ಕೆರೂರ ವಾಸುದೇವಾಚಾರ್‍ಯ

#ಸಣ್ಣ ಕಥೆ

ಗುಲ್ಬಾಯಿ

0

ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ ಔಷಧಾಲಯದ ಬಳಿಯಲ್ಲಿಯೇ ಇರುವದೊಂದು ಮನೆ ಹಿಡಿಯುವದು ನಮಗೆ ಅವಶ್ಯವಾಗಿತ್ತು. ಅಂಥ ಪ್ರಶಸ್ತವಾದ ಮನೆ ದೊರಕಿಲ್ಲದು. ಪ್ರಶಸ್ತವಾದದೊಂದು ಬಂಗಲೆ ಮಾತ್ರ ನಮಗೆ ಅನುಕೂಲವಾಗಿತ್ತು. ಆದರೆ ಅದರ ಯಜಮಾನನು ಅದನ್ನು […]

#ಸಣ್ಣ ಕಥೆ

ಮಲ್ಲೇಶಿಯ ನಲ್ಲೆಯರು

0

ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ ಅಲ್ಲಿಯ ಕಾವಲುಗಾರನಾದ ಮಲ್ಲೇಶಿಯು ತನ್ನ ಯಜಮಾನರನ್ನು ತೋಟದಲ್ಲೆಲ್ಲ ಅಡ್ಡಾಡಿಸಿಕೊಂಡು ಬಂದನು. ಮಲ್ಲೇಶಿಯ ದಕ್ಷತೆಗಾಗಿ ಆ ತೋಟದಲ್ಲಿ ಕಾಗೆ ಗುಬ್ಬಿಗಳು ಕೂಡ […]

#ಸಣ್ಣ ಕಥೆ

ಪ್ರಕೃತಿಬಲ

0

ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು ನೋಡತಕ್ಕದ್ದು, ನಿಮ್ಮೋನ್ನತಾಂಗಿಯಾದ ಆ ನಗರಲಕ್ಷ್ಮಿಯು ಪುಷ್ಪಹಾಸೆಯಾದ ವನದೇವತೆಯಿಂದ ಸಮೇತಳಾಗಿ ಅನೇಕ ಪ್ರಕಾರದ ಅಲಂಕಾರಗಳನ್ನು ಧರಿಸಿ ದಕ್ಷಿಣದ ರಾಣಿ ತಾನೆಂಬ ಬಿಂಕದಿಂದ ಮೆರೆಯುತ್ತಿದ್ದಳು. ಸಂಪಿಗೆ, ಬಕುಲ, ಪಾರಿಜಾತಾದಿ ಮಕರಂದಮಯವಾದ […]

#ಸಣ್ಣ ಕಥೆ

ಪ್ರಥಮ ದರ್ಶನದ ಪ್ರೇಮ

0

ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ ಸಕಲ ಪುಷ್ಟ ಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ ಆ ನಗರಕ್ಕೆ ಕುಸುಮಪುರವೆಂಬ ಹೆಸರು. ಈ ವಿಶೇಷವಾದ ಗುಣಕ್ಕಾಗಿಯೇ ಚಿತ್ರರಥಾದಿ ಗಂಧರ್ವರು ಮೆಚ್ಚಿ ಆ ಸ್ಥಳದಲ್ಲಿ ಮನಸೋತು ವಿಹಾರ ಮಾಡುತ್ತಿದ್ದರೆಂದು […]