್ಬಾಡ್ದಿಂಗಾತು! ನೆಲ್ಡಿದು ಮಲ್ಗಿಲ್ಲ. ಅನ್ವೊಪತ್ತಿಲ್ಲ. ಬರೀ ನೆಗ್ಡಿಜಡ್ಡು, ಕೆಮ್ಮು, ದಮ್ಮು, ಛಳಿ, ಜ್ವರ್ದಾ ದೆಬ್ಗೇ ಸತ್ತಾ….’ ಕರಿಯಣ್ಣ ಮಕ್ಮಾಕ ಯಿಂಡ್ಕಿಂಡು ಮತ್ತೇ ಯೀ ಮಾತೆಂದ.

‘ಅಬ್ಬಾ! ಯಂಥಾ ಕಾಲ್ವಾಪ್ಪಾ? ಧರ್ಮಾ ಕರ್ಮಾ ಯಲ್ಹೋತು? ಯೀತ್ನಿಗಿಂತ ಯಿರ್ಕಿರು, ತಿಂಗ್ಳುಗಟ್ಲೆ ನೆಲ್ಡಿದಾರ್ಗೇನಾಗಿಲ್ಲ? ಪಾಪ! ಸಣ್ಕುಂಡಣ್ಣ ಸತ್ತಿದ್ದು ಅನ್ಯಾಯವಾತು….’ ತಿಮ್ಮಣ್ಣ ಸುಡ್ಸೂಡ್ದಾನ ಟೀ ಗುಟ್ಕರ್ಸಿತ್ತಿದ್ದವ್ನು ಯರ್ಡು ಗುಟ್ಕು ಸುರ್ರಾಂತಾ ಯಳ್ದು, ಯಿನ್ನರ್ಧ ವುಳ್ದಿದ್ದನಾ ನೆರ್ಕ್ಮೆರ್ಗೆ ಚೆಲ್ಲಿ ಗಳಾಸ್ನಾ ನೆರ್ಕೆ ಗೂಟ್ಕೆ ಸಿಗ್ಯಾಕ್ದ.

ಕರಿಯಣ್ಣ, ತಿಮ್ಮಣ್ಣನ್ಗಿಂತಾ ಕಮ್ಮಿಯೇನು? ಸೇದ್ತಿದ್ದ ಟೇಬಲ್ ಬೀಡ್ನಿ ಅರ್ಧಕ್ಕೇ ನೆಲ್ಕೊರ್ಸಿ ಗಸ್ಗಾಸಾ ವುಜ್ಜಿ, ಅಂಗ್ಳಕೆ ಯಲ್ರಿಗೆ ಕಾಣಂಗೇ ಬೇಕಾಗಿಯೇ ಯೆಸ್ದು ಬೀಗ್ದಿ.

‘ಯೇನಾಯ್ತಲೇ ಕರಿಯಾ….ಮೋಟ್ಬೀಡ್ನಿ ಆರ್ಸಿ ಆರ್ಸಿ….ಸೇದಾನು! ಯೀವತ್ತು ಯಿನ್ನಾರ್ಧ ಯಿರ್ಲಿಕೆ ಅದೂ ಟೇಬಲ್ ಬೀಡ್ನಿ ಆರ್ಸಿ ವಗೆದ್ಲೆಲ್ಲೇ?’ ತಿಮ್ಮಣ್ಣ, ಕರಿಯಣ್ಣನಾ…. ಬೇಕು ಬೇಕಂತ್ಲೆ ಕೆಣ್ಕಿದ.

‘ನೀಯದ್ಕೆ ಟೀನಾ ಅರ್ಧಕ್ಕೇ ಚೆಲ್ದೇಳು? ನಾನ್ಗೂಡಾ ಅದ್ಕೇ ಬೀಡ್ನಿ ವಸ್ದೇ….’ ಕರಿಯಣ್ಣ, ತಿಮ್ಮಣ್ಣನ್ಗೇ ಯದ್ರೇಟು ಕೊಟ್ಟ.

‘ಸಣ್ಣೆಲ್ಲಪ್ಪ ನನ್ಗೆ ಮಾಮ! ಅತ್ತಿದ್ದು ಅಂಟಿದ್ದಾಪ್ಪಾ! ಬಾಯ್ಬಿಯಿಯೆಲ್ಲ ವಿಸ್ವಾಸ್ವಾತು! ಸಾವ್ನಿ ಸುದ್ದಿ ಸಿಹಿಸಿವ್ಸಿವಿನೂ ಕಯಿಕಯಿ ಮಾಡ್ತಾಪಾ ಅದ್ಕೆ ಟೀನಾ ಚಲ್ದೇ….’ ತಿಮ್ಮಣ್ಣ ವಟ್ಗೇಳ್ದನ ವರ್ಗಾಕ್ದಿ.

‘ಯೀಗಿಂದಲ್ಲಾ…. ಆಳ್ಗೇರ್ಯಾಗ್ಳಿಂದ್ಲೂ….ನನ್ದು ಸಣ್ಣೆಲ್ಲೆಪ್ಪನ್ದು ನಂಟು. ಅಕ್ಪಾಕ್ದಾ ಮನೆಯವ್ರಾಗಿ, ಕೇರಿ ಯಜ್ಮಾನ್ರಾಗಿ, ಮಣೆಗಾರರಾಗಿ, ಅಳ್ಳೆಳ್ಗೇ ಸುತ್ತಿ, ಕಲ್ತು ಕುಡ್ದು ತಿಂದೂ ವುಂಡೂ….ಯೀಗಾ ನಮ್ನ ಯಿಷ್ಟು ಬೇಗ ಬಿಟ್ಟು ವೋಗ್ತ್ನಾಂತಾ ನಾವ್ಯಾರು ಅಂದ್ಕೊಂಡಿರ್ಲಿಲ್ಲಾ?  ಯೀಗಾ  ಬೀಡ್ವಿಗೇನು? ಯಿಡೀ ಬೀಡ್ಬೀಡೀನೇ ಕಯ್ಕಿಯೀ…! ಅದ್ಕೇ….ನಾನ್ಗೂಡಾ ಟೇಬಲ್ ಬೀಡ್ನಿ ಆರ್ಸಿ ವಗ್ದೆ!’ ಕರಿಯಣ್ಣ…ಅಳ್ಮಾಕ್ಮಾಡ್ಕಿಂಡು,
ತಿಮ್ಮಣ್ಣನ ಮುಂದೇ….ಅಳೇ ನೆನೆಪ್ನಿ ಬುತ್ತಿ ಬಿಚ್ಗಿಂಡು ಕುಂತ.

‘ಸಣ್ಣೆಲ್ಲೆಪ್ಪಂದು….ಯೇಳಳ್ಗೇ ಯೆಸ್ರು. ಸತ್ರೆ, ಬದ್ಕಿದ್ರೆ, ಯಲ್ಗಿತ್ರಿಗೆ, ಮದ್ವೆಗೆ, ಪ್ರಸ್ತಕೆ, ವಲ್ಮಾನ್ಗೆ….ಅಬ್ಬಬ್ಬಾ! ಯಲ್ದಾಕು ರಾತ್ರಿ ಸರ್ವಿತ್ತಾನ್ಯಾಗೆ ಎಬ್ಸಿ ಕೇಳ್ದಿರೆ ಯಾರ್ನೂ ಬರ್ಗೈಲಿ ಕಳ್ಸಿದ್ವನಲ್ಲಾ….ಬಡ್ಡಿಗೆ ಲಕ್ಷಾಂತರ ರೂಪಾಳ್ಗುಳ್ನ ಕ್ವಟ್ಕುಟ್ಟು ಪತ್ರ ಬರ್ಸೆಕೊಂಡಿದ್ದ! ಸಾವ್ಕಾರ ಸಣ್ಣೆಲ್ಲೆಪ್ಪ….ಧರ್ಮಾಕರ್ಮಾದ ಮನ್ಸು ಅನ್ಸಿಗೊಂಡು ಪುಣ್ಯಾತ್ಮನಾಗ್ದಿವ್ಗೆ ಯಿಂತಾ ಸಾವೇನ್ಲೇ?’ ಸೋಮಣ್ಣ ಅಲ್ಲಿದ್ದವ್ರ್ನ ಕೇಳಿ ಬೆಚ್ಚಿಬೀಳ್ಸಿದ.

‘ಸಾವ್ಗೆ ಕರುಣೆಯ ಕಣ್ಣಿಲ್ಲ. ವಳ್ಳೆವ್ರು ಕೆಟ್ಟರು, ಸಣ್ವರು, ದ್ವಡ್ವರು, ಯೆಣ್ಣುಗಂಡೆಂಬ ಭೇದಭಾವಿಲ್ಲ. ಪಡ್ಕೊಂಡು ಬಂದ್ಗ್ಯೆಪ್ಪಾ…..! ಶಿವಮೂರ್ತಿ ಸ್ವಾಮ್ಗಿಳು ಮನ್ಕೆಡ್ಗೆ ವಂಟ್ದಿವ್ರು ಅಂಗ್ಡಿಮುಂದೆ ನಿಂತು, ಮಾತ್ಗೆ ಮಾತು ವಗ್ದೆರು. ಜನ್ರ  ಪ್ರತಿಕ್ರಿಯ್ಗೆ ಕಾದ್ನಿಂತ್ರು….

“ಅಯ್ಯಯ್ಯೋ…ದ್ರಾವೇಽ…. ಯಂತ್ವಾತ್ತು ತಂದ್ಕಿದ ಸಾಮಿಽ…ನನ್ಗಂಡ್ಸಾಯೋ ಬದ್ಲು ನಾನನ್ನಾ….ಸಾಯ್ಲಿಲ್ಲವಲ್ಲಾ ದ್ಯಾವ್ರೇಽ…..? ನನ್ಗತಿ, ನನ್ಮಕ್ಳುಗತಿ ಯೆಂಗೋ?” ಯಂತಾ ಕೆಲ್ಸಾ ಮಾಡ್ಬಿಟ್ಟೆಯಲ್ಲೋ ಮನ್ಹೆಳಾಽ …. ನಾನೇನು ಮಾಡ್ಲಿ ಸಿವ್ಸಿವಾ….ನಮ್ಮನೆ ಮುರ್ದೆಯಲ್ಲೋ ದ್ಯಾವ್ರೇ…. ನಿನ್ಕೈಲಿ ನಿತ್ರಾಸ್ಕಾಗ್ದೆ ನನ್ಗಂಡ್ನಾ ಗೋಣು ಮುರ್ದೆಯಲ್ಲೋ…..ಕುಲ್ಡಾ …..ಕಟ್ಕೋ…..’ ದುರ್ಗುವ್ವಾ ಸಣ್ಣೆಲ್ಲೆಪ್ಪನ ಯೆಂಡ್ತಿ ಝಣಾಝುಣಾ ಅಂಬಂಗೆ ಬಾಯ್ಬಾಯೀ  ಲಭೋಲಭೋಽ ….ಬಡ್ಕಾಂತಾ ಯೆತ್ತರ್ದ ಧನಿಯಲ್ಲಿ ವೂರ್ಕೇರಿ ಸೆಲ್ಸೆಲೇ ವೋಗಂಗೆ ಅಬ್ರಿಸಿ , ಬೊಬ್ರಿದು ಅಳ್ವುದು ಯಿವ್ರಿಗೆ ಕೇಳ್ಸಿತೊಡ್ಗಿತು….ಯಲ್ರು ಸಣ್ಣೆಲ್ಲೆಪ್ಪನ ಮನೆ ಮುಂದೆ ವೋದ್ರು. ಅಗ್ಲೇ ಜನಜಾತ್ರೆ ಸೇರಿತ್ತು! ದಿಂಡ್ರಿಕೆ ಕಟ್ಟಿ ಯೆಣ್ದ್ಮೇಲೆ ದುರ್ಗುವ್ವ ಗೋಳಾಡಿ ಗ್ವಾಮ್ಳೆ ಸೇರಿದ್ಲು….ಅಂಗ್ಳಂಬಾ ಅಂಗ್ಳವೆಲ್ಲ ಸುಡ್ಗೂಡು ಸಿದ್ಧರ್ಮಟ್ಟಾಯಿತು.

ಸಣ್ಣೆಲ್ಲೆಪ್ಪನಣ್ಣ ಯದ್ರ್ಮುನೆಯ ದೊಡ್ಡೆಲ್ಲೆಪ್ಪ, ದೊಡ್ಮಾರೆಣ್ಣ, ಸಣ್ಮಾರೆಣ್ಣ, ಶಾಂತಕ್ಕ ಪೇಠೆಯೆಲ್ಲೆಪ್ಪ….‘ಆಹಾ…..’ ಅಂತ್ಗೆದ್ಬಾಯ್ನಿ ಮುಚ್ಚಿಲ್ಲಾ….ನರ್ಕಕೊಪವಾಯ್ತು. ಮನೆಮುಂದೆ ಅಲ್ಗೆಳು ಬಂದು ಕಣ್ಣೀರ್ಳಿಸ್ತೊಡ್ಗಿದ್ವು…ಜಾಗ್ಟೆ, ಕೊಂಬು, ಕಾಳೆ, ಶಂಖಗಳೂ ಮೊಳ್ಗಿದ್ವು….ಅಂಗ್ಳದಲ್ಲಿ ಕುಳ್ಳು ಸಪ್ಪೆ, ಸದೆ, ರಿಜ್ಲುಪುಳ್ಗೆಳಿಂದ ವಗೆಬ್ಸಿದ್ರು ವಸಾ ಸ್ವಾರೇಲಿ ಬಾನ್ಮಾಡ್ಲು ಮುದಿ ತಲ್ಗೆಳೊ…ಮುಂದಾದ್ರು.

ಯಿತ್ತಾ….ಕೇರಿಯಜ್ಮಾನ, ಯಿರ್ಕಿ ದೊಡ್ಡೆಲ್ಲೆಪ್ಪ ಸಾಸುದ್ದಿ ಕಳ್ಸಿಲು ಮುಂದ್ನಿಂತ. ಮೂಲ್ಸೇರಿದ್ದ ಸೈಕಲ್ಗುಳೂ, ಪುಟ್ಟಾಟ್ಕಾರ್ಗುಳೂ, ಆಟೋರಿಕ್ಷಾಗಳೂ….ಆರಾತುರೀಲಿ ಸಿದ್ಧಗೊಂಡ್ವು…..

‘ಕರಿಯಣ್ಣ, ರಂಗಣ್ಣ ನೀವಿಬ್ರು ತಿಮ್ಲಾಪುರ, ವೆಂಕಟಾಪುರ, ದ್ಯಾಸಂದ್ರ, ರಾಂಪುರ್ದ ಬೀಗ್ರುಬಿದ್ರು ಅಣ್ತ್ಮಾಗ್ಳುಗಳೆ ಯೇಳ್ಬಿರ್ರೀ….ಯಿಗೋ ದಾರಿ ಕರ್ಚಿಗ ಯಿಡ್ರೀ….’ ಅಂತಾ ದೊಡ್ಡೆಲ್ಲೆಪ್ಪ, ಅವ್ರ್ನ ಬೆನ್ತಾಟ್ಟಿ ರೊಕ್ಕ ಕೈಯಾಗಿಟ್ಟು…ಕಳ್ಸಿದ.

ಲೇ ತಿಮ್ಗಾ, ಯಲ್ಲೂ…. ಯಿಗಾ ತಗಳ್ರೀ ರೊಕ್ಕ….ನೀವು ಕಲ್ಡಳ್ಳಿ, ಬಮ್ಮಕ್ಕನಳ್ಳಿ ಜನ್ರಿಗೆ ಸುದ್ದಿ ಮುಟ್ಸಿ ಬರ್ರೀ.” ಯೆಂದು ಅವ್ರ್ನ ಕಳ್ಸಿಕೊಟ್ಟ.

‘ಯೇ ಮರಿಯ, ಗಿರಿಯ…ನೀವಿಬ್ರು ಮಾದ್ಯಾಂಪುರ, ಗೊಡೇಕೋಟೆ, ಶ್ರೀಕಂಠಾಪುರ, ಮ್ಯಾಂಪುರ ತಾಂಡ, ಸಿಡೇಗಲ್ಲು, ಪೋತ್ಲಗಟ್ಟೆ, ಬಮ್ಮಗಟ್ಟೆಗೆ ಸುದ್ದಿ ಮುಟ್ಸಿ ಬರ್ರೀ….ಅಂಗೇ ಬೀಗ್ರು ಮನೆಯಿಂದ ವುಡಕ್ಕಿ ಬರ್ಬೇಕ್ವಾ! ಯಲ್ತಿರ್ವಿಕ್ದಂಗೆ ಬಂದ್ಬಿಡ್ಬೇಕೆಂದು’ ರೊಕ್ಕ ಅವ್ರ ಕೈಗಿಟ್ಟು, ಬೆನ್ತೆಟ್ಟಿ ಕಳ್ಸಿಕೊಟ್ಟ.

ಮಲ್ಲಣ್ಣ, ಕಲ್ಲಣ್ಣ ಕರೆದು ಆರಾಡಿ, ಮೂರಡಿ ಕುಣಿಳ್ಸಿಲು ಯೇಳಿ ಅವ್ರ ಕೈಗಿಷ್ಟು ರೊಕ್ಕಿಷ್ಟು ಕೊಟ್ಟ. ಅಂಗೆ ಬಜ್ಜಿಯ ವಂಡ್ರಣ್ಣ, ಮಳ್ಳಣ್ಣ ಯಿವ್ರಿಗೆ ರೊಕ್ಕಿಟ್ಟು ‘ವಸಾ ಬಿಳ್ಬಿಟ್ಟೆ, ನಾರ್ಪಾಸಿ, ವುರಿಕೊನೆ, ಮಂಡಾಳು, ವಸಾಮಗಿ, ಯಲಡಿಕೆ, ಕಾಯಿ, ನಿಂಬೆಣ್ಣು, ಯೀಭತ್ತಿ, ಚಂದ್ರಬುಕ್ಕಿಟ್ಟು, ಕುಂಕ್ಮು, ವೊದ್ಗಡ್ಡಿ, ಆರಾ, ಸೂಸ್ಲ….ಯಿಂಗೆ ಯೆಲ್ಲ ಗೆಪ್ತಿ ಮಡ್ಕಿಂಡು ತರ್ಬೇಕು ನೋಡ್ರಾಲೇ….ವಂದ್ಬಿಟ್ಟು, ವಂದ್ಮರ್ತು, ಮುಗ್ಳಿ ಅರೆಂಗೆ ಕುಡ್ದು ರೊಕ್ಕ ಅಲ್ಕಾ ಮಾಡ್ಕೊಂಡು, ಅಡ್ಯಾಕೆ ಮ್ಯಾಕಾಗಿ ಬರ್ಬೇಡ್ರಿ….’ ದೊಡ್ಡೆಲ್ಲೆಪ್ಪ ಯಿಸ್ಕೂಲುಮಕ್ಳಿಗೆ ಯೇಳ್ದಿಂಗೆ ಕೇರ್ದಿಗ್ಡಿಗಂಡ್ರಿಗೆ ಬಡ್ಕೊಂಡ್ಕಳ್ಸಿದ. ಯಲ್ರು…..ಕೋಲೇಬಸ್ವನ್ತಾರಾ….ತಲೆ ಅಲ್ಲಾಡ್ಸಿ, ರಾಂಪುರ್ದಾರಿ ಯಿಡಿದ್ರು.

‘ಲೇ…..ಮಾದ, ಮಾರ್ಯಾ ನೀವೋಗಿ ಸೆದ್ಗೆಕಟ್ಲು ಯಲ್ಡು ಕಳ್ಳಿಬಡ್ಗೆ, ನಾಕು ಜಾಲ್ಕಿಟ್ಗೆ ತೆಕ್ಕೆ ಸಪ್ಪೆದಂಟು ತಗೊಂಡು ಬನ್ರೋ…..’ ಯೆಂದು, ರೊಕ್ಕ ಕೈಗಿಟ್ಟು, ಅವ್ರ ಗದ್ಮಿದಾ.

‘ಥೂ…..ಥೂ….ಯದ್ಬಿಕ್ಣಾ, ಮೈಯಂಗಿಯೊಳ್ಗಿನ್ಬಕ್ಣಾ …ಯಲ್ಡು ಬಕ್ಕಾಟೆ ಮೋಡಿಯಾದ್ವು! ‘ಛೇ….ಯೀ ಜನ್ಮಾಕ್ಕಿಷ್ಟು, ಸತ್ತಾಗ್ಲು ತಿಪ್ಲು, ಬದುಕಿದಾಗ್ಲು ಅಪ್ಲು, ಸತ್ತಾಗ ನಾಕು ಜನ ಬೇಕು….ಯೀ ತಪ್ಲುಗೂ ಕಡೆಯಾದ ಮನ್ಸುರು….’ ಮಕಾನೆಲ್ಲ ಚಿಪ್ಪು ಮಾಡ್ಕಿಂಡು ವಾರ್ಗೆ ಕೈಚಲ್ಲಿ ಕುಂತ.

‘ಯೇನಂಗೆ…ವಂದ್ಸಮ್ನೇ ಕತ್ತೆ ಅರ್ಸಿದಂಗೆ ಅರ್ಸದ್ರೆ….ಸತ್ತವ್ನು ಯೆದ್ದು ಬರ್ತಾನೇನು ದುರ್ಗುವ್ವಾ? ಯೆಣ್ಣೆಂಗ್ಸಾಗಿ ನೀ ಗಟ್ಟಿ ಧೈರ್ಯ ಮಾಡ್ಕೋಬೇಕ್ಮಾ…. ಅದ್ಬಿಟ್ಟು ಯಿಂಗೆ ಯೆದೇದ್ಗೆಟ್ಸಿಗೊಂಡು ಬೋರು ಬೋರಾಡಿ ಅತ್ರೇ…. ಯೀ ಸಣ್ಪುಟ್ಟ ಮಕ್ಳು ಯದ್ವೆಡ್ಲೇನು? ಛೀ… ವುಚ್ಚೀ ಆಯಪ್ಪಾ ಪಡೆದ್ಬುಂದಿದ್ದೆ ಅಶ್ವು….! ನೀ ಮುಂದೆ ಬದ್ಕಾದು ನೋಡು! ಯೆಶ್ಟು ಅತ್ರೆ ಸತ್ತವ್ರೆದ್ದು ಬರ್ತಾರೇನು?’ ಬಸಲಿಂಗಸ್ವಾಮ್ಗಿಳು ದುರ್ಗುವ್ವಗೆ ಸಾಂತ್ವಾನ ಯೇಳ್ದಿರು.

‘ನಾ ಬದ್ಕಿರ್ಬಾರ್ದು. ನನ್ಗಂಡ್ನಿಂದೇ ವೋಗ್ತೀನಿ. ನಾ ಸತಿ ಯಾಗ್ತೀನಿ. ಯೀ ಪ್ರಾಣ್ನಾ ಅತ್ಮಾಡ್ಕಿಳ್ತೀನಿ….’ ದುರ್ಗುವ್ವ ಜೋರಾಗಿ, ಯದೇ ಯದೇ ಗಟ್ಸಿಗೊಂಡು, ವುಳ್ಳುಳ್ಳಾಡಿ ಅಳುತ್ಲೇ ಯಿದ್ಲು.

ಯೇಳ್ವು ಜನ್ರೋಸ್ಗಿಂಡ್ರೇ ವರ್ತು….ದುರ್ಗುವ್ವಳೇನು ವೂರ್ಕೇರ್ನೇ ಸೋಲ್ಬಡಿದ್ಲು….

*                                *                                     *
ಮಕ್ನಸ್ಕಾತು! ಜನ್ರು ಯೆದ್ರೋ ಬಿದ್ರೋ ಅಂತಾ….ವೂರೂರ್ಗೂಳಿಂದ ಕಿತ್ ಹಾರ್ಕಂಡು ಬರ್ರೋರೆಲ್ಲ ಬಂದ್ರು. ಕೈಗೆಬಾಯ್ಗೆ ಅಚ್ಚಿ…..‘ ಲಭೋಲಭೋ …..ಝಣಾ ಝಣಾಽ… ಬಾಯ್ಬಿಡ್ಕೊಂತಾ ಸಂಕ್ಟಾದಲಿ ಕುಂತ್ರು. ಕರ್ಳು ಕಿತ್ತೊಬರೋ ದೃಶ್ಯ. ಬಮ್ಗಟ್ಟೆ ಯಿಂದ ಅಕ್ಕಿ, ಬೇಳೆ, ಬೆಲ್ಲ, ಕಬ್ರಿ, ಸಾಸ್ವೆ, ಅರ್ಸಿಣ್ಕೊಂಬು, ಬೆಳ್ಳಾಗಡ್ಡೆ ವುಳ್ಳಾಗಡ್ಡೆ, ವಣ್ಕಾಯಿ, ಯೆಲ್ಲ ವುಡಕ್ಕಿನ ಸೇರ್ಸಿ ದುರ್ಗುವ್ವಗೆ ಕಟ್ಟಿ, ತಲ್ಮೇಲೆ ಸೂಸ್ಗಾಕಿ ತಾಳಾರ್ದು ತಣ್ಣೀರ್ಗಾಕಿ, ಕುಂಕ್ಮು ಅಳ್ಸಿ, ಮೂಗ್ತೆ, ಕಿವಿಯೋಲೆ, ಕೈ, ಕಾಲುಂಗ್ರ ತಗಿಯ್ಲು ಕಲ್ಡಳ್ಳಿ ರಾಮಕ್ಕತ್ತೆ, ಬಮ್ಮಕ್ಕನಳ್ಳಿ ಮಾರಕ್ಕತ್ತೆ, ಪಾಲಮ್ಮ, ಹಾಲಮ್ಮ, ಅನ್ಮುಕ್ಕ…ಯಿವ್ರೆಲ್ಲ ನಡ್ಕುಟ್ಟಾಕಿ ನಿಂತ್ವರ್ನಾ ದುರುಗವ್ವ….ಜಾಡ್ಸಿ ಜಾಡ್ಸಿ ವದ್ದು, ನೂಕಿ, ಬೀಸಿ ಕಪಾಳ ವೂದ್ಕಿಂಬಂಗೆ ಬಡಿದು, ತೆಕ್ಕೆಮುರ್ಗೆ ಬಿದ್ಲೂ….ಯಾರ್ಗೂ ದುರ್ಗುವ್ವ ಮೈಟ್ಮಾಡ್ದೆ ಕೂದ್ಲಿಡ್ದಿ ರಗ್ಡಿಸಿ ನಿಂತ್ಲು.

‘ನೀವ್ಹೇಳಿದ್ದೇನು? ಯೀ ಜೀವಾನೇ ಬೀಡ್ತೀನಿ! ನನ್ಗಂಡ್ನ ತಂದ್ಕೊಡ್ರಾಲೇ ಮತ್ತೇ? ಯೀ ಮೋಜ್ನಿ ಮೂಢತೆ, ಪೆದ್ದರಂತೆ, ಕುಲ್ಡರಂತೆ, ಪುರೋಹಿತಶಾಹಿಗೆ ನಾನೇಕೆ ಕತ್ತುಕೊಡ್ಲಿಲೇ? ಗಾಯವಾಗಿದೆ, ಅದ್ರ್ಮೇಲೆ ಬರೆ ಯೆಳೇಲು ನೀವ್ಯಾರೇ? ಯಿದ್ನಾಯೇನು? ನಿಮ್ನು ಕಾಲಿಲಿ ವದ್ತೀನಿ!’ ದುರ್ಗುವ್ವ ಯಿಡಂಬಿಯಂಗೆ ಅಬ್ರಿಸಿ ನಿಂತ್ಲು.

‘ಜನ್ರು ಗಾಬ್ರಿ ಬಿದ್ದು ‘ಯೇನಾಯ್ತೀಗ?’ ಯೇನೇನು….’ ಯೆಂದ್ರು….

‘ದುರ್ಗುವ್ವ ನಮ್ಮ ಪದ್ಧತಿ, ಸಂಪ್ರದಾಯ, ಆಚಾರ, ಮಣೆಗಾರ ನೀತಿಗೆ ವಿರುದ್ಧವಾಗಿದ್ದಾಳೆ’ ರಾಮಕ್ಕತ್ತೆ ಕಲ್ತು ಜನ್ರೆದ್ರು ಢಣಾ….ಢಣಾ ಢಂಗೊರ ಸಾರಿದ್ಲು.

‘ಯೀ ದುರ್ಗುವ್ವ ಅಮಾಯಕ್ಳು. ಯೀ ಮನೆ ನೋಡ್ದಿರೆ, ಮುಂದ್ಲು ಮನೆ ನೋಡಿಲ್ಲ. ಲೋಕಜ್ಞಾನವಿಲ್ದವ್ಳು. ತಾನ್ತಾ ತನ್ಗಂಡ ಮಕ್ಳು ಮಮ್ಮಕ್ಳು, ದನ್ಕ ರು, ಕುರ್ಮೇಕೆ, ಕೋಳಿ, ನಾಯ್ಗಿಳೆಂದು ರಾಣಿಯಂಗೆ ಮೆರ್ದೆವ್ಳಿಗೆ ಬರ್ಸಡ್ಲಿನಂಗೆ ಗಂಡ್ಸತ್ತು ದಿಕ್ತಪ್ಪಿರ್ವು ಯೀ ಗ್ರಹಣದ ವೇಳೆಯಲ್ಲಿ ಶಾಸ್ತ್ರ ನಿಯಮವೆಂದ್ರೆ ಯೆಂಗೆ? ದುರ್ಗುವ್ವಳಂತೆ ಕೇಳ್ರೀ…’ ಯೆಂದು, ಶಿವಮೂರ್ತಿ ಸ್ವಾಮ್ಗಿಳು ಯೇಳಿದ್ದು ಯಲ್ರಿಗೆ ಯೆಜ್ಜೇನು ಮುತ್ದಿಂಗಾತು! ‘ಕಷ್ಟ’ ಕಾಣ್ಸೆಲು ಬಂದಿದ್ದವ್ರಿಗೇ ಕಷ್ಟವಾಗಿತು!

ಮದ್ಲೆ ವುಪ್ಸಾ ವನ್ಸಾ ಬೇರೇ….. ಮಣೆಗಾರರು ತಮ್ಮ ಅಜ್ಞಾನ, ಅಂಧತ್ವವನ್ನು ಮರೆಮಾಚ್ಲು….ಮುಂದ್ವುರ್ಸಿಗೊಂಡು ಹೋಗ್ಲು ರೆಫರೆನ್ಸ್…..ಡಿಫ಼ೆನ್ಸ್ ಗಳನ್ನು ದುರ್ಗುವ್ವನ ಮುಂದಿಟ್ರು.

‘ಅವುದು! ಗಂಡ್ಸತ್ಮೇಲೆ ಯಿಂಗೇ ಮಾಡ್ಬೇಕಂತಾ ಯಲ್ಲೈತಿ? ನನ್ಗಂಡ್ನ ಬದುಕ್ಸಿ ತರುವಿರೇನು? ನೀವು ಮೂಢರಾಗಿರಂತಾ ನಾನೂ ದಡ್ಡಳಾಗಲಾರೆ! ಯೀಗ ಗಂಡ್ಸತ್ತ ನೋವಿದೆ. ಯಿದ್ರ್ಮೇಲೆ ವುಳಿ, ವುಪ್ಪು, ಕಾರ ಹಾಕಿ ತಿಕ್ಬೇಡ್ರೀ….. ಯೀ ಕೆಟ್ಟ ಪರಂಪರೆ, ಅನಿಷ್ಠ ಪದ್ಧತಿ ನಾ ಧಿಕ್ಕರ್ಸಿದ್ದೇನೆ. ನಾ ಯೇಳ್ದಿಂತೆ ಕೇಳ್ರಿ….’ದುರ್ಗುವ್ವ ಗುಡುಗಿದ್ಲು.

ದುರ್ಗವ್ವಳ ಮಾತ್ಗುಳ ಕೇಳಿ, ಬಜ್ಜಿಯ ಭಸ್ಮಾಸುರ್ನಂತೆ ಕಿಡ್ಕಿಡಿ ಕಾರ್ದಿ. ಧುರ್ಳು ದುಶ್ಯಾಸ್ನಂತೆ ದುರ್ಗುವ್ವನ ಕೂದ್ಲಿಗೆ ಕೈ ಹಾಕಿ, ‘ನಿನ್ಸಿಗಿದು ವೂರ್ಬಾಗ್ಲಿಗೆ ಕಟ್ತೀನಿ! ಲೌಡಿ ಮುಂಡೆ, ಕಾಲ್ಮೇಲೆ ವುಚ್ಚೀ ವಯ್ಕೊಳ್ಳಾಳೇ….ಯೇಳಳ್ಳಿ ಜನ್ರು ಮುಂದೆ ನಮ್ದು ಕಿಮ್ಮತ್ತು ಕಳ್ದಿಬಿಟ್ಟೆಯಲ್ಲೇ? ನಿನ್ಕುಲ್ದಿಂದಾ ವರ್ಗಿಡ್ತೀವಿ! ನಾವ್ಹೇಳ್ದಿಂತೆ ನೀ ಕೇಳ್ಬೇಕು…..ಬಾಯಿಲ್ಲಿ…..’ ಯೆಂದು, ದರ್ದಾರ್ನೇ ಕುರ್ಮಿರ್ನಾ… ಯಳ್ದಿ ತಂದಂಗೆ ಕೆಲ್ಯಾಸ್ರುತಾಗೆ ತಂದು ತಲೆ ಬೊಳ್ಸಿಲು….. ನಿಲ್ಸಿದ!

‘ಥೂ! ದಡ್ಡಾ….ಯಬ್ಡಾ….ಮನೆಮುರ್ಕು! ನಿಮ್ಮತ್ತೆ ಕಣ್ಲೇ…..ನೀ….ಸುಮ್ಕಿರು…ನಿನ್ಗ್ಯಾಕೆ ಮೂರ್ಕಿವಿ? ನಿನ್ನೋಡಿ ಆ ದೇವ್ರೇ ಮುಗ್ಳಿಲಿ ನಕ್ಕಾನು? ಸಂಸ್ಕೃತಿ, ನಾಗರೀಕತೆ ನಿಂತ ನೀರಲ್ಲ. ಆಯಮ್ಮನ ಬಲಿಪಶು ಮಾಡ್ಬೇಡಾ ಬಿಡು! ಯೀಗ ಕಾಲ ಮಾರಿಂದಿ. ಮಣೆಗಾರರ ತಲೆಯೊಳ್ಗಿಂದ ಭೂತ, ಪಿಶಾಚಿ ತೆಗ್ರೀ….ದುರ್ಗುವ್ವನ ನಿರ್ಧಾರ ಸರಿಯಿದೆ….ನೀ ದೂರ್ಸರಿದು ನಿಲ್ಲು….’ ಬಸಲಿಂಗಸ್ವಾಮ್ಗಿಳು ಯಲ್ರ ಬಾಯಿಗೆ ಬೀಗ ಮುದ್ರೆ ಜಡಿದ್ರು.

“ನೀವು ಕಾವಿ ತೊಟ್ಟು….ಬಾಲ್ಬಸ್ವುರಾಗಿ ಯೀ ಸಂಸ್ಕೃತಿ, ಜೀವವಿರೋಧಿ ನೀತ್ಗೇ ಕುಮ್ಮಕ್ಕು ಕೊಡ್ತಿರೇನು? ನಿಮ್ಮನ್ನೇ ಬಹಿಷ್ಕರ್ಸಿಬೇಕಾಗುತ್ತೇ….ವುಷಾರು….’ ಕರಿಯಣ್ಣ, ತಿಮ್ಮಣ್ಣ, ಲಿಂಗಕಟ್ದಿ ಶರಣ್ರಿಗೇ….ಸ್ವಾಮ್ಗಿಳ್ಮೇಲೆ ವಂಡ್ನೀರ್ನಾಗೆ ಮೀನೇರ್ಬಂದಂಗೆ ಬಂದ್ರು.

‘ಯಿಸೀಸೀ….ಯಣೆದ್ರೆಗಿಟ್ಕೊಂಡು ಯಿಂಗೆ ಸಂಪ್ರದಾಯ, ಸಂಸ್ಕೃತಿ ನೆಪ್ದಲಿ ಕೋಳಿಜಗ್ಳಕೆ ನಿಂತ್ರೆ ಸಣ್ಣೆಲ್ಲೆಪ್ಪನ ಘನ್ತೆ ಗೌರ್ವನ ಮಣ್ಪೂಲು ಮಾಡ್ದೆಂಗೇ ….ಯೀ ಕಂದಾಚಾರ, ಸಂಪ್ರದಾಯಗಳನ್ನು ವುಟ್ಟು ಹಾಕ್ದಿವ್ರು ವಿವೇಕಿಗಳಾದ್ರು ಸಸ್ಯಹಾರಿಗಳಾದ್ರು! ಯೇನೆಲ್ಲ ಕೊಳ್ಗೆ ಕಟ್ಟಿಕೊಂಡ ನೀವೇ ಯಡಬಿಡಂಗಿಗಳಾಗಿ ಸಾಯುತ್ತಿರುವ್ರೀ. ಮಾಂಸಹಾರ್ಗಿಳಾಗಿರುವ್ರೀ….ದುರ್ಗುವ್ವ್ನ ಪ್ರತಿಭಟ್ನೆಗೆ ಅರ್ಥವಿದೆ…..ಯೆಂದು ಶಿವಮೂರ್ತಿಸ್ವಾಮ್ಗಿಳು ಪ್ರಜ್ಞಾವಂತಿಕೆಯಿಂದ ಯಲ್ರಿಗೆ ತಿಳಿಯೇಳಿದ್ರು.

‘ನಾವು ಮಣೆಗಾರರು, ಮಹಾಧೀರರು, ಯೇಳಳ್ಳಿ ಜನ್ರು ಯೀ ಲಿಂಗವಂತ….ಯೀ ಕಾವಿ ಸ್ವಾಮ್ಗಿಳ್ಗೆ….ಯೀ ದುಗ್ಗಾಣಿ ಯೆಣ್ಗೇ….ಯೆದ್ರಿ, ನಮ್ಮತನಾನ ನಾವು ಬಿಡಬೇಕೇಕೆ? ನೀವೆಲ್ಲ ‘ವ್ಞೂ’ ಅನ್ರೀ ಯಿವ್ರ್ನ ಯಿಲ್ಲಾ ಅನ್ಸಿಬಿಡಾನ್ರೀ… ನಾವು ನಂಬಿರ್ವು ಆಚಾರ, ವಿಚಾರ, ಸಂಪ್ರದಾಯ್ಗಳೇ ನಮ್ಗೇ ದ್ಯಾವ್ರು, ಅನ್ನ, ನೀರು, ಗಾಳಿ, ಯಿವ್ನಾ ಅರಬ್ಬೀ ಸಮುದ್ರಕೆ ವಸೇಕಾಗುತ್ತೇನು?’ ಬಜ್ಜಿಯ, ಕರಿಯಣ್ಣ, ತಿಮ್ಮಣ್ಣ, ಮರಿಯಣ್ಣ ಕುಡ್ಗೊಲು…..ಕೊಡ್ಲಿ ತಗೊಂಡು ನಿಂತ್ರು…..

‘ಯೀ ದೇಹದೊಳ್ಗಿನ ಪಚ್ನಕ್ರಿಯೆಯಂತೆ, ಯೀ ವುಟ್ಟು, ಸಾವು, ಹಸಿವು, ಮೈಥುನ ನೀರ್ಡಕೆ, ಸಹಜಕ್ರಿಯೆ! ಪ್ರಾಕೃತಿಕ ಧರ್ಮಾ! ಯಿದ್ನೆ ಗುತ್ಗೆಯಿಡ್ದು, ಕೊಡ್ಲಿಯಿಡ್ಯಾದ್ಬೇಡ. ಧಾರಿಮಿಕ ವಿಧಿವಿಧಾನ್ಗಳನ್ನು ಕೈಬಿಟ್ರೇನು ಪ್ರಳಯವಾಗಲ್ಲ! ದುರ್ಗುವ್ವ ೧೩ ಮಕ್ಳ ತಾಯಿ…ಮರು ಮದ್ವೆಯಾಗ್ಲು ಸಾಧ್ಯನೇ? ಆಯಮ್ಮ ಯೇಳ್ದಿಂಗೆ ಕೇಳ್ರೀ…’ ಶಿವಮೂರ್ತಿಸ್ವಾಮಿ…ಬಸಲಿಂಗಸ್ವಾಮ್ಗಿಳು ವುರಿಯೋ ಬೆಂಕಿಯನ್ನು ನಂದ್ಸಿದ್ರು.

‘ಆಯ್ತೀಗ ನಮ್ಮೂರ ಸ್ವಾಮ್ಗಿಳು ನಮ್ಗೆ ದ್ಯಾವ್ರುಗ್ಳು. ಜಾತಿ ಸ್ವಾಮ್ಗಿಳು. ಅಣ್ಣ ಬಸವಣ್ಣನ ಕಾಲ್ದವ್ರು……ಕಾಲಜ್ಞಾನ್ಗಿಳು…. ಅವ್ರೆಳ್ದಿಂತೆ ದುರ್ಗುವ್ವಳನ್ನು ಬರೀ ವುಡಕ್ಕಿ ಶಾಸ್ತ್ರದಲ್ಲಿ ಕರೆತನ್ರೀ….ಮದ್ಲು ಸವಸಂಸ್ಕಾರ, ವಿಧಿವಿಧಾನ್ಗಳು ಜರ್ಗಲಿ….ಅದೇನ್ಬಾರ್ತೋ…. ನಾ ನೋಡ್ತೀನಿ…’ ಯೆಂದು ದೊಡ್ಡೆಲ್ಲೆಪ್ಪ, ಜೋರಾಗಿ ಅಂದಿದ್ದೇ ತಡ ರಾಮಕ್ಕತ್ತೆ, ಮಾರಕ್ಕತ್ತೆ, ದುರ್ಗುವ್ವಳನ್ನು ಯೆಣ್ದತ್ರ ಕರೆತಂದ್ರು. ಯೆಣ್ಕೆ ಮೂರ್ಸುತ್ತು ತಿರ್ಗಿ ಯೆಣ್ದ ಬಾಯ್ಕೆ ರೊಕ್ಕ, ಯಲ್ಡಿಕೆ, ಕುಟ್ಟಿಯಿಟ್ಟು, ವೊವ್ವಾಕಿ, ನೀರ್ಸಿಮ್ಸಿ, ವೊದ್ಗಡ್ಡಿ ಬೆಳ್ಗಿ, ಕಾಯ್ವಿಡೆದು….ಮೂರ್ಸುತ್ತು ತಿರ್ಗಿ…ಕಾಲ್ಗೆ ದುರ್ಗುವ್ವ ವೊದ್ದೂಕೆ ಅಡ್ಬಿದ್ಲು….ಯೆಶ್ಟೊತ್ತಾದ್ರು ದುರ್ಗುವ್ವ ಮೇಲ್ಳೆಲಿಲ್ಲ. ‘ದುರ್ಗುವ್ವ ವೋದ್ಲು…ಗಂಡ್ನ ಪಾದ್ಸೇರ್ಕೊಂಡ್ಳು….’ ಜನ ಹೌಹಾರಿ, ದುರ್ಗುವ್ವನ್ಮೇಲೆ ಬಿಂದ್ಗೆ ತುಂಬಾ ನೀರ್ಹಾಕಿ ಬೇವ್ನಿ ಕಡ್ಲಿ ಸುಳ್ಗೆ, ಕಿವಿಗುರುಮು, ಕಣ್ಣಿನತ್ರ, ಪಕ್ಕೆ, ಯೆಬ್ಬಟ್ಟಿನತ್ರ ‘ಸುಟಿಗೆ’ ಐದು ಹಾಕಿದ್ರು….’ಆ‌ಆ….’ ಅಂದ್ಲು! ಆಗಾ…..ಯೆಬ್ಸಿ ಕುಂದ್ರಿಸಿದ್ರು.

‘ಅರಾಽ…..ಅರಾಽ…..ಸಿವ್ಸಾವಾ ಸೆಂಭೋ….ಸಿವಾ ಸೆಂಭೋ ಸೆಂಕ್ರಾ…ಯೆಣಯೆತ್ಲು ಯಲ್ರಾಪ್ಣೆನೇನಾ?’ ದೊಡ್ಡೆಲ್ಲೆಪ್ಪ ಸರೀಕ್ರಿನ ಮೂರ್ಸಾರಿ ಕೇಳ್ದಿ. ಯೆಗ್ಲು ಮ್ಯಾಕೆ ನಾಲ್ವರು ಯೆಣಾನೊತ್ತು ಸುಡ್ಗೂಡ್ಗೆ ಬಿಜೆಲೈಟು, ಲಾಂಟೀನು ಬೆಳ್ಕಿನಲಿ, ಮುಂದ್ಮುಂದೆ ಮೇಳ್ದವ್ರು, ಅಲ್ಗೆಯಿವ್ರು, ವುರ್ಮೆಯವ್ರು, ಕೊಂಬು, ಕಾಳೆ, ಸೆಂಕ, ಜಾಗ್ಟೆಯವ್ರು, ವಂಟ್ರು….ಸಾವು ಯೆಲ್ಲ ಜಾತಿ, ಮತ, ಧರ್ಮಿಯರನ್ನು ವಗ್ಗೂಡ್ಸಿತಲ್ದೆ, ಯೆಣ್ದ ಯಿಂದ ವೂರ್ಕೇರಿಯ ಧರ್ಮಕರ್ಮ, ನ್ಯಾಯ, ನೀತಿ, ಬೆಳ್ಕು, ಸಿರಿತನ, ವಳ್ಳೆತನ್ಗೆಳೇ, ಪುಣ್ಯನೇ ನಡ್ದೆವು!

‘ದುರ್ಗುವ್ವ ನೀ ಬಾಣಂತಿ, ತಿಂಗ್ಳ ಕೂಸಿದೆ. ಯಿಂದಿಂದೆ ಬರ್ಬೇಡಾ. ವಳ್ಳೆದಾಗಲ್ಲ. ಸಾಕು ಮನ್ಗೆ ಯಿಂದಿರ್ಗು…’ ‘…..ಯೇ ಮುದ್ಕಿತ್ತೆಗಳಾ….ಆಯಮ್ಮನ ಯಿಲ್ಲೇ ಯಿಡ್ಕುಂಡು ಕರ್ಕೊಂಡು ವೋಗ್ರೀ….’ ದೊಡ್ಡೆಲ್ಲೆಪ್ಪ ಯಿಂತಾ ಅವೇಳ್ಯಾಗೂ ಕಂಡ್ಬಾಟ್ಟೆ ಕೂಗಿಕೊಂಡ.

ಜನ್ರು….ದುರ್ಗುವ್ವನ ತೆಕ್ಬೆಡ್ದು ಬಲ್ವಂತಾಗಿ ಯಿಡ್ದಿಟ್ರು…..

‘ನನ್ಗಂಡ ವೋದಲ್ಗೇ ನಾನೂ ವೋಗ್ತೀನಿ! ಆ ಸುಡ್ಗೂಡ್ನಾ ನಾ ಯಾವಾಗ ನೋಡ್ಬೇಕು? ನಾ ಸತ್ಮೇಲೆ ನೋಡ್ಕಾಗುತ್ತೇನು? ಬಿಡ್ರೇ ನನ್ನಾ! ನನ್ಗಂಡ್ಸತ್ತು ಯೀ ಭೂಮಿ, ಆಕಾಶಯೇನೆಲ್ಲ ದಿಕ್ತೆಪ್ಪಿರ್ವೂಗ ನಾ ಸುಡ್ಗೂಡ್ಗೆ ವೋಗಾದ್ಯಾವ ಮಾ…..?!’ ದುರ್ಗುವ್ವ ಐದಾರು ಯೆಂಗ್ಸುರ್ನಾ ಬೀಸ್ವಿಗ್ದೆಲು! ಯಣ್ದಿಂದೆ ನಡೆದ್ಲು….

‘ಯಿಲ್ಲಿ ವಲ್ಮೇರ್ತಾಗೆ ಯೆಣ್ಳಿಸಿ, ತಲೇತ್ರಾ ಬಾನ್ತೋಡ್ತೀನಿ! ಆಯ್ತೀಗ….ಯಿಂದ್ಲಾರು ಮುಂದ್ಕಾಗಿ! ಮುಂದ್ಲಾರು ಯಿಂದ್ಕಾಗಿ….’ ದೊಡ್ಡೆಲ್ಲೆಪ್ಪ ಯೆಣ್ವತ್ತ ನಾಕು ಜನ್ರಿಗೆ  ಯೇಳ್ದಿ….ದುರ್ಗುವ್ವ ಗೋಸ್ಯಾಕಿ, ತಲ್ಕೆಟ್ಟು ಕಟ್ಟಿ, ನಡ್ಕುಟ್ ಹಾಕಿ, ‘ತಗ್ರಿಲ್ಲಿ ನನ್ಗಂಡ್ನ ಯೆಣಾನ ನಾನೊಂದು ಘಳ್ಗೆ ವೋರ್ತೀನಿ….’ ಮುಂದೆ, ಯೆಗ್ಲು ಕೊಟ್ಟು ನಿಂತ್ಲು….! ಜನ್ರು…..ಭುಸ್ಗುಡ್ವು ಅಗ್ನಿಪರ್ವತವಾದ್ರು…..

‘ಯೆಂಗ್ಸುರು  ಯೆಣವತ್ತಿದ್ದು ಯೀ ನಮ್ಮ ಭಾರತದ ಯಿತಿಹಾಸದಲ್ಲೇ ಯಿಲ್ಲಾ ದುರ್ಗುವ್ವ! ಯೆಣ್ಣು ವಸ್ಲು ದಾಟಂಗಿಲ್ಲ. ಸುಡ್ಗೂಡ್ಗೇ ಬರಂಗಿಲ್ಲ. ಅಂತಾದ್ರಲ್ಲಿ ನೀ ಯೆಣ್ವತ್ತು ನಮ್ಮ ಸಂಪ್ರದಾಯ್ಗಳ್ಗೆ ಭಂಗ್ವನ್ನುಂಟು ಮಾಡ್ಬೇಡಾ! ಯೆಣ್ಣು ಅನರ್ಹಳು! ನೀ ಯಿಂದಿಂದೆ ಕುರಿಯಂಗೆ ಕುಂದ್ಲಿ, ಜಿಂಕೆಮರಿಯಂಗೆ ಬರಾದು ಕಲಿ, ತಿಳಿ ಯೀಗ್ಲೇ ನಿನ್ದು ಬಾಳಾತು….’ ತಿಮ್ಮಣ್ಣ ಬೆಂಕಿವುಗ್ಳಿದ.

‘ಯೇ ಯಜ್ಮಾನನ ಯೆಂಡ್ತಿಗೆ, ೧೩ ಮಕ್ಳು ತಾಯಿಗೇ ತಿರ್ಮುಂತ್ರ ಯೇಳ್ತಿಯೇನೋ? ನನ್ಗಂಡ್ನ ಯೆಣ ವೋರಾಕೆ ದೊಣೆನಾಯ್ಕನ ಅಪ್ಣೇ ಯಾಕೆ ಬೇಕೋ? ನಾನೀಗ ಯೆಗ್ಲು ಕೊಡ್ತೀನಿ! ಪ್ರಳಯವಾದ್ರೆ ವಾಗ್ಲೀ….’ ದುರ್ಗುವ್ವ ಅಲ್ಲಿದ್ದವ್ರಿಗೆಲ್ಲ ಸವಾಲಾಗಿ ನಿಂತ್ಲು.

‘ನೀ ತಲ್ಗೆ ಕಾಲ್ಮರಿ ಕೇಳೋ ಘಟಾಣೇ… ನೀ ಕೇಳೋ ಮಾತ್ಗುಳ್ಗೆಲ್ಲ ವುತ್ರವೆಲ್ಲಿವೇ? ಯೇ ಅವ್ಳಾಸೇ ಯಾಕೆ ಬ್ಯಾಡಂಬ್ತೀರಿ? ಗಂಡ್ಬೀರ್ಗೆ  ಬಿಟ್ಕೊಡ್ರೀ…’ ಯೆಂದು, ಯಿರೀ ಯಜ್ಮಾನಿ ರಾಮ್ಕತ್ತೆ ಗಂಡ್ಸಿರ್ಗೆ ಸುಂಕಿರ್ಸಿದ್ಲು. ಬಳ್ಬಾಳ್ನೇ ಯಿಳಿಯುತ್ತಿದ್ದ ಕಣ್ಣೀರು ಧಾರ್ನೆ ಕೈಯಿಂದ್ಲೇ ವರ್ಸಿಗೊಂಡು, ದುರ್ಗುವ್ವ….ಯೆಣೆತ್ತಿ ಯೆಗ್ಲ್ಮೇಲೆ ವತ್ತು ಸುಡ್ಗೂಡ್ನಿ ಕಡೆ ಯೆಜ್ಜೆ ಕಿತ್ತಿಟ್ಲು. ಕುಣ್ತೆಗೆದ್ದು…ನಾಲ್ಕೈದು ಮಂದಿ, ದಾರಿ ಕಾಯ್ತಾ….ಲಾಂಟೀನ್ ಬೆಳ್ಕಲಿ, ದೆವ್ವಗ್ಳು ಕುಂತಂಗೆ ಯದ್ರುಪುಕ್ಲಿಂದಾ ಕುಂತ್ದಿವ್ರ ಬಳಿ ಬಂದ್ರು….

‘ದೆವ್ವ, ಭೂತ, ಪಿಶಾಚ್ಗಿಳು ವೋಡಾಡೋ ಯೀ ಆವೇಳ್ಯಾಗ ಯೆಣ ವೊಣ್ಯಾಕ ಬದ್ಲು. ನಸ್ಗೇ ಮಣ್ಣು ಕಾಣ್ಸೆಬವುದಿತ್ತಲ್ಲಾ?!’ ತಿಮ್ಮಣ್ಣ ಸಣ್ಣೆ ವುಸ್ರಿದ.

‘ನಮ್ಮ ಮಣೇಗಾರರ, ಕರ್ಡಿಯವ್ರ ಗುಂಪ್ನಾಗೆ ಭಂಡಾರ ಕುಲ್ದಾಗೇ…. ಬಾಳ್ವಾತ್ತು ಯೆಣವಿಟ್ಕೊಂಡು ಕೊಡ್ವೂವ ಸಂಪ್ರದಾಯವಿಲ್ಲ. ಲೇ ಪತ್ರಾಳೀಯ, ತೆಬ್ಬಾರ್ಕಾ, ಯರ್ಪುಕ್ಲಾ….’ ದೊಡ್ಡೆಲ್ಲೆಪ್ಪ ತಿಮ್ಮಣ್ಣನ್ಗೆ ಬಿಸಿ ಮುಟ್ಸಿದ.

ಕುಣ್ಯಾತ್ರ ಯೆಣಯಿಳ್ಸಿದ್ರು, ಆಲ್ಗೆನ್ನೆಯ ಅಸ್ಗೂಸು ಯಿರ್ಮಿಗ ಪೇಠೆಯಲ್ಲಪ್ಪನ ಕುಣ್ಯಾಕ್ಳಿಸಿದ್ರು, ಯಿಗೋ ನೀರ್ಸಿಮಿಕ್ಸಿ, ಯೀ ಬತ್ತಿ, ಕುಂಕ್ಮು, ಭಂಡಾರಯಿಡು. ವೂದ್ಗಡ್ಡಿ ಬೆಳ್ಗು…ಯಿಗೋ ಯೆಣಾನಿಳ್ಸಿಕೋ……ತಲ್ಹೆತ್ತಾ ಯೀ ಕಾಯ್ನಿ, ನಿಂಬೆಣ್ಣು, ತಂಗ್ಡಿವೂವು….ನಿಲಿಕ್ಕು! ಆಯ್ತು… ನೀ ಮೇಲೇರಿ ಬಾ ಮಗಾ….’ ದ್ಯಾಸಂದ್ರದ ಮರಿಯೆಲ್ಲೆಪ್ಪ ಯೇಳ್ದಿಂತೆ ಪೂಜಾ ವಿಧಾನ್ಗಳನ್ನು ಮಾಡ್ದಿ.

‘ಅರಾಽರಾಽ ಮಾದೇವಾಽ… ಸಿವ್ಸಾವಾಽ ಸೆಂಭೋ….ಸಂಕ್ರಾಽ….ಅರಾಽರಾಽ…..ಮಾದೇವಾಽ…. ಯೀ ಲೋಕ್ವ ಬಿಟ್ಟು ಪರ್ಲೋಕ್ಸೇರ್ದ ಸಣ್ಣೆಲ್ಲೆಪ್ಪಽಶ್…..ಮಣ್ಣು ಕ್ವಟ್ಟು ವೃಣ್ಕಾಳ್ಕೊಳ್ರಾಪ್ಪಾಽ…. ಯೆಂದು…. ಮೂರ್ಸಾರಿ ಜಾಗ್ಟೆ ಬಡ್ದು, ಸಂಕ, ಕಾಳೇ ವೂದಿ, ತಂಗ್ಡಿವೂವು, ಮೂರ್ಡಿ ಮಣ್ಣಾಕಿ, ಸಲ್ಕೆಯಿಂದ ಕುಣ್ಗೆ ಮಣ್ಣು ಯೇರ್ಕೆಲಿ ಯಳ್ದು ಗುಟ್ಟೆ ಮಾಡಿದ್ರು. ಅದ್ರ್ಮೇಲೆ ಆರಾ, ತಂಗ್ಡಿವೂವು, ಅಣ್ಣು ಕಾಯಿಯಿಟ್ಟು ಪೇಟೆ ಯೆಲ್ಲೆಪ್ಪನ ಕೈಲಿ ಗುಟ್ಟೆ ತಿರ್ಗಿಸಿದ್ರು…..ತಿರ್ಗಿ ನೋಡ್ದಂಗೆ ಯಲ್ರು ಸೀದಾ ದುರ್ಗುವ್ವನ ಗುಡಿತಾಕೆ, ಯಿಂದೆ ಮುಂದೆ ಸಂತಿ ದಾರಿಯಂಗೆ ಬಂದ್ರು.

ಯಲ್ರು ಕೈಕಾಲ್ಮಕ್ವ ತ್ವಳ್ದಿರು. ಯೆಣ್ವತ್ತವ್ರ್ನಾ ಗುಡ್ಮುಂದೆ ಸಾಲ್ಗೆ ನಿಲ್ಸಿ ಬೇವ್ನಿತಪ್ಲಿಲಿ ನೀರ್ನಿಂದ ನೀವಾಳ್ಸಿ ದಾಟು ತೆಗೆದ್ರು, ಅಮ್ಮನ ಪಾದ್ಗಟ್ಗೆ, ಅಡ್ಬಿದ್ದು….ಅಲ್ಲೇ ದುಂಡ್ಗೆ ಕುಂತು, ದೊಡ್ಡೆಲ್ಲೆಪ್ಪ ಕೊಡ್ಮಾಡ್ದಿ ವಂದೆಲೆ, ಅಡ್ಕೆ, ಸುಣ್ಣ, ಕಡ್ಡೀಪುಡಿ, ವಗ್ಸೆಪ್ಪು ತಿಂದು ‘ ವಿಷದ್ಬಾಯಿ ಕಳ್ತೇನ್ರಾಪ್ಪಾ? ಸಣ್ಣೆಲ್ಲೆಪ್ಪನ ವೃಣವಿಂದು ಕಳ್ತೇನ್ರಾಪ್ಪಾ? ’ ಮರಿಯೆಲ್ಲೆಪ್ಪ ಯಲ್ರನ ಪದ್ಧತಿಯಂಗೆ ಮೂರ್ಸಾರಿ ಕೇಳ್ದಿ. ಯಲ್ರು ‘ಅವುದಪ್ಪಾ….ವಿಷದ್ಬಾಯಿ ಕಳಿತು’ ಯೆಂದ್ರು.

‘ಅದ್ನಾರು ದಿನ್ಕೆ ದಿವ್ಸಾ. ಆ ದಿವ್ಸಾ ಯಲ್ಲರು ಬರ್ಬೇಕಪ್ಪಾ…. ಯಿದೇ ಕರೆ ಯಾಣ್ಕೀ ನೋಡ್ರೀ….. ಯಾರು ಯೇಳ್ಲಿಲ್ಲಾ ಅನ್ಬಾರ್ದು….. ಯೀಗಾ ಬರೋ ಬೇಸ್ತುವಾರ್ವಲ್ದೆ ಮುಂದ್ನಿ ಬೇಸ್ತುವಾರ ಸಂಜಿಕೆ ನೋಡ್ರಾಪ್ಪಾ…..’ ದೊಡ್ಡೆಲ್ಲೆಪ್ಪ, ಕೂಗಿ ಕೂಗಿ ಸಾರ್ದಿ. ಯಲ್ರು ’ಆಯ್ತು…..ಆಯ್ತು….ಮಣ್ಗೆ ಬಂದ್ರಲ್ಲಾ ದಿವ್ಸಾಕೆ ಬರ್ಬೇಕಲ್ಲಾ? ಆಗ್ಲೇ ಅಲ್ವೇ ವೃಣ ತೀರ್ದಿಂಗೆ….’ಯೆಂದ್ರು.

’ದೈವ್ದಪ್ಣಾಯ್ತು…. ನಡ್ರೀ ತಾನ್ಮಾಡಿ, ದೀಪ್ನೋಡ್ವು ಪದ್ಧತ್ಗೆ ತಡವಾಗುತ್ತೇ, ಯಲ್ರು ಸಣ್ಣೆಲ್ಲೆಪ್ಪನ ಮನೆಯಂಗ್ಳಕೆ ಬಂದ್ಬಿಡ್ರೀ! ವಿಷದ ಕೈ, ಬಾಯಿ, ತ್ವಳಿಯ್ಲು ತತ್ರಾಣ್ಗಿಟ್ಲೆ ಸಾರಾಯಿ, ಖಾನ್ಗೆಳ್ಗಟ್ಲೆ  ಯೀಚ್ಲು, ತೆಂಗ್ನಿ, ಭಗ್ನಿ, ತಾಳೆ ಯೆಂಡ್ತಾರ್ಸೀನಿ ಬಂದ್ಬುಡ್ರೀ….’ ದೊಡ್ಡೆಲ್ಲೆಪ್ಪ ಶಾಸ್ತ್ರದಂತೆ ಕರ್ದೆ.

ಅಷ್ಟ್ರಾಗೆ ಕರೀ ಜಾಲಿಕ್ವಾಡಾಂಗೆ ಬಜ್ಜಿಯೆದ್ದು ನಿಂತು , ’ ಮಾಮ…..ಅಲ್ಗೆಯವ್ರು , ಮೇಳ್ದವ್ರು, ವುರ್ಮೆಯವ್ರು, ಕುಣಿ ತೆಗ್ದೆವ್ರು, ಸೆಂಕ, ಜಾಗ್ಟೆ, ಕೊಂಬು, ಕಾಳೆ ವೂದಿದವ್ರು…..ನನ್ಗೆಂಟು ಬಿದ್ದಾರ್ಮಾಮ! ಅವ್ರ ಬಾಬತ್ತು ಅವ್ರಿಗೆ ಮುಟ್ಸಿಬಿಡು’ ಯೆಂದು, ಯಿಸ್ಕೂಲು ಮಕ್ಳು, ಮೇಸ್ಟ್ರು ಮುಂದೆ, ಯೆದ್ದು ನಿಂತಂಗೆ, ತಲ್ಕೆರ್ಕಾಂತಾ ನಿಂತ!

’ಅವ್ರುದ್ಕಿಂತಾ ನಿನ್ದೆ ಆವ್ಳಿ ಬಿಡು. ಯಾವಾಗ ಅವ್ರುದಾಗೆ ಗಿತ್ರಿಸ್ಲೀ ಅಂತಾ ಬಾಯಿ ಬಾಯಿ ತಡ್ಬೀಸ್ತಿಯಾ ನೋಡು! ತಗೋ, ಯರ್ಡು ಸಾವ್ರಿ! ಅವ್ರಿಗೆ ಕೊಡು’ ಯೆಂದು ದೊಡ್ಡೆಲ್ಲೆಪ್ಪ ಯೆಣ್ಸಿ ಬಜ್ಜಿಯ್ನ ಕೈಗಿತ್ತ.

ವೋರಿ ನಾಗ್ರಾವ್ನ ಕೈಯಲ್ಲಿಡ್ದಾನು ಅಲ್ಲಾಡ್ದಿಂಗೆ ಬಜ್ಜಿಯ ಅಲ್ಲಾಡ್ತಾ…..’ಮಾಮ ಯಲ್ರಿಗೆ ಯಿದ್ಯಾವ ಮೂಗ್ನೇಕಾಗುತ್ತೇ?  ನೀನೇ ಯಲ್ಲರಿಗೆ ಸವಣ್ಸಿಕೊಟ್ಟು ಸಂಭಾಳಿಸು’ ಯೆಂದು ದೊಡ್ಡೆಲ್ಲೆಪ್ಪನ್ಗೇ ತಿರ್ಗಿಬಿದ್ದ.

’ಲೇ….ಕಸ್ಬುದಾರ್ರು ಯಿವ್ರೆಲ್ಲ ದೇವ್ರು, ತೆಪ್ಗಿದ್ದಾರೆ. ನಿನ್ದೆ ಆವ್ಳಿ. ಪುಂಡು ಕಿತ್ಪಾತಿ. ತಗೋ ಯಿನೊಂದ್ಸಾವ್ರಿ….! ಯಲ್ರಿಗೆ ಸವಿಣಿಸು. ಗುದ್ರಾಂಡಿ ಮಾಡ್ಬಿಡ್ಬಾಡ’ ದೊಡ್ಡೆಲ್ಲೆಪ್ಪ ಸಿಟ್ಗೆ ಬಂದ.

ಬಜ್ಜಿಯ ಮತ್ತೆ ತಲ್ಕೆರ್ತಾ…ಮಕ ಜೋಲ್ಹಾಕ್ಕಂಡು, ಪ್ರಶ್ನಾರ್ಥಕವಾಗಿ, ಅಶ್ಟೊಂದು ರಕ್ಕ ಕೈಯಲ್ಲಿದ್ದು ನಿಂತ!

’ಯೇನ್ಲೇ….ಮುಗ್ಳಿ ಅರೆಂಗೆ ಕುಡ್ದು, ಕಾಗೆಂಗೇ?…..?’ ದೊಡ್ಡೆಲ್ಲೆಪ್ಪ ಬಜ್ಹಿಯನ ಗದ್ರಿಕ್ಕೊಂಡ!

ತಾಯಿ ಮಾರಕ್ಕ, ದೊಡ್ಡಮ್ಮ ರಾಮಕ್ಕ ಮಗ್ನ ಮಾತ್ಗೆ ಕೋಪಾಕಿ, ಕಾಪಾಕಿ, ’ತಮ್ಮಾ ಯೆಲ್ಲೆಪ್ಪ, ಮಾವ್ಸತ್ತ ದುಕ್ಕಾ ಮರೆಯಾಕಿ ಕುಡ್ಯಾಕೆ ಕೇಳ್ತಾನೆ! ಯಿಲ್ಲಾಂಬ್ದುಂಗೆ ಕೈ ಬಿಚ್ಚು! ಯೆಶ್ಟಾಗ್ಲೀ ಮನೆ ಅಳಿಯ, ಮನ್ತೆಕೆ ಟೊಂಕಕಟ್ಟಿ ನಿಂತ್ನಾಲ್ವೇ? ’ ಯಿಬ್ರು ಕಾಡ್ಪಾಪ್ರುರಂಗೆ ದೊಡ್ಡೆಲ್ಲೆಪ್ಪನ ಕಿವ್ಕಿಚ್ಚಿದ್ರು.

’ಯಿದು ಸತ್ತ ನನ್ತ್ಮಾನ ರೊಕ್ಕ. ಸ್ವಾಭಿಮಾನಿ, ಕಷ್ಟದಾರಿ, ಛಲ್ದಂಕ ಯೆಲ್ಲೆಣ್ಣನ ದುಕ್ಬಡ್ಡಿ ರೊಕ್ಕ. ಸಾಯ್ವೂಗ ಪಂಚ್ಸೆರ್ಗಿಲಿ ಅತ್ಸಾವ್ರಿ ರೂಪಾಳ್ಗುಳ್ನಾ ಕಟ್ಕೊಂಡಿದ್ದ! ತನ್ಗೆ ಸಾಯೋದು ಮದ್ಲೆ ಗೊತ್ತಿತ್ತೇನೋ? ಸತ್ಮೇಲೆ ಯಾರು ತಿಪ್ಪು ಬೀಳ್ಬಾರ್ದು. ಯಾರು ವೃಣ್ದಾಗೆ ಸಾಯ್ಬಾರ್ದೂ ಅಂತ್ಲೇ ರೊಕ್ಕ ಬುಡ್ಡಕ್ಲಿಗೆ ಕಟ್ಕೊಂಡೇ ಜೀವಬಿಟ್ಟು ದಸಿವಾನ್ಗಾ….ಅಂತಾ ರಕ್ಕನಾ ನಾ ಸಿಮ್ಯಾಡ್ಲೇನು? ದುರ್ಗುವ್ಗೆ ಲೆಕ್ಕ ಕೊಡೋದು ಬ್ಯಾಡೇನು? ಮುಂಜಾಲಿಂದ ರಕ್ಕ ಕೈಬಿಟ್ಟು ಕಣ್ಗುಡ್ಗೆಳು ತೂತುಬಿದ್ದಿವೆ! ಯಲ್ರಿಗೆ ಮನೇತ್ರಾನೇ ಯಂಡ್ಸಾರಾಯಿ ಶಾಕ್ಣ, ಸನ್ನಾಯ ತರ್ಸೀನಿ. ಅದ್ರಾಗೆ ಯಿವ್ನೂ ಸೆಂಡ್ದಿರಾತು!’ ದೊಡ್ಡೆಲ್ಲೆಪ್ಪ ಗಡ್ಗಾಡಾ ಗುಡ್ಗಿ ಮಕಂಬ್ಮಾಕ್ನಾ ಸಳ್ಗೆಡ್ಗೆ ಮಾಡ್ಕೊಂಡ.

’ನೀ ಯಿಶ್ಟೆಕೇ ಸುಣ್ದಭಟ್ಟಿಯಾದ್ರೆಂಗೆ? ನನ್ಮಗ ಮಾಮ್ನಾರ ಯದ್ರಿಬದ್ರಿಗೆ ಕುಂತು ಯೆಂದಾದ್ರು ಕುಡ್ದಾನಾ? ತಿಂದಾನಾ? ಸಂಬಾವ್ತಿ, ಧರ್ಮಣ್ಣ, ನಮ್ಮಪ್ಪ ಮಾರಾಯ….ವಾರ್ಗೇ ಕಾಣ್ದಂಗೆ ಕುಡಿತ್ತಾನೆ, ತಿಂಬ್ತಾನೆ, ಸೇದ್ತಾನೇ. ಸೀದಾ ಮನ್ಗೇ ಬರ್ತಾನೆ. ಅವ್ನೆಗೆಂತಾ ಬ್ಯಾರ್ನೇ ಕೊಟ್ಬಿಡು’ ಮಾರೆಕ್ಕ ರ್ವಾಸ್ಪಂತಿಲ್ದ ಮಗ್ನಾ ಪರ್ವಾಗಿ ದಂಡ್ದುಳ್ಕೊಟ್ಗಿಂಡು ದೊಡ್ಡೆಲ್ಲೆಪ್ಪನ್ಮೇಲೇರ್ಗಿದ್ಲು.

ದೊಡ್ಡೆಲ್ಲೆಪ್ಪ….ತಲ್ತೆಲೆ ಸವ್ರಾರ್ಡಿಕೊಂಡು….ಮೈಕೈಯಿಜ್ಗಿಕೊಂಡು, ಯದ್ಮೇಲ್ನಿ, ಮೈಯಂಗಿ, ಪಂಚೆಯೊಳ್ಗಿನ ಬಕಾಣಗಳ್ನ ವುಡ್ಕಿಡ್ಕಿ…..ಅಂತೂ ನೂರು ರೂಪಾಯಿ ನೋಟು ತೆಗೆದು, ಬಜ್ಜಿಯ್ನ ಮಕ್ದ್ಮೇಲೆ ಬೀಸ್ವಿಗ್ದ್ವೆ, ಮನ್ಕೆಡೆ ನಡ್ದೆ.

*                                     *                                         *
ಯಲ್ರು ’ತಾನ್ಮಾಡಿ’ ಬಟ್ಟೆ ಬದ್ಸಿಗೊಂಡು, ಅಣ್ತೆಂಬಾ ಯೀಭತ್ತಿ, ಭಂಡಾರ, ಕುಂಕ್ಮು ಬಳ್ಕೊಂಡು, ಸಾವ್ನಿ ಮನೆ ದೀಪ ನೋಡ್ಲು ಸಾಲ್ಗಟ್ಟಿ ಬಂದ್ರು. ದುರ್ಗುವ್ವನ ಕೈಮೇಲೆ, ಬಾಯ್ಗೆ ಯೆಂಡ್ಸಾರಾಯ್ನಿ ಬಿಡ್ವು ಶಾಸ್ತ್ರ….ಕುಡಿಯ್ವು, ಕುಡ್ಸಿವ, ಬೀಗ್ರ, ಅಣ್ತಮ್ಮಗ್ಳ ಪಾಲೆಂದು ವಿಷದ್ಬಾಯಿ ತ್ವಳಿದ್ರು.

’ಗುಟ್ಟೆ ತಿರ್ಗಿದ ಪುಟ್ಟಬಾಲಮ್ಮ ಪೇಠೆಯಲ್ಲಣ್ಣನೆಲ್ಲಿ? ಮುಟ್ನಿ ಮನೆ ಬಳಿಯತನ್ಕ ಯಾರ ವಸ್ಲು ದಾಟ್ಬಾರ್ದು! ಯೀ ಸಪ್ರದಾಗೆ ಕುಂದ್ರಿಸಿ, ವುಂಬಾಕೆ ಮುಚ್ಳು, ಕುಡ್ಯಾಕೆ ಮಗಿ ಯಿಡ್ರೀ, ಯಾರು ಮುಟ್ಬಾರ್ದು….’ ಚೌಡ್ಕೆ ಯೆಲ್ಲೆಪ್ಪ ಕುಡಿತಾ ಕುಡ್ತಾ…ಕಟ್ಟುಪಾಡು ವಿಧಿಸ್ದಿ.

’ನಾವ್ಬೆರ್ತೆಮ್ಮಾ…ದುರ್ಗುವ್ವ…ಶಾಸ್ತ್ರದ್ಪ್ರಾಕಾರ ಸತ್ಮೆನ್ಗೇ ವುಳ್ಕಾಳ್ಯಾಕೆ ಬರಂಗಿಲ್ಲ ವೋಗ್ಲಿ ಗುಡಿ, ಬಾವಿತಾಗೆ ವುಳ್ಕಂಡ್ರೂ ಮುಂಜಾಲ್ಕೆ ಯಾರ್ಗೊ ಮಕ ತೋರ್ಸಂಗಿಲ್ಲ. ಅಂತ್ಸಂಪಂತ್ಗೆ ಯಾಕಿರ್ಬೇಕೇಳು ದುರ್ಗುವ್ವ?’ ಯೆಂದು, ಬಂದ್ವರೆಲ್ಲ ಅಂಗೆಂಗೇ ವಸ್ಲು ದಾಟ್ದಂಗೇ ಯೇಳೇಳಿ ವಂಟ್ರು.

ತೌರ್ನಿ ಕಳ್ಬುಳ್ಳಿ ಅನ್ಗಿರು ಮಾಡ್ದಂಗೆ ಮಾಡ್ಲು ಬರುತ್ತೇ? ದುರ್ಗುವ್ವನ ತಮ್ಮ ಸಾವ್ಕಾರ, ಬಲ್ವಂತ ಬಲ್ಭೀಮಪ್ಪ, ಅಕ್ಕ ವೂರವ್ವ ಮರ್ಪಾಟ್ಲಿ ವುಂಬಾ ಕ್ವಾಣ್ಗೆ ಬಂದ್ರು.

’ಅಕ್ಕಾ ಆ ದೇವ್ರು ಬಲು ಕಟ್ಗು! ನಿನ್ಗಿಂತಾ ವತ್ತು ಬರ್ತಾಂತಾ….ನಾವೆಣ್ಸಿರ್ಲಿಲ್ಲಾ? ಕೈಯಾಗ್ಳ ಕಡ್ಲೆ ಆರ್ಬಾಡ್ದಿಂಗಾತು! ಆದ್ಕಂಡು ತಿಂಬೋ ಕೋಳ್ನಿ ಕಾಲ್ಮೂರ್ದಿಂಗಾತು! ಯೀ ವೂರ್ಕೇರಿ ಬೆಂಕಿ, ಬೆಂಕಿ, ಅಸ್ವುಲ್ದು, ಲಂಕಾಪಟ್ಣಾ….ಯೇಳು ಮಿಂಡ್ರಿದು…. ಯೀ ಬೆಂಕಿ ಕುಂಡ್ದಾಗೆ ನೀ ಯಂಗೆ ಯೀಜ್ತಿಯೇ? ನಿನ್ಗಂಡ್ನಿದ್ದ ಬಾದ್ದೂರ! ಯಲ್ರ್ನ ನಿಭಾಯ್ಸಿತ್ತಿದ್ದ. ತಲ್ಮೇಲೆ ಮೆಣ್ಸು ಅರ್ತಿದ್ದಾ…ಯೀ ನಿನ್ನಳಿಯ ಬಜ್ಜಿಯ, ಮಗ್ಳುತಾಗೆಂಗೇ ವುರ್ತೀಯಾ? ಆ ದೇವ್ರೇ ನಿನ್ನಾ ಕೈ ಬಿಟ್ಟ! ಯಂಗೆ ಮಾಡುಂಬ್ತೀಯಾ? ಅದೇ ಯಸ್ನಾ ಸಿಂತೆ ನಮ್ಗೇ…..’ ತಮ್ಮ ಬಲಭೀಮಪ್ಪ ಕಣ್ಣೀರಿಟ್ಟ.

ದುರ್ಗುವ್ಗೆ ಯಿಶ್ಟು ಬೇಕಾಗಿತ್ತು! ಬಿಕ್ಕಿ ಬಿಕ್ಕಿ ಅಳ್ತೊಡ್ಗಿದ್ಲು. ವೂರವ್ವ ದುರ್ಗುವ್ವನ ತಬ್ಕೊಂಡು  ’ಅಞಾ…’ ಅಂತಾ ಅತ್ಲು.

’ಯೀಯೆಲ್ಲ ಕಾರೇವುಗ್ಳು ಮುಗ್ದ್ಮೇಲೆ….ದಿವ್ಸೆಕೆ ಬಂದ್ಮೇಲೆ….ನೀ ನಮ್ಮಿಂದ ನಿನ್ನ್ಮಕ್ಳು ಮರೀನಾ ಕಟ್ಗೊಂಡು ತೌರ್ಗೆ ಬಂದ್ಬಿಡು. ಅಲ್ಲಿ ಯಲ್ಡು ಮನ್ಗೆಳ್ವೆ ವಂದ್ರಲ್ಲಿ ಯಿದ್ದು, ಕಬ್ನಿಗದ್ದೆ, ಕೆನ್ನೊಲ ಮಾಡುಂಬ್ವುಂತೇಳೂ……ಯಿಲ್ಲಿದ್ರೆ ಯಿವ್ರತಾಗೆ ಯೇಳ್ಗೆಯಾಗಲ್ಲ!’ ವೂರವ್ವ……ತಂಗಿ ದುರ್ಗುವ್ವನ…..ತಲೆ ದೊಬ್ಕ್ಯೊಂತಾ…..ಯೀ ಮಾತ್ಗುಳ್ನ ಅಂದಿದ್ದೇ ತಡ, ಅಲ್ಲಿದ್ದವ್ರ ಕಿವ್ಗಿಳು ಕುಂದ್ಲಿಯಂತಾದ್ವು.

’ಯೀಗೇನ್ವಾಸ್ರಾ? ನೀವು ದಿವ್ಸಾಕೆ ಬರ್ತೀರಲ್ಲಾ? ಆವಾಗ ಮಾತಾಡ್ನಾ….ನೀವೀಗ ವೂಗ್ಬಿರ್ರೀ….’ ದುರ್ಗುವ್ವ, ಮೂಗು ಮುರ್ದು, ಮಾತಾಡಿದ್ಲು.

’ಆಯ್ತು….ನಾವು ಬರ್ತೀಮ್ಮಾ….ಯೆಚ್ರಾಮ್ಮಾ…..ಧೈರ್ಯವಾಗಿರು…..’ ಯೆಂದು ಭೀಮಪ್ಪ, ವೂರವ್ವ……ಯಿಶ್ಟೇಳಿ, ಕತ್ತಲಲ್ಲಿ ಕರ್ಗಿದ್ರು.
*                               *                              *
ಮೂರ್ದಿನ್ದ ಕೂಳ್ಗೆ….ಸಳ್ಳೆಪಲ್ಲೆ, ಅಕ್ಕಿಬಾನ, ರಾಗಿಮುದ್ದೆ, ವುದ್ಕು, ಯೀರಿ, ಲಲ್ಡಿ, ದಮ್ಮಿ, ಸತ್ತ ಜಾಗ್ದಲ್ಲಿ ದೊಡ್ದೊಂದು ವುಂಜಾ ಕೊಯ್ದು ಶಾಂತಿ ಮಾಡ್ಲು. ಯೆಂಡ್ಸಾರಾಯಿನೇ ಆಗ್ಬೇಕೆಂದು ಬಜ್ಜಿಯ, ಯೀರಣ್ಣ, ಕರಿಯಣ್ಣ, ತಿಮ್ಮಣ್ಣ, ಕಲ್ಲಣ್ಣ….ಯೆಲ್ರು ದುರ್ಗುವ್ವನ, ದೊಡ್ಡೆಲ್ಲೆಪ್ಪನ…..ಜೋರು ಮಾಡಿ ವುಂಡು, ಮೂರ್ದಿನಾ ಆಗ್ಲೀಲ್ಲಾ…..

’ಅತ್ತೆ…..ಅತ್ತೆಮ್ಮಾ…..ನೀ ಅಗ್ಲುರಾತ್ರು ಯಿಂಗೆ ಅಡ್ಗ್ಮನ್ಲಿ ಕುಂತು, ಬರೀ ಕಣ್ಣೀರಿಟ್ರೆ ಬಾಳ್ವೆಂಗೆ ನಡಿತ್ತೆಮ್ಮಾ? ಆಗೋ ವುರ್ಗಾಳ್ರು ಕೇರ್ಯಾಗ್ಳುರು ಮನ್ಮುಂದ್ಕೆ ಬಂದಾರ್ನೋಡಮ್ಮಾ….ಅಂಗ್ಳದಾಕೆ ಬರಂಗಾದ್ರು….ಯೀ ನಿನ್ಕಾಲ್ಗಾ ಯೇನೆಲ್ಲ ಕಾಣ್ಬೇಕೋ ಯೇನೋ? ವರ್ಕಾ ಬಂದುಯೇನಂತಾ ವಿಂಗ್ಡಿಸ್ಪಾಮ್ಮಾ.’ ಬಜ್ಜಿಯ ದುರ್ಗುವ್ವನ್ಕಾಲ್ಕಾ ಯೇಳ್ಡೆಸರ್ಪಾನೇ ಬಿಟ್ಟ!

ಆ ಕ್ಷಣ, ದುರ್ಗುವ್ವ….ಜಲ್ಜಾಲಾಂತಾ ಬೆಮ್ತ….ಮೇಲ್ಕೆಳ್ಗೆ ನೋಡಿದ್ಲು. ಮನೇನೇ….ಮೇಲ್ಬಿದ್ದಾಂಗಾತು. ಕಣ್ಣೀರ್ಳಿಯ್ದ ಕಣ್ಣಿಗೆ ಡಬ್ಳ ಚುಚ್ಚಿದಂಗಾತು!

ದುರ್ಗುವ್ವ ದಿಕ್ತಪ್ಪಿ ಕುಂತ್ಲು. ’ದುರ್ಗುವ್ವ…..ಅಂಗ್ಳದ ಮಕ ನೋಡ್ತಿಯಮ್ಮಾ? ಯಿಲ್ಲಾ ವಳ್ಕೆ ನಾವೇ ಬರ್ಬೇಕಮ್ಮಾ?’ ಐನೋರ್ಸಾಮಿ ಅಂಗ್ಳದಿಂದ್ಲೇ ಕೂಗ್ದಿ. ಮನೆಯಾಗ್ನಿ ಮಕ್ಳೆಲ್ಲ ಚಿರ್ತೆ ಕಂಡ ಬೆಕ್ಕಿನಂತಾದ್ರು. ದುರ್ಗುವ್ವ ಗರ್ತಿಗಂಗಮ್ಮನಂತೆ ತಲ್ತೊಂಬಾ ಸೆರ್ಗುವದ್ದು, ಕಂಕ್ಳಾಗೆ ತಿಂಗಳ ಅಸ್ಗೂಸು ನಾಗರತ್ನಮ್ಮನೆತ್ಗಿಂಡು ಅಂಗ್ಳ ನಡ್ಗುಂಗೆ ಬಲ್ಗಾಲಿಟ್ಲು. ತನ್ನ ಮನೆ ಮುಂದೆ, ತಾನೇ ಪರ್ದೇಸಿಯಂಗೆ, ಕುಂತ್ವರ ಮುಂದೆ ಗಿಣಿಯಂಗೇ…..ನಿಂತ್ಲು.

ಜನ್ರು ಮಾಡಾಕೆ ಕಾಪ್ರಿಲ್ದೆ, ತೇರು ಪರ್ಸಿಯಂಗೆ, ವುಳೀಳೀ ನೋಡ್ತಾ ಆಗ್ಲೇ ನಿಂತಿದ್ರು. ದುರ್ಗುವ್ವಳ್ಗೆ ಸತ್ತಷ್ಟು ನಾಚಿಕೆಯಾಯಿತು. ತುಂಬ್ದಿ ಸಭೆಗೆ ದ್ರೌಪದಿನ ಯಳ್ದು ತಂದು ನಿಲ್ಸಿದಂಗಾಗಿತ್ತು. ಅಲ್ಲೇ ಭೂಮ್ಯಾಕ್ಳಿದ್ಲು. ಆದ್ರೂ ಗಟ್ಟಿ ಧೈರ್ಯ ಮಾಡಿ….’ಯೇನ್ಸಾಮ್ಗಿಳೆ ಬಂದಿದ್ದು? ಯೇನಾದ್ರು ವಗ್ತ್ನಿವಿತ್ತೇನು?’ ಯೆಂದು ದುರ್ಗುವ್ವ ಅಂದ್ಳು.

’ಯೇನಿಲ್ಲ ದುರ್ಗುವ್ವ….ಸಾಯೋ ಮುಂದೆ, ನಿನ್ಗಂಡ ಅದೇ ವುಗಾದಬ್ಬಕೆ ಅಂಗ್ಡಿ ಸಾಮಾನು….ಬೇಳೆ….ಬೆಲ್ಲ, ಅಕ್ಕಿ, ಸಬ್ಬು, ಯೆಣ್ಣೆ, ವೂದ್ಗಡ್ಡಿ,ಮಂಡಾಳು, ಯಲ್ಡಿಕೆ, ಯಿಸ್ತ್ರಿಲೆ, ಚಿಲುಪ್ಪು….ಬೀಡಿ, ಬೆಂಕ್ಪಿಟ್ಣ, ವಗ್ಸೆಪ್ಪು, ಕಡ್ಡಿಪುಡಿ……ಅಂತಾ ಸಾವ್ರಿರೂಪಾಳ್ಗುಳುನ ವುದ್ರಿ ತಂದಿದ್ದನ ನೀ ಕೊಡ್ಬೇಕಮ್ಮಾ ಯೀಗ! ಯೆಂದು…ಐನೋರ್ಸಾಮಿ ಜನ್ರಿದ್ರುಗೆ ಅಂದ.

’ಸಾಮ್ಗಿಳೇ…..ವುದ್ರಿ ಅಂದಾಜಾಣ ಯೆದ್ಕುತ್ಗಂಡೆಂಬಂಗೆ, ವುದ್ರಿ ತಂದ್ದಿಕೆ ಅಧಾರ್ವೆನೈತಿ?’ ದುರ್ಗುವ್ವ ಸಾಮ್ಗಿಳ್ಗೇ ತಿರ್ಗೇಟು ಕೊಟ್ಲು.

’ಗಂಡ್ಸತ್ಮೇಲೆ ಯೆಂಡ್ತಿ ಬುದ್ಧಿವಂತಿಯೆಂಬ್ದು ಸುಳ್ಳಲ್ಲ! ಯಿಗೂ ನೋಡ್ಕೊಳ್ರೀ….. ಯೀ ಅಂಗ್ಡಿಬುಕ್ನೇ ಸಾಕ್ಷಿ, ಪುರಾವೆ, ದಾಖಲೆ ದುರ್ಗುವ್ವ…’ ಯೆಂದು ಸೆಡ್ವಿನಿಂದ್ಲೇ ವೋಬಿರಾಯ್ನ ಕಾಲ್ದ ಅಳೇ ರದ್ದಿ, ಯೆಣ್ಣೆ ಕುಡ್ದಾ ಬುಕ್ನು ಬೀಸಿ ಜನ್ರು ಮುಂದಾಕ್ದಿ. ಬುಕ್ಕಿಂದು ಮಡ್ಸು ವಾಸ್ನೇ ಮತ್ತು ಅಂಗ್ಳದ ಧೂಳು ಯರ್ಡು ಸುಂಟ್ರುಗಾಳಿಯಂಗೆ ಜನ್ರ ಮೂಗು ಬಾಯಿ ಕಟ್ದಿವು….’ಆಕ್ಸೀ….ಆಕ್ಸೀ….’ಯೆಂದು ಸೀನೀನಾ ಮೇಲೆ ಐದಾರು ಜನ್ರು ಸೀನಿದ್ರು.

’ಯೇ ಸತ್ಯಾಬಿಡು! ಸಾಮ್ಗಿಳಾಗಿ ಬರೀ ಸಾವ್ರಿರೂಪಾಳ್ಗುಳ್ಗೆ ಸುಳ್ಳಾಡ್ತಾರೇನು? ಕೇರಿತನ್ಕಾ ಬರ್ತೇರೇನು? ದುರ್ಗುವ್ವ ನೀ ರೊಕ್ಕ ಕೊಡ್ಬೇಕಾಗಿದ್ದೇ……! ’ ವುರ್ಗಾಳ ಯಿಂದ್ರಸೇನ್ರೆಡ್ಡಿ ಯೆಲ್ರಿಗೆ ಮುಂದು ಬಾಯಾಕಿದ್ದೇ ತಡ, ವುಳ್ದಿವ್ರು ಕುರಿಬಿದ್ದ ಜಾಡ್ನಿಂತೆ ’ಅವುದು….ಅವುದು’ ಯೆಂದ್ರು.

ದುರ್ಗುವ್ವ ಕಂಕ್ಳುದಾಗೆ ಕೂಸ್ನ ಕಟ್ಗಿಂಡು ಪಡ್ಸಾಲ್ಗೆ ಬಂದ್ಲು….ಬಳ್ಬಾಳ್ನೆ ಯಿಳ್ದಿದ್ದ ಕಣ್ಣೀರಾಧಾರ್ನೆ ವರ್ಸೊಕೊಂತಾ…ವುತ್ದೊಳ್ಕೆ ಕೈಯಿಟ್ಟಂಗೆ, ಅಲ್ಮಾರ್ಗೂಡ್ನಾಕೆ ಕೈಯಿಟ್ಟು ಸರ್ಸಾರ್ನೆ ಸಾವ್ರಿ ರೂಪ್ಳಾಗ್ಳುನ ಯೆಣ್ಸಿ ತಂದು, ಸಾಮ್ಗಿಳ ಕೈಗಿಟ್ಲು, ಚಾಮ್ಗಿಳು ರಕ್ಕಾನೆಣ್ಸಿ….. ಮೈಯಂಗಿ ಬಕ್ಣಾದಾಕಿಟ್ಕೊಂಡು, ಅಂಗ್ಡಿಬುಕ್ದಾಗೆ ಜಮಾ ಬರ್ದು ’ವುದ್ರಿ’ ವಜಾತು ದುರ್ಗುವ್ವ! ’ನಿನ್ಗಂಡ್ನ ಮಾತು ವುಳ್ಸಿ ಕೋಟ್ಗೂಬ್ಳೆನ್ಸಿದವ್ವಾ…..ನಮ್ಸುಕಾರ ನಾ ಬರ್ತೀನವ್ವ……! ಯೆಂದು ಚಾಮ್ಗಿಳು ಕೈ ಮುಗ್ದು ಯೆದ್ದು ವೋದ್ರೂ.

ರಾಂಪುರ್ದ ಕ್ವಾಂಟ್ರು ಸೆಟ್ರು….ಮೆಲ್ಗೆ ತಮ್ಮಂಗ್ಡಿ ಅರ್ವಿಕಂಡು…’ಯಂಗೇ ದುರ್ಗುವ್ವ…ಯಲ್ರಿಗೆ ತೋರ್ಕಾಗಿನೇ….ಯೀ ಅಂಗ್ಡಿಬುಕ್ಕನಾ ತಗೊಂಡ್ಬಾಂದ್ನೀ…..ನಮ್ಮಂಗ್ಡಿಲಿ ನಿನ್ಗಂಡ ವುಗಾದಿ ಅಬ್ಕೇ ವುದ್ರಿ ಬಟ್ಟೆ ತಗೊಂಡಿದ್ದು, ಯಲ್ಡು ಸಾವ್ರಿ ರೂಪ್ಳಾಗ್ಳುನ ಕೊಡ್ಬೆಕವ್ವ ಯಾರ್ಬೇಕಾದ್ರು ವೋದ್ಕೊಳ್ರೀ….’ ಯೆಂದು, ಅವ್ರೂ ಬುಕ್ಕಾನ ಬಿರ್ಸಿಲಿ ಜನ್ರ ನಡ್ಬುರ್ಕ ವಗ್ದು ಜನ್ರ….ಮಕ್ಮಕಾ ನೋಡ್ತಾ ಕುಂತ್ರು….

ಕುರ್ಗಿಳಂಗೆ ಜನ್ರು ನಮ್ಲಗರಿತಾ….ಮಳ್ವೆರೆ ಗ್ವಾಮ್ಳೆ ವಂಡ್ಸಿಗಂಡು ಯಿದ್ರು…..

’ಸೆಟ್ರೇ…..ನಮ್ಮಾರು ಯೇನೇನ್ತಾಂದ್ರಾಂತಾ….ನೀವೇ ರವ್ವಾಟ್ಟು ಬುಕ್ಕಾನೋಡಿ ಯೇಳ್ರೀ….’ದುರ್ಗುವ್ವ ಕಣ್ಣೀರ್ಸೀಟ್ಗಿಂತ್ಲೆ ಮಾತ್ವುಗ್ದೆಲು, ದುರ್ಗುವ್ವನ ಮಾತ್ಗೆ ಸೆಟ್ರು ಕಣ್ಣುಕಿಸ್ರು ಮಾಡ್ಕೊಂಡು ಜನ್ರಾನ ಯಡ್ಸಿರ್ದ್ಮೇಲೆ ನೋಡ್ತೆ….ಕೈಯಾಗಿ ಬುಕ್ಕಿಡ್ದು…..’ಯಲ್ಡು ಪಂಚೆ, ಯಲ್ಡು ಸೀರೆ, ಯಲ್ಡು ರಗ್ಗು, ಗುಡಾರ, ಆರು ಅಂಗ್ಬಿಟ್ಟೆ, ನಾಲ್ಕು ನಿಕ್ಕರ್ಬುಟ್ಟೆ, ಯಲ್ಡು ಟುವ್ವಾಲು, ಕುಬ್ಸಾ, ರುಮಾಲು, ಐವತ್ತು ವಸಾವು ಮಾರ್ಬಾರ್ನಿ ಗ್ವಾಣಿ ಚೀಲ್ಗಳು…..’ ಸೆಟ್ರು ಬಿಳ್ಕಿನ್ಡಕ ಸರ್ಮಿಡ್ಕ್ಯಾಂತಾ ವೋದ್ತಿದ್ರು….ನಡ್ಬುರ್ಕೆ ದುರ್ಗುವ್ವ ಬಾಯಾಕಿ……’ಸೆಟ್ರೇ….ವುದ್ರಿ ಅಂತಾ ವುದ್ದೂಕ ಯಮ್ಮಿಗಂಜು ವಯ್ಕೊಂಡ್ದಾಂಗೆಲ್ಲ ಸೆಟ್ರೇ……ಯಿಲ್ಲಿ ನೋಡ್ರಿ ಯೀ ಐವತ್ತು ಗೋಣಿತಟ್ನ್ಮೇಲೆ ಬೆಂಗ್ಳೂರ್ನಿ ಸೀಲು, ಬಿಲ್ಲು…..ಯೀ ಯಲ್ಡು ರಗ್ಗು, ಗುಡಾರ್ಗಳು ವೂರು ಮುಂದ್ಲ ಸರ್ಕಾರ್ಸಿವಾಲ್ಯಾನಾಗೆ ತಂದ್ದಿಕೆ ಚೇಟ್ಗಿಳ್ವಿ…..ಯಿಗೋ ತಗೋಳ್ರೀ…..’ ದುರ್ಗುವ್ವ ಕನ್ಡಿಯಂಗೆ ಜನ್ರು ಮುಂದಾರ್ವಿದ್ಲು.

ಸೆಟ್ರು ಯೆಗ್ಲು ಮೇಲ್ನಿ ವಲ್ಲಿಯಿಂದ ಬೆವ್ರು ವರ್ಸಿಗೊಂಡು, ಗಾಳಿ ಬೀಸ್ಕೊಂಡು, ಆಗ್ಲೇಲ್ಲ ಕನ್ಡಾಕನ ಸರಿ ಮಾಡ್ಕಿಂತಾ….ತುಟ್ಸಿವ್ರಿಕಂತಾ….ಸಪ್ಗೆ ಕುಂತ್ರು…..

ಆ ಕ್ಷಣ ಭಯಂಕ್ರ ಮೌನ ತಲೆದೂರ್ತು…..ಗಾಳಿ ಕೂಡಾ ಸೆಟ್ಗೊಂಡಿತು. ಸೆಟ್ರು ಮಕ ಕಪ್ಪಿಟ್ಟಿತು. ವುಗ್ಳು ನುಂಗಿ ’ಆಯ್ತಮ್ಮಾ….ಯೇನೋ ಪರ್ಪಾಟಾಗ್ದೆ. ಯೀ ಲೆಕ್ಕ ಬಲ್ದುಕ್ಕ. ನಮ್ನ ನಂಬು ದುರ್ಗುವ್ವ……ನಮ್ಮನಡ್ವುಲ್ಮಗ ಬರೀವಾಗ ರವ್ವಾಟು ಯೆಚ್ಚು ಕಡ್ಮೆ ಮಾಡ್ಬಿಟ್ಟಾನೇ…..ಆಯ್ತು ಬರೀ ಸಾವ್ರಿ ರೂಪ್ಗಾಳ್ಗಾಳ್ನ ಕೊಟ್ಬಿಡಮ್ಮಾ…..’ ಯೆಂದು ಸೆಟ್ರು, ಕಣ್ಕಣ್ಣು ಬಿಡ್ತಾ ಕುಂತ್ರು…..

ದುರ್ಗುವ್ವ ಪಡ್ಸಾಲ್ಗೊಡ್ಗೆ ಭಾರ್ವಾದ ಯೆಜ್ಜೆಗಳೊಂದ್ಗೆ ವೋದ್ಲು…..ಅಲ್ಮಾರ್ದಾಗಿನ ರೊಕ್ನೆಣ್ಸಿ ತಂದು, ಸೆಟ್ರು ಕೈಗಿತ್ಲು. ಸೆಟ್ರು ಯೆಣ್ಸಿಗಂಡ್ರು ಮೈಯಂಗಿಯ ವಳ್ಬಕ್ಣಾದುಕೆ ತುರ್ಕಿಕೊಂಡ್ರು. ಅಂಗ್ಡಿಬುಕ್ದಾಗೆ ಜಮಾ ಬರ್ಕೊಂಡು “ಬರ್ತೀವಿ……ದುರ್ಗುವ್ವ….ನಿನ್ಗಂಡ್ನಾ ಯೆಸ್ರು ವುಳ್ಸಿದೆ…..’ ಯೆಂದು, ಕೈಕೈ …..ಮುಗ್ದು ಬಂದ್ದಾರಿ ಯಿಡಿದ್ರು.

’ಯೀ ಕಷ್ಟ, ನಷ್ಟ, ತೊಂದ್ರೆಗಳು ಜೋಡಿ, ಜೋಡಿಯಾಗಿ, ವಳ್ಳೆ ಸಿಟಿ ಬಸ್ಗುಳು ಬಂದಂತೆ ಮೇಲಿಂದ್ಮೇಲೆ ಐದಾರು ಬಸ್ಸುಗ್ಳು ಮಮ್ಮೇಲೇ ಬಂದಂಗೇ ಬರ್ತಾವೆ!….’ ಯೆಂದು ದುರ್ಗುವ್ವ ಮೆಲ್ಗೆ ಗೊಣ್ಗಿಕೊಂಡ್ಳು….ಅಶ್ಟ್ರಾಗೇ…..’ದುರ್ಗುವ್ವ…..ನಿನ್ಗಂಡ ಸಾಯೋ ವಾರ್ದಿಂದೆ ಕೈಬದ್ಲಾಗಿ, ನನ್ನತ್ರ ಐದ್ಸಾವ್ರಿ ರೂಪಾಳ್ಗುಳ್ನ ಯಿಸ್ಗೊಂಡ್ದಿಂಗೇ ಅದ್ರಾವಡ್ಡಿ, ಗಂಟುನಾ ಯೀಗ ನೀ ಕೊಡಂಗೇ….’ ಯೆಂದು ಯಿಂದ್ರಾಸೇನ್ರೆಡ್ಡಿ ಯಲ್ರೆದ್ರುಗೆ ಬಾಂಬ್ಸಿಡ್ಸಿದ.

ದುರ್ಗುವ್ವನ ತಾಳ್ಮೆ ಕಟ್ಟೆಯೊಡಿತು! ಅಲ್ಲಿ ಕುಂತ್ವರ, ನಿಂತ್ವರ, ಸಣ್ಣವ್ರಾ….ದೊಡ್ವಾರ……ಮಕ್ಗಳನ್ನು ವಂದ್ಕಡೆಯಿಂದ ಪಿಳ್ಪೀಳಿ ತಿನ್ನಂಗೆ ನೋಡ್ತಾ ನಿಂತ್ಲು…..ಯಲ್ರ ಮಕ್ಗಳು ದ್ರೌಪದಿ ವಸ್ತ್ರಾಪಹರಣ್ದ ತುಂಬ್ದಿ ಸಭ್ಯಾಗ್ದಿಂತ್ನೇ…..ನೆಲ್ನೊಡ್ತಾಯಿದ್ವು…..

ಛೀ……ಛೀ……  ಯೀ ಗಂಡ್ಸರೆಂದ್ರೆ….. ನರ್ಸಾತ್ತನಾಮರ್ಧರು, ಪುತ್ರಕುಮಾರರು,  ಪುಸ್ರಾವಳ್ಗಿಳು, ಕೌರ್ವಸಂತಾನ, ಮೂಕ ಪ್ರೇಕ್ಷಕ್ರು, ಕುರಿ ಮಂದೆಯಂಗೇ….’ ದುರ್ಗುವ್ವ ಮನ್ದಲ್ಲೇ ಅಲ್ಲಿದ್ದವ್ರಿಗೆಲ್ಲ ಯಿಡೀ ಶಾಪ ಆಕಿದ್ಲು. ಯೀಗಾ ….ಯಿಂತಾ ವೇಳ್ಯಾಗೆ ನನ್ಗಂಡ್ನಿರ್ಬೇಕಾಗಿತ್ತು…..ಬಾದ್ಧೂರ….ಬಲ್ಭೀಮ…ಯಿವ್ರ್ನಾ ವಂದ್ಕೈಯಿ ನೋಡ್ತಿದ್ದ! ವಂದು….ಕುಸ್ತಿ ವಗೀತ್ತಿದ್ದ! ಅವುದೂ ಗಂಡ್ನಿದ್ರೆ ….ತನ್ಗಿಂತಾ ಅಗ್ನಿ ಪರೀಕ್ಷೆ ಬರ್ತೀರ್ಲಿಂತಾ ಅಂದ್ಕೊಳ್ಕೆ ದುರ್ಗುವ್ವನ್ಗೆ ತಡ್ವಾಗ್ಲಿಲ್ಲಾ…..! ’ಯೀಸ್ಬೇಕು, ಯಿದ್ದು ಜೈಸ್ಬೇಕು! ಮನ್ಸ್ಯಾರ್ಗೆ ಬರ್ದೆ, ಮರ್ಕೆ ಕಷ್ಟ, ನಿಷ್ಟೂರ್ಗುಳು ಬರ್ತಾವಾ? ಯೇನ್ಬಾ ಭಟ್ಟೇ…..ಧಮ್ಡಿನೇ…..ಅಬ್ಬಾ… ಐದ್ಸಾವ್ರಿ ಅಂದ್ರೆ ರವ್ವಾಟ್ಟು ರ್ವಕ್ಕೇ? ಯೇನೈತ್ಪಾ ಸಾಕ್ಷಿ, ಪುರಾವೆ , ಕಾಜ್ಗ, ಪತ್ರಾವಾ? ’ ದುರ್ಗುವ್ವ ತಾಸ್ತಾರ್ದಾಲಿ ಕೇಳ್ದಿಲು.

ಆವಾಗ್ಲಿಂದಾ ನೆಲ್ನೊಡ್ತಿದ್ದ ಯಲ್ರ ಮಕ್ಗಳು ಕೆಸ್ರಿನ…..ಕಮ್ಲದಂಗೆ ಅರ್ಳಿದ್ವು. ’ಅವುದಾಪ್ಪೋ….ಗಂಚಿಗಾರ….ಆಯಮ್ಮ ಕೇಳ್ದಾ ವೈನೈತಿ’ ಯೆಂಬಂತೆ, ಆಗ ಬೇಲ್ಮೀಲ್ನಿ ತ್ವಂಡಿಕ್ಯಾತ್ದಂತೆ, ತಲೆಯೆತ್ತಿ ದುರ್ಗುವ್ವನೇ ಯಡ್ಸಿರ್ದ್ಮೇಲೆ ಗುರ್ಽ….   ಅಂತಾ ನೋಡ್ತೊಡ್ಗಿದ್ರು…..

’ಯಿಲ್ದಾ ಕಾಜ್ಗ ಪತ್ರ ನಾಯೆಲ್ಲಿಂದಾ ತರ್ಲೀ ದುರ್ಗುವ್ವ? ಯಬ್ಬಟ್ಟೊತ್ಸಿಗಂಡು, ನಾಳೆ ಸಾಕ್ಷಿ ಪುರಾವ್ಸೆಮೇತ ಬರ್ತೀನಿ ಬಿಡವ್ವ! ನೀ ಅದ್ರ್ಮೇಲೆ ನಂಬ್ಕಿಂಡು ಕುಂತಿಯಂದ್ಮೇಲೆ ನನ್ಗೇನು ಕಷ್ಟವಿಲ್ಲ. ಕೊಡ್ವೂಗ ಯೀ ದಾಸ್ರೆಡ್ಡಿ, ಕರಿಯಣ್ಣ, ತಿಮ್ಮಣ್ಣಯಿದ್ರು…. ಯಿವ್ರ್ನಾ ಕೇಳ್ಬಿಟ್ಟು ಕೊಡಂಗೇ ಯಾರ್ಬೇಡೆಂದಾರೇ?’ ಯಿಂದ್ರಾಸೇನ್ರೆಡ್ಡಿ ಕೋತಿಯಂಗೆ ಮಕ್ಸಂಡ್ರಿಸ್ಗಿಂಡು, ಟುವ್ವಾಲು ಜಾಡ್ಸಿಗೊಂಡು ಸೆಡಿವ್ಲಿ ಯೆದ್ದು ವರ್ಡಲನ್ವೂದ!

’ಯೇ ನಿನ್ದೇ ವಲ, ಮನೆ, ಅಡ್ವು, ಆಸ್ತಿ, ದನ್ಕರು, ಯೆತ್ತು, ಕುರ್ಮೆಕ್ಗೆಳು ಮಸ್ತಿರ್ವೂಗ ಯಿನ್ನೋಬ್ರುದು ಯೆಂದು ನೀ ಆಸ್ಪೆಟ್ಟಾನಲ್ಲಾ….? ನೀ ನಮ್ಮೆದ್ರುಗೇ ಕೊಟ್ಟಿಯೀ! ಯೀಗ ವಡ್ಡಿ ಗಂಟು ನೀ ಕೇಳ್ತೀಯಿ. ಯಿಲ್ಲಿ ಯಾರು ಸುಳ್ಬೀಳ್ತಾರೇಳು? ದಾನ್ರೆಡ್ಡಿ, ಕರಿಯಣ್ಣ, ತಿಮ್ಮಣ್ಣ ಗಲ್ಗಾಲಾ ಬಾಯಿಮಾಡಿ, ತಲ್ಮೇಲ್ಬೆಡ್ದಿಂಗೆ, ಬೇವ್ನಿಕಾಯಿ ಸಾಕ್ಷಿ ಯೇಳ್ದಿರು.

ದುರ್ಗುವ್ವ ಗಡ್ಗಾಡಾ ನಡ್ಗಿ ಅವ್ರಿವ್ರಾ ಮಕ ನೋಡಿದ್ಳು. ಯಾರೂ ತನ್ಬಾರ ಬರ್ಲಿಲ್ಲ. ’ಬರೀ ತ್ವಂಡ್ಮಿತ್ನ್ಮೀಲೆ ಯಂಗ್ನೆಬ್ಲಿ? ಯಿಶ್ಟೊಂದು ರೊಕ್ನೆಂಗೆ ಕೊಡ್ಲಿ? ’ಯೆಂದ್ಳು.

’ಯಿದು ನಾಲ್ಗೇ ದುರ್ಗುವ್ವ! ಅಳೇ ಕಾಲ್ಮರಿಯಲ್ಲ!  ಸುಳ್ಬಿಳಾಕೆ ಮಾದಿಗ್ರು….. ಕೆಟ್ ಹೊದ್ರಾ….. ಬರೀ ಮಾತ್ನ್ಮೇಲೇ ನಾನೂ ನಿನ್ಗಂಡ್ನಿಗೆ ಯಿವ್ರೆದ್ರೆಗೇ ವುಳ್ಳಾಗಡ್ಡಿ ಯಾಪಾರ್ಕಾಂತ್ಲೇ ಕೊಟ್ಟಿದ್ದೇ….ಯಿವ್ರೆಲ್ಲ ಸತ್ತಾರೇನು? ’ ಯಿಂದ್ರಸೇನ್ರೆಡ್ಡಿ ಬಲು ಸಿಟ್ಲೇ ಕೂಗಾಡ್ದಿ.

’ದುರ್ಗುವ್ವ ನೀ ರೊಕ್ಕದ್ಸಾಲ್ವಾಗಿ ಅಪ್ದಕೆ ಬೀಳ್ಬೇಡಾವ್ವ! ಯಾರಾನ್ಯಾಯ ಅವ್ರತ್ರವಿರ್ತೇ…. ಧರ್ಮಾವೇ ಜಯ್ವೆಂದು ಅವ್ರುದು ವೃಣ ಯಿಟ್ಗೋಬ್ಯಾಡ. ನಿನ್ಗಂಡ್ನ ಆತ್ಮಕೆ ಶಾಂತಿ, ನೆಮ್ಮದಿ ಸಿಗಲ್ಲ’ ದೊಡ್ಡೆಲ್ಲೆಪ್ಪ ನಡ್ಬುರ್ಕಾ, ಬಾಯಾಕ್ದಿ.

’ಆಯ್ತಪ್ಪಾ….ವಂದೂರ್ಕೇರ್ಯಾಗಿದ್ಮೇಲೆ, ಮಾತ್ಗೆ ಕಟ್ಟೆಳ್ಬೇಕಾಗುತ್ತೇ ……ಯೀಗ ರೊಕ್ಕಿಲ್ಲ! ಮನ್ಯಾಗ್ನಿ ಐದೆಮ್ಮೆಗ್ಳಲ್ಲಿ ಅದೇ ಅಗ್ಲಾಕೊಡ್ನಿ ದೊಡ್ಡೆಮ್ಮೆನ ಯೀಗ್ಲೆ ಯಿಡ್ಕೊಂಡೋಗಿ’ ಯೆಂದು …….ದುಕ್ಕ ವತ್ರಿಸ್ಬಿಂತು ಬಳ್ಬಾಳ್ನೇ ಕಣ್ಣೀರು ಸುರೀತ್ತಿದ್ದವುಗ್ಳನ ಸೆರ್ಗಿನಿಂದ ದುರ್ಗುವ್ವ ವಂದ್ಸೆಮ್ನೇ ವರ್ಸಿಗೊಂಡ್ಳು.

ನೋಡಿ ಗುರಿಯಿಟ್ಟು ವಳ್ಳೆ ದೊಡ್ಡೆಮ್ಮೆನೇ ಯಿಡ್ದಾ ಯಿಂದ್ರಸೇನ್ರೆಡ್ಡಿ ’ಯಿಗೋ ಯೀ ಯಲ್ಡು ಕುರ್ಪಿಟ್ಲಿ, ಯೀ ಗಡ್ದ ವೋತ್ನಾ ನಾನೇ ಸಾಕ್ಲು ಬಿಟ್ಟಿದ್ದೇ…… ಸಾಕ್ಷಿಗಳೆಲ್ಲ ಅವ್ರೇ ದುರ್ಗುವ್ವ…..ಕೇಳ್ಕೋ….’ ಅಂತಾಽ ಅವ್ನೂ ಯಿವ್ನೂ ಯಿಡ್ದು ಸಲೀಸಾಗಿ ಅಂಗ್ಳದಾಟೇ ಬಿಟ್ಟ! ಬೆದ್ರಿದ ಅರಿಣ್ಗಿಳಂತೆ ಯಲ್ರು ಸೋಜ್ಗಿನಾ ಸೂಜ್ಗಿಣ್ಣಿನಿಂದ ನೋಡ್ತಾಯಿದ್ರು….ದುರ್ಗುವ್ವ ’ಅಪ್ಪೋಽ….. ಯೇನಪ್ಪೋ…. ಅದಲ್ಲ! ಪದ್ಧತಿ ಅಲ್ಲ…..! ರವ್ವಾಟು ನಿಲ್ಲು….’ ಅನ್ನಾದ್ರಾಗೆ ಕೇರಿದಾಟ್ದಿ.

ಅಸ್ಟ್ರಾಗೇ…. ’ಅಮ್ಮೊ ನಿನ್ಗಂಡ ದೇವ್ರಾ ಸತ್ವಾಗ್ಲೂ ನನ್ಕಂಡಿಂದಾ ಕೈಬದ್ಲಾಗಿ ಐದ್ನೂರು ಯಿಸ್ಗೋಂಡ್ದಿ ದುರ್ಗುವ್ವ… ಯಿದ್ಕಾ ಸಾಕ್ಷಿ ಯೀ ಕರಿಯಣ್ಣ, ಮರಿಯಣ್ಣ ಯಿದ್ದಾರೆ ನೀನೇ ಕೇಳಮ್ಮಾ…. ಯೀಗ್ದನ ಕೊಡಮ್ಮ….’ ತಿಮ್ಮಣ್ಣ ನಿರ್ಭೀಡೆ ಯಿಂದ್ಲೆ ಕೇಳ್ದಿ. ದುರ್ಗುವ್ವನ ಜಂಗ್ಬಾಲ್ವೆಲ್ಲ ವುದ್ಗಿತು. ಜನ್ರು ’ಅವ್ವರಬ್ಬಾ ವರ್ಸೇ….. ಕಲಿಕಾಲ್ವೆಂದ್ರೆ ಯಿದೂ….  ಅಸಿ, ಬಿಸಿ, ವಣ್ಕಟ್ಗೆ ಸುಡ್ದೊಂದ್ರೆ ಯಿದೂ….’ ಯೆಂದು ಗೊಣ್ಗಿದ್ರು.

ದುರ್ಗುವ್ವ ರಗ್ಡಿಸಿ…. ಗೋಸಿಯಾಕಿ, ತಲ್ಕೆಟ್ಟು ಕಟ್ಟಿ, ನಡ್ಕಟ್ಟಾಕಿ ’ಅಪ್ಪಣ್ಣಗಳಿರಾ…. ಯಾರ್ಮಾನೆ ಯನ್ನು ಹಾಳಾದ್ರೆ ಕರ್ಕಟ್ ಹಾಕಿ ಯಿಂಬಾತೆಂಬಾರು! ಆಗ್ಲಾಕಾಯ್ಗೆ ಬೇನ್ಕಾಯಿ ಸಾಕ್ಷಿ ಯೆಂಬಂತೆ ಯೇನ್ಡಿಸ್ರಿಪ್ಪಾ ನೀವೆಲ್ಲ ಸೇರಿ?  ನನ್ಗಂಡ ನೂರಾರು ಜನ್ರಿಗೆ ಸಾವ್ರಿ ಸಾವ್ರಿಗಟ್ಲೆ ಸಾಲ ಕೊಟ್ಕೊಟ್ಟು ಯಿಗೋ ಪತ್ರ ಬರ್ಸೆಗಂಡಾನೆ ನೋಡ್ರೀ….. ವೂರ್ಕೇರೆಲ್ಲ ಸೇರಿ ಯಿಶ್ಟು ಮರ್ವಾದೆ ಕಳ್ದು, ನನ್ಗಂಡ್ನ ಚಿಲ್ರೆ ಅರ್ಲೆ ಮಾಡ್ಬೇಕಂತಿದ್ರೇನು? ಯಿಲ್ಲಿಂದ ಮದ್ಲು ಯೆದ್ದು ನಡ್ರೀ…..’ ಯೆಂದು ಯಳ್ಕೊಡ್ವಿದಂಗೆ ಕೊಡ್ವಿದ್ಲು.

’ಯೇನ್ ದುರ್ಗುವ್ವ…. ಯಂತಾಂತ್ದಕೇ ನೀ ಲೋಭಿಲ್ಲ. ಯಿಶ್ಟು ಸಣ್ದಕೆಲ್ಲ ಯಾಕೆ ಅಳ್ಗೊತ್ತೀಯಾ? ನಿನ್ಗಂಡ್ನ ವೃಣ ವುಳ್ಸಿಂಬ್ತೀಯೇನು? ವೂರ್ಗಾಳ್ರಾರ್ದು ವಂದು ತೀರ್ಮಾನ? ಕೇರ್ಯಾಗ್ಳರಾದು ಯೀ ನ್ಯಾಯನಾ? ಮಣ್ಯಾರ್ಗೆ ಮಣೆತ್ತೆ ಕಣ್ಕಿಲ್ಕೊಣ್ವಲ್ವೇ? ಅವ್ರುದು ಕೊಟ್ಬಿಡು ದುರ್ಗುವ್ವ…..’ ಕರಿಯಣ್ಣ ಕೇರ್ಗೀರ ಪರ್ವಾಗಿ ತಿಪ್ಪೇಸಾರ್ಸಿದ.

ಯೀಗ ನುಂಗ್ಲಾರ್ದಾ ಬಿಸಿ ತುಪ್ಪವಾಯ್ತು. ಯಿತ್ತ ಕೇರ್ಗಿಲರು, ಸರೀಕ್ರು, ಮಣೆಗಾರ್ರುರು, ಯಿವ್ರ್ನಾ ತಗ್ದೂಕ್ದಿ ಬೋಕಿಯಂಗೆ ಮಾಡ್ಕೆ ಬರಿಂಗಿಲ್ಲ. ವೋಗ್ಲಿ ರಕ್ಕಾನು ಯೆಣ್ಸಾಕೆ ಆಗಿಲ್ಲವೆಂದು ದುರ್ಗುವ್ವ ಬೋನ್ಗೆ ಬಿದ್ದ ಯಿಲ್ಮಿರಿಯಂಗೆ ವಿಲ್ವಿಲೀ…..ವದ್ದಾಡ್ವಿದ್ದಾಡಿ… ಐನ್ನೂರು ರೂಪ್ಳಾಗ್ಳುನ ಯೆಣ್ಸಿ ಯೆಣ್ಸಿ ತಿಮ್ಮಣ್ಣನ ಕೈಗಿತ್ಲು.

ತಲ್ಮೇಲ್ನಿ ಗುಡ್ಡಾ ಕರ್ಗಿ ಕೆಳ್ಗೆ ಬಿದ್ದಷ್ಟು ಅಗ್ರುವಾತು. ಜನ್ರು ಸಪ್ಗೆ ಮಕ್ವತ್ತು ಗೆದ್ದೆತ್ತಿ. ಬಾಲ್ವಿಡ್ದು ಕರ್ಗಿದ್ರು, ಯೀ ಜನ್ರೋ ಗಾಳೆಂಗೆ ಬೀಸುತ್ತೋ ಅಂಗೇ….. ದುರ್ಗುವ್ವ ಮನ್ಯಾಕೆ ಕಾಲ್ಬಿದ್ದೇ ತಡಾ ಬೋರು ಬೋರಾಡಿ  ’ಅಯ್ಯಯೋ…. ಭಗ್ವಂತಾ ಯಂತಾ ವತ್ತು ತಂದ್ಕಿದೆಯಲ್ಲೋ ಸಿವ್ನೇ… ಸತ್ತೋರ್ಗುಂಟು ವಡಿಯೋ ಯೀ ವೂರ್ಕೇರ್ಯಾಗೆಂಗೆ ಜೀವ್ನಾ ವರ್ಯೋದು ದೇವ್ರೇ….. ಅಗ್ಲುಗಳ್ರು. ತಾರಾತಿಟೀರು, ಗಂಟ್ಕಳ್ರು….. ಗಂಡ್ಸತ್ತು ಮೂರ್ದಿನ್ಕೇ ಮೂರಂಗಾ ಆರ್ಬಾಂಗಾ ಕಂಡಂಗಾತಲ್ಲೋ …. ಯಿನ್ನೇನೈತೋ ಸೀವ್ನೇ….’ ಯೆಂದು ಸಿಡಿಸಾಪ್ಸಿ, ಲಟ್ಕಿ ಮುರ್ದು…. ವೂರ್ಕೇರ್ಸೆಲೆ ವೋಗಂಗೆ ಆಡ್ಯಾಡ್ಕೊಂಡು ವಂದ್ಸಾಮ್ನೇ ಅಳ್ತೊಡ್ಗಿದ್ಲು.

ಜನ್ರು ಅತ್ಲುಕೊತ್ಲಾದ್ರು. ತಲ್ತೆಲೆ ಗಟ್ಸಿಗಂಡ್ರು ’ಯೀ ವೂರ್ಕೇರ್ಗೇ ಲತ್ತೆ ಬಡ್ಸಿತ್ತಾಳೆ! ಯೀ ಲೋಕ್ದಾಗಿಲ್ದ ಗಂಡ್ನ ಯಿವ್ಳೆ ಕಳ್ಕೊಂಡ್ಳಾ….?’ ಯೆಂದು ತಲ್ಕೆಟ್ಟು ಅನ್ಮುಕ್ಕ, ಪಾಲಮ್ಮ, ಆಲಮ್ಮ, ಕರಿಯಮ್ಮ ದುರ್ಗುವ್ವನ್ಬಳ್ಬಿಂದ್ರು. ಅಲ್ಲೆ ಬಜ್ಜಿಯ ಕೂಡಾ…. ತೂರ್ಯಾಡ್ತಾ, ಕೂಗಾಡ್ತಾ, ಬೈದಾಡ್ತಾ ಯಿಡಂಬಿ ಬಂದಂಗೆ ಬಂದು…. ’ಕೊಡಾರ್ದು ಕೊಟ್ರೆ ನನ್ಗೆನುಳ್ತೆಂಬ ಲೆಕ್ಸಾರ್ದಾಯಮ್ಮಾ ನೀ…. ಪಾಪ್ಸಿಂಪಾದ್ಸಿದ್ದು ಪರಾರ್ಗೇ….. ನಿನ್ಗಂಡ ಬೇಲ್ಮೇಲೆ ರಕ್ಕ ಸೆಲ್ಲೊಗ್ಯಾನೇ…. ಸುಂಕ್ಸುಂಕೇ ರಕ್ಕ ಕೇಳ್ದಿರೆ ನೀ ಕೈಬಿಚ್ಚಿತ್ತಿಯೇನಮ್ಮಾ? ಅದ್ಕೆ ನಾ ಯೀ ನಾಟ್ಕಾ ಆಡ್ಸಿದೆ. ಸೂತ್ರಧಾರ ನಾನೇ ಪಾತ್ರಧಾರ್ಗಿಳು ಬೇರ್ಬೇರೆ ಅಷ್ಟೇ…..! ಯಲ್ಲ ರಕ್ಕಾಕ್ಕಾಗಿ, ಕುಡ್ಯಾಕ್ಕಾಗಿ, ವುಂಬಾಕ್ಕಾಗಿ…. ಯಂಗ್ಯಾತಮ್ಮಾ ನನ್ನ ಸಣ್ಣಂಗಿ ನಾಟ್ಕಾ? ಯೆಂದು, ಯೇಕ್ಪಾತ್ರಾಭಿನಯ ಮಾಡಿ, ಬಜ್ಜಿಯ ಯಲ್ರಿಗೆ ಅಂದು ಆಡಿ, ತೋಡಿರಾಗ್ದಲಿ…. ತೋರ್ಸಿದ.

ದುರ್ಗುವ್ವಳ್ಗೆ ವಟ್ಯಾಗೆ ಕಾರ್ಕಾಲ್ಸಿದಂಗಾತು. ದನಾನ ಸೀಳ್ದಿಂಗೆ ಸೀಳ್ಬೇಕೆನ್ಸಿತು. ತಡಿಯಾಕಾಗ್ಲಿಲ್ಲ. ’ ನಿನ್ವಟ್ಟೆ ಸೀಳಾ…. ಬಗಿಯಾ…. ಸಕುನಿ, ಕಾಗೆ, ಗೊಬೆ ಯಂಗೆ ಯೀ ಮನ್ಗೆ ಗಂಟು ಬಿದ್ದಿಯಲ್ಲೋ …. ಪತ್ರಾಳೇನೇ, ಆನಂದ್ಗೂಟ್ವರ್ನೇ….. ಯಿದೆಲ್ಲ ನಿನ್ದೇ ಅಂತಾ ನನ್ಗೆ ಆಗ್ಲೇ…. ವಾಸ್ನೇ ಬಡಿತ್ಲೋ…. ಯೇನ್ಕ್ಯಾತೆ ಬುಡ್ರು ಅಂಡ್ವಾರ್ನಾ ಮಾಡ್ಬಿಟ್ಟೆಯಲ್ಲೋ….. ನೀ ಸತ್ತಲ್ಲಿ ಕತ್ತೇವಳ್ಳಾ…. ಮಧ್ಯಾನ್ದಾಗೆ ವೂವು ಮುಡ್ಸಿ ಕೊಳ್ಡಿ….’ ಯೆಂದು ತಿಪ್ಗಾಳು ವುಳಾ ಮನ್ಗೆ ಬರ್ತಾತ್ಕಾ… ದುರ್ಗುವ್ವ ಕಲ್ಲುಮುಳ್ಳು ವಯ್ದಿಲು.
*                  *                            *
ದುರ್ಗುವ್ವನ ಮನ್ಮುಂದೆ ಜನ್ಜಾತ್ರೆ ಸೇರ್ತೋಡ್ಗಿತು. ಸುತ್ತಾ….ಯೇಳಳ್ಳಿಯಿಂದ ಜನ್ರು ತೆರ್ಪಿಲ್ದೆಂಗೆ ಬರ್ತೊಡ್ಗಿತು. ಮುಂಜಾಲಿಂದ್ಲೆ ಕೇರಿಯೊಳ್ಗಿನ ಅಂಗ್ಡಿಸಾಮಿಯ ಡಬ್ಬಾಂಗ್ಡಿ ಬೀಗ್ತಾ ತೆರ್ಕೊಂಡಿತು. ಯಿಡೀ ವೂರ್ಕೇರ್ಗೆ ಘಮ್ಗಿಮ್ಸಿವಾ ವಾಸ್ನೇ ಯಲ್ರ ಅಸ್ವುನ ಯಿಮ್ಡಿ ಮಾಡ್ತು. ಮಂಡ್ಳಾ , ವಗ್ಣೆ, ಅತ್ತಿಕಾಯಿ, ಅಲ್ಸಾಂದ್ವೆಡೆ, ಗುಗ್ರೀ, ಯಿಟ್ಬಚ್ದಿ ಮೆಣ್ಸನ್ಕಾಯಿ, ಕರ್ಜಿಕಾಯಿ, ಮಂಡ್ಳಾಲುಂಡೆ, ಕಡ್ಲಿಮಿಠಾಯಿ, ಬಂಬಾಯಿ ಮಿಠಾಯಿ, ಗಾರ್ಗೆ, ದಾಣಿ, ಕಾರ, ಅಲ್ಲೀಪಾಕ, ಬೆಂಡ್ಬುತ್ತಾಸು, ಕಾಫ಼ೀ, ಟೀ, ಯಲ್ಡಿಕೆ, ಕಡ್ಡೀಪುಡಿ. , ವಗ್ಸೆಪ್ಪು, ದಾಸ್ನಿಕೆ, ಬೀಡಿ, ಸಿಗರೇಟು, ಬೆಂಕ್ಪಿಟ್ಣ, ಅಡ್ಕೆಸೀಟಿ,…. ಅಬ್ಬಬ್ಬಾ! ಕಣ್ಗೆ ಕೋರಿದ್ದು, ಕೇಳಿದ್ದು, ಅಪ್ಪ  ಅಮ್ಮ ವಂದನು ಬಿಟ್ಟು… ಯೇನೆಲ್ಲ ಅಂಗ್ಡಿಲಿ! ಜನ್ರು ಮುಸ್ರಿದ್ರು. ದುರ್ಗುವ್ವನ ಮನೆಯಲ್ಲಿ ಅದಿನ್ನಾರ್ನೇ ದಿನ್ದ ತಿಥಿಗೆ, ಯಿತ್ತ ಬಕ್ಣುಗ್ಳುಗೆ ವಳ್ಳೆ ತಿಥಿನೇ ಕಾದಿತ್ತು! ಬಂದ್ವರ್ಗೆಲ್ಲ ದುರುಗವ್ವನ ಮನೆಯೊಳ್ಗೆ ಸವಣೆಕ್ಕಿ, ನೆಲ್ಲಕ್ಕಿ ಕಲ್ಸಿ ಬಾನ, ವುಳ್ಳಿಕಟ್ನಿ ವುದ್ಕು ಮಾಡಿದ್ದು ಅಳುತ್ತಿತ್ತು. ವಬ್ರೂ ಮುಟ್ಲಿಲ್ಲ. ಬಾಯ್ಸವ್ಗೆ ಜೋತ್ಬಿದ್ದು ಕುರ್ಬಿದ್ದ ಜಾಡಾಯಿತು.

ದುರ್ಗುವ್ವನ ಮನೆಯಲ್ಲಿ ತಿಥಿಯ ವಿಧಿವಿಧಾನ್ಗಳೆಲ್ಲ ಆರಂಭಗೊಂಡ್ವು.

’ಯೆಲ್ಲಿ ಕಾಣ್ರೀ ಯೆಲ್ಲಿ ಕಾಣ್ರೀ ನಮ್ಮ ಯೆಲ್ಲೆಮ್ಮನಂತ್ವಳ್ನಾ ಯೆಲ್ಲಿ ಕಾಣ್ರೀ…..’
’ನಿನ್ನ ಸಮನಾರೇ ಆದಿಶಕ್ತಿ ಯೀ ಜಗ್ವ ಪೊರ್ವೆ ನಿನ್ನ ಶಕ್ತಿ ಕೊಂಡಾಡುವೆ….’
’ತಂದು ನಾನು ತಂದನ್ನುನಾನು ತಾನೇ ಬಂದಾಳು ಯೆಲ್ಲೆಮ್ಮ ತಾನುಽ…..
ಗಟ್ಟೆಪೂಜೆಯ ಮುಂದೆ, ಅಟ್ಟಿ ಪೂಜಿಯಿಲ್ಲ, ಪಟ್ದಾರಾಣಿ ಯೆಲ್ಲೆಮ್ಮನ ಪೂಜೆ ಮದ್ಲು….’

ಚೌಡ್ಕೆಯವ್ರ ಸಮೂಹಗಾನ ಮೂಲೋಕಕೆ ಅಪ್ಳಿಸಿತು. ಗುಟ್ಟೆಯ ಪೂಜೆಗೆಂದು ಸುಡ್ಗೂಡ್ಗೆ ಯಿರ್ಮಿಗ ಪೇಠೆಯೆಲ್ಲಣ್ಣನ ಮುಂದಿಟ್ಟುಕೊಂಡು ಯಿರಿಕ್ರು ವರ್ಟುರು. ಸಣ್ಣೆಲ್ಲೆಪ್ಪನ ಗುಟ್ಮೇಲೆ ತಲೆ, ಯದ್ಮೇಲೆ, ಕಾಲ್ಗುಳತ್ರ… ಯೀಗೆ ಪೇಠೆ ಯೆಲ್ಲಣ್ಣ ಮೂರ್ಡೆಯಾಗಿ…ಸಲ್ಕೆರುದ್ರ, ಆಲ್ತುಪ್ಪ, ಬಾನ್ಸಾರು, ಮಸ್ರು, ಕರ್ಜಿಕಾಯಿ, ಸಿಹಿಕಡ್ಬು, ಗುಗ್ರಿ, ವಡೆ, ಅತ್ತಿಕಾಯಿ, ಮೆಚ್ಚಿಕಾಯಿ, ಬೀಡಿ, ಸಿಗರೇಟು, ಬೆಂಕ್ಪಿಟ್ಣ, ವಗ್ಸೆಪ್ಪು, ಯಲ್ಡಿಕೆ, ಸುಣ್ಣ, ಕಾರ, ಮಂಡಾಳು, ಚಿಚ್ಚಿ, ಯೀರಿ, ಲಲ್ಡಿ, ಪಚ್ಚಿ, ವುಪ್ಪು, ಯೆಂಡ್ಸಾರಾಯಿ, ವಸ್ಪಾಟ್ಟೆ….. ಅಬ್ಬಬ್ಬಾ! ಯೀಗೆ ಕೋರ್ಕೆ ವಸ್ತು, ತಿಂಡ್ತಿನ್ಸಿಗ್ಳ ಯೆಡಿಟ್ಟು, ಅಣ್ಣುಕಾಯಿ ವಡ್ದು…..
ವುದ್ಗಡ್ಡಿ ಬೆಳ್ಗಿ…. ಭಯ, ಭಕ್ತಿ ಯಿಂದ ಪೂಜ್ಸಿ ಅಡ್ಬಿದ್ರು…. ಚೌಡ್ಕೆಯವ್ರು ಮಂಗಳಾರ್ತಿ ಪದ್ವಾಡಿ, ದಕ್ಷಿಣೆಯಿಟ್ಟು ಗುಟ್ಟೆ ತಿರ್ಗಿದ್ರು… ’ಅಪ್ಪಾ …. ನಾ ವೋದಲ್ಲಿ ಬಂದಲ್ಲಿ ಕಾಪಾಡು….’ ಯೆಂದು ಮತ್ತೆ ವುದ್ದೂಕೆ ಅಡ್ಬಿದ್ರು… ಗುಟ್ಟೆಯಿಂದ ರವ್ವಾಟು ದೂರ್ದಲ್ಲಿ ಪದ್ಧತಿಯಂಗೆ ಯಲ್ಲರು ಮರ್ಪಾಟ್ಗೆ ಕುಂತ್ರು. ’ಯಾವುದಾದ್ರೂ ಪ್ರಾಣಿ, ಪಕ್ಷಿಗ್ಳು ಕಾಗೆಗ್ಳೂ….. ಬಂದು ಯಡೆ ತಿನ್ತಾವಾ? ’ ಕಾದೂ ಕಾದೂ…. ಸುಸ್ತಾಗಿ ತಸ್ತಾಗಿ ನೀರ್ಡಿಸ್ಗಿಂಡ್ರು.

’ಯೀಗಾ ಬೆಕ್ಗೆ ಗಂಟ್ಕೆಟ್ಯಾರ್ಯಾರ್ಲೇ? ಶಾಸ್ತ್ರದಂತೆ ಯೆಡ್ನೆ ಯಾರ್ತಿನ್ತಾರಾಲೇ?’ ಚೌಡ್ಕೆಯೆಲ್ಲೆಪ್ಪ ಜಲ್ಜಾಲಾ ಬೇವ್ತು ಯೀ ಮಾತು ಯಲ್ರ ಮುಂದಿಟ್ಟ. ’ಯೇಽ ನಾವ್ದೀವಿ. ಬೆಕ್ಕಿಗೇನು? ಸಿಮ್ಮಾದ್ಗುಯೆಗ್ ಹೋಗಿ ಸಿಮ್ಮಾಕ್ಕೇನು? ಆ ಯಮ್ನಿಗೇ ಗಂಟೆಯೇನು? ದನ್ದ ಮೂಳ್ಗೆ ಕಟ್ಟಿ ಬರ್ತೀವಿ! ಯೀಗೀಗ ಪ್ರಾಣಿ, ಪಕ್ಷಿಗ್ಳೆಲ್ಲ ಮಂಗಮಾಯವಾಗಿವೆ! ಮನ್ಸುರೇ ಯೀಗೀ ಪ್ರಾಣಿಪಕ್ಷಿಗಳಾಗೇರೆ! ದೆವ್ವ, ಭೂತ, ಪಿಶಾಚಿ…. ಯಿಂದೆ…. ನಾವು ಸಣ್ಣರಿದ್ದಾಗ ಅದೇ ನಮ್ಸಾಪ್ರಾದಾಗೆ, ಜನಾರ್ಗೂಡ್ನೆಗೇ…. ಗುಬ್ಬಿ, ಬೆಳ್ವು, ಪಾರಿವಾಳ, ವುರ್ತಿ, ಗಿಣಿ, ಗೂಡ್ಕಟ್ಟಿ….. ಮರಿ ಮಾಡಿ, ನಮ್ಗೆಲ್ಲ ಕುಸಿ ಕೊಡ್ತಿದ್ವು…. ನಮ್ಮೊಟ್ಗೆ ವುಂಬುತ್ತಿದ್ದವು. ನೀರ್ಕುಡ್ತಿದ್ವು ತಂತಿ ಬೇಲಿ, ಅಂಗ್ಳ, ಕುಂಬೆ, ಮರ್ಗಿಡ್ಗಳ್ಮೇಲೆ ಸಾಲ್ಸಾಲು…. ಕಂತು ಸೋಜ್ಗಿ ತರ್ತಿದ್ವು, ಕತ್ಲಾದ್ರೆ ಸಾಕು…. ನರಿ, ಕಪ್ಪಲಕ್ಕ, ಚಿರ್ತೆ, ಕೋತ್ಗಿಳು, ಕಲ್ಡಿ, ತೋಳ, ಮುಂಗ್ಸಿ, ವುಸ್ರಾವಳ್ಳಿ ಅಸ್ರೂವು, ಮನ್ಗೆ ನುಗ್ಗಿ ಕೋಳಿ, ನಾಯಿ, ಮೇಕೆ, ಕುರೀನೇ ಕಚ್ಚಿಗೊಂಡು ವೋಡ್ತಿದ್ವು…. ಯೀಗೆಲ್ಲಿ? ಅವೆಲ್ಲಿ?? ಮನ್ಸುರೇ ಯೀ ಕೆಲ್ಸ ಮಾಡ್ತಿಲ್ವೇ?’ ಯೆಂದು ಬಜ್ಜಿಯ, ಕರಿಯಣ್ನ, ತಿಮ್ಮಣ್ಣ ಮೂವ್ರು…. ಕಬ್ನಿತ್ವಾಟ್ಕೆ ಆನಿ ನುಗ್ಗಿದಂಗೇ ಗುಟ್ಟೆತಾಕೆ ನುಗ್ಗಿಬಂದ್ರು… ಯಡೆ ಸರ್ಸಿಗಂಡ್ರು ಸವ್ರಿ….. ಸವ್ರೀ… ಯೆಲ್ಲ ತಿಂದ್ರು…. ವಸ್ಮಾಗಿಯಾಗಿನ ಯೆಂಡ್ಸಾರಾಯ್ನಿ, ನೀರ್ನಾ ಕುಡಿದು ಢರ್ರಾನೇ ಡೇಗಿದ್ರು. ಯಲ್ಡಿಕೆ ತಿಂದ್ರು! ಬೀಡಿ ಸಿಗರೇಟ್ನಾ ಸೇದಿ ವುಪ್ಪೆಂದೂ….. ವಗೆಬಿಟ್ರು. ವಸ್ಬಾಟ್ಟೆ, ಕಾಸು ಯೆತ್ಗಂಡ್ರು…..’ನಡ್ರೀ ಶಾಸ್ತ್ರದ ಪ್ರಕಾರ ಯೆಲ್ಲ ಆಯ್ತು…. ನಮ್ಗೇ ಸತ್ತು, ವುಟ್ದಿರೂ….. ಯೆತ್ಗಂಡ್ರು….. ’ನಡ್ರೀ ಶಾಸ್ತ್ರದ ಪ್ರಕಾರ ಯೆಲ್ಲ ಆಯ್ತು…..ನಮ್ಗೇ ಸತ್ತು, ವುಟ್ದಿರೂ…. ಕುಸಿ ಯಲ್ಡು ವಂದೇನೇ….. ದಿನಾ ಕುಡ್ದು, ತಿಂದೂ ಯಂಗೆ ತ್ವಲೆ ತುಂಡಾಗ್ವಿ ನೋಡ್ರೀ…. ಯಲ್ಲ ನಮ್ಮ ಭ್ರಮೆ ಬಲವಿಲ್ದಾಗೆ ಬದ್ನೇಕಾಯಿ ದೆವ್ವಾ…. ’ ಬಜ್ಜಿಯ ಮುಗ್ಳಿಲ್ಲ ಕುಡ್ದು ದಾರಿ ಯುದ್ದೂಕೆ  ತಲೆಲ್ಲ ಮಾತು ತೆಗೆದಿದ್ದ. ಯಲ್ರು ’ವ್ಞೂಗುಟ್ಟುತ್ತಾ…..’ ಮನೆ ತಲ್ಪಿದ್ರು.

ಮನೆಯಲ್ಲಿ ಪಡ್ಸಾಲೆ ಮೂಲೆಯಲ್ಲಿ ಘಟ್ಟೊಜ್ಗೆ ಚೌಡ್ಕೆಯವ್ರು ಸಿದ್ಧತೆ ನಡ್ಸೆದ್ರು. ಮೂರು ಕುಂಭಾ, ನಾಲ್ಕು ಬಾಳೇಕಂಬ, ಯಲ್ಡು ಕಳ್ಸಾ ವೂಡಿ, ನವಧಾನ್ಯಗ್ಳು, ನವದಿನ್ಸಿನ ಗುಗ್ರಿ, ಕಡ್ಬು, ಅಣ್ಣುಕಾಯಿ, ಆಲ್ತೂಪ್ಪ, ಮಸ್ರು, ಮಜ್ಗೆ, ಸಾರು, ಸಲ್ಕೆರುದ್ರ, ಬಾನ್ಬೆಲ್ಲ, ಪಲ್ಲೆ, ಯಲ್ಡಿಕೆ, ದಕ್ಷಿಣೆ, ವಸ್ಬಾಟ್ಟೆ ವಂಭತ್ತು ಯೆಡ್ಮೆಡಿ, ಅಸ್ರುಕಾಯ್ಗಿಡ್ಗೆಳು, ವುಳ್ಳಾಗಡ್ಡೆ ಬೇವ್ನಿಸಪ್ಪು ಕುಪ್ಪೆ ಕುಪ್ಪೆ ಯಿಟ್ರು….. ಅದ್ರಮುಂದೆ ಅಣ್ತಮ್ಮಗ್ಳು, ಬೀಗ್ರುಗ್ಳು ಕಾಯ್ವಿಡೆದು ಅಡ್ಬಿದ್ರು…. ಚೌಡ್ಕೆಯವ್ರಿಂದ ಮಂಗ್ಳಾರ್ತಿ ಪದ, ಕೊಂಡಾಡ್ವು ಶಾಸ್ತ್ರ ಮುಗಿತು.

’ಅಮ್ಮಾ ದುರ್ಗುವ್ವ, ಶಾಂತವ್ವ, ವೂಲೆವ್ವ, ವೂರೆವ್ವ, ತಿಮ್ಮವ್ವ, ನೀವ್ಯಾರು ಅಳ್ಬೇಡ್ರವ್ವ ಸತ್ವರ ಆತ್ಮಕೆ ಸುಶ್ಸಾಂತಿ ಸಿಗಲ್ಲವ್ವ….. ಆಯಾಪ್ಪ ಯೇನ್ಕಾಮ್ಮಿ ಮಾಡ್ಯಾನವ್ವಾ? ಮನೆ ತುಂಬಾ ಮಕ್ಳು, ಮರಿ, ಅಡ್ವು, ಆಸ್ತಿ, ಬೆಳ್ಳಿ ಬಂಗಾರ, ದನ್ಕರು, ಕುರ್ಮೇಕೆ, ಕೋಳಿ, ನಾಯ್ಗಿಳೂ…..ಅವ್ನೆಲ್ಲ ಯಿವ್ರು ನೀಗ್ಸಿಗಂಡೋಗ್ದೇ ದ್ವಡ್ಸವಾಲಾಗಿರಾದು….’ ಯೆಂದು ದೊಡ್ಡೆಲ್ಲೆಪ್ಪ, ಯಲ್ರನ ಗದ್ರಿಕಂಡ.

’ಯೀ ಯೆಡ್ಗೆಳ್ನ ಸರ್ಸಿಲು ಗುರುಯಿರಿಯ್ರ, ದೈವ್ದವ್ರ ಅಪ್ಣೆ ಯೇನ್ರಾಪ್ಪಾ? ಅಣ್ತ್ಮಗ್ಳು, ಬೀಗ್ರು, ದೈವ್ದವ್ರು, ಗುರ್ಗುಳೂ….. ಯಾರ್ದಿರೂ ವುಂಬ್ಲು ಬರ್ಬೇಕಪ್ಪಾ….. ಬರ್ಬೇಕು….’ ದ್ಯಾಸಂದ್ರದ ಮರಿಯೆಲ್ಲೆಪ್ಪ ಸಪ್ರದಾಗೆ, ಅಂಗ್ಳದಾಗೆ ವೋಗಿ ಮೂರ್ಸಾರಿ ಕೂಗಿ ಕೂಗಿ ಕರ್ದೆ.

’ದಿವ್ಸಾದ್ಬಾನ, ಅದ್ರಾಗೆ ಯಡ್ಬಾನುಂಡ್ರೆ ವಟ್ತೆಡೆಲ್ಲ! ನೆಟ್ಗೆಕಾಣಲ್ಲ! ನನ್ಗೆ ಬ್ಯಾಡ್ಪೊ…..’ ಅಂತಾ ಅಲ್ಲಲ್ಲಿ ಜನ್ರು ಕಲ್ತು ಸರ್ದೂ ಸರ್ದೂ ಕತ್ಲಾಗೆ ಕುಂತ್ರು….. ಮುದ್ರಿ ಮುದ್ರಿ ಮಲ್ಗಿದ್ರು….

’ಯಾರ್ಬಂದ್ರೇನು? ಬಿಟ್ರೇನು? ಕೂಳ್ಬುಂಡ್ಗಿರು ನಾವಿಲ್ಲೇನು? ಮರ್ಗಟ್ಲೆ ಬಾನ, ದಬ್ರಿಕ್ಗೆಟ್ಲೆ, ಚಾರು ವಡಿಯೋ ಬಕಾಪತ್ಗಿಳು ನಾವಿಲ್ಲೇನು? ಯೆಡಿಬಾನ್ಗೇನು ಸತ್ತವ್ರು ಕುಂತಿರ್ತಾರೇನು? ಸತ್ತವ್ರೇ ಬಲು ಪುಣ್ಯಾತ್ಮರ್ರು… ಬಾನ್ಬಾಟ್ಟೆ, ಯೆಂಡ್ಸಾರಾಯಿ, ಪೂಜಿ ಪುರ್ಸಾಕಾರ , ಕರ್ಚಿಗೆ ನಡ್ಸೆತ್ತಾರೆ! ನಾವ್ದಿವೆಲ್ಲ ಭಯೋತ್ಪಾದಕ್ರು…. ವುಗ್ರಗಾಮ್ಗಿಳು, ಭಕ್ಷಕ್ರು… ಯೇನೋಡ್ತಿರಾ…. ತತ್ತಾರಿಲ್ಲಿ ವಶ್ಟು ಯಡೆಬಾನ್ಗುಳೇನು? ಪಡ್ಗೂ, ಸ್ವಾರ್ಗೆಳ್ಗಟ್ಲೇ ತಿಂದು ಮುಗ್ಸಿತ್ತೀವಿ…..” ಬಜ್ಜಿಯ, ಕರಿಯಣ್ಣ, ತಿಮ್ಮಣ್ಣ ಅಂಗ್ಬಿಚ್ಚಿ ವುರ್ಪಿಲಿ ವುಂಬಾಕೆ ಕುಂತ್ರು.

ಯಿತ್ತಾ…. ಅಂಗ್ಳದಾಗೆ, ಸಪ್ರದಾಗೆ, ದಂದಕ್ಲಿ, ಪಡ್ಸಾಲೆ, ವಳ್ಮಾನೆಯಲ್ಲಿ ಯಲ್ರ ಜೋಗ್ಪಾಕ್ತಿ ಸಾಲ್ಗಿಸಾಗಿತು. ಸಲ್ಕೆರುದ್ರ ಗದ್ಗಾದಾ ನಡ್ಗುಂಗೆ ಮಾಡಿದ್ರು. ಅಳೇದು ಯಮ್ಮೆ ತುಪ್ಪಾ, ಆಲೂ, ಬದ್ನೇಕಾಯಿ, ಮಜ್ಗೆ ಮೆಣ್ಸನ್ಕಾಯಿ, ವುಣ್ಸ್ಸೀಕಾಯಿ ತೊಕ್ಕು. ನಚ್ಗೇಗೆ ವುರ್ಲುಗಡ್ಡೆ, ವುಳ್ಳಾಗಡ್ಡೆ ಪಲ್ಲೆ, ಬಾನ್ಸಾರು, ಕಲ್ಸನ್ನ, ಮಸ್ರಾನ್ನ, ಜನ್ರು ತೂಗ್ತೀಗೀ ಬಿಟ್ರು. ಬಾಳೆಣ್ಣು, ಮಾವ್ನಿಣ್ಣು, ಯಲ್ಡಿಕೆ, ಸುಣ್ಣ, ಅಡ್ಕೆಸೀಟಿ ಅಗ್ದಿರ್ರು…. ನಗಾರಿ ಯಂತಾ ಪಟ್ಟೆಗಳ್ನ ಸವ್ರಾಡ್ಕಿಂತಾ… ಗಾಳ್ಗೆ ಆರ್ಕೊಂಡು ಮಲ್ಗಿದ್ರು.

’ಛೀ….ಛೀ…. ವುಂಡಂಗೆಲ್ಲ ವುಗ್ಗಿ ಮುಳ್ಮುಳ್ಳು…..! ದನ್ದ ಮೂಳ್ಗೆ ಕಡ್ದಾಂಗಾದೀತೆನು? ಶ್ಯಾಕ್ಣದ್ಪಲ್ಲೆ ಮುಳ್ಳಕ್ಕಿ ಬಾನ ವುಂಡಂಗಾದಿತೇನು? ಯಿದ್ನಾ ಪುಟ್ಟಿ ತುಂಬಾ ವುಂಬಾದೊಂದೇ? ತಟ್ಟೆ ತುಂಬಾ ಚಿಚ್ಚಿತುಂಡು ಮುರ್ಕು ಮುದ್ದೆ ವುಂಬಾದೊಂದೇ…. ಥೂ! ದರಿದ್ರಾ ಯೇನ್ ಪುಳಿಚಾರ್ಲೇ? ಮಣೆಗಾರರ ಮಕಕೆ ಮಸಿ ಬಳ್ದಿಂಗಾತು!’ ಕೊಳ್ಹೆಚಾದ್ರೆ…. ಬಜ್ಜಿಯಾ, ತಿಮ್ಮಣ್ಣ, ಕರಿಯಣ್ಣ ಕಾಲ್ಕೆದ್ರಿ ಜಗ್ಳಕೆ ನಿಂತ್ರು. ಪೈಲ್ವಾನ್ರಂಗೆ ಅವ್ರಾವ್ರೇ ದಿಂಡ್ರಿಕೆಕಟ್ಟಿ ಪಡ್ಸಾಲೆ ಯಿಂದ ಸಪ್ರುದಾಕೆ ವುಳ್ಯಾಡಿದ್ರು…. ಅಶ್ಟ್ರಾಗೆ ಬಸಲಿಂಗಸ್ವಾಮಿ, ಶಿವಮೂರ್ತಿ ಸ್ವಾಮ್ಗಿಳು, ಕಪ್ಪೂರು ಸೋಮಶೇಖರಯ್ಯ ಗುಡ್ಕಿಡೆಯಿಂದ ದೇವ್ರು ಬಂದಂಗೆ ಯಿವ್ರತಾಕೆ ಬಂದ್ರು….. ವುಲ್ಕಿಂಡು ಯಿಲಿಂಗೆ ಯೀ ಜಗ್ಳಗಂಟ್ರು ಜಲ್ಜಲಾ ಬೆವ್ತು ಪೆಂಟೆಕಿತ್ರು…..ದ್ವಡ್ಡ ಗಂಡಾಂತ್ರ್ನೆ ತಪ್ಪಿತು. ಸರ್ವಿತ್ನಿತನ್ಕ ಜನ್ರು ವುಂಡೂಂಡು ಮಲ್ಗಿದ್ರು.

*                                  *                                      *
ಬಲ್ಬೇಗ ಬೆಳ್ಗಾತು. ಯೆದ್ಳಾಕೆ ತಡ್ವಿಲ್ಲ. ಜನ್ರು ತಂಗ್ಳುದುಂಡು ವೂರ್ಗೂಳ್ಗೆ ವಂಟ್ರು. ತವರ್ಮಾನೆ ಬಮ್ಮಗಟ್ಟೆಯಿಂದ ಬಂದಿದ್ದ…. ತಮ್ಮ ಬಲ ಭೀಮಪ್ಪ, ಅಕ್ಕ ವೂರವ್ವ…. ಯಲ್ರಂತೆ ಯೇಳಿ ವೋಗ್ಲು ದುರ್ಗುವ್ವನತ್ರ ಬಂದ್ರು….’ಅಕ್ಕಾ….. ಯಲ್ಲ ಕಾರ್ಯಗ್ಳು ಮುಗ್ದುವು. ಮಕ್ಳುನ ಕಟ್ಗ್ಯೆ ನಮ್ಮೂರ್ಗೆ ವೋಗಾನಾ! ಅಲ್ಲಿ ಸುಕುವಾಗಿರ್ವುಂತೇ…..’ ಭೀಮಪ್ಪ ತನ್ನ ಅಕ್ಕ ದುರ್ಗುವ್ವಳ್ಗೆ ದುಂಬಾಲು ಬಿದ್ದ.

ನಾ ಯೆಲ್ಗೆ ಬರ್ಳಾಲ್ಲ! ಕ್ವಟ್ಮೆನೆ ಕೊನ್ತೆನ್ಕ. ಯಿಲ್ಲಿದ್ದು ಯಲ್ರ ತಲ್ಮೇಲೆ ಮೆಣ್ಸು ಅರ್ಯಾಳು! ನನ್ಗಂಡ್ನ ಪದ್ದು ಯೆತ್ತಾಳು. ಯೀಗ್ಲೆ ನಾ ರೆಡ್ದೀನಿ. ಯಿಗೋ ನೋಡ್ರಿ ನನ್ವಾತಾರ್ವ…’ ಯೆಂದು ದುರ್ಗುವ್ವ, ತನ್ನ ಬೆನ್ನು, ಮಣ್ಕಾಲುತನ್ಕಿನ ಯಿಂಬ್ಡಾಗಳ್ನ, ಮೀನ್ಗಂಡ್ಗಳ್ನ ತೋರಿದ್ಲು…..

ಅಲ್ಲಿದ್ದವ್ರೆಲ್ಲ ಅಲ್ಲಾಡಿ ವೋದ್ರು. ’ಅಯ್ಯೋ ಯೇನಿದು ನಿನ್ನವಸ್ಥೇ ಯಿಂಗೆ ಮಾಡ್ಕಂಡಿಯಿ? ನೀನೇನು ಮನ್ಸುಳೇ ಯಿಲ್ಲಾ ದೆವ್ವಾನೇ? ಯಲ್ಲಾ ಮರ್ಗಟ್ಟಿ, ಸೀದು, ಪಕ್ಳೆಪಕ್ಳೆ…. ಮೈಕೂದ್ಲು ಜುಂಮೆಂದಾಂಗಾಗಿ…..ಅಬ್ಬಾ…..’ ವೂರವ್ವ ದುರ್ಗುವ್ವನ ಬಿಗಿಯಾಗಿ ಅಪ್ಗೊಂಡು ಬಳ್ಳಿದ್ಲು….

’ಸತ್ತಿರಾದು ದುರ್ಗುವ್ವ, ಯೀ ನನ್ಮಕ್ಳು ಸಲ್ವೂಗಿ, ಯೀ ವೃದಯ, ಮನಸ್ಸು ಕಲ್ಲು ಮಾಡ್ಕಂಡ್ನಿ. ನನ್ಗಂಡ್ನ ಕನಸ್ಸುಗ್ಳನ್ನು ನೆನಸು ಮಾಡ್ಲು, ಯೀ ವೊರ್ಬಾದ ರಥವನ್ನು ಪೂರ್ಣ ಯೆಳಿಯ್ಲ….ಪ್ರತಿರಾತ್ರಿ ಕೆಂಡ್ದ್ಮೇಲೆ ಮಲ್ಗಿ…. ಯೀ ವ್ಯವಸ್ಥೆನಾ ಬುಡುಮೇಲು ಮಾಡ್ಲು ವ್ರತ ಕೈಗೊಂಡ್ನಿ….’ ಯೆಂದು ದುರ್ಗುವ್ವ, ಭಯಂಕರ ಸತ್ಯನಾ ವರ್ಗಿಟ್ಟು, ಅಲ್ಲಿದ್ದವ್ರ ಗುಂಡ್ಗೆ ನಡ್ಗುಂಗೇ ಮಾಡಿದ್ಲು.

’ಯೇನ್ತಾಂಗಿ ನೀ ಅದಿಮೂರು ಮಕ್ಳು ತಾಯಾಗಿ, ಕರ್ಳು ಚುರ್ಕೆಂಬಂಗೆ ಮಾಡ್ಕಂಡಿಯಾ? ಜೀವ್ನಾ ಅತ್ಮೂಡ್ಕೊಬೇಕಂತೀ ಯೇನ್? ನಿನ್ದೊಳ್ಳೆ ತಿರ್ಕುನ್ಕನ್ಸು, ಗಾಳಿ ಗೋಪುರ್ದು ಕತಿ ಆಯ್ತಾಲ್ಲ! ತಲ್ಗೆಟ್ಗೈತಂತಾ ಬಂಡ್ಗೆ ವಡ್ಕೊಂಬಂಗದೀಯಾ? ನಿನ್ನಳಿಯ, ಮಗ್ಳುತಾಗೆ ನೀ ಯೆಲ್ಲಿ ಪೂರ್ಟಾಗ್ತಿಯಾ? ನಮ್ಮಿಂದೆ ಬಂದ್ಬೀಡು…. ಭೇಷಿರ್ವುಂತೆ….’ ಅಕ್ಕ ವೂರವ್ವ, ತಂಗಿ ದುರ್ಗುವ್ವಳ ಗೆಲ್ಲಲು ಯತ್ನಿಸಿದ್ಲು. ಭೀಮಪ್ಪ ವೂರವ್ವನ ಕಡ್ಗೀ ಕೋಲ್ಹಾಕ್ದಿ.

`ಯೀ ನಾಡು, ನುಡಿ, ವೂರುಕೇರಿಗೆ ಸಾಯ್ಕನ್ನಾ, ಸಾಯ್ಸಕನ್ನಾ ನಾ ಸಿದ್ಧಳು. ಯಿವ್ರ ಮೋಸ್ದಾಟಿ ನನ್ನತ್ರ ಸಾಗಲ್ಲ. ಸಾವಿರಾರು ಯೆಣ್ಮಕ್ಳು ಯೀ ನೆಲ, ಜಲ, ನುಡಿ, ನೆಡಿ, ಗಡಿಗಾಗಿ ತ್ಯಾಗ ಬಲಿದಾನವಾಗಿರ್ವುರು! ಅಂದು ಬ್ರಿಟಿಷರ ವಿರುದ್ಧ, ಯಿಂದು ನಮ್ಮ ನಮ್ಮವರ ವಿರುದ್ಧ ಸಮರ ಸಾರ್ಬೇಕಾಗಿದೆ! ಅನಿವಾರ್ಯವಿದೆ….ಯಿದೇ ನನ್ನ ಕೊನೇ ಮಾತು. ನಿರ್ಣಯ, ತೀರ್ಮಾನ, ದಯವಿಟ್ಟು ನನ್ಪಾಡ್ಗೆ ನನ್ನ ಬಿಟ್ಟಿಡಿ…..’

ಭೀಮಪ್ಪ, ವೂರವ್ವ ಅಳೋ ಮಕ ಮಾಡ್ಕಿಂಡಿದ್ರು…..’ಯಿದೇ ಕೊನೇ ಮಾತೇನಕ್ಕಾ…. ನಿನ್ದಾರಿ ಕಲ್ಲು ಮುಳ್ಳು ಸೀಳ್ದಾರಿ! ನಾವಿನ್ನು ಬರ್ತೀವಿ! ಯೆಚ್ರೇ…. ಮೈಯೆಲ್ಲ ಕಣ್ಣೆರ್ಲಿ….ಸಾದ್ಸಿವ ಛಲವಿರ್ಲಿ…… ಆನಿ ಬಲ್ಬರ್ಲಿ…. ನಾವು ಬರ್ತೀವಿ…..’ ಯೆಂದು, ದುರ್ಗುವ್ವಳ್ಗೆ ಯೇಳ್ತಾ….. ಕಾಲ್ದಾರಿ ಯಿಡ್ದು ವಂಟ್ರು…. ದುರ್ಗುವ್ವ ನೋಡ್ತಾ ನಿಂತ್ಲು….
*****

ಕೀಲಿಕರಣ : ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯಾಸ್ತ
Next post ಮಿಂಚುಳ್ಳಿ ಬೆಳಕಿಂಡಿ – ೬

ಸಣ್ಣ ಕತೆ

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…