Home / ಲೇಖನ / ಭಾಷೆ / ‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

ಕಪ್ರೋಸಂ ಎಂದರೇನು? ಯಾವುದೇ ಕನ್ನಡ ನಿಘಂಟಿನಲ್ಲೂ ಕಾಣಿಸದ ಒಂದೇ ಒಂದು ಶುದ್ಧ ಕನ್ನಡ ಪದ. ಅದು “ಕನ್ನಡಿಗರ ಉನ್ನತ ಸಾಧನೆಗಾಗಿ ಪ್ರೋತ್ಸಾಹ ಮತ್ತು ಸಂಶೋಧನ ಕೇಂದ್ರ” ಎಂಬುದರ ಸಂಕ್ಷಿಪ್ತರೂಪ.

ಇಂದಿನ ಕನ್ನಡ ಯುವಕರು ತಮ್ಮ ಪದವಿ ಮತ್ತು ಡಿಪ್ಲೋಮಾ ಶಿಕ್ಷಣವನ್ನು ಮುಗಿಸಿದ ಮೇಲೆ ತತ್ಷಣವೇ ಒಂದು ನಿಷ್ಫಲಪರಿಸರವನ್ನು ಪ್ರವೇಶಿಸುವಂತಾಗುತ್ತದೆ. ನೌಕರಿಗಳಿಲ್ಲ, ಉದ್ಯಮ ಚಟುವಟಿಕೆಯಿಲ್ಲ, ಹತ್ತಿರದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೌಕರ್ಯಗಳಿಲ್ಲ ಮತ್ತು ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿಲ್ಲ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ಸೌಕರ್ಯಗಳಿಲ್ಲ.

೧೦,೦೦೦ ನೌಕರಿಗಳನ್ನು ಸೃಷ್ಟಿಸುವ ದೊಡ್ಡ ಕಾರ್ಖಾನೆಗಳನ್ನು ಕಟ್ಟುತ್ತೇವೆ. ದುರ್ದೈವದಿಂದ ಅವುಗಳಲ್ಲಿ ೧೦೦೦ ಕನ್ನಡಿಗರಿಗೆ ಮಾತ್ರ ನೌಕರಿ ದೊರೆಯ ಬಹುದು. ರೇಲ್ವೆ ಇಲಾಖೆಯಲ್ಲಿ, ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ನೌಕರಿ ದೊರೆಯುವುದು ಕಷ್ಟವಾಗಿದೆ. ‘ಕಪ್ರೋಸಂ’ ಕಂಡುಕೊಂಡಿದ್ದೇನೆಂದರೆ ನೌಕರಿಗಳಿಗೆ ಆಯ್ಕೆ ಮಾಡಲು ಎಲ್ಲೆಲ್ಲಿ ಸ್ಪರ್ಧಾ ಪರೀಕ್ಷೆಗಳು ನಡೆದಿವೆಯೋ ಅಲ್ಲಿ ಕನ್ನಡಿಗರ ನಿರ್ವಹಣೆಯು ತೃಪ್ತಿಕರವಾಗಿರಲಿಲ್ಲ. ತತ್ಫಲವಾಗಿ ಪ್ರತಿ ವರ್ಷವೂ ಸಾವಿರಾರು ಕನ್ನಡಿಗರಿಗೆ ಹುದ್ದೆಗಳು ಕಳೆದುಹೋಗುತ್ತಿವೆ. ಹೊರಗಿನವರು ಅವುಗಳನ್ನು ಪಡೆದು ಕೊಂಡು ಸುಖವಾಗಿದ್ದಾರೆ. ಪಿಯುಸಿ ಅಥವಾ ಡಿಗ್ರಿ ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಉತ್ತಮಿಕೆಯನ್ನು ತೋರಿಸುವುದು ಹೇಗೆಂಬ ಬಗ್ಗೆ ಅಧ್ಯಯನ ವಿಷಯವೊಂದಿರಬೇಕು. ಇದು ಕನ್ನಡಯುವಕರಿಗೆ ಅತ್ಯಂತ ತುರ್ತಾದ ಆವಶ್ಯಕತೆಯಾಗಿದೆ. ನಕಾರಾತ್ಮಕ ವಾತಾವರಣದ ಕಾರಣ ಕನ್ನಡ ಯುವಕರು ಕೀಳರಿಮೆಯನ್ನು ಬೆಳೆಸಿಕೊಳ್ಳುವುದು ಕನ್ನಡ ಸಮಾಜಕ್ಕೆ ಒಳ್ಳೆಯದಲ್ಲ. ಈ ಕಾಲದ ಕನ್ನಡಯುವಕರ ಮೇಲೆ ಎರಡು ಆಪಾದನೆಗಳಿವೆ. ಎರಡೂ ಗಂಭೀರ ವಾದವುಗಳೇ. ಒಬ್ಬ ವಿವಿ‌ಐಪಿ ಅವರನ್ನು ಕೊಳಕು ಜನವೆಂದೂ ಇನ್ನೊಬ್ಬಾತ ಅವರನ್ನು ತಲೆಬಾಗುವ ಸಾಧುಗಳೆಂದೂ ಕರೆದಿದ್ದಾರೆ. ಆ ಇಬ್ಬರೂ ವಿಶಿಷ್ಠ ವ್ಯಕ್ತಿಗಳಾಗಿದ್ದು ಒಂದು ಜನಸಮುದಾಯವನ್ನು ಅಂದಾಜು ಮಾಡಲು ತಿಳಿದವರಾಗಿದ್ದಾರೆ. ಇಂದಿನ ತಲೆಮಾರಿನವರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಿದ್ದಿಕೊಳ್ಳುವ ಕೆಲಸವನ್ನು ಮಾಡಬೇಕು. ನಮ್ಮ ತಲೆಮಾರಿ ನವರೂ ಇಂತಹ ನಕಾರಾತ್ಮಕ ಟೀಕೆಗಳನ್ನು ಪಡೆದಿದ್ದರೂ ಅವುಗಳನ್ನು ಗಂಭೀರವಾಗಿ ಎಣಿಸದ ದುರ್ದೈವದಿಂದ ತಿದ್ದಿಕೊಂಡು ಉತ್ತಮಪಡಿಸಿಕೊಂಡು ಒಳ್ಳೆಯ ಬಿಂಬವನ್ನು ಮೂಡಿಸುವ ಪ್ರಯತ್ನದ ಬಗ್ಗೆ ನಮ್ಮ ತಲೆಮಾರು ಆಲೋಚಿಸಲಿಲ್ಲ. ನಕ್ಕು ಸಹಿಸಿಕೊಂಡು ಹೋಗುವ ಮನೋಭಾವವನ್ನು ಅಳವಡಿಸಿಕೊಂಡೆವು. ಅಪಜಯ ಸ್ವೀಕಾರದ ಸೌಮ್ಯ ಸ್ವರೂಪವಾಗಿತ್ತು. ಮುಂದಿನ ತಲೆಮಾರಿನವರಿಗೂ ಕೊರತೆಗಳನ್ನು ವರ್ಗಾಯಿಸಿದೆವು. ಕನ್ನಡ ಜನರನ್ನು ಆವರಿಸಿರುವ ನಿಷೇಧಾತ್ಮಕ ಬಿಂಬಗಳನ್ನು ಮುಂದಿನ ಜನಾಂಗಕ್ಕೂ ವರ್ಗಾಯಿಸದಂತೆ ಮಾಡುವ ಭಾರಿ ಜವಾಬ್ದಾರಿಯೂ ಇಂದಿನ ತಲೆಮಾರಿನ ಮೇಲಿದೆ.

‘ಕಪ್ರೋಸಂ’ ಪ್ರಕಾರ ಕನ್ನಡಿಗರ ನಮ್ರತೆಗೆ ಕನ್ನಡಿಗರಲ್ಲಿರುವ ಉದ್ಯಮ ಚಟುವಟಿಕೆಯ ಅಭಾವವು ಒಂದು ಕಾರಣವಾಗಿದೆ.

ಕನ್ನಡ ಜನರಿಗೆ ’ಕಪ್ರೋಸಂ’ ಒಂದು ಕಿರುಕಾಣಿಕೆ. ತನ್ನ ಜೀವನದ ಒಂದು ಭಾಗವಾಗಿ ಅದನ್ನು ಪ್ರತಿ ಕನ್ನಡಿಗನೂ ಪಡೆದುಕೊಂಡಿರಬೇಕು. ಕನ್ನಡ ಜನ ಮನಃ ಸ್ಥೈರ್ಯ ಈಗ ಕೆಲ್ವಿನ್ ಶೂನ್ಯದಲ್ಲಿರಬಹುದು. ಆದರೆ ಕಪ್ರೊಸಂನ ಅವಳಿ ಉದ್ದೇಶ್ಯಗಳಾದ ಉನ್ನತ ಸಾಧನೆಗಳಿಗಾಗಿ ಸತತ ಪ್ರಯತ್ನ ಮತ್ತು ಉತ್ಕೃಷ್ಟ ಸಾಧನೆಗಳಿಗಾಗಿ ಸತತ ಸಂಶೋಧನೆ ಇವುಗಳು ಕನ್ನಡಿಗರನ್ನು ಉತ್ತುಂಗ ಶಿಖರದಲ್ಲಿ ಮತ್ತು ಚಾನಲ್ ೩೦ರಲ್ಲಿ ಇರಿಸುತ್ತವೆ. ೨೧ನೇ ಶತಮಾನ ಕನ್ನಡ ಜನರ ಶತಮಾನವಾಗಿ ಮಾಡಲು ಕಪ್ರೋಸಂ ಮೂಲಕ ಸಾಧ್ಯವಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...