ವಚನ ವಿಚಾರ – ಕೊಟ್ಟ ಕುದುರೆ

ವಚನ ವಿಚಾರ – ಕೊಟ್ಟ ಕುದುರೆ

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ
ನೆರೆ ಮೂರು ಲೋಕವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ

ಅಲ್ಲಮನ ವಚನ. ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ. ಇದು ವೀರರ ಲಕ್ಷಣವೂ ಅಲ್ಲ, ಧೀರರ ಲಕ್ಷಣವೂ ಅಲ್ಲ.

ತೆಂಗಿನ ಮರ ತಾನು ಹುಣಿಸೆ ಮರವಾಗಬೇಕಿತ್ತು, ಮಲ್ಲಿಗೆ ಗಿಡವಾಗಬೇಕಿತ್ತು ಎಂದು ಬಯಸುತ್ತದೆಯೇ? ನಾವೆಲ್ಲರೂ ಈಗ ಇರುವುದಕ್ಕಿಂತ ಬೇರೆ ಏನೋ ಆಗಬೇಕೆಂದು ಹಂಬಲಿಸುತ್ತ ಅಂಥ ಹಂಬಲದಲ್ಲೇ ಬದುಕನ್ನು ಕಳೆದುಬಿಡುತ್ತೇವಲ್ಲ! ಇಂಥ ಹಂಬಲವೇ ಎಸ್ಕೆಪಿಸಂ ಅಲ್ಲವೆ? ಇರುವ ಸತ್ಯವನ್ನು ಒಪ್ಪಿಕೊಳ್ಳದೆ ಇಷ್ಟವಾಗುವ ಸತ್ಯವನ್ನು, ಪ್ರಿಯವಾಗುವ ಸತ್ಯವನ್ನು ಬರಿದೇ ಹುಡುಕುತ್ತ ಬಳಲುತ್ತೇವೆ. ಹಾಗೆ ಬಳಲುವುದೇ ನಮ್ಮ ದೊಡ್ಡಸ್ತಿಕೆ ಎಂದು ಭ್ರಮಿಸುತ್ತೇವೆ. ವೀರರು, ಧೀರರು ಆದವರು ತಮ್ಮ ಸತ್ಯವನ್ನು ಒಪ್ಪಿಕೊಂಡು ತಮ್ಮ ಪಾಲಿಗೆ ಬಂದ ಕುದುರೆಯನ್ನು ಪಳಗಿಸಿಕೊಳ್ಳಬೇಕು ಅಲ್ಲವೆ? ಇದು `ಆಗುವ’ ಇಂಗ್ಲಿಷಿನಲ್ಲಿ ಬಿಕಮಿಂಗ್ ಅನ್ನುತ್ತಾರಲ್ಲ ಆ ತತ್ವವಲ್ಲ, `ಇರುವ’ ಇಂಗ್ಲಿಶಿನಲ್ಲಿ ಬೀಯಿಂಗ್ ಅನ್ನುವ ತತ್ವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರಾ ಪರಿಣಯ
Next post ಆಧುನಿಕ ಅಹಲ್ಯೆಯರು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…