ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ
ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ
ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು
ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ
ಚೆಲ್ಲುವುದು ಎಂದು ಹೇಗೆ ಹೇಳು ಹೇಳು.
*****