ಗೋಕಾಕ್ ವರದಿ – ೩

ಗೋಕಾಕ್ ವರದಿ – ೩

ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು ನೂರಕ್ಕೆ ಎಪ್ಪತ್ತು ಜನ ಕನ್ನಡಿಗರು ನಿರಕ್ಷರಿಗಳಿರುವಾಗ ಸಂಸ್ಕೃತಿಯ ಬೀಜಗಳನ್ನು ಅವರ ಮನದಲ್ಲಿ ಬಿತ್ತುವುದಕ್ಕೋಸ್ಕರ ಪ್ರಾದೇಶಿಕ ಭಾಷೆಯಾದ ಕನ್ನಡವೊಂದೇ ಉಚಿತ ಮಾಧ್ಯಮವಾಗಬಲ್ಲದು. ಅಕ್ಷರಿಗಳಾಗಲಿ ನಿರಕ್ಷರಿಗಳಾಗಲಿ. ಎಲ್ಲರಿಗೂ ಅದು ಗ್ರಾಹ್ಯವಾಗುವುದು. ಅಂತೆಯೇ ಕನ್ನಡದ ಸಾಹಿತ್ಯೇತಿಹಾಸದ ಉದ್ದಕ್ಕೂ ರಾಮಾಯಣ-ಮಹಾಭಾರತ ಕಾವ್ಯಗಳನ್ನು ಕನ್ನಡದಲ್ಲಿ ಪುನರ್‌ಸೃಷ್ಟಿಸುವ ಸಾಹಸ ನಡೆಯಿತು. ಜೈನಧರ್ಮವು ಕನ್ನಡ ಕಾವ್ಯಗಳಲ್ಲಿ ರೂಪಗೊಂಡಿತು. ‘ವಚನಗಳು’ ಕನ್ನಡ ಉಪನಿಷತ್ತುಗಳಾದವು. “ಸಂಸ್ಕೃತದೊಳಿನ್ನೇನು?” ಎಂಬ ಪ್ರಶ್ನೆಯನ್ನು ಕನ್ನಡ ಜನ ಕೇಳುವಂತಾಯಿತು. ಬರಿ ಇಂದಿಗೇ ಅಲ್ಲ: ಈಗೊಂದು ಸಾವಿರ ವರ್ಷಗಳಿಂದ ಕನ್ನಡವು ಜನತೆಯ ಪ್ರಥಮ ಭಾಷೆಯಾಗಿದೆ.

ಸಂಸ್ಕೃತದಲ್ಲಿ ಇನ್ನೂ ಒಂದು ಕೊರತೆಯಿದೆ. ಅದರಲ್ಲಿ ಆಧುನಿಕ ಜಗತ್ತಿನ ವಾಙ್ಮಯವಿಲ್ಲ. ಸುಮಾರು ೧೬ನೆಯ ಶತಮನದ ತರುವಾಯ ಭಾರತ ದೇಶದ ಜ್ಞಾನ ಪ್ರಪಂಚದಲ್ಲಿ ಸಹ ತನಗಿದ್ದ ಪ್ರಾಮುಖ್ಯವನ್ನು ಕಡೆದುಕೊಳ್ಳಹತ್ತಿತು. ಯುರೋಪಿಯನ್ ರಿನೇಸಾನ್ಸ್ ಇಲ್ಲಿವೆ. ಪುನರುಜ್ಜೀವನದ ಕ್ರಾಂತಿಯು ಈ ಕ್ಷೇತ್ರದಲ್ಲಿಯ ನಾಯಕತ್ವವನ್ನು ಯುರೋಪಿಗೆ ದೊರೆಯುವಂತೆ ಮಾಡಿತು. ಕಳೆದ ನಾಲ್ಕು ಶತಮಾನಗಳಲ್ಲಿ ಪ್ರಪಂಚದಲ್ಲಿಯೂ ಜ್ಞಾನ ಪ್ರಪಂಚದಲ್ಲಿಯೂ ಆದ ಅದ್ಭುತ ಬದಲಾವಣೆಗಳನ್ನೂ, ಸಂಶೋಧನೆಗಳನ್ನೂ ಗಮನಿಸದಿದ್ದ ನಾಗರಿಕನು ಸುಸಂಸ್ಕೃತನೆಂದು ಹೇಳಲು ಬರುವುದಿಲ್ಲ. ಕಳೆದ ನಾಲ್ಕು ಶತಮಾನಗಳ ಸಂಸ್ಕೃತ ಸಾಹಿತ್ಯವನ್ನು ಆಂಗ್ಲ ಸಾಹಿತ್ಯದೊಡನೆ ಹೋಲಿಸಿ ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಏಳನೆಯ ಶತಮಾನದ ಸಾಹಿತ್ಯದ ಪೂರ್ವದಲ್ಲಿ ಇಂಗ್ಲಿಷಿನಲ್ಲಿ ಅಲ್ಪಸ್ವಲ್ಪ ಬರವಣಿಗೆ ಇದ್ದಿರಬಹುದು. ಆದರೆ ಇದಕ್ಕೂ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ಸಾಹಿತ್ಯದ ಮೂಲಕ ಸಂಸ್ಕೃತವು ಇಂದಿಗೂ ಜಗತ್ತಿನಲ್ಲಿಯ ಅದ್ವಿತೀಯ ಸಾಹಿತ್ಯವಾಗಿ (ಕೆಲವೊಂದು ದಿಕ್ಕಿನಲ್ಲಿ) ಉಳಿದುಕೊಂಡಿದೆ. ಏಳನೆಯ ಶತಮಾನದಿಂದ ೧೫ನೆಯ ಶತಮಾನದವರೆಗೆ ಬಂದ ಸಂಸ್ಕೃತ ಸಾಹಿತ್ಯವು ಇಂಗ್ಲಿಷಿಗಿಂತ ಎಷ್ಟೋ ಹೆಚ್ಚಾಗಿ ಶ್ರೀಮಂತವಾಗಿದೆ. ಆದರೆ ಇಲ್ಲಿಂದ ಮುಂದೆ, ಒಮ್ಮಿಂದೊಮ್ಮೆ, ಪುನರುಜ್ಜೀವನ ಕ್ರಾಂತಿಯ ಮೂಲಕ ಇಂಗ್ಲಿಷ್ ವಾಙ್ಮಯಕ್ಕೆ ಅಗಾಧ ವಿಸ್ತಾರವು ಆಧುನಿಕತೆಯೂ ಬರುತ್ತವೆ. ಅದು ಚಮತ್ಕಾರಿಕ ವೇಗದಿಂದ ಅತ್ಯದ್ಭುತವಾಗಿ ಬೆಳೆಯುತ್ತದೆ. ಇಂಗ್ಲಿಷು ೧೯ನೆಯ ಶತಮಾನದ ಕೊನೆಗೆ ಜಾಗತಿಕ ಭಾಷೆಯಾಗಿ ಅದರ ಸಾಹಿತ್ಯವು ಆಧುನಿಕ ಪ್ರಪಂಚದ ಜ್ಞಾನವನ್ನೆಲ್ಲ ಒಳಗೊಂಡ ಸಾಹಿತ್ಯವಾಗುತ್ತದೆ. ಇಂಗ್ಲಿಷಿನಲ್ಲಿ ದಿನ ದಿನಕ್ಕೆ ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯುವ ಸಂಶೋಧನೆಗಳು ಉಪಲಬ್ದಹವಾಗುತ್ತವೆ. ಈ ಸಂಶೋಧನೆಗಳನ್ನು ನಾವು ತಿಳಿಯದೆ ಹೋದರೆ ಆಧುನಿಕ ಪ್ರಪಂಚವನ್ನು ನೋಡಲು ನಮಗಿದ್ದ ಕಣ್ಣನ್ನು ನಾವೇ ಕಳೆದುಕೊಂಡಂತಾಗುತ್ತದೆ. ೨೦ನೆಯ ಶತಮಾನದ ಸುಸಂಸ್ಕೃತ ನಾಗರಿಕರಾಗಿ ಬಾಳಬೇಕಾದ ಕನ್ನಡಿಗರಿಗೆ ಈ ಮಾತನ್ನು ನೆನೆಯದೆ ಗತಿಯಿಲ್ಲ. ಯಾವ ದಿಕ್ಕಿನಿಂದಾದರೂ ಬಂದಿರಲಿ, ಜ್ಞಾನವು ಪವಿತ್ರವಾದುದೇ. ಅದೇ ರೀತಿಯಾಗಿ ಕೆಲವೊಂದು ಶಾಶ್ವತ ಮೌಲ್ಯಗಳನ್ನು ಕೊಡಲು ಕೈಯೆತ್ತಿ ನಿಂತ ಸಸ್ಕೃತ-ಪಾಲಿ-ಅರ್ಧ ಮಾಗಧಿಗಳೆಡೆಗೆ ಇಡೀ ಜಗತ್ತೇ ಧಾವಿಸುತ್ತದೆ. ಇದೂ ನಮ್ಮ ಚಿರಸ್ಮರಣೆಯಲ್ಲಿರಬೇಕಾದ ಸಂಗತಿಯಾಗಿದೆ.

ಕಳೆದ ನ‌ಅಲ್ಕು ಶತಮಾನಗಳ ಸಂಸ್ಕೃತ ಸಾಹಿತ್ಯದಲ್ಲಿ ನೈಜ ಕಾವ್ಯವಿದೆ. ಹೆಚ್ಚಾಗಿ ಪರಂಪರೆಯ ಅನುಕರಣವೇ ಇದೆ. ಇತ್ತೀಚೆಗೆ ಆಂಗ್ಲ ಕಾವ್ಯದ ಪ್ರಭಾವವು ಅಲ್ಲಲ್ಲಿ ಕಂಡು ಬರುತ್ತದೆ. ಆದರೆ ಆಧುನಿಕ ಪ್ರಪಂಚದ ಜ್ಞಾನ-ವಿಜ್ಞಾನಗಳು ಅಲ್ಲಿ ಮೂಡಿ ಬಂದಿಲ್ಲ. ಸಂಸ್ಕೃತದಲ್ಲಿ ಅವುಗಳನ್ನು ಇಂಗ್ಲಿಶಿನಿಂದ ಭಾಷಾಂತರಿಸಿ ತಂದರೂ, ಇಂಗ್ಲಿಷಿಗಿಂತ ಕದಾಚಿತ ಹೆಚ್ಚು ಅವು ಸಂಸ್ಕೃತದಲ್ಲಿ ಅಗಂಯವಾಗುವುವು. ಸಂಸ್ಕೃತದಲ್ಲಿಯೆ ಹಿಂದಿನಿಂದ ಬೆಳೆದು ಬಂದ ವಿಜ್ಞಾನವು ಇನ್ನೂ ಬಹುಮಟ್ಟಿಗೆ ಸಂಶೋಧನದ ವಿಷಯವಾಗಿಯೇ ಉಳಿದಿದೆ. ಆದರೆ ಕನ್ನಡದಲ್ಲಿ ಇಂದಿಲ್ಲ ನಾಳೆ ಇಂದಿನ ಪ್ರಪಂಚದ ವಿಜ್ಞಾನವೆಲ್ಲ ಪಡಿಮೂಡುವುದು. ಅದನ್ನು ಕನ್ನಡಿಗರು ಸುಲಭವಾಗಿ ತಿಳಿದುಕೊಳ್ಳಬಹುದು.

ಸಂಸ್ಕೃತಕ್ಕೆ ಒಂದು ವ್ಯಾವಹಾರಿಕ ಅಸ್ತಿತ್ವವಿದೆಯೆಂಬುದು ನಿಜ. ಘಟನಾ ಸಭೆಯ ಹಲವಾರು ಸದಸ್ಯರು ಹಿಂದೆ ಸಂಸ್ಕೃತವು ಅಧಿಕೃತ ಅಂತರ್ ರಾಜ್ಯ ಸಂಪರ್ಕ ಭಾಷೆಯಾಗಿರಬೇಕೆಂದು ವಾದಿಸಿದ್ದರು. ಈಚೆಗೆ ದಿನದ ವಾರ್ತೆಗಲು ಪ್ರತಿನಿತ್ಯ ರೇಡಿಯೋದ ಮೇಲೆ ಸಂಸ್ಕೃತದಲ್ಲಿಯೂ ಪ್ರಸಾರವಾಗುತ್ತಿವೆ. ಕೆಲವು ನಿಯತಕಾಲಿಕಗಳೂ ಸಂಸ್ಕೃತದಲ್ಲಿ ಪ್ರಕಟವಾಗುತ್ತಿವೆ. ಹೀಗೆ ಹಿಂದಿನ ನಾಗರಿಕತೆಯ ಉದ್ದೇಶಗಳಿಗೂ ಸಂಸ್ಕೃತವು ಬಳಕೆಯಾಗುತ್ತಿದೆ. ಅಲ್ಲದೆ ಪಂಡಿತರ ಭಾಷೆಯಾಗಿ, ಸಂವಾದ ಪ್ರವಚನಗಳ ಸಲುವಾಗಿ, ಸಂಸ್ಕೃತವು ಬಳಕೆಯಲ್ಲಿದೆ.

ಆದರೆ ಈ ಎಲ್ಲ ಚಟುವಟಿಕೆಗಳು ಸಂಸ್ಕೃತ ಭಾಷೆಯು ಒಂದು ಆಧುನಿಕ ಭಾಷೆಯೆಂಬ ವರ್ಣನೆಗೆ ಆಧಾರವಾಗಲಾರವು. ಇವು ಕುತೂಹಲವನ್ನು ಕೆರಳಿಸುತ್ತವೆ. “ಸಂಸ್ಕೃತದಲ್ಲಿಯೂ ಹೀಗೆ ಮಾಡುವುದು ಸಾಧ್ಯ” ಎಂದು ನಮ್ಮನ್ನು ಬೆರಗುಗೊಳಿಸುತ್ತವೆ. ಮೂರು ಕೋಟಿ ಜನರ ಬಳಕೆ ನುಡಿಗಳ ಸಹಜ ಓಘದಂತೆ ಇದೊಂದು ನೈಸರ್ಗಿಕ ಕ್ರಿಯೆಯಲ್ಲ.

ಸಂಸ್ಕೃತದ ಪ್ರಯೋಜನವು ಇನ್ನೊಂದು ರೀತಿಯಲ್ಲಿ ಸ್ಪುಟವಾಗುತ್ತದೆ. ಕನ್ನಡದ ಜೀವಜೀವಾಳದಲ್ಲಿಯೇ ಸಂಸ್ಕೃತವು ಹಾಸು ಹೊಕ್ಕಗಿದೆ. ಗೌಡೀಯ ಭಾಷೆಗಳೆಲ್ಲ ಸಂಸ್ಕೃತದಿಂದ ಹುಟ್ಟಿದುದಲ್ಲದೆ ದ್ರಾವಿಡ ಭಾಷೆಗಳೂ ತಮ್ಮ ಶಬ್ದ ಸಂಪತ್ತಿನ ಎಷ್ಟೋ ಭಾಗವನ್ನು ಸಂಸ್ಕೃತದಿಂದ ಆಯ್ದುಕೊಂಡವು. ಯುರೋಪಿನಲ್ಲಿ ಜರ್ಮನ್ ಭಾಷೆಯ ಹಾಗೆ ಈ ವಿಷಯದಲ್ಲಿ ತಮಿಳಿನ ಒಲವು ಕೂಕಡ ತರುವ ಧೋರಣದ್ದಲ್ಲ. ಆದರೆ ವೈಜ್ಞಾನಿಕ ಶಬ್ದಕೋಶವನ್ನು ದಿನ ದಿನ್ನಕ್ಕೆ ಹಿಗ್ಗಿಸುವೆ ಒತ್ತಡ ಬಂದಾಗ ತಮಿಳೂ ಸಹ ಇದೇ ದಾರಿಯನ್ನು ತುಳಿಯಬೇಕಾಗಬಹುದು. ಹೀಗೆ ಕನ್ನಡದ ಪ್ರತಿಭೆಯನ್ನು ತಿಳಿಯಲು ಸಹ ನಾವು ಸಂಸ್ಕೃತವನ್ನು ಅಭ್ಯಸಿಸುವದು ಅವಶ್ಯವಾಗುತ್ತದೆ ಹಳಗನ್ನಡ ಹಾಗೂ ನಡುಗನ್ನಡ ಸಾಹಿತ್ಯಗಳ ಅಭ್ಯಾಸಿಗಳಿಗಂತೂ ಸಂಸ್ಕೃತದ ಅಧ್ಯಯನ ಅತ್ಯಗತ್ಯವಾಗಿದೆ. ಏಕೆಂದರೆ ಸಂಸ್ಕೃತದಲ್ಲಿಯ ಮಹಾಕಾವ್ಯಗಳೂ ಕನ್ನಡ ಸಾಹಿತ್ಯದ ಇತಿಹಾಸದ ತುಂಬೆಲ್ಲ ಬೆಳಕು ಚೆಲ್ಲಿವೆ. ಗೀತೋಪನಿಷದ್ ವಾಕ್ಯಗಳೂ ಹಾಗೆಯೇ. ಅಲಂಕಾರ ಶಾಸ್ತ್ರ, ಪಂಚತಂತ್ರ, ಒಂದಲ್ಲ, ಎರಡಲ್ಲ ಆ ಗಣಿಯಿಂದ ಕನ್ನಡವು ಅನೇಕ ವಿಷಯಗಳನ್ನು ಅಗೆದು ತಂದಿದೆ. ಹೀಗೆ ಸಂಸ್ಕೃತವನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಂಡಷ್ಟೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳು ನಮಗೆ ಇನ್ನಿಷ್ಟು ನಿಚ್ಚಳವಾಗುತ್ತ ನಡೆಯುತ್ತವೆ. ಕನ್ನಡ ಭಾಷೆ-ಸಾಹಿತ್ಯಗಳ ಅಭ್ಯಾಸಕ್ಕೆ ಸಂಸ್ಕೃತದ ಅಭ್ಯಾಸ ಈ ದೃಷ್ಟಿಯಿಂದ ಪೋಷಕವಾಗಿದೆ.

(೭) ಉಳಿದ ಪ್ರಾಚೀನ ಭಾಷೆಗಳು
ಸಂಸ್ಕೃದ ಸ್ಥಾನವನ್ನು ಕುರಿತು ಮೇಲೆ ವಿವರವಾಗಿ ಚರ್ಚಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ನಾವು ಇನ್ನೊಂದು ಮಾತನ್ನು ನೆನೆಯುವುದು ಅಗತ್ಯ. ಸಾಂಸ್ಕೃತಿಕ-ಧಾರ್ಮಿಕ ಭಾಷೆಯಾಗಿ ಅನೇಕರು ಸಂಸ್ಕೃತವನ್ನು ಅಭ್ಯಸಿಸಿದಂತೆ ಕೆಲವರು ಫಾರಸಿ ಅರೇಬಿಕ್ ಭಾಷೆಗಳನ್ನೂ ಹಲವರು ಗ್ರೀಕ್-ಲ್ಯಾಟಿನ್, ಹೀಬ್ರೂ ಭಾಷೆಗಳನ್ನು ಕಲಿಯಲು ಇಚ್ಚೆಪಡಬಹುದು. ಈ ಮೊದಲು ವಿಂಗಡಿಸಿ ಕಂಡುಕೊಂಡಂತೆ ವ್ಯಾವಹಾರಿಕ ಇಲ್ಲವೆ ಸಾಂಸ್ಕೃತಿಕ ಕಾರಣಗಳಿಂದಾಗಿ ಕೆಲವರು ಹಿಂದಿ-ತೆಲುಗು-ತಮಿಳು-ಮಲೆಯಾಳಂ-ಮರಾಠಿ ಮೊದಲಾದ ಭಾಷೆಗಳಲ್ಲಿ ಒಂದು ಭಾಷೆಯನ್ನು ಕಲಿಯಲು ಇಚ್ಚೆ ಪಡಬಹುದು. ನಮ್ಮ ವಿಶಾಲ ದೇಶದಲ್ಲಿ ಇದೆಲ್ಲ ವೈವಿಧ್ಯಕ್ಕೂ ಅವಕಾಶವಿರಬೇಕು. ಸಂಸ್ಕೃತವು ಪಾಲಿ. ಅರ್ಧ ಮಾಗಧಿ, ಮುಂದೆ ಹಿಂದೀ, ಬಂಗಾಲಿ ಮೊದಲಾದ ಭಾಷೆಗಳ ರೂಪಗಳನ್ನು ತಳೆದಮ್ತೆ ಲ್ಯಾಟಿನ್ ಭಾಷೆಯು ಇಟ್ಯಾಲಿಯನ್ ಆಗಿ, ಹಾಗೂ ಪ್ರಾಚೀನ ಅರೇಬಿಕ್ ಭಾಷೆಯು ಆಧುನಿಕ ಅರೇಬಿಕ್ ಆಗಿ, ಪ್ರಾಚೀನ ಫಾರಸಿ ಭಾಷೆಯು ಪರ್ಸಿಯನ್ ಆಗಿ ವಿಕಾಸಗೊಂಡಿದೆ. ಆದರೆ ಸಂಸ್ಕೃತದ ಒಂದು ಗ್ರಾಂಥಿಕ ರೂಪಕ್ಕೆ ಸ್ಥಿರಕ್ಕೆ ಬಂದಂತೆ ಮಧ್ಯಕಾಲೀನ ಲ್ಯಾಟಿನ್ ಹಾಗೂ ಫಾರಸಿ ಭಾಷೆಗಳಿಗೂ ಒಂದು ಗ್ರಾಂಥಿಕ ಪರಂಪರೆಯ ಸ್ಥಿರತೆ ಬಂದಿದೆ. ಲ್ಯಾಟಿನ್-ಅರೇಬಿಕ್ ಭಾಷೆಗಳಲ್ಲಿಯ ಹಲವಾರು ನಿರ್ದಿಷ್ಟ ಪ್ರಾರ್ಥನೆಗಳು ಇನ್ನೂ ರೂಢಿಯಲ್ಲಿವೆ. ಅರೇಬಿಕ್-ಫಾರಸಿ ಅಭ್ಯಾಸ ನಡೆದಿರುವಂತೆ ಹಲವು ಕಾಲೇಜುಗಳಲ್ಲಿಯೂ ಡಿಯಾಲಾಜಿಕಲ್ ಸೆಮಿನರಿಗಳಲ್ಲಿಯೂ ಮಧ್ಯಕಾಲೀನ ಲ್ಯಾಟಿನ್ ಅಭ್ಯಾಸ ನಡೆಯುತ್ತಿದೆ.

೨. ಸಮಿತಿಯ ಸಲಹೆಗಳು
ಭಾಷಾ ಶಿಕ್ಷಣ ತತ್ವಗಳನ್ನನುಸರಿಸಿ ಭಾಷೆಗಳ ಮಹತ್ವದ ಪ್ರಮಾಣ, ಇಂದಿನ ಕನ್ನಡ ಜನತೆಯ ಪರಿಸ್ಥಿತಿ, ಅಲ್ಪಸಂಖ್ಯಾತರ ಸಮಸ್ಯೆಗಳು, ವಿಕಸನಪೂರ್ಣ ವಿದ್ಯಾರ್ಜನೆಯ ಕ್ರಮ: ಎಲ್ಲ ವಿಷಯಗಳನ್ನು ಕುರಿತು ಆಮಂತ್ರಿತರೊಡನೆ ಹಾಗೂ ಸಾರ್ವಜನಿಕವಾಗಿ ನಡೆದ ಚರ್ಚೆಗಳನ್ನು ಲಕ್ಷಿಸಿ, ಸಮಿತಿಯ ಸದಸ್ಯರ ವಿಚಾರಗಳನ್ನು ಮಥಿಸಿ ಈ ವರದಿಯಲ್ಲಿ ಸೂಚಿಸಿರುವ ಅಭಿಪ್ರಾಯಗಳನ್ನು ಸಾರ್ವಾನುಮತದಿಂದ ಸಮಿತಿಯು ಅಂಗೀಕರಿಸಿದೆ.

(೧) ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಭಾಷೆಯನ್ನು ಏಕೈಕ ಪ್ರಥಮಭಾಷೆಯನ್ನಾಗಿ ಮಾಡಿ ಅದರ ಅಭ್ಯಾಸ ಕಡ್ಡಾಯವಾಗಬೇಕು. ಅದಕ್ಕೆ ೧೫೦ ಅಂಕಗಳಿರಬೇಕು. (ಈ ವಿಷಯದಲ್ಲಿ ಒಂದು ತಾತ್ಪೂರ್ತಿಕ ವ್ಯವಸ್ಥೆಯು ಅವಶ್ಯವಾದ್ದರಿಂದ ಅದನ್ನು ಮುಂದೆ ಒಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.)
(೨) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಉರ್ದು, ಹಿಂದೀ-ಈ ಆಧುನಿಕ ಭಾಷೆಗಳಲ್ಲಿ ಒಂದು:
ಇಲ್ಲವೆ
ಇಂಗ್ಲಿಷು
ಇಲ್ಲವೆ
ಸಂಸ್ಕೃತ, ಅರೇಬಿಕ, ಪರ್ಸಿಯನ್, ಲ್ಯಾಟಿನ್, ಗ್ರೀಕ್- ಈ ಪ್ರಾಚೀನ ಭಾಷೆಗಳಲ್ಲಿ ಒಂದು:
(೩) ನಿರ್ದಿಷ್ಟಗೊಳಿಸಿದ ಪ್ರಥಮಭಾಷೆಯನ್ನೂ ಹಾಗೂ ಆಯ್ದುಕೊಂಡ ದ್ವಿತೀಯ ಭಾಷೆಯನ್ನೂ ಬಿಟ್ಟು ಇನ್ನಾವುದಾದರೊಂದು ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ದುಕೊಳ್ಳಬೇಕು. ಈ ಭಾಷೆಯನ್ನು ಪಟ್ಟಿ (೨) ರಲ್ಲಿ ಕಾಣಿಸಿರುವ ಭಾಷೆಗಳ ಪಟ್ಟಿಯಿಂದ ಆಯ್ದುಕೊಳ್ಳಬೇಕು.
(೪) ತೃತೀಯ ಭಾಷೆಗೆ ೫೦ ಅಂಕಗಳಿರಬೇಕು. ತೃತೀಯ ಭಾಷೆಯೂ ಪರೀಕ್ಷೆಗೆ ಕಡ್ಡಾಯದ ವಿಷಯವಾಗಬೇಕು.
(೫) ದ್ವಿತೀಯ ಮತ್ತು ತೃತೀಯ ಭಾಷೆಯ ಗುಂಪುಗಳಲ್ಲಿ ಎಲ್ಲ ಭಾಷಾವರ್ಗಗಳೂ ಸೇರ್ಪಡೆಯಾಗುತ್ತವೆ. ಅಭ್ಯಸಿಸಲಿರುವ ಭಾಷೆಯು ಅರ್ವಾಚೀನವಾಗಲಿ, ಪ್ರಾಚೀನವಾಗಲಿ, ಆಯಾ ಹಂತದಲ್ಲಿ ಉಳಿದ ಭಾಷೆಗಳ ಹಾಗೂ ಭಾಷಾವರ್ಗಗಳ ಮಟ್ಟಕ್ಕೆ ಅದರ ಮಟ್ಟವೂ ಸರಿಸಮವಾಗಿರಬೇಕು.
(೬) ಮೇಲೆ ಕಾಣಿಸಿದ ಐದು ಸಲಹೆಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯಿಸುವುವು. ಆದರೆ ಕಡ್ಡಾಯದ ಪರೀಕ್ಷಾ ವಿಷಯವಾಗಿ ವಿದ್ಯಾರ್ಥಿಗಳಿಗೆ ಭಾರವಾಗದೆ ಪ್ರತಿಭಾವಂತ ವಿದ್ಯಾರ್ಥಿಗಳ ಸುಪ್ತ ಚೇತನವನ್ನು ಉದ್ದೇಶಿಸುವಂತಹ ಒಂದು ಆರೋಹಣ ಕ್ರಮವೂ ನವ ಜನಾಂಗದ ದೃಷ್ಟಿಯಿಂದ ಸ್ವಾಗತಾರ್ಹವೆನಿಸಿದೆ. ಕಡ್ಡಾಯವಿದ್ದ ಭಾಷಾ ವಿಷಯಗಳು ಈಗಿರುವಂತೆಯೇ ಅಂದರೆ (ಪ್ರಥಮಭಾಷೆಗೆ ೧೫೦, ದ್ವಿತೀಯ ಭಾಷೆಗೆ ೧೦೦, ತೃತೀಯ ಭಾಷೆಗೆ ೫೦) ಅಂಕಗಳು ಉಳಿಯಲಿ. ಆದರೆ ಇಚ್ಚೆಪಟ್ಟವರಿಗೆ ಹೆಚ್ಚಿನ ಪರಿಶ್ರಮ ಪಡುವ ಸುಸಂಧಿ ದೊರೆಯುವಂತಿರಬೇಕು. ಇಂತಹ ಕ್ರಮವು ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಅಭ್ಯಾಸದಲ್ಲಿ ಹೆಚ್ಚಿನ ಆಸ್ಥೆಯನ್ನು ವಹಿಸಲು ಅದು ಅವರನ್ನು ಪ್ರೇರಿಸುತ್ತದೆ. ಮುಂದೆ ಸಾಧ್ಯವಾಗದ ಒಂದು ವಿಷಯದ ಅಭ್ಯಾಸವನ್ನು ಎಸ್.ಎಸ್.ಎಲ್.ಸಿ ವರ್ಷದಲ್ಲಿಯೇ ಕೊನೆಗೊಳಿಸಲು ಅದು ಅವರನ್ನು ಹುರಿದುಂಬಿಸುತ್ತದೆ.

ಆ ಕ್ರಮವು ಯಾವುದೆಂದರೆ, ಒಂದು ಸಬ್ಜೆಕ್ಟ್ ಎಕ್ಸಾಮಿನೇಷನ್ ಇಲ್ಲವೆ ಒಂದು ವಿಶಿಷ್ಟ ವಿಷಯ ಪರೀಕ್ಷೆ. ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು, ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್-ಇವುಗಳಲ್ಲಿ ಒಂದು ಭಾಷೆಯನ್ನೋ ಅಥವಾ ಅವಕಾಶವಿರುವ ಇನ್ನಾವುದಾದರೂ ಒಂದು ವಿಷಯವನ್ನೋ ಆಯ್ದುಕೊಂಡು ವಿದ್ಯಾರ್ಥಿಗಳು ತಮಗೆ ತಾವೇ ಅಭ್ಯಸಿಸಬಹುದು. ಅವುಗಳಿಗಾಗಿ ಶಾಲೆಗಳಲ್ಲಿ ಯಾವ ಬೋಧನಾ ಸೌಲಭ್ಯಗಳೂ ಇರುವುದಿಲ್ಲ. ಹೀಗೆ ಹೆಚ್ಚಿನ ವಿಷಯವನ್ನು ಆಯ್ಕೆಮಾಡಿಕೊಂಡವರು ಅದನ್ನು ಸ್ವತಂತ್ರವಾಗಿ ಅಭ್ಯಸಿಸಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ಸ್ವಸಂತೋಷದ ಪರೀಕ್ಷೆ.

ಈ ವಿಷಯದಲ್ಲಿ ಪರೀಕ್ಷೆಯನ್ನು ಎಸ್.ಎಸ್.ಎಲ್.ಸಿ ಪರೀಕ್ಷೆ ಜೊತೆಯಲ್ಲಿಯೇ ವ್ಯವಸ್ಥೆ ಮಾಡಬಹುದು. ಆಡಳಿತ ದೃಷ್ಟಿಯಿಂದ ಇದು ಸೂಕ್ತ. ಇಲ್ಲವೇ ಆ ಪರೀಕ್ಷೆ ಆದ ಒಂದು ತಿಂಗಳಲ್ಲಿ ನಡೆಸಬಹುದು.

ವಿದ್ಯಾರ್ಥಿಗಳು ಈ ವಿಷಯದಲ್ಲಿ ಗಳಿಸುವ ಅಂಕಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕವಾಗಿಯೇ ಅರ್ಹತಾ ಪತ್ರ ವಿತರಣೆಯ ವ್ಯವಸ್ಥೆ ಆಗಬೇಕು.

ಭಾಷಾ ವಿಷಯಗಳಲ್ಲದೆ, ಚಿತ್ರಕಲೆ, ಸಂಗೀತ, ವೃತ್ತಿ ಶಿಕ್ಷಣ, ನೃತ್ಯ, ಮುಂತಾದ ಇನ್ನಿತರ ವಿಷಯಗಳನ್ನೂ ಸೇರಿಸಬಹುದು.

ಈ ವಿಷಯಗಳಿಗೆ ಸಂಬಂಧಪಟ್ಟಂತೆ ಅಗತ್ಯವಾದ ಪಠ್ಯವಸ್ತು ಮತ್ತು ಪರೀಕ್ಷಾಕ್ರಮವನ್ನು ತಯಾರಿಸುವ ಜವಾಬ್ದಾರಿಯನ್ನು ತಜ್ಞರ ಸಮಿತಿಗೆ ವಹಿಸಬೇಕು.

ಸಲಹೆ (೧)ಕ್ಕೆ ಟಿಪ್ಪಣಿ:
(ಅ) ೧೯೮೧-೮೨ ರಿಂದಲೇ ಕನ್ನಡವು ಏಕೈಕ ಪ್ರಥಮಭಾಷೆಯಿರಬೇಕೆಂದು ಹೇಳಿದೆಯಷ್ಟೆ. ಕನ್ನಡ ಮಾತೃಭಾಷೆಯಾದವರಿಗೆ ಅಲ್ಲದೆ, ಅದನ್ನು “ದ್ವಿತೀಯ ಮಾತೃಭಾಷೆ” ಯೆಂದು ಕರ್ನಾಟಕದಲ್ಲಿ ನೆಲೆಸಿ ಸ್ವೀಕರಿಸಿದವರಿಗೆ ಇದರಿಂದ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದರೆ ಕರ್ನಾಟಕದಲ್ಲಿ ನೆಲೆಸಿದ್ದರೂ ಕನ್ನಡವನ್ನು ಕಲಿಯುವ ಏರ್ಪಾಟು ಮಾಡಿಕೊಳ್ಳದೆ ಇರುವ ಅನೇಕ ಕನ್ನಡೇತರ ಕುಟುಂಬಗಳು ಕರ್ನಾಟಕದಲ್ಲಿವೆ. ಇವರ ಸಲುವಾಗಿ ಸರ್ಕಾರದವರಾಗಲಿ, ಖಾಸಗಿ ಸಂಸ್ಥೆಗಳಾಗಲಿ ತೆರೆದ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವ ವ್ಯವಸ್ಥೆ ಇರಬೇಕೆಂದು ಅಂಗೀಕೃತವಾಗಿದೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಅದನ್ನು ಪ್ರಾರಂಭಿಸಬೇಕಾಗಿದೆ. ೧೯೮೧-೮೨ ರಿಂದ ಪ್ರಾಥಮಿಕ ೩ನೇ ಇಯತ್ತೆಯಲ್ಲಿ ಅದನ್ನು ಪ್ರಾರಂಭಿಸಿದರೆ, ೩ನೆಯ ಇಯತ್ತೆಯನ್ನು ಮುಗಿಸಿ, ೪, ೫, ೬, ೭, ಇವುಗಳನ್ನೂ ದಾಟಬೇಕಾದರೆ ೧೯೮೧-೮೨ ರಲ್ಲಿ ಕನ್ನಡವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳಿಗೆ ಹಂತಹಂತದಲ್ಲಿ ಅದನ್ನು ಕಲಿಯಲು ೫ ವರ್ಷಗಳು ಬೇಕಾಗುತ್ತವೆ. ಕಾರಣ ಸಮಿತಿಯ ನಿರ್ಧಾರದಂತೆ ಕನ್ನಡೇತರರ ಮಕ್ಕಳಿಗೂ ೧೯೮೧-೮೨ ರಿಂದ ೧೫೦ ಅಂಕಗಳ ಕನ್ನಡವನ್ನು ೮ನೆಯ ಇಯತ್ತೆಯಿಂದ ಕಡ್ಡಾಯದ ವಿಷಯ ಹಾಗೂ ಪ್ರಥಮಭಾಷೆಯನ್ನಾಗಿ ಮಾಡಿದರೆ ಅವರಿಗೆ ತೊಂದರೆಯುಂಟಾಗುತ್ತದೆ. ಆದುದರಿಂದ ಅವರಿಗಾಗುವ ಈ ತೊಂದರೆಯನ್ನು ನಿವಾರಿಸಲು ಅದನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಿತಿಯು ಈ ಕೆಳಗಿನ ವ್ಯವಸ್ಥೆಯನ್ನು ಸಲಹೆ ಮಾಡಿದೆ. ಈ ವ್ಯವ್ಸ್ಥೆಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಾಗಲಿ, ಖಾಸಗಿ ಶಾಲೆಗಳಲ್ಲಾಗಲೀ, ಕನ್ನಡೇತರ ಮಕ್ಕಳು ೧೯೮೧-೮೨ರ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಕಡ್ಡಾಯದ ವಿಷಯವಾಗಿ ಕಲಿಯಲು ಪ್ರಾರಂಭಿಸುತ್ತಾರೆ. ಹಂತಗಳನ್ನು ಈ ರೀತಿಯಾಗಿ ಏರ್ಪಡಿಸಲಾಗುವುದು.

೧೯೬೧-೬೨ ಕನ್ನಡ ಕಡ್ಡಾಯದ ವಿಷಯ ೩ ನೆ ಇಯತ್ತೆ
೧೯೮೨-೮೩ ” ೪ ನೆ ಇಯತ್ತೆ
೧೯೮೩-೮೪ ” ೫ ನೆ ಇಯತ್ತೆ
೧೯೮೪-೮೫ ” ೬ ನೆ ಇಯತ್ತೆ
೧೯೮೫-೮೬ ” ೭ ನೆ ಇಯತ್ತೆ
೧೯೮೬-೮೭
ಹಾಗೂ ಮುಂದೆ ” ೮ ನೆ ಇಯತ್ತೆ

ಹೀಗೆ ಸಾಗುವದರಿಂದ ವ್ಯವಸ್ಥಾಪಕರಿಗೆ ವ್ಯವಸ್ಥೆಮಾಡಲು ಯೋಗ್ಯ ಸಮಯ ದೊರೆಯುತ್ತದೆ. ಕನ್ನಡೇತರ ಮಕ್ಕಳಿಗೆ ಉಳಿದ ಮಕ್ಕಳಂತೆ ಕನ್ನಡವನ್ನು ಕ್ರಮೇಣ ಚೆನ್ನಾಗಿ ಅರಿತುಕೊಂಡು ನಿರೀಕ್ಷಿಸಿದ ಮಟ್ಟವನ್ನು ಸುಲಭವಾಗಿ ತಲುಪಲು ವೇಳೆ ಹಾಗೂ ಶಿಕ್ಷಣ ದೊರೆಯುತ್ತದೆ. ಕರ್ನಾಟಕ ರಾಜ್ಯದಲ್ಲಿ ೧೦ ವರ್ಷ ನೆಲೆಸಿದ ಮನೆತನಗಳ ಮಕ್ಕಳು ಕನ್ನಡವನ್ನು ಈ ರೀತಿಯಾಗಿ ಕಡ್ಡಾಯದ ವಿಷಯವನ್ನಾಗಿ ಕಲಿಯಬೇಕು.

(ಆ) ಮೇಲೆ ಉಲ್ಲೇಖಿಸಿದ ಕಾರಣದ ಮೂಲಕ ೧೯೮೬-೮೭ನೆಯ ಶೈಕ್ಷಣಿಕ ವರ್ಷದಲ್ಲಿ ಕನ್ನಡೇತರ ಮಕ್ಕಳಿಗೂ ೮ನೆಯ ಇಯತ್ತೆಯಲ್ಲಿ ೧೫೦ ಗುಣಾಂಕಗಳ ಕನ್ನಡ ಭಾಷಾ ವಿಷಯವನ್ನು೮ ಅಭ್ಯಸಿಸುವ ಚೈತನ್ಯ ಬರುವವರೆಗೆ ಅವರು ಕನ್ನಡ ಭಾಷಾ ವಿಷಯವನ್ನು ಕಡ್ಡಾಯವಾಗಿ ೩ನೆಯ ಇಯತ್ತೆಯಿಂದ ೭ನೆಯ ಇಯತ್ತೆಯವರೆಗೆ ಕಲಿತು ಮುಂದುವರಿಯುತ್ತಾರೆ. ಈ ಅವಧಿ ಮುಗಿಯುವವರೆಗೆ-ಅಂದರೆ ೧೯೮೧-೮೨, ೧೯೮೨-೮೩, ೧೯೮೩-೮೪, ೧೯೮೪-೮೫ ಹಾಗೂ ೧೯೮೫-೮೬-ಈ ಐದು ವರ್ಷಗಳಲ್ಲಿ ೮ನೆಯ ಇಯತ್ತೆಯಲ್ಲಿ ಕನ್ನಡೇತರ ಮಕ್ಕಳು ೧೫೦ ಗುಣಾಂಕಗಳ ಮಟ್ಟದ ತಮ್ಮ ಮಾತೃಭಾಷೆಯನ್ನು ಹಾಗೂ ೧೦೦ ಅಂಕಗಳ ದ್ವಿತೀಯ ಭಾಷೆ ಇಲ್ಲವೆ ೫೦ ಗುಣಾಂಕಗಳ ತೃತೀಯ ಭಾಷೆಯಾದ ಕನ್ನಡವನ್ನೂ ಅಭ್ಯಸಿಸಬೇಕಾಗುತ್ತದೆ. ಆದರೆ ೧೯೮೬-೮೭ರಿಂದ ಮಾತ್ರ ಅವರಿಗೆ ಕನ್ನಡ ೧೫೦ ಗುಣಾಂಕಗಳಿದ್ದ ಕಡ್ಡಾಯದ ಭಾಷೆಯಾಗುತ್ತದೆ. ಆಗ ೧೦೦ ಗುಣಾಂಕ (ದ್ವಿತೀಯ) ಇಲ್ಲವೆ ೫೦ ಗುಣಾಂಕಗಳುಳ್ಳ (ತೃತೀಯ) ಭಾಷೆಯಾಗಿ ಅವರು ತಮ್ಮ ಮಾತೃಭಾಷೆಯನ್ನು ಕಲಿಯಬಹುದು.

(ಇ) ಇದು ಅಲ್ಪಸಂಖ್ಯಾತರ ಮಾತೃಭಾಷೆಗಳ ವಿಷಯವಾಯಿತು. ಸಂಸ್ಕೃತ ಹಾಗೂ ಇನ್ನುಳಿದ ಪ್ರಾಚೀನ ಭಾಷೆಗಳಿಗೆ ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಸಹ ಪ್ರಥಮ ಭಾಷೆಯ ಸ್ಥಾನವಿರುವುದಿಲ್ಲ. ಅವುಗಳನ್ನು ದ್ವಿತೀಯ (೧೦೦ ಅಂಕಗಳು) ಇಲ್ಲವೆ ತೃತೀಯ (೫೦ ಅಂಕಗಳು) ಭಾಷೆಗಳೆಂದು ಆಯ್ದುಕೊಳ್ಳಬಹುದು. ಸಂಸ್ಕೃತವು ದ್ವಿತೀಯ ಮತ್ತು ತೃತೀಯ ಭಾಷೆಗಳ ಗುಂಪಿನಲ್ಲಿರುವುದರಿಂದ ಆ ಗುಂಪಿನಲ್ಲಿರುವ ಇತರ ಭಾಷೆಗಳ ಮಟ್ಟಕ್ಕೆ ಅದರ ಪಠ್ಯಕ್ರಮ ಸರಿಸಮವಾಗಬೇಕಾಗಿರುತ್ತದೆ.

(ಈ) ದ್ವಿತೀಯ ಭಾಷೆಗಳ ಪಟ್ಟಿಯಲ್ಲಿ ಕನ್ನಡಕ್ಕೆ ಹಾಗೂ ಇಂಗ್ಲಿಷಿಗೆ ಸ್ಥಾನವಿರುವುದು. ‘ಇ’ಯಲ್ಲಿ ಹೇಳಿದಂತೆ ಸಂಸ್ಕೃತ ಹಾಗೂ ಉಳಿದ ಪ್ರಾಚೀನ ಭಾಷೆಗಳಿಗೂ ಇಲ್ಲಿ ಸ್ಥಾನವಿರುವುದು. ಇಲ್ಲಿ ಆಯ್ದುಕೊಂಡ ಪ್ರತಿಯೊಂದು ಭಾಷೆಗೂ ೧೦೦ ಅಂಕಗಳಿರುವುವು.

(ಉ) ತೃತೀಯ ಭಾಷೆಗಳ ಪಟ್ಟಿಯಲ್ಲಿ ಕನ್ನಡ, ಸಂಸ್ಕೃತ ಮತ್ತು ಹಿಂದೀ ಭಾಷೆಗಳು ಇರುತ್ತವೆ.

ಕನ್ನಡ ಶಿಕ್ಷಕರನ್ನು ಇಲ್ಲಿಯವರೆಗೆ ನೇಮಿಸದಿರುವ ಮೂಲಕ ಈ ಮೊದಲು ಹೇಳಿದಂತೆ ವುದ್ಯಾರ್ಥಿಗಳು ಪ್ರೌಢಶಾಲೆಗಳಲ್ಲಿ ೧೫೦ ಅಂಕಗಳ ಕನ್ನಡ ಭಾಷೆಯನ್ನು ೮ನೆಯ ಇಯತ್ತೆಯಲ್ಲಿ ಅಭ್ಯಸಿಸಲು ೧೯೮೬-೮೭ರವರೆಗೆ ಅರ್ಹರಾಗಿರುವುದಿಲ್ಲ. ೧೯೮೧-೮೨ ರಿಂದ ೧೯೮೫-೮೬ನೆಯ ವರ್ಷ ಮುಗಿಯುವವರೆಗೆ (ಅಂದರೆ ೩ನೆಯ ಇಯತ್ತೆಯಲ್ಲಿ ಅಭ್ಯಸಿಸಲು ೧೯೮೧-೮೨ರಲ್ಲಿ ಪ್ರಾರಂಭಿಸಿದ ವಿದ್ಯಾರ್ಥಿಯು ೧೯೮೫-೮೬ರಲ್ಲಿ ೭ನೆಯ) ಸರ್ಕಾರ ಈಗಾಗಲೇ ನಿರ್ಧರಿಸಿ ಪಠ್ಯಕ್ರಮದಲ್ಲಿ ಪ್ರತಿವರ್ಷ ಕನ್ನಡ ಭಾಷೆಯ ಶಿಕ್ಷಣಕ್ಕಾಗಿ ಏರ್ಪಾಟು ಮಾಡಿದ ಪ್ರಕಾರ ಪ್ರಾಥಮಿಕ ಮೂರನೆಯ ತರಗತಿಯಿಂದ ಕ್ರಮಶಃ ಕನ್ನಡವನ್ನು ಕಲಿಸಲು ಬೇಕಾದ ಸೌಲಭ್ಯಗಳನ್ನು ೧೯೮೧-೮೨ರಿಂದ ಒದಗಿಸಲೇಬೇಕು. ಈ ಕಾರ್ಯವನ್ನು ಕುರಿತು ಸರ್ಕಾರ ಒಡನೆ ಕಾರ್ಯಪ್ರವೃತ್ತರಾಗಲೇ ಬೇಕು.

೧೧(೩) (ಅ) ಕೆಲವು ನಕ್ಷೆಗಳು: ಮುಖ್ಯ ಸಲಹೆಗಳ ಪ್ರಕಾರ ೧೯೮೧-೮೨ ರಿಂದ ಹಾಗೂ ಮುಂದೆ ಎಲ್ಲ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ. ಭಾಷಾ ಶಿಕ್ಷಣ ವ್ಯವಸ್ಥೆ

ಪ್ರಥಮಭಾಷೆ

ದ್ವಿತೀಯಭಾಷೆ

ತೃತೀಯಭಾಷೆ

ಕನ್ನಡ ಏಕೈಕ ಕಡ್ಡಾಯದ ಭಾಷೆ
ಅಂಕಗಳು ೧೫೦ ಅಂಕಗಳು ೧೦೦

ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದು ದ್ವಿತೀಯಭಾಷೆಯೆಂದು ಆಯ್ದುಕೊಂಡ
(ಅ) ಆಧುನಿಕ ಭಾರತೀಯ ಭಾಷೆಗಳು : ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು.
(ಆ) ಇಂಗ್ಲಿಷು
(ಇ) ಪ್ರಾಚೀನ ಭಾಷೆಗಳು: ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್.
ಅಂಕಗಳು ೫೦

ದ್ವಿತೀಯಭಾಷೆಯೆಂದು ಆಯ್ದುಕೊಂಡ ಭಾಷೆಯನ್ನು ಬಿಟ್ಟು ಉಳಿದ ಭಾಷೆಗಳಲ್ಲಿ ಒಂದು:
ದ್ವಿತೀಯಭಾಷೆಯ (ಅ), (ಆ) ಮತ್ತು (ಇ) ವರ್ಗಗಳೊಳಗಿಂದ ಆಯ್ದುಕೊಳ್ಳ ಬಹುದು.
ತೃತೀಯಭಾಷೆಯೂ ಕಡ್ಡಾಯ ಪರೀಕ್ಷಾ ಭಾಷೆ.

೧೧ (೩) (ಅ): ವಿಶಿಷ್ಟ ವಿಷಯ ಪರೀಕ್ಷಾ ವ್ಯವಸ್ಥೆ
ಎಸ್.ಎಸ್.ಎಲ್.ಸಿ. ಪರೀಕ್ಷೆ ನಂತರದ ಪರೀಕ್ಷೆ ಅಥವಾ ಜೊತೆಯಲ್ಲಿ ನಡೆಯುವ ಪರೀಕ್ಷೆ.
ಶಾಲೆಯಲ್ಲಿ ಬೋಧನೆ ಇಲ್ಲ
ಸ್ವತಂತ್ರ ಅಭ್ಯಾಸ ಮೇಲಿನ ಮೂರು ಅಂಕಣಗಳಲ್ಲಿಯೂ ಯಾವುದೇ ಒಂದು ಭಾಷೆ ಅಥವಾ ವಿಶೇಷ ವಿಷಯವನ್ನು ಅಭ್ಯಸಿಸಿ ಪರೀಕ್ಷೆ ತೆಗೆದು ಕೊಳ್ಳಬಹುದು.
ಅಂಕಗಳು : ೧೦೦
ಎಸ್.ಎಸ್.ಎಲ್.ಸಿಗಿಂತ ತುಸು ಹೆಚ್ಚಿನ ಮಟ್ಟ. ೧೯೮೧-೮೨ರಿಂದ ಮುಂದೆ ಎಸ್.ಎಸ್. ಎಲ್.ಸಿ ವರ್ಷದಲ್ಲಿಯೇ ಅಭ್ಯಾಸ.

ಪ್ರತ್ಯೇಕ ಅರ್ಹತಾಪತ್ರ

ಸುಪ್ತ ಚೇತನದ ಉದ್ದೀತನವೇ ಗುರಿ.

೧೯೮೧-೮೨ರಿಂದ ೧೯೮೫-೮೬ ರ ವರೆಗೆ ಗ್ರಾಹ್ಯವೆಂದು ಸೂಚಿಸಿದ ತಾತ್ಪೂರ್ತಿಕ ವ್ಯವಸ್ಥೆಯ ಎರಡು ನಕ್ಷೆಗಳು ಕನ್ನಡೇತರ ವಿದ್ಯಾರ್ಥಿಗಳಿಗಾಗಿ

ಪ್ರಥಮಭಾಷೆ

ದ್ವಿತೀಯಭಾಷೆ

ತೃತೀಯಭಾಷೆ
ಕನ್ನಡ : ಅಂಕಗಳು-೧೫೦
(ಕನ್ನಡ ಶಿಕ್ಷಕರಿಲ್ಲದ ಮೂಲಕ ಪ್ರಾಥಮಿಕ ೩ನೆಯ ಇಯತ್ತೆಯಿಂದ ಕನ್ನಡ ಕನ್ನಡೇತರ ವಿದ್ಯಾರ್ಥಿಗಳು ಕನ್ನಡ ಕಲಿತಿಲ್ಲ. ಕಾರಣ ೧೯೮೧-೮೨ರಿಂದ ಕನ್ನಡವನ್ನು ಕಡ್ಡಾಯವಾಗಿ ೩ನೆಯ ಇಯತ್ತೆಯಿಂದ ಕಲಿಯಲು ಪ್ರಾರಂಭಿಸಿದ ವಿದ್ಯಾರ್ಥಿಗಳು ೧೯೮೬-೮೭ ರಲ್ಲಿ ೮ನೆಯ ಇಯತ್ತೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯೆಂದು (೧೫೦ ಅಂಕಗಳು) ತೆಗೆದು ಕೊಳ್ಳುತ್ತಾರೆ.

ಅಲ್ಲಿಯವರೆಗೆ ತಮ್ಮ ಮಾತೃಭಾಷೆಯನ್ನು (ತಮಿಳು, ತೆಲುಗು, ಮಲೆ ಕನ್ನಡವನ್ನು ದ್ವಿತೀಯ ಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ ವಿಷಯವನ್ನಾಗಿ ತೆಗೆದುಕೊಳ್ಳುತ್ತಾರೆ. ಹಾಗೂ ಕನ್ನಡವನ್ನು ವರ್ಷಾನು ವರ್ಷ ಕಲಿತು ೧೯೮೬-೮೭ರಲ್ಲಿ ಪ್ರಥಮ ಭಾಷೆಯಾಗಿಸಿಕೊಳ್ಳುತ್ತಾರೆ. ೧೯೮೬-೮೭ರ ವರೆಗೆ ಕನ್ನಡೇತರ ವಿದ್ಯಾರ್ಥಿಗಳು ೪ನೆಯ ಇಯತ್ತೆಯಲ್ಲಿ ಕನ್ನಡವನ್ನು ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ ಕಲಿಯುತ್ತಾರೆ. ಅಂಕಗಳು ೧೦೦
ಕನ್ನಡ
ಇಲ್ಲವೆ
ಇಂಗ್ಲಿಷು
ಇಲ್ಲವೆ
(ಇ) ಒಂದು ಪ್ರಾಚೀನ ಭಾಷೆ (ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್) ಅಂಕಗಳು: ೫೦
ಕನ್ನಡ
ಇಲ್ಲವೆ
ಇಂಗ್ಲಿಷು
ಇಲ್ಲವೆ
(ಇ) ಒಂದು ಪ್ರಾಚೀನ ಭಾಷೆ (ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್)

ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳುವವರಿಗೆ ಅದು ತೃತೀಯ ಭಾಷೆಯಾಗಿ ಕಡ್ಡಾಯದ ಪರೀಕ್ಷಾ ವಿಷಯವಾಗಿರುತ್ತದೆ.

ಕನ್ನಡ ವಿದ್ಯಾರ್ಥಿಗಳಿಗಾಗಿ ೧೯೮೧-೮೬ರವರೆಗೆ ಮಾಡಿದ ಭಾಷಾಭ್ಯಾಸ ವ್ಯವಸ್ಥೆ

ಪ್ರಥಮಭಾಷೆ

ದ್ವಿತೀಯಭಾಷೆ

ತೃತೀಯಭಾಷೆ

ಕನ್ನಡ ಏಕೈಕ ಕಡ್ಡಾಯದ ಭಾಷೆ
ಅಂಕಗಳು ೧೫೦ ಅಂಕಗಳು ೧೦೦

ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದು
(ಅ) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಇಲ್ಲವೆ,
(ಆ) ಇಂಗ್ಲಿಷು ಇಲ್ಲವೆ
(ಇ) ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್. ಅಂಕಗಳು: ೫೦
ಕೆಳಗಣ ಭಾಷೆಗಳಲ್ಲಿ ಒಂದು:
(ಅ) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು ಹಿಂದೀ ಇಲ್ಲವೆ
(ಆ)ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್
ಇಲ್ಲವೆ
ಗ್ರೀಕ್

ಕನ್ನಡ ಹಾಗು ಕನ್ನಡೇತರ ವಿದ್ಯಾರ್ಥಿಗಳಿಗೆ ೧೯೮೧-೮೬ರವರೆಗೆ ಹಾಗೂ ಮುಂದೆ ಸರ್ವ ಸಾಧಾರಣವಾದ ವಿಶಿಷ್ಟ ವಿಷಯಾ ಪರೀಕ್ಷಾ ವ್ಯವಸ್ಥೆ

ಪ್ರಥಮಭಾಷೆ

ದ್ವಿತೀಯಭಾಷೆ

ತೃತೀಯಭಾಷೆ
ಎಸ್.ಎಸ್.ಎಲ್.ಸಿ ಪರೀಕ್ಷೆಯ ಜೊತೆಗೆ ಅಥವಾ ಅನಂತರದ ಪರೀಕ್ಷೆ ಶಾಲೆಯಲ್ಲಿ ಬೋಧನ ಇಲ್ಲ. ಸ್ವತಂತ್ರ ಅಭ್ಯಾಸ. ಪ್ರಥಮ-ದ್ವಿತೀಯ-ತೃತೀಯ ಭಾಷೆಗಳಾಗಿ ಉಲ್ಲೇಖಗೊಂಡ ಯಾವುದೇ ಒಂದು ಭಾಷೆ ಅಥವಾ ವಿಷಯ ಆರಿಸಿಕೊಂಡು ವಿದ್ಯಾರ್ಥಿ ಪರೀಕ್ಷೆಗೆ ತೆಗೆದುಕೊಳ್ಳಬಹುದು. ೧೦೦ ಅಂಕಗಳು ಎಸ್.ಎಸ್.ಎಲ್.ಸಿ. ಗಿಂತ ತುಸು ಹೆಚ್ಚಿನ ಮಟ್ಟ ಎಸ್.ಎಸ್.ಎಲ್.ಸಿ ವರ್ಷದಲ್ಲಿಯೇ ಅಭ್ಯಾಸ ಪ್ರತ್ಯೇಕ ಅರ್ಹತಾ ಪತ್ರ. ಸುಪ್ತ ಚೇತನದ ಉದ್ದೀಪನವೇ ಗುರಿ.

ಕೆಲವು ವಿವರಣೆಗಳು
(೧) ತಾತ್ಪೂರ್ತಿಕ ವ್ಯವಸ್ಥೆ
೧೯೮೧ ರಿಂದ ೧೯೮೬ರ ವರೆಗೆ ಮಾಡಿದ ತಾತ್ಪೂರ್ತಿಕ ವ್ಯವಸ್ಥೆಗೂ ಸಮಿತಿಯ ಮುಖ್ಯ ಸಲಹೆಗಳ ಪ್ರಕಾರ ಒಡನೆ ಪ್ರಾರಂಭವಾಗಿ ಹಾಗೆಯೇ ಮುಂದುವರಿಯಬೇಕಾದ ವ್ಯವಸ್ಥೆಗೂ ಇರುವ ಅಂತರಗಳಿಷ್ಟು.

(ಅ) ಕನ್ನಡೇತರ ವಿದ್ಯಾರ್ಥಿಗಳ ಮಾತೃಭಾಷೆಯ (ತಮಿಳು ಮುಂತಾದ) ಅಭ್ಯಾಸ ೧೫೦ ಅಂಕಗಳು ಮಟ್ಟದಿದ್ದು ಕನ್ನಡ ಭಾಷೆಯನ್ನು ಅವರು ೧೦೦ ಇಲ್ಲವೆ ೫೦ ಅಂಕಗಳ ವಿಷಯವನ್ನಾಗಿ, ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ, ೧೯೮೫-೮೬ನೆಯ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಅಭ್ಯಸಿಸುತ್ತಾರೆ. ದ್ವಿತೀಯ ಭಾಷೆಯಾಗಿ ವಿದ್ಯಾರ್ಥಿಗಳು ಬಹುತೇಕ ಇಂಗ್ಲೀಷನ್ನು ಅಭ್ಯಸಿಸುವ ಕಾರಣವಾಗಿ, ಅವರು ಕನ್ನಡವನ್ನು ತೃತೀಯ ಭಾಷೆಯಾಗಿ ವ್ಯಾಸಂಗಕ್ಕಾಗಿ ಎತ್ತಿಕೊಳ್ಳಬಹುದು. ಈ ಅವಧಿಯಲ್ಲಿ ಸಹ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸುವ ಕನ್ನಡೇತರ ವಿದ್ಯಾರ್ಥಿಗಳೂ ಇರಬಹುದು. ಅಂಥವರ ಸಲುವಾಗಿ ಕನ್ನಡವನ್ನು ದ್ವಿತೀಯ ಭಾಷೆಗಳ ಮಾಲಿಕೆಯಲ್ಲಿ ಸೇರಿಸಲಾಗಿದೆ. ಏನೇ ಇರಲಿ ಈ ಅವಧಿಯಲ್ಲೆಲ್ಲ-೧೯೮೧-೮೨ರಲ್ಲಿ ಪ್ರಾಥಮಿಕ ೩ನೆಯ ಇಯತ್ತೆಯಲ್ಲಿ ಕನ್ನಡದ ಅಭ್ಯಾಸವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳು ವರ್ಷಾನುವರ್ಷ ಆ ವಿಷಯವನ್ನು ಅಭ್ಯಸಿಸಿ ೧೯೮೬-೮೭ರಲ್ಲಿ ೧೫೦ ಅಂಕಗಳ ಕನ್ನಡ ವಿಷಯವನ್ನು ಅಭ್ಯಸಿಸಲು ಅರ್ಹರಾಗುತ್ತಾರೆ. ಆ ವರ್ಷದಿಂದ ಕನ್ನಡದ ವಿಷಯದಲ್ಲಿ ಮಾಡಿದ ಸಲಹೆಯು ಪೂರ್ಣ ಜಾರಿಯಲ್ಲಿ ಬರುತ್ತದೆ.

(ಆ) “ಕನ್ನಡವನ್ನುಳಿದ ಆಧುನಿಕ ಭಾರತೀಯ ಭಾಷೆಗಳು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಹಿಂದೀ, ಉರ್ದು) ಇಂಗ್ಲೀಷು, ಮತ್ತು ಪ್ರಾಚೀನ ಭಾಷೆಗಳ ಒಂದು ಪಟ್ಟಿ ಮಾಡಬೇಕು. (ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್) ಈ ಭಾಷೆಗಳಲ್ಲಿ ಒಂದನ್ನು ದ್ವಿತೀಯ ಭಾಷೆಯಾಗಿ ಆಯ್ದುಕೊಳ್ಳಬಹುದು. ದ್ವಿತೀಯ ಭಾಷೆಗೆ ೧೦೦ ಅಂಕಗಳು ಇರುತ್ತವೆ. ಇವುಗಳಲ್ಲಿ ಇನ್ನೊಂದು ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ದುಕೊಳ್ಳಬಹುದು. ತೃತೀಯ ಭಾಷೆಗೆ ೫೦ ಅಂಕಗಳಿರುತ್ತವೆ.” ಈ ಸಲಹೆಗೂ ಸಮಿತಿಯು ಸೂಚಿಸಿದ ತಾತ್ಪೂರ್ತಿಕ ಭಾಷಾ ವ್ಯವಸ್ಥೆಗೂ ಅಂತರಗಳಿವೆ. ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಮಾಡಿದ ತಾತ್ಪೂರ್ತಿಕ ವ್ಯವಸ್ಥೆಯಲ್ಲಿ ಕನ್ನಡವನ್ನು ಮೂರು ಅಂಕಣಗಳಲ್ಲಿಯೂ ಕಾಣಿಸಬೇಕಾಗಿದೆ. ೧೫೦ ಅಂಕಗಳ ಕನ್ನಡವನ್ನು ಕನ್ನಡಿಗ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಇವರು ಕನ್ನಡ ಮಾತೃಭಾಷೆ ಇದ್ದವರಾಗಬಹುದು., ಇಲ್ಲವೆ ಅನ್ಯಭಾಷೆ ಮಾತೃಭಾಷೆ ಇದ್ದರೂ ಕನ್ನಡ ನಾಡಿನಲ್ಲಿ ನೆಲೆಸಿದವರಾಗಬಹುದು. ಕನ್ನಡೇತರ ವಿದ್ಯಾರ್ಥಿಗಳಿಗಾಗಿ ೧೦೦ ಹಾಗೂ ೫೦ ಅಂಕಗಳ ಕನ್ನಡವನ್ನು ತಾತ್ಪೂರ್ತಿಕವಾಗಿ ದ್ವಿತೀಯ ಹಾಗೂ ತೃತೀಯ ಭಾಷೆಯೆಂದು ಸೇರಿಸಲಗಿದೆ. ೧೯೮೬-೮೭ನೇ ಶೈಕ್ಷಣಿಕ ವರ್ಷದಿಂದ ಇವೆರಡೂ ಕನ್ನಡಗಳೂ ಇಲ್ಲವಾಗಿ ೧೫೦ ಅಂಕಗಳ ಏಕೈಕ ಕನ್ನಡವು ಎಲ್ಲರಿಗೂ ಕಡ್ಡಾಯದ ಪ್ರಥಮಭಾಷೆ ಆಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿತ್ತಲು ಕಲಿಸಿದ ಪಾಠ
Next post ಸ್ನೇಹ ಸಂಗಮ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…