ರಾಮಲಿಂಗ ದೇವಾಲಯ

ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ-
ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ
ರಾಮೇಶ್ವರವೆ ಆಗುತದು ಭರತಖಂಡದಲಿ
ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ
ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ
ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ
ಮೂಡಲಿಹ ಕೊನೆಯ ಲಿಂಗವನಳಿಸಿ! ದಿಂಡದಲಿ
ಎಲ್ಲ ಲಿಂಗಗಳರಳಿ ಮುಡಿಗೆ ಬರೆ,- ಹೋಯ್ತು, ಹದ!

ಸುತ್ತಲೊಂಭೈನೂರು ತೊಂಭತ್ತೊಂಭತ್ತು!
ಇರಲೇನು? ಸಾವಿರಕೆ ಬರಿ ಒಂದು ಕಡಿಮೆಯಿರೆ
ಗಣಿತವಾಯಿತು ವ್ಯರ್‍ಥ ಗಿಡಗಂಟೆಯದು ಸುತ್ತ
ಬೆಳೆದಿಹುದು. ದೇಗುಲವ ನೋಡಬಯಸುವರಿಲ್ಲ
ಸಮೃದ್ಧಿಗೂ,-ಅಮೃತಸಿದ್ದಿಯು ಕೊನೆಗೆ ಬಾರದಿರೆ,-
ಇಡಿಯ ಜನ್ಮವೆ ವ್ಯರ್‍ಥ. ಇದನ್ನು ಬಲ್ಲವ ಬಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನತುಂಬ ಮಳೆಬಿಲ್ಲು ಅತ್ತಿ ಬಾರ
Next post ಕಾಡುತಾವ ನೆನಪುಗಳು – ೮

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…