ವಚನ ವಿಚಾರ – ಪುರುಷತ್ವ
ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ [ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ, ಕಳ-ಅಖಾಡ] ಅಕ್ಕ ಮಹಾದೇವಿಯ...