ಏಡಿ ಮತ್ತು ಧವಳಪ್ಪನ ಗುಡ್ಡ

ಗಿಡ್ಡಜ್ಜ ಚಂದ್ರವಳ್ಳಿ ಕೆರೆ ಏರಿಯ ಮೇಲೆ ಕುಂತು ಗಾಣ ಹಾಕಿ ಬಲಗೈಯಿಂದ ಅವಾಗವಾಗ ಮೇಲಕ್ಕೆತ್ತುತ್ತಾ ಕೆಳಕ್ಕೆ ಬಿಡುತ್ತಾ ಮೀನು ಸಿಕ್ಕಿದೆಯೇ ಎಂದು ಪರೀಕ್ಷಿಸುತ್ತಿದ್ದ ಕಿವಿಯ ಬಳಿಯೇ ಎಡೆಬಿಡದೇ ಗುಯ್ಗುಟ್ಟುತ್ತಿದ್ದ ಸೊಳ್ಳೆಗಳನ್ನೂ ತಲೆಯ ಸುತ್ತಲೂ ಎಲ್ಲಿ ಹೋದರೂ ಬಿಡದಂತೆ ಸುತ್ತುಹಾಕುತ್ತಿರುವ ನೊಣಗಳನ್ನೂ ತನ್ನ ಮೊಣಕೈವರೆಗೆ ಮಾತ್ರವಿದ್ದ ಎಡಗೈಯಿಂದ ಬೆದರಿಸುತ್ತಿದ್ದ ಆದರೆ ಅವನ ಗಮನವೆಲ್ಲಾ ಏರಿಯ ರಿವೆಟ್ಮೆಂಟ್ ಕಲ್ಲುಗಳ ಸಂದಿಯಿಂದ ಹೊರ ಬರುವ ಕಲ್ಲೇಡಿಗಳ ಕಡೆಗೇ ಇತ್ತು ಹುಲ್ಲೇಡಿ ಮಣ್ಣೇಡಿಗಿಂತ ಕಲ್ಲೇಡಿಯ ರುಚಿಯೇ ರುಚಿ ತಲೆ ಕಾಲು ಮಟನ್ ಥರಾ ಅನ್ನೋದು ಅವನ ಬಲವಾದ ನಂಬಿಕೆಯಾಗಿತ್ತು

ನೀರಿನ ಮಟ್ಟಕ್ಕಿಂತಲೂ ಅರ್ಧ ಅಡಿ ಕೆಳಗೆ ಎಂತದೋ ಕರ್ರನೆಯ ವಸ್ತು ಚಲಿಸಿದಂತಾಗಿ ಸರ್ರನೆ ಅತ್ತ ಕಣ್ಣನ್ನು ಕೇಂದ್ರೀಕರಿಸಿದ ಗಾಣದ ಕಡ್ಡಿಯನ್ನು ಆ ಕಡೆಗೆ ಎಸೆದು ಅರೆ ನಿಂತ ಭಂಗಿಯಲ್ಲೇ ಕೆಳಗಿಳಿದುಬಂದ ಛಕ್ಕನೆ ಕೈಹಾಕಲೂ ಭಯ ಅದು ಹಾವಾಗಿದ್ದರೆ ಎಂಬ ಅಳುಕು ಆದರೂ ಅದು ಇನ್ನಷ್ಟು ಚಲಿಸಲಿ ಎಂದು ಕಾದು ಕುಳಿತ ಮುಖಕ್ಕಿಂತಲೂ ಮುಂದೆ ಇರುವ ಕೊಂಬನ್ನು ಅತ್ತ ಇತ್ತ ಗತ್ತಿಂದ ಆಡಿಸುವ ಘೇಂಡಾಮೃಉಗದಂತೆ ಎರಡು ಕೊಂಡಿಗಳನ್ನು ಮುಂದೆ ಆಡಿಸುತ್ತಾ ದಾರಿ ಮಾಡಿಕೊಳ್ಳುತ್ತಾ ಹೊರಬಂದು ಕಾರಿನ ವೈಪರ್ ಥರಾ ಕಣ್ಣು ಆಡಿಸುತ್ತಾ ಯಾರೂ ವೈರಿಗಳು ಎದುರಿಗೆ ಇಲ್ಲವೆಂದುಕೊಂಡು ಇನ್ನೊಂದು ಕಲ್ಲು ಸಂದಿಗೆ ಅಡ್ಡಡ್ಡಲಾಗಿ ನಡೆಯಲಾರಂಭಿಸಿತು ಗಿಡ್ಡಜ್ಜಗೆ ಬೇಟೆ ಸಿಕ್ಕ ಖುಷಿಯಲ್ಲಿ ಗಾಣದ ಕಡ್ಡಿಯನ್ನು ಮರೆತು ಏಡಿಯನ್ನು ಹಿಡಿಯಲು ತಂತ್ರ ರೂಪಿಸಲಾರಂಭಿಸಿದ ಬರಿಗೈಯಲ್ಲಿ ಹಿಡಿಯಬೇಕೆಂದರೆ ಒಂದೋ ಹೊರಭಾಗದಿಂದ ಏಕಕಾಲದಲ್ಲಿ ಎರಡು ಕೈಯಿಂದ ಅದರ ಕೊಂಡಿಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು ಇಲ್ಲವೇ ಹಿಂದುಗಡೆಯಿಂದ ಅವುಚಿಕೊಳ್ಳಬೇಕು ಹಾಗೆ ಅವುಚಿಕೊಳ್ಳಲು ಇವನ ಕೈಯ ಅಗಲಕ್ಕಿಂತ ಅದರ ಕೊಂಡಿಗಳ ನಡುವಿನ ಅಂತರವೇ ವಿಶಾಲವಿದ್ದು ಎರಡೂ ಕಡೆಯಿಂದ ಆಕ್ರಮಣ ನಡೆಸುವ ಸಾಧ್ಯತೆ ಅಧಿಕವಿತ್ತು ಇನ್ನು ಎರಡು ಕೈಯ್ಯಿಂದ ಹಿಡಿಯೋಣವೆಂದರೆ ಗಿಡ್ಡಜ್ಜಗಿರುವುದು ಒಂದೇ ಕೈ ಎಡಗೈ ಮೊಣಕೈಗಿಂತ ಮುಂದೆ ಇರಲಿಲ್ಲ ಆದಾಗ್ಯೂ ತಕ್ಷಣಕ್ಕೆ ಕೈಗೆ ಸಿಕ್ಕ ಚೋಟುದ್ದದ ಕಡ್ಡಿಯನ್ನು ಅದರ ಒಂದು ಕೊಂಡಿಗೆ ಕೊಟ್ಟು ಇನ್ನೊಂದು ಕೊಂಡಿಯನ್ನು ಹಿಡಿದು ಏರಿ ಮೇಲಕ್ಕೆ ಎಸೆದು ಆ ಬಯಲಲ್ಲಿ ಅದನ್ನು ಹೇಗಾದರೂ ನಿಗ್ರಹಿಸಲು ನಿರ್ಧರಿಸಿದ್ದ ಹಾಗೆ ಮಾಡುವ ವೇಳೆಗಾಗಲೇ ಮೀನಿಗೆಂದು ಇಟ್ಟಿದ್ದ ಗಾಣ ಅತ್ತ ಇತ್ತ ಎಗರಾಡಲಾರಂಭಿಸಿತು ಎಲ್ಲಿ ಆ ಮೀನು ಗಾಣವನ್ನೂ ನೀರಿಗೆ ಎಳಕೊಂಡು ಬಿಡುತ್ತದೋ ಎಂಬ ಆತಂಕದಲ್ಲಿ ಅತ್ತ ಕೈಹಾಕಬೇಕೆನ್ನುವಷ್ಟರಲ್ಲಿ ಏಡಿಯು ತನ್ನ ಎಡಗಡೆಯ ಕೊಂಡಿಗೆ ಕೊಟ್ಟಿದ್ದ ಒಣಗಿದ ಕಡ್ಡಿಯನ್ನು ತನ್ನ ಇಕ್ಕಳದಂತಿರುವ ಕೊಂಡಿಯಿಂದ ಕತ್ತರಿಸಿ ಹಾಕಿ ಗಿಡ್ಡಜ್ಜನ ಕೈಬೆರಳುಗಳ ಮೇಲೆ ಆಕ್ರಮಣ ಮಾಡಿತು

ಎರಡೂ ಕೊಂಡಿಗಳೂ ಗಿಡ್ಡಜ್ಜನ ಎರಡು ಬೆರಳುಗಳನ್ನು ಹಿಡಿದು ಕ್ಷಣ ಮಾತ್ರದಲ್ಲಿ ರಕ್ತವನ್ನು ಜಿಗಣೆಯಂತೆ ಹೀರದೇ ಒರಚೆಲ್ಲಲಾರಂಭಿಸುತ್ತಿದ್ದಂತೆಯೇ ಎಲ್ಲಿ ತನ್ನ ಇರುವ ಒಂದು ಕೈನ ಬೆರಳುಗಳೂ ಕತ್ತರಿಸಿ ಹೋಗಿಬಿಡುವವೋ ಎಂಬ ಆತಂಕದಿಂದಲೂ ಕೈಕಾಲನ್ನು ಯದ್ವಾತದ್ವಾ ಬಡಿಯುತ್ತಾ ಕಿರುಚಾಡಲಾರಂಭಿಸಿದ ಆ ಚೀರಾಟಕ್ಕೆ ಚಂದ್ರವಳ್ಳಿ ನೋಡಲೆಂದು ಬರುತ್ತಿದ್ದ ಇಬ್ಬರು ಯುವಕರು ಏನಾಯಿತೋ ಎಂದು ಇವನ ರಕ್ಷಣೆಗೆ ಓಡೋಡಿ ಬಂದರು ಬಂದವರು ಏನು ಮಾಡುವುದೆಂದು ತಿಳಿಯದೇ ಒಬ್ಬೊಬ್ಬರೂ ಒಂದೊಂದು ಕೊಂಡಿಯನ್ನು ಹಿಡಿದು ಬಲವಂತದಿಂದ ಅದರ ಹಿಡಿತದಿಂದ ಬಿಡಿಸಿದರು

ಪಾಟೀಲನಂತೂ ಹಿತಾಚಿ ಯಂತ್ರದ ಕೈನಂತಿರುವ ಅದರ ಕೊಂಡಿಯ ಸಂರಚನೆಗೆ ಮನಸೋತು ಜೀವಂತವಾಗಿಯೋ ಸ್ಮಾರಕದಂತೆಯೋ ಒಟ್ಟಿನಲ್ಲಿ ಅದನ್ನು ತನ್ನ ಬಳಿ ಇಟ್ಟುಕೊಳ್ಳಬೇಕೆಂದುಕೊಂಡು ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗಿಂದ ನೈಲಾನ್ ದಾರವನ್ನು ತೆಗೆದು ಅದರ ಎರಡೂ ಕೊಂಡಿಗಳಿಗೂ ಕಟ್ಟಿ ಜೀರುಂಡೆಯಂತೆ ಉಯ್ಯಾಲೆ ಆಡಿಸುತ್ತಾ ಆಟವಾಡಲಾರಂಭಿಸಿದ ಓಬಳಪ್ಪ ತೋಟಹಾಳು ಗಿಡವನ್ನು ಹುಡುಕಿ ತಂದು ಅದರ ರಸವನ್ನ ಗಾಯದ ಮೇಲೆ ಹಿಂಡಿ ಮೆತ್ತೆಯಂತೆ ಆ ಸೊಪ್ಪನ್ನೇ ಮೆತ್ತಿ ತನ್ನ ಕರ್ಚೀಫಿಂದ ಬ್ಯಾಂಡೇಜು ಹಾಕಿದ

ಗಿಡ್ಡಜ್ಜ ರಕ್ತ ಸುರಿಯುವುದು ನಿಂತ ಮೇಲೆ ಆ ಇಬ್ಬರು ಯುವಕರ ಪರಿಚಯ ಕೇಳಿದ ಪಾಟೀಲ ತಾನು ಅಮೇರಿಕನ್ ಬೇಸ್ಡ್ ಕಂಪ್ಯೂಟರ್ ಕಂಪೆನಿಯಲ್ಲಿ ಉದ್ಯೋಗಿಯೆಂದೂ ತಿಂಗಳಿಗೆ ಎಂಟು ಸಾವಿರ ಡಾಲರ್ ಸಂಬಳವೆಂದೂ ಹೇಳಿದ ಎಂಟು ಸಾವಿರ ಡಾಲರ್ ಅಂದರೆ ಸುಮಾರು ನಾಲ್ಕು ಲಕ್ಷ ಗಿಡ್ಡಜ್ಜ ಆಶ್ಚರ್ಯದಿಂದ ಅವನನ್ನು ಮೇಲಿಂದ ಕೆಳಗಿನ ತನಕ ನೋಡಿದ ಸುಮಾರು ಇಪ್ಪತ್ತಾರೋ ಇಪ್ಪತ್ತೇಳೋ ವಯಸ್ಸಿರಬಹುದು ತೆಳ್ಳಗೆ ಉದ್ದಕ್ಕೆ ಇದ್ದ ಅವನ ಪ್ಯಾಂಟಿನ ತುಂಬಾ ಎಲ್ಲೆಂದರಲ್ಲಿ ಅಲ್ಲಾಡುತ್ತಿದ್ದ ಜೇಬುಗಳನ್ನು ನೋಡಿ ಮನಸ್ಸಿನಲ್ಲಿ ಏನೋ ಗೊಣಗಿಕೊಂಡು ಸುಮ್ಮನಾದ

ಓಬಳಪ್ಪ ಪಿಯುಸಿಯಲ್ಲಿ ತನ್ನ ಕ್ಲಾಸ್ಮೆಟ್ ಎಂತಲೂ ಅವನು ಇದೇ ಊರಿನವನೆಂತಲೂ ತನಗೆ ಈಗ ತಾನೇ ಚಿತ್ರದುರ್ಗದ ಕೋಟೆ ತೋರಿಸಿಕೊಂಡು ಬಂದನೆಂತಲೂ ಪರಿಚಯಿಸಿದ ಓಬಳಪ್ಪ ಮಾತ್ರ ತನಗೆ ಇಂಥದೊಂದು ಕೆಲಸ ಸಿಕ್ಕಲಿಲ್ಲವೆಂದು ಸರ್ಕಾರವನ್ನು ಬೈಯ್ಯಲಾರಂಭಿಸಿದ ಗಿಡ್ಡಜ್ಜ ಸುಮ್ಮನೇ ಅವನ ಮುಖ ನೋಡಿದ

ಓಬಳಪ್ಪ ತನ್ನ ಗೆಳೆಯಗೆ ಅಂಕಲಿ ಮಠವನ್ನು ತೋರಿಸಲು ಬಂದಿರುವುದಾಗಿಯೂ ಯಾರೂ ಗೈಡ್ ಇಲ್ಲದೇ ಇದ್ದರೆ ಒಳಗೆ ಹೋಗಿ ಹೊರಬರುವ ದಾರಿ ತಿಳಿಯದೇ ಇರುವುದರಿಂದ ದಯವಿಟ್ಟು ಸಹಾಯ ಮಾಡಬೇಕೆಂದು ಕೋರಿಕೊಂಡ ತಾವು ಸ್ಥಳೀಯರಾದ್ದರಿಂದ ತಮಗೆ ಇವೆಲ್ಲಾ ಚೆನ್ನಾಗಿ ಗೊತ್ತಿರುತ್ತವೆ ಎಂದು ಹೊಗಳುವಂತೆ ಹೇಳಿ ಉಬ್ಬಿಸಿದ ಗಿಡ್ಡಜ್ಜ ತನ್ನ ಗಾಯವಾಗಿರುವ ಕೈ ಮುಂದೆ ತಂದು ನೋಡಿಕೊಂಡ ಪಾಟೀಲ ಈ ಏಡಿಯೇ ಅಲ್ಲವೇ ಮ್ಮ ಕೈಯ್ಯನ್ನು ಕಚ್ಚಿ ಈ ಸ್ಥಿತಿಗೆ ತಂದದ್ದು ಎಂದು ಏಕಕಾಲದಲ್ಲಿ ಅದರ ಮೇಲೆ ಸೇಡು ತೀರಿಸಿಕೊಳ್ಳುವವನಂತೆಯೂ ಗಿಡ್ಡಜ್ಜನ ಮೇಲೆ ಅನುಕಂಪ ತೋರಿಸುವವನಂತೆಯೂ ಅದನ್ನು ನೆಲದಲ್ಲಿ ಕೂರಿಸಿ ಎರಡೂ ಕೊಂಡಿಗಳಿಗೆ ಕಟ್ಟಿದ್ದ ನೈಲಾನ್ ದಾರವನ್ನು ಕಾಲಲ್ಲಿ ತುಳಿದುಕೊಂಡು ಏ ಏ ಏ ಏನು ಮಾಡುತ್ತಿದ್ದೀಯಾ ಎಂದು ಗಿಡ್ಡಜ್ಜ ತಡೆಯುವಷ್ಟರಲ್ಲಿ ಅದರ ಹಿಂದಿನ ಎರಡು ಕಾಲುಗಳನ್ನು ಒಣಗಿದ ಲಡ್ಡು ಕಡ್ಡಿಯನ್ನು ಮುರಿಯುವಂತೆ ಲಟಲಟನೇ ಮುರಿದು ಬಿಸಾಕಿ ಸೇಡು ತೀರಿಸಿಕೊಂಡ ಹುಮ್ಮಸ್ಸಿನಲ್ಲಿ ನಗಲಾರಂಭಿಸಿದ

ಅದರದ್ದು ತಪ್ಪಲ್ಲ ತನ್ನ ಸ್ವರಕ್ಷಣೆಗಾಗಿ ಅದು ಹಾಗೆ ಮಾಡಿತು ದೇಶ ರಕ್ಷಣೆ ಸ್ವರಕ್ಷಣೆ ವಿಷಯ ಬಂದಾಗ ಹಾಗೆ ಮಾಡಬೇಕು ಕೂಡಾ ಅದರ ಜಾಗದಲ್ಲಿ ನೀನು ಇದ್ದರೂ ಅದನ್ನೇ ಮಾಡುತ್ತಿದ್ದೆ ಎಂದು ಗಿಡ್ಡಜ್ಜ ಅಸಹನೆ ವ್ಯಕ್ತಪಡಿಸುತ್ತಾ ಈ ಪ್ರಪಂಚದಲ್ಲಿರುವ ಸುಮಾರು ಎಂಬತ್ನಾಲ್ಕು ಲಕ್ಷ ಪ್ರಭೇದದ ಜೀವಿಗಳಲ್ಲಿ ತಲೆಯೇ ಇಲ್ಲದ ಒಂದು ಪ್ರಾಣಿ ಇದೆ ಯಾವುದು ಗೊತ್ತಾ ಎಂದು ಹುಬ್ಬು ಹಾರಿಸುತ್ತಾ ಪ್ರಶ್ನೆ ಹಾಕಿ ತನ್ನ ಪಾಡಿಗೆ ತಾನು ಎನ್ನುವಂತೆ ಅಂಕಲಿ ಮಠದತ್ತ ನಡೆಯಲಾರಂಭಿಸಿದ ಇಬ್ಬರೂ ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು ತನಗೇ ಹೇಳಿದ್ದಿರಬಹುದೆಂದು ಪಾಟೀಲ ಭಾವಿಸಿ ಮಂಕಾದ ತನ್ನ ಕೈಕೆಳಗೆ ಹದಿನೈದಿಪ್ಪತ್ತು ಜನ ಕೆಲಸ ಮಾಡುತ್ತಿದ್ದಾರೆಂದು ಅವರೆಲ್ಲಾ ತನ್ನ ಬುದ್ದಿವಂತಿಕೆಗೆ ಎಷ್ಟೆಲ್ಲಾ ಗೌರವ ಕೊಡುತ್ತಾರೆಂದು ಈ ಕಾಡು ಮನುಷ್ಯಗೇನು ಗೊತ್ತು ಎನ್ನುವಂತೆ ಮುಖ ಸಿಂಡರಿಸಿಕೊಂಡು ನಿಂತ ಹಾಗೆ ನಿಂತರೆ ಸ್ವತಂತ್ರವಾಗಿ ಅಂಕಲಿ ಮಠದ ಗವಿಯೊಳಕ್ಕೆ ಹೋಗಿ ಹೊರಬರಲು ತನಗೆ ದಾರಿ ತಿಳಿಯದಿರುವ ಅಸಹಾಯಕತೆಗೆ ಓಬಳಪ್ಪ ಬಲವಂತದಿಂದ ಪಾಟೀಲನ ಕೈಹಿಡಿದು ಎಳಕೊಂಡು ಹಿಂಬಾಲಿಸಿದ

ಅಂಕಲೀಮಠದ ಗುಹೆಯಲ್ಲಿ ಬಾವಲಿಗಳ ಹಿಚಿಕೆಯ ಕಮಟು ವಾಸನೆಯ ನಡುವೆಯೂ ಗೈಡ್ ತನ್ನ ದಿನತ್ಯದ ವ್ಯವಹಾರವೆನ್ನುವಂತೆ ನಿರಾತಂಕವಾಗಿ ಬ್ಯಾಟರಿ ಬೆಳಕಿನಲ್ಲಿ ಮೆಟ್ಟಿಲುಗಳನ್ನು ಎಣಿಸಿ ಹೇಳುತ್ತಾ ಇಂತಿಷ್ಟು ಮೆಟ್ಟಿಲುಗಳನ್ನು ಇಳಿಯುವಂತೆ ನಿರ್ದೇಶನ ನೀಡುತ್ತಾ ಅಲ್ಲಲ್ಲಿ ನಿಂತು ವಿವರಣೆ ನೀಡುತ್ತಿದ್ದ ಬುದ್ಧನ ಕಾಲದಿಂದ ಇಲ್ಲಿ ಋಉಷಿಮುನಿಗಳು ವಾಸಿಸುತ್ತಿದ್ದರೆಂದು ಹಿಂದೆ ರಾಜರ ಆಸ್ಥಾನ ಗುರುಗಳು ಇಲ್ಲಿ ರಹಸ್ಯವಾಗಿ ವಾಸಿಸುತ್ತಾ ರಾಜ್ಯದ ಅಳಿವು ಉಳಿವಿನಂತಹ ಗೌಪ್ಯವಾದ ಗಹನವಾದ ಚರ್ಚೆಗಳನ್ನು ಇಲ್ಲಿಯೇ ಮಾಡುತ್ತಿದ್ದರೆಂದು ತಡೆಯಿರದಂತೆ ವಿವರಿಸುತ್ತಿದ್ದ ಅವರು ಬಳಸುತ್ತಿದ್ದ ಒರಗು ಮಂಚ ನೆಲದಾಳದಲ್ಲೇ ಇದ್ದ ಬಚ್ಚಲು ಆ ತೊಟ್ಟಿಗೆ ಮೇಲಿಂದ ನೀರು ಹರಿದು ಬರುವಂತೆ ಮಾಡಿಕೊಂಡಿದ್ದ ಹಾಗೂ ಸ್ನಾನದ ನೀರು ಹೊರಹೋಗುವಂತೆ ಮಾಡಿಕೊಂಡಿದ್ದ ಗಾರೆಯ ಸಣ್ಣ ಕಾಲುವೆ ಇತ್ಯಾದಿಗಳನ್ನೆಲ್ಲಾ ನೋಡಿ ಪಾಟೀಲ ಮೂಕವಿಸ್ಮಿತನಾದ ಒಂದು ದೊಡ್ಡ ರಾಜ್ಯ ಆ ರಾಜ್ಯದ ದೊರೆ ಇಲ್ಲಿಗೆ ವೇಷ ಮರೆಸಿಕೊಂಡು ಬಂದು ಸಂನ್ಯಾಸಿಗಳ ಕಾಲಿಗೆ ಬಿದ್ದು ಅವರ ಸಲಹೆಮಾರ್ಗದರ್ಶನಗಳನ್ನು ಪಡೆಯುತ್ತಿದ್ದುದು ಅಂದರೆ ಪರಮಾಧಿಕಾರಿ ಎಂದುಕೊಂಡ ಒಂದು ಸಾಮ್ರಾಜ್ಯದ ದೊರೆಯೂ ಇನ್ನೊಬ್ಬರ ಮುಂದೆ ತಲೆ ತಗ್ಗಿಸಿ ನಿಂತು ಅವರು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವಂತಹ ಮಹಿಮೆಯುಳ್ಳ ಒಂದು ಜಾಗ ಹತ್ತಾರು ಸಾಮ್ರಾಜ್ಯಗಳ ಅಳಿವು ಉಳಿವಿನ ತೀರ್ಮಾನವಾಗುತ್ತಿದ್ದಂತಹ ಜಾಗ ಪಾಟೀಲ ಅದರ ಮುಂದೆ ತನ್ನ ಅಧಿಕಾರವನ್ನು ತುಲನೆ ಮಾಡಿಕೊಂಡು ತಾನೆಷ್ಟು ಕುಬ್ಜ ಎಂದುಕೊಂಡು ನಾಚಿಕೆಯಿಂದ ಆ ಕತ್ತಲಲ್ಲೂ ಗಿಡ್ಡಜ್ಜನ ಮುಖವನ್ನು ಕದ್ದು ನೋಡಲು ತವಕಿಸಿದ

ಒಂದು ಸಲ ಇದ್ದಕ್ಕಿದ್ದಂತೆ ಗೈಡ್ ಕೈಯ್ಯಲ್ಲಿದ್ದ ಬ್ಯಾಟರಿ ಕೆಳಗೆ ಬಿದ್ದು ಆರಿಹೋಯಿತು ಕೂಡಲೇ ಪಾಟೀಲ ಓಬಳಪ್ಪನನ್ನು ಅಪ್ಪಿಕೊಂಡು ಜೋರಾಗಿ ಕಿರುಚಿಕೊಂಡ ಬೆಂಕಿಕಡ್ಡಿ ಗೀರಿ ಬೆಳಕು ಮಾಡಿದ ಗೈಡ್ ಬ್ಯಾಟರಿ ಹುಡುಕಿ ಪೇಟೆ ಜನಗಳಿಗೆ ಕಗ್ಗತ್ತಲಿನ ಅನುಭವವೇ ಇರುವುದಿಲ್ಲವಲ್ಲ ನೋಡಿ ಅಫ್ಟರಾಲ್ ಒಂದು ಬೆಂಕಿಕಡ್ಡಿ ಎಷ್ಟೊಂದು ಬೆಳಕನ್ನ ಧೈರ್ಯವನ್ನ ನೀಡಬಲ್ಲದು ಎಂದು ಮುಗುಳ್ನಕ್ಕ ಗಿಡ್ಡಜ್ಜ ಅದೇ ಒಂದು ಕಡ್ಡಿಯಿಂದ ಒಂದು ದೇಶವನ್ನೇ ಬೇಕಾದರೂ ನಿರ್ನಾಮ ಮಾಡಿಬಿಡಬಹುದು ಎಂದು ಮಾರ್ಮಿಕವಾಗಿ ನುಡಿದದ್ದು ಯಾರಿಗೂ ಅರ್ಥವಾಗಲಿಲ್ಲ

ಆ ಗವಿಯಲ್ಲಿರುವ ಆನೆಗಳು ಗಾರೆಯ ಶಿಲ್ಪಗಳು ಚಿತ್ರಗಳು ಬಣ್ಣದ ಬಳಕೆ ಎಲ್ಲವನ್ನೂ ವಿವರಿಸುತ್ತಿದ್ದ ಗೈಡು ಈ ಬಣ್ಣದ ಚಿತ್ರಗಳನ್ನು ರಾಜಾ ರವಿವರ್ಮನನ್ನು ಕರೆಸಿ ಬರೆಸಿದ್ದೆಂದು ಹೇಳಿದ

ಅಂದರೆ ಈ ಚಿತ್ರಗಳನ್ನು ಬರೆದು ಎಷ್ಟು ನೂರು ವರ್ಷಗಳಾಗಿರಬಹುದು ಎಂಬ ಸರಳ ಪ್ರಶ್ನೆ ಹಾಕಿದ ಗಿಡ್ಡಜ್ಜ

ಕಷ್ಟ ನಾನೂರುಐನೂರು ವರ್ಷಗಳಾಗಿರಬಹುದು ಎಂದ ಆ ಗೈಡ್ ಕೂಡಲೇ ರವಿವರ್ಮ ಯಾರ ಆಸ್ಥಾನದಲ್ಲಿದ್ದ ಗೊತ್ತೇ ಎಂಬ ಮತ್ತೊಂದು ಪ್ರಶ್ನೆ

ಮೈಸೂರು ಅರಸರ ಆಸ್ಥಾನದಲ್ಲಿ

ನಿಜ ಯಾವ ಶತಮಾನದಲ್ಲಿ

ಗೈಡ್ ತಬ್ಬಿಬ್ಬಾದ ರವಿವರ್ಮ ಇದ್ದದ್ದು ಹತ್ತೊಂಬತ್ತನೇ ಶತಮಾನದಲ್ಲಿ ಅವನು ಹುಟ್ಟುವುದಕ್ಕಿಂತ ಮುನ್ನೂರು ನಾನೂರು ವರ್ಷಗಳ ಹಿಂದೆಯೇ ಇಲ್ಲಿಗೆ ಬಂದು ಚಿತ್ರ ಬರೆಯಲು ಹೇಗೆ ಸಾಧ್ಯ ಎಂದವನೇ ನಾಲ್ಕು ಕಾಸಿನ ಆಸೆಗೋಸ್ಕರ ಅಟ್ರಾಕ್ಟೀವ್ ಆಗಿ ಹೇಳಬೇಕು ಅಂತ ಯಾಕ್ರೀ ಸುಳ್ಳು ಸುಳ್ಳು ಹೇಳ್ತೀರಾ ಅವನ್ಯಾವನೋ ಹೇಳ್ತಾನೆ ಓಬವ್ವ ಸತ್ತಾಗ ಅವಳ ಹೆಣದ ಮೇಲೆ ದೇಶದ ಬಾವುಟ ಹಾಸಿ ಬಂದೂಕಿಂದ ಗುಂಡು ಹಾರಿಸಿ ಧ್ವಜವಂದನೆ ಸಲ್ಲಿಸಿದರು ಅಂತ ಯಾವಾಗ್ರೀ ಈ ಕಾನ್ಸೆಪ್ಟ್ ಬಂದಿದ್ದು ಇಪ್ಪತ್ತನೇ ಶತಮಾನದಲ್ಲಿ ಓಬವ್ವ ಇದ್ದಿದ್ದು ಯಾವಾಗ್ರೀ ಹದಿನೆಂಟನೇ ಶತಮಾನದಲ್ಲಿ ನಾನ್ಸೆನ್ಸ್ ನಾನ್ಸೆನ್ಸ್ ಫೆಲೋಸ್ ಎನ್ನುತ್ತಾ ಸಿಡುಕಿಕೊಂಡು ಕತ್ತಲಲ್ಲಿಯೂ ತಡವರಿಸದಂತೆ ಮೆಟ್ಟಿಲು ಹತ್ತಿಕೊಂಡು ಮೇಲೆ ಬಂದುಬಿಟ್ಟ ಗಿಡ್ಡಜ್ಜ

ಗೈಡ್ಗೆ ಮಾತನಾಡಿದ್ದಂತೆ ಐವತ್ತು ರೂಪಾಯಿ ಕೊಟ್ಟು ಆಚೆ ಅಷ್ಟು ದೂರದಲ್ಲಿ ಕುಳಿತಿದ್ದ ಗಿಡ್ಡಜ್ಜನ ಕಡೆಗೆ ಹೊರಟರು ಪಾಟೀಲ ಓಬಳಪ್ಪಗೆ ಈತ ಸಮ್ಥಿಂಗ್ ಡಿಫರೆಂಟ್ ಬಟ್ ಪರ್ಫೆಕ್ಟ್ ಕೂಡಾ ಅನಿಸುತ್ತೆ ಎಂದ ಗಿಡ್ಡಜ್ಜ ಮಾತ್ರಾ ಅಂಕಳೀ ಮಠದ ಹಿಂದಿರುವ ಒಂದೇ ಬಂಡೆಯಿಂದ ಒಡೆದು ಎರಡಾಗಿರುವ ಕವಣೆಯಿಂದ ಬೀಸಿ ಹೊಡೆದರೂ ತುದಿ ಮುಟ್ಟಲಾರದಷ್ಟು ಎತ್ತರದ ಬೃಉಹತ್ ಬಂಡೆಗಳನ್ನು ಹಗ್ಗ ಹಾಕಿ ಹತ್ತುತ್ತಿರುವ ಎನ್ಸಿಸಿಹುಡುಗರನ್ನು ನೋಡುತ್ತಾ ಕುಳಿತುಬಿಟ್ಟಿದ್ದ

ಆಗಲೇ ಮಧ್ಯಾಹ್ನದ ಬಿಸಿಲು ಬೆಳಗ್ಗಿಂದ ಕೋಟೆ ಹತ್ತಿ ಅಂಕಲೀ ಮಠಕ್ಕೆ ಇಳಿದು ಸುಸ್ತಾಗಿದ್ದ ಪಾಟೀಲ ನಾಳೆ ಸೋಮವಾರ ವೀಕೆಂಡ್ ಮುಗೀತು ಬೆಂಗಳೂರಿಗೆ ಹೋಗಬೇಕು ಎಂದು ಹಿಂದಿರುಗಲು ಅವಸರಿಸಿದ ಹೊರಟು ಬಂದರು ಚಂದ್ರವಳ್ಳಿ ಕೆರೆ ಏರಿ ದಾಟುತ್ತಿದ್ದಂತೆಯೇ ಮೌನವನ್ನು ಮುರಿದ ಗಿಡ್ಡಜ್ಜ ಮಯೂರನ ಶಾಸನ ನೋಡಿದ್ದೀರೇ ಎಂದು ಗತ್ತಿಂದ ಹಾಗೆಯೇ ಏಕವಚನದ ಶೈಲಿಯಲ್ಲಿ ಕೇಳಿದ ನಿರುತ್ತರರಾದ ಅವರನ್ನ ಕರೆದು ಇಲ್ಲಿ ನೋಡಿ ಏನಾದರೂ ಅಕ್ಷರ ಕಾಣುತ್ತಾ ಎಂದ ಇಬ್ಬರೂ ಮುಖ ಮುಖ ನೋಡಿಕೊಂಡರು ಒಂದು ದೊಡ್ಡ ಬಂಡೆಯ ಮುಂದೆ ನಿಂತು ಅದರ ಮೇಲೆ ಬೆರಳು ಆಡಿಸುತ್ತಾ ಆ ಶಾಸನದ ಅಕ್ಷರಗಳನ್ನು ಮೂಡಿಸುತ್ತಾ ಪಟಪಟನೇ ಓದಿಬಿಟ್ಟ ಇದು ಪ್ರಾಕೃಉತದಲ್ಲಿದೆ ಅಂತ ಡಾ ಎಂಎಚ್ಕೃಉಷ್ಣ ೧೯೨೯ ರಲ್ಲಿ ಓದಿದ್ದರು ಆದರೆ ಡಾ ಬಿರಾಜಶೇಖರಪ್ಪ ಇದು ಸಂಸ್ಕೃಉತದಲ್ಲಿದೆ ಅಂತ ೧೯೮೪ ರಲ್ಲಿ ಪ್ರೂವ್ ಮಾಡಿ ತೋರಿಸಿದರು ಆ ಶಾಕ್ಗೆ ಅವರಿಗೆ ಎರಡು ದಿನ ಜ್ವರವೇ ಬಂದು ಮಲಗಿಬಿಟ್ಟಿದ್ದರಂತೆ

ಇಲ್ನೋಡಿ ಈ ದೇವಸ್ಥಾನದ ಮುಂದೆ ಕಾಣುತ್ತಲ್ಲ ಈ ಪ್ಲಾಸ್ಟಿಕ್ ಶೀಟಿನ ಚಪ್ಪರ ಇದನ್ನ ನೆರಳಿಗೋಸ್ಕರ ಯಾರೋ ಭಕ್ತರು ಹಾಕಿಸಿದ್ದು ಆದರೆ ಈ ಶಾಸನವನ್ನು ಗಾಳಿ ಮಳೆ ಬಿಸಿಲಿಂದ ರಕ್ಷಣೆ ಮಾಡೋಕ್ಕೆ ಅಂತ ತಾನೇ ಹಾಕಿಸಿರೋದು ಅಂತ ಯಾರೋ ಒಬ್ಬ ಬೃಉಹಸ್ಪತಿ ಪೇಪಋನಲ್ಲಿ ಬರೀತಾನೆ ಇದು ಹಂಗೆ ಕಾಣ್ಸುತ್ತೇ ಅದಕ್ಕೂ ಇದಕ್ಕೂ ಎಷ್ಟು ದೂರ ಇದೆ ನೋಡಿ ಅದೂ ಅಲ್ದೇ ಆರ್ಕ್ಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ರೂಲ್ಸ್ನಲ್ಲಿ ಶಾಸನಗಳಿಗೆ ಹಾಗೆಲ್ಲಾ ಚಪ್ಪರ ಗಿಪ್ಪರ ಹಾಕೋಂಗಿಲ್ಲ ಅನ್ನೋ ಕಾಮನ್ಸೆನ್ಸೂ ಇಲ್ಲ ಇವರಿಗೆ ಎಂದು ಸಿಡುಕುತ್ತಾ ನಡೆದೇ ಬಿಟ್ಟ

ಪಾಟೀಲ ನಿಮ್ಮೂರಿನ ಜನರೇ ಹಿಂಗಾ ಅಂತ ಓಬಳಪ್ಪನನ್ನ ಪ್ರಶ್ನಿಸಿದ ನಮ್ಮೂರಿನ ಜನ ಒಂದೇ ಸಲಕ್ಕೆ ಯಾರನ್ನೂ ನಂಬಿಬಿಡುವುದಿಲ್ಲ ಹಾಗೇ ಒಂದು ಸಲ ನಂಬಿದರೆ ಕೊನೆವರೆಗೆ ಯಾರನ್ನೂ ಕೈಬಿಡುವುದಿಲ್ಲ ಇದಕ್ಕೆ ಬಹುಶಃ ಐತಿಹಾಸಿಕವಾದ ಅನುಭವಗಳು ಕಾರಣವಾಗಿರಬಹುದು ಎಂದು ಸಮಜಾಯಿಷಿ ನೀಡಿದ

ಸ್ವಾಗತ ಗೇಟಿನ ಮುಂದಿದ್ದ ಸ್ಕೋಡಾ ಕಾರನ್ನು ತೆಗೆಯುತ್ತಾ ಪಾಟೀಲ ತುಂಬಾ ಥ್ಯಾಂಕ್ಸ್ ಸರ್ ಒಳ್ಳೆ ಗೈಡೆನ್ಸ್ ನೀಡುದ್ರೀ ನಾವಿನ್ನು ಬಋತೀವಿ ಎಂದ

ದುರ್ಗ ಪೂರ್ತಿ ನೋಡುದ್ರಾ ಹಾಗಾದ್ರೆ ಎಂದದ್ದಕ್ಕೆ ಓಬಳಪ್ಪ ನಾನೂ ಇದೇ ಊರಿನವನು ಸಾರ್ ಎಂದು ಹೆಮ್ಮೆಯಿಂದ ಕೋಟೆಯ ಅನೇಕ ಸ್ಥಳಗಳ ವಿವರ ಹೇಳಿದ

ಮತ್ತೆ ಧವಳಪ್ಪನ ಗುಡ್ಡ ಗಿಡ್ಡಜ್ಜ ಪ್ರಶ್ನಿಸಿದ

ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿದರು

ಅಗೋ ನೋಡಿ ಘೇಂಡಾ ಮೃಉಗ ಮಲಗಿದಂಗೆ ಕಾಣುತ್ತಲ್ಲಾ ಅದೇ ನಿಜವಾದ ಚಿತ್ರದುರ್ಗದ ಮಹತ್ವ ಇರೋದು ಕೇವಲ ಆ ಕೋಟೇಲೋ ಅಂಕಲೀ ಮಠದಲ್ಲೋ ಅಲ್ಲ ಆ ಧವಳಪ್ಪನ ಗುಡ್ಡದಲ್ಲಿ ಎಂದವನೇ ಅದನ್ನು ಈಗ ಹೋಗಿ ನೋಡಕ್ಕಾಗಲ್ಲ ಬೆಳಗಿಂದ ಸಂಜೆವರೆಗೆ ಒಂದು ಇಡೀ ದಿನ ಬೇಕು ನಾಳೆ ಬೆಳಗ್ಗೆ ಹೋಗೋಣ ಅಂದು ಹೇಳದೇ ಕೇಳದೇ ಕಾರು ಹತ್ತಿ ಕುಂತು ಮನೆ ಕಡೆಗೆ ಕಾರು ತಿರುಗಿಸಲು ಹೇಳಿದ

ಹೇಳಿ ಕರೆಸಿದಂತೆ ಮಳೆ ಹನಿಯಲಾರಂಭಿಸಿತು ಬರುಬರುತ್ತಾ ಬಿರುಸೂ ಆಯಿತು ಬಋತಾ ಬಋತಾ ಚಿತ್ರದುರ್ಗನೂ ಮಲೆನಾಡಾಗ್ತಾಯಿದೆ ಎಂದು ತನ್ನೊಳಗೇ ಹುಸಿನಗು ನಕ್ಕ ಉಳಿದಿಬ್ಬರಿಗೆ ಅದರರ್ಥ ತಿಳಿಯದೇ ಸುಮ್ಮನುಳಿದರು ಒಂದು ಕಿಲೋಮೀಟರ್ ಬರುವುದರೊಳಗೆ ಮಳೆ ಬಿರುಸಾಗಿ ಸುರಿಯಲಾರಂಭಿಸಿತು ಕಾರಿನ ವೈಪರ್ ಬಹಳ ದಿನಗಳಿಂದ ಕೆಲಸ ಇಲ್ಲದ್ದರಿಂದಲೋ ಏನೋ ಏನು ಮಾಡಿದರೂ ಸ್ಟಾರ್ಟ್ ಆಗಲಿಲ್ಲ ನೀರು ಧಾರಾಕಾರವಾಗಿ ಕಾರಿನ ಮುಂದಿನ ದಾರಿಯೇ ಕಾಣದಂತಾಯಿತು ಪಾಟೀಲ ಅಸಹಾಯಕನಾದ ಮುಂದೆ ಮುಖ್ಯ ರಸ್ತೆಯಿದೆ ದೊಡ್ಡ ದೊಡ್ಡ ವಾಹನಗಳು ಅಡ್ಡಾಡುತ್ತಿರುತ್ತವೆ ಎಂಬ ಆತಂಕ ಆತನದು ಅವನ ಪರದಾಟ ನೋಡಲಾರದೇ ಒಂದು ಡಬ್ಬದಂಗಡಿಯ ಮುಂದೆ ಕಾರು ನಿಲ್ಲಿಸಿಸಿ ಎರಡು ಚಾರ್ಮಿನಾರ್ ಸಿಗರೇಟು ತರುವಂತೆ ಹೇಳಿದ ಪಾಟೀಲನ ಇಗೋಗೇ ಪೆಟ್ಟುಬಿದ್ದಂತಾಯಿತು ಛಳಿಗೆ ಈತ ಸಿಗರೇಟು ಸೇದಲು ತಾನು ತಂದುಕೊಡಬೇಕೇ ಎಂದು ಹಿಂದೆ ಮುಂದೆ ನೋಡಿ ಆ ಮಳೆಯಲ್ಲೇ ಇಳಿದು ಡೋರನ್ನ ಕಾಲಿಂದ ಒದ್ದು ಮುಚ್ಚಿದ ಕಾರಲ್ಲಿ ಸೇದುವಂತಿಲ್ಲವೆಂದು ಮುಖದ ಮೇಲೆ ಹೊಡೆದಂತೆ ಹೇಳಿಬಿಡಬೇಕೆಂದುಕೊಂಡ

ಸಿಗರೇಟನ್ನು ಕೈಗಿಡುತ್ತಿದ್ದಂತೆಯೇ ಮುದುರಿ ಪುಡಿಪುಡಿಮಾಡಿಬಿಟ್ಟ ಗಿಡ್ಡಜ್ಜನನ್ನ ಕಂಡು ಪಿತ್ತ ನೆತ್ತಿಗೇರಿತು ಮಳೆಯಲ್ಲೇ ಕೆಳಗಿಳಿದ ಗಿಡ್ಡಜ್ಜ ಕಾರಿನ ಗ್ಲಾಸಿನ ಮೇಲೆ ಹಾಕಿ ತಿಕ್ಕಲಾರಂಭಿಸಿದ ಪಾಟೀಲಗೆ ಉರಿದುಹೋಯಿತು ಎಂಟು ಹತ್ತು ಸಾವಿರದ ಗ್ಲಾಸನ್ನ ಸ್ಕ್ರಾಚ್ ಮಾಡಿಬಿಡುತ್ತಿದ್ದಾನಲ್ಲ ಎಂದು ಹಾಗೆ ಸ್ಕ್ರಾಚಾದರೆ ಇನ್ಸೂರೆನ್ಸೂ ಬರುತ್ತದೋ ಇಲ್ಲವೋ ಎಂಬ ಆತಂಕ ಅವನದು

ಡ್ಯಾಶ್ ಬೋರ್ಡಿನ ಮೇಲೆ ಕುಂತ ಕೊಂಡಿ ಕಟ್ಟಿದ್ದ ಏಡಿ ಉಳಿದಿದ್ದ ಕಾಲುಗಳಲ್ಲೇ ಎಡಕ್ಕೂ ಬಲಕ್ಕೂ ಚಲಿಸುತ್ತಾ ಪರಪರ ಸದ್ದು ಮಾಡುತ್ತಿತ್ತು ಅದು ಪಾಟೀಲನ ತಲೆಯೊಳಕ್ಕೇ ಕಾಲುಹಾಕಿ ಕೆರೆದಂತಾಗಿ ಸಿಟ್ಟು ಬಂದು ಒಂದು ಕಡೆಯ ಎರಡು ಕಾಲನ್ನ ಮುರಿದುಬಿಟ್ಟ ಮತ್ತೆ ಗಿಡ್ಡಜ್ಜ ಬಯ್ಯುವನೇನೋ ಎಂದು ಹೆದರಿ ಮುರಿದು ಹೋದ ಕಾಲುಗಳನ್ನ ಗೊತ್ತಿಲ್ಲದವನಂತೆ ಅದರ ಪಕ್ಕವೇ ಇಟ್ಟುಬಿಟ್ಟ

ಅಷ್ಟರಲ್ಲಿ ನಾವು ಹಿಮಾಲಯದಲ್ಲಿ ಮಿಲಿಟರಿ ಜೀಪಿಗೆ ಹಿಂಗೇ ಮಾಡ್ತಿದ್ದುದು ಅನ್ನುತ್ತಾ ಮಳೆಯಲ್ಲಿ ನೆಂದುಹೋಗಿದ್ದ ಗಿಡ್ಡಜ್ಜ ಸೀಟಲ್ಲಿ ಕುಂತ ತಕ್ಷಣ ಸಾವಿರಾರು ರೂಪಾಯಿಯ ಸೀಟ್ ಕವರ್ರು ಒದ್ದೆಯಾಗಿದ್ದರಿಂದ ಒಳಗೊಳಗೇ ಕಸಿವಿಸಿಗೊಂಡ ಪಾಟೀಲ ಆದರೆ ಗಾಜಿನ ಮೇಲೆ ಬೀಳುತ್ತಿದ್ದ ನೀರು ಸರಾಗವಾಗಿ ಹರಿದುಹೋಗಿ ಮುಂದಿನ ದಾರಿ ನಿಚ್ಚಳವಾಗಿದ್ದರಿಂದ ಏನೋ ಒಂಥರಾ ಖುಷಿಯಾಗಿ ಥ್ಯಾಂಕ್ಸ್ ಹೇಳಿದ ಅಷ್ಟರೊಳಗೆ ಏಡಿಯ ಮುರಿದ ಕಾಲನ್ನ ಗಿಡ್ಡಜ್ಜ ನೋಡಿದ್ದನ್ನ ಗಮಸಿದ ಪಾಟೀಲ ತಾನಾಗಿಯೇ ಅದು ಅತ್ತ ಇತ್ತ ಅಡ್ಡಾಡೋಕ್ಕೋಗಿ ಕಾಲು ಉದುರಿಸ್ಕೊಂಡು ಬಿಟ್ಟದೆ ಎಂದ ಗಿಡ್ಡಜ್ಜ ಅವನ ಮುಖವನ್ನೊಮ್ಮೆ ನೋಡಿ ಮುಗುಳ್ನಕ್ಕು ಆಗಲೆ ಕೇಳಿದ್ನಲ್ಲ ಇದೇ ನೋಡಿ ತಲೆಯಿಲ್ಲದ ಆ ಏಕೈಕ ಪ್ರಾಣಿ ಎಂದು ನಕ್ಕ ಹೌದಲ್ಲ ಅಂತ ಆಶ್ಚರ್ಯದಿಂದ ಪಾಟೀಲ ಅದರ ಅಂಗಾಂಗಗಳನ್ನೆಲ್ಲಾ ಪರಿಶೀಲಿಸಲಾರಂಭಿಸಿದ ಆದರೆ ಆತ ನಕ್ಕದ್ದರಲ್ಲಿ ತನಗೇ ತಲೆಯಿಲ್ಲದವನೆಂಬ ಅರ್ಥ ಧ್ವಸಿದಂತಾಗಿ ಮಂಕಾದ

ಹಳೇ ಕಾಲದ ಒಂದು ಮನೆ ಕಾರ್ವಿಂಗ್ ಮಾಡಿರುವ ಮರದ ಪಿಲ್ಲರ್ಗಳು ಅದರ ಅಂದವನ್ನ ಹೆಚ್ಚಿಸಿದ್ದವು ಒಳಗೆ ಹೋದರೆ ವಿಶಾಲವಾದ ಹಾಲ್ ಒಂದೆರಡು ಮರದ ಖುರ್ಚಿಗಳು ಮಂಚ ಪಾಟೀಲಗೆ ಯಾವುದೋ ಹಳ್ಳಿಯ ಗೌಡನ ಮನೆಗೆ ಬಂದ ಅನುಭವ

ಗಿಡ್ಡಜ್ಜ ಗ್ರಾಮಫೋನ್ ಹಚ್ಚಿದ ಇದೇನ ಸಭ್ಯತೆ ಇದೇನ ಸಂಸ್ಕೃಉತಿ ಎಂಬ ಹಳೆಯ ಕಾಲದ ಹಾಡು ಸುಶ್ರಾವ್ಯವಾಗಿ ಉಲಿಯಲಾರಂಭಿಸಿತು ಅದು ಯಾಕೋ ಪಾಟೀಲಗೆ ತನ್ನನ್ನೇ ಉದ್ದೇಶಿಸಿ ಹಾಕಿದ ಹಾಡೇನೋ ಅನಿಸಬಹುದೆಂದುಕೊಂಡ ಗಿಡ್ಡಜ್ಜ ಮುಳ್ಳನ್ನು ಎತ್ತಿ ಇನ್ನೊಂದು ಹಾಡಿನ ಮೇಲೆ ಇಟ್ಟ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಓತಪ್ರೋತವಾಗಿ ಹರಿಯಲಾರಂಭಿಸಿದ ತಕ್ಷಣ ಇದು ಪುಟ್ಟಣ್ಣ ಕಣಗಾಲರ ಸಿನೆಮಾದ್ದು ಇದರಲ್ಲಿ ಎಷ್ಟೊಂದು ಅರ್ಥಗಳಿವೆಯಲ್ಲಾ ಅಂದ ಪಾಟೀಲಗೆ ಅದರಲ್ಲಿ ಯಾವ ಅರ್ಥಗಳೂ ಹೊಳೆಯದಿದ್ದರೂ ಬಹಳ ಚೆನ್ನಾಗಿದೆ ಎಂದವನು ಇದರಲ್ಲಿ ಎಷ್ಟು ಹಾಡು ಬಋತವೆ ಎಂದು ಕೇಳಿದ ಒಂದು ಪ್ಲೇಟಲ್ಲಿ ನಾಲ್ಕು ಇಲ್ಲ ಐದು ಹಾಡು ಇಋತವೆ ಎಂದ ಗಿಡ್ಡಜ್ಜ ಪಾಟೀಲ ತನ್ನ ಬ್ಯಾಗಿಂದ ಏನನ್ನೋ ಹುಡುಕಲು ಮುಂದಾದ ಈಗಾಗಲೇ ಲಹರಿಗೆ ಬಂದಿದ್ದ ಗಿಡ್ಡಜ್ಜ ಯಾಕೆ ಬೇಜಾರಾಯ್ತ ರೇಡಿಯೋ ಹಾಕಲೇನು ಎಂದು ಟಿವಿಯಷ್ಟು ದೊಡ್ಡಗಿನ ಹಳೆಯ ಕಾಲದ ಕರೆಂಟಿನ ರೇಡಿಯೋ ಹಚ್ಚಿದ ಅದು ಹೊಟ್ಟೆಯೊಳಗಿನ ಗ್ಯಾಸಿನಂತೆ ಗುರುಗುಟ್ಟಲಾರಂಭಿಸಿತು

ಪಾಟೀಲ ಬ್ಯಾಗಿಂದ ಹೆಬ್ಬೆರಳಿನ ಒಂದಿಂಚಿನಷ್ಟಿದ್ದ ಐಪೋಡ್ ತೆಗೆದು ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಹಾಡು ಇಋತವೆ ಎಂದ ತನ್ನ ತಳ್ಳನೆಯ ಮೊಬೈಲು ತೆಗೆದು ತೋರಿಸುತ್ತಾ ಇದರಲ್ಲಿ ಇಷ್ಟು ದಪ್ಪಗಿನ ರೇಡಿಯೋದಲ್ಲಿ ಬರೋ ಎಲ್ಲಾ ಸ್ಟೇಷನ್ಗಳನ್ನ ಟಿವಿಯಲ್ಲಿ ಬರೋ ಎಲ್ಲಾ ಚಾನೆಲ್ಲುಗಳನ್ನ ಒಂದು ಸಾವಿರ ಮಣ್ಣಿನ ಪ್ಲೇಟಿನಲ್ಲಿರಬಹುದಾದ ಎಲ್ಲಾ ಹಾಡುಗಳನ್ನ ಸ್ವಲ್ಪವೂ ಡಿಸ್ಟರ್ಬೆನ್ಸ್ ಇಲ್ಲದೇ ಕೇಳಬಹುದು ಅಲ್ಲದೇ ಆ ಮೂಲೆಯಲ್ಲಿದೆಯಲ್ಲಾ ಆ ಡಯಲ್ ತಿರುಗಿಸುವ ಫೋನ್ ಅದಕ್ಕಿಂತ ನೂರು ಪಟ್ಟು ವೇಗವಾಗಿ ಫೋನ್ ಮಾಡಬಹುದು ಆ ಡೈರೆಕ್ಟರಿಯಲ್ಲಿ ಬರೆದಿರಬಹುದಾದದ್ದಕ್ಕಿಂತ ಹತ್ತು ಪಟ್ಟು ಹೆಸರು ನಂಬರುಗಳನ್ನ ಸ್ಟೋರ್ ಮಾಡಬಹುದು ಇನ್ನೂರು ವರ್ಷದ ಕ್ಯಾಲೆಂಡರ್ ನೋಡಬಹುದು ರೀಲ್ ಇಲ್ಲದೇ ಫೋಟೋ ತೆಗೆಯಬಹುದು ಕ್ಯಾಸೆಟ್ ಇಲ್ಲದೇ ವೀಡಿಯೋ ರೆಕಾರ್ಡಿಂಗ್ ಮಾಡಬಹುದು ಇನ್ನೂ ಏನೇನೋ ಎಂದು ಹೇಳಿ ಅವನ ಕೈಗೆ ಕೊಟ್ಟ ಮಕ್ಕಳ ಆಟದ ವಸ್ತುವಿನಂತೆ ಕಂಡ ಅದನ್ನು ನಂಬಲು ಸಾಧ್ಯವೇ ಆಗಲಿಲ್ಲ ಗಿಡ್ಡಜ್ಜಗೆ ಒಂದೊಂದನ್ನೇ ತೋರಿಸುತ್ತಾ ಹೋದ ಹಾಗೆ ನಂಬಿಕೆ ಬರಲಾರಂಭಿಸಿತು ಆದರೂ ಮಂತ್ರವಾದಿ ಪುಟ್ಟಯ್ಯ ಅಂಜನ ಹಾಕಿ ತೋರಿಸುತ್ತಿದ್ದಂತೆ ಪಾಟೀಲ ಏನಾದರೂ ಮ್ಯಾಜಿಕ್ ಮಾಡುತ್ತಿರುವನೇನೋ ಎಂಬ ಅನುಮಾನ

ಆದರೂ ಗಿಡ್ಡಜ್ಜಗೆ ಅವು ಅಪೀಲ್ ಆಗಲಿಲ್ಲ ಐ ಪೋಡ್ನ ಹಾಡಿಗಿಂತ ಪ್ಲೇಟಿನಲ್ಲಿ ಬರುವ ಹಾಡೇ ಸುಮಧುರ ಅಂತಲೂ ಮೊಬೈಲ್ನಲ್ಲಿ ಮಾತಾಡುವುದಕ್ಕಿಂತ ಡಯಲ್ ತಿರುಗಿಸಿ ಮಾತಾಡುವುದರಲ್ಲೇ ಮಜಾ ಇರುವುದು ಎಂತಲೂ ವಾದ ಮಾಡಿದ ನೋಡ್ದಂಗೆ ನಿಮ್ಮ ಮನೆ ಫೋನ್ ನಂಬರ್ ಹೇಳಿ ನೋಡೋಣ ಅಂದಾಗ ಅವನು ಹೇಳಲು ಪ್ರಯತ್ನಿಸಿ ವಿಫಲನಾದಾಗ ಈ ಹಳೇ ಫೋನಲ್ಲಿ ಎರಡು ಸಲ ನಂಬರ್ ತಿರಿಗಿಸಿದರೆ ಎಲ್ಲವೂ ತಲೆಯಲ್ಲಿರುತ್ತವೆ ಅಂದವನು ನಮ್ಮ ಕಾಲದ ಹಾಡುಗಳು ಮೂವತ್ತು ನಲವತ್ತು ವರ್ಷ ಆಗಿದ್ದರೂ ಇನ್ನೂ ಕೇಳಬೇಕು ಅನಿಸ್ತದೆ ಅದೇ ನಿಮ್ಮ ಕಾಲದ ಹಾಡುಗಳು ಮೂವತ್ತು ನಲವತ್ತು ದಿನಾನೂ ಇರಲ್ಲ ಎಂದಂದು ತಬ್ಬಿಬ್ಬುಗೊಳಿಸಿದ ಒಳ್ಳೆ ಗಾಂಧಿ ಕಾಲದವನ ಸಹವಾಸವಾಯಿತಲ್ಲ ಎಂದು ಇಬ್ಬರೂ ತಲೆ ಕೆರೆದುಕೊಂಡರೂ ಅದರಲ್ಲೂ ಏನೋ ಲಾಜಿಕ್ ಇದೆ ಅನಿಸದಿರಲಿಲ್ಲ ಅದನ್ನು ಗಮಸಿದವನಂತೆ ಇದಕ್ಕೇ ಜನರೇಷನ್ ಗ್ಯಾಪ್ ಅನ್ನುವುದು ಎಂದು ಹೇಳಿ ತಾನು ತುಂಬಾ ಜನರಸ್ ಅನ್ನುವುದನ್ನು ಬಿಂಬಿಸಿದ

ಬೆಳೆದಿದ್ದ ಮುಳ್ಳುಗಂಟಿಗಳನ್ನೆಲ್ಲಾ ಒತ್ತುತ್ತಾ ದಾರಿ ಮಾಡಿಕೊಂಡು ದಕ್ಷಿಣಕ್ಕೆ ಮುಖ ಮಾಡಿ ನಿಂತಿರುವ ಧವಳಪ್ಪನ ಗುಡ್ಡದ ಬಾಗಿಲಲ್ಲಿ ಬೆಳಗ್ಗೆ ಎಂಟು ಗಂಟೆಗೆಲ್ಲಾ ನಿಂತಿದ್ದರು ಪ್ರವೇಶ ದ್ವಾರದಲ್ಲೇ ಇದ್ದ ಒಂದು ಶಾಸನವನ್ನು ತೋರಿಸಿ ಶಿವಭಕ್ತರಲ್ಲದವರು ಹೋಗಬಾರದು ಎಂದು ಇದರ ಅರ್ಥವೆಂತಲೂ ವಿಷ್ಣುಭಕ್ತರು ಭೋಜನ ಪ್ರಿಯರಾದ್ದರಿಂದ ಅವರ ದೇಹ ಒಳಗಿನ ಇಕ್ಕಟ್ಟಾದ ಜಾಗದಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತದೆ ಎಂದೂ ಇರಬಹುದು ಅನ್ನುತ್ತಾ ತಾನೊಬ್ಬನೇ ನಕ್ಕ ಹಿಂದೆ ಶೈವರಿಗೂ ವೈಷ್ಣವರಿಗೂ ಹಗೆತನವಿದ್ದುದರಿಂದ ಇದು ಶಿವಭಕ್ತರ ತಾಣ ಎಂಬುದನ್ನು ಹಕ್ಕಿನ ಪ್ರತೀಕವಾಗಿ ಹೇಳಿರಬಹುದೆಂದ ಅಲ್ಲದೇ ಒಳಗೆ ಅಲ್ಲಲ್ಲಿ ಬಂಡೆಯಲ್ಲೇ ಕೆತ್ತಿರುವ ಇಪ್ಪತ್ತೊಂದು ಶಿವಲಿಂಗಗಳಿರುವುದರಿಂದ ಬಹುಶಃ ಇದು ಬಹಳ ವರ್ಷಗಳ ಕಾಲ ಶೈವರ ಆಶ್ರಯ ತಾಣವಾಗಿದ್ದಿರಲೂಬಹುದೆಂದ

ಕಿರಿದಾದ ಇಕ್ಕಟ್ಟಾದ ಜಾಗಗಳಲ್ಲೆಲ್ಲಾ ಒಂದೊಂದು ಕಡೆ ತೆವೆಯುತ್ತಾ ಇನ್ನೊಂದೊಂದು ಕಡೆ ದೇಕುತ್ತಾ ಕೆಲವು ಕಡೆ ನೆಗೆಯುತ್ತಾ ಇನ್ನೂ ಕೆಲವು ಕಡೆ ಅಡ್ಡಡ್ಡಲಾಗಿ ಹೆಜ್ಜೆ ಇಡುತ್ತಾ ಅಷ್ಟಷ್ಟು ದೂರ ಬರುತ್ತಿದ್ದಂತೆ ಇಬ್ಬರೂ ಸುಸ್ತಾಯಿತೆಂದು ನಿಂತರು ಕೂರಲೂ ಜಾಗವಿಲ್ಲದಷ್ಟು ಕಿರಿದಾದ ಜಾಗ ಮೊದಲು ಗಿಡ್ಡಜ್ಜ ಮಧ್ಯದಲ್ಲಿ ಪಾಟೀಲ ಕೊನೆಯಲ್ಲಿ ಓಬಳಪ್ಪ

ಕೈಲಿದ್ದ ಬ್ಯಾಗಿಂದ ಏನನ್ನಾದರೂ ತೆಗೆದು ತಿನ್ನಬೇಕೆಂದು ಬಲವಾಗಿ ಅನಿಸುತ್ತಿದ್ದರೂ ಗಿಡ್ಡಜ್ಜನ ಭಯದಿಂದ ತೆಗೆಯಲಾರದೇ ತವಕಿಸುತ್ತಿದ್ದ ಪಾಟೀಲ ಸ್ಟೀಲಿನ ಖಾಲಿ ಟಿಫನ್ ಬಾಕ್ಸ್ನಲ್ಲಿ ಕೂಡಿ ಹಾಕಿಕೊಂಡು ತಂದಿದ್ದ ಏಡಿ ಉಸಿರು ಕಟ್ಟಿದಂತಾಗಿಯೋ ಏನೋ ಪರಪರ ಕೆರೆಯುತ್ತಿತ್ತು ಇಕ್ಕಟ್ಟಾದ ಜಾಗದ ಭಯದಿಂದ ಬೆವರುತ್ತಿದ್ದ ಪಾಟೀಲ ಏಡಿಗೆ ಏನೋ ತೊಂದರೆಯಾಗಿದೆ ಎಂದು ನೆಪ ಮಾಡಿ ಒಂಟಿ ಕಾಲಲ್ಲೇ ನಿಂತು ಚೀಲ ಬಿಚ್ಚಿದ ಒಂದೆರಡು ಹಣ್ಣು ಚಿಪ್ಸ್ಗಳನ್ನ ತಿಂದು ಏಡಿಗೆ ಏನಾಯಿತೋ ಎಂದು ನೋಡುವ ಕುತೂಹದಲ್ಲಿ ಟಿಫನ್ ಬಾಕ್ಸ್ನ ಕ್ಯಾಪನ್ನ ತೆರೆಯುತ್ತಿದ್ದಂತೆಯೇ ಅದನ್ನೇ ಕಾಯುತ್ತಿತ್ತೇನೋ ಎನ್ನುವಂತೆ ಅತ್ತ ಇತ್ತ ಅಡ್ಡಡ್ಡ ನಡೆಯುತ್ತಾ ಪಾಟೀಲನ ಕೈಯಿಂದ ತಪ್ಪಿಸಿಕೊಂಡು ಕೆಳಗಿಂದ ಹತ್ತಿ ಬರಲು ನಿಂತಿದ್ದ ಓಬಳಪ್ಪನ ತಲೆ ಮೇಲೆ ಬಿದ್ದು ಅಲ್ಲಿಂದಲೂ ಕೆಳಗೆ ಬಿದ್ದು ಸರಸರ ಹರಿದುಹೋಗಿ ತಪ್ಪಿಸಿಕೊಳ್ಳಲು ಒಂದು ಸಂದಿಯಲ್ಲಿ ಸೇರಿಕೊಂಡಿತು

ಮೇಲೆ ಒಂದು ಹದದಲ್ಲಿ ಹತ್ತುವುದು ಸುಲಭ ಮತ್ತೆ ಇಳಿಯುವುದೆಂದರೆ ಕಷ್ಟ ಲಕ್ಷಾಂತರ ವರ್ಷಗಳ ಹಿಂದೆ ಯಾವತ್ತೋ ಒಡೆದಿರಬಹುದಾದ ಆ ಬಂಡೆಯ ನಡುವೆ ಒಬ್ಬರನ್ನು ನಿಲ್ಲಿಸಿ ಇನ್ನೊಬ್ಬರು ದಾಟಿ ಬರುವುದು ಅಸಾಧ್ಯವಾಗಿರುವಂತಹ ಇಕ್ಕಟ್ಟು ಜಾಗ ಅಂತದರಲ್ಲಿ ಸ್ವಲ್ಪ ದುಂಡಗಿನ ಶರೀರದ ಓಬಳಪ್ಪ ಕೆಳಗೆ ಇಳಿದು ಏಡಿಯನ್ನು ಹಿಡಿದು ತರಲು ಮುಂದಾಗಲಿಲ್ಲ ಇಳಿದರೆ ಮತ್ತೆ ಎಲ್ಲಿ ಹತ್ತಲಾಗದೋ ಎಂಬ ಭಯ ಮೊದಲೇ ಒಬ್ಬರೇ ಹತ್ತಲಾರದಂತಹ ಕಡಿದಾದ ಜಾಗ ಮೊದಲು ಹತ್ತುವವರನ್ನು ಹಿಂಬದಿಗೆ ಸಪೋರ್ಟ್ ನೀಡಿ ಹತ್ತಿಸಬೇಕು ನಂತರದವರನ್ನು ಕೈನೀಡಿ ಎಳಕೊಳ್ಳಬೇಕು ಅಂತಹ ಪರಿಸ್ಥಿತಿ ಇರುವ ಜಾಗ ಹಿಮಾಲಯದಲ್ಲಿ ಹೀಗೇ ಹತ್ತಬೇಕಾಗುತ್ತಿತ್ತು ಎಂದು ಆಗಾಗ ಗಿಡ್ಡಜ್ಜ ಹೇಳುತ್ತಿದ್ದರೆ ಈತ ಆಲ್ಲಿಗೇಕೆ ಹೋಗಿದ್ದ ಎಂದು ಕೇಳಬೇಕೆನಿಸುತ್ತಿತ್ತು ಆದರೆ ಎಡಗೈ ಇಲ್ಲದೆಯೂ ಗುಡ್ಡ ಹತ್ತುವುದನ್ನ ತನ್ನಷ್ಟಕ್ಕೇ ಎಂಜಾಯ್ ಮಾಡುತ್ತಿರುವಂತೆ ಖುಷಿಯಾಗಿದ್ದ ಗಿಡ್ಡಜ್ಜ

ಕೊನೆಗೆ ಏಡಿಯನ್ನು ಅದರ ಪಾಡಿಗೆ ಅದನ್ನು ಬಿಟ್ಟುಬಿಡಲಾರದೇ ಪಾಟೀಲನೇ ಓಬಳಪ್ಪನನ್ನ ಬೈದುಕೊಳ್ಳುತ್ತಾ ಸುಮಾರು ಇಪ್ಪತ್ತು ಅಡಿಗಳಷ್ಟು ಇಳಿದುಬಂದು ಅದು ಅಡಗಿಕೊಂಡಿದ್ದರೂ ಅದರ ಕಾಲಿಗೆ ಕಟ್ಟಿದ್ದ ನೈಲಾನ್ ದಾರದ ಆಧಾರದ ಮೇಲೆ ಸುಲಭವಾಗಿ ಕಂಡುಹಿಡಿದು ಹಿಡಿದುಕೊಳ್ಳಲು ಹೋದರೆ ಅದು ಮತ್ತೆ ಮತ್ತೆ ಅತ್ತ ಇತ್ತ ಓಡಾಡಿ ಆಟ ಆಡಿಸಲಾರಂಭಿಸಿತು ಹಾಗೂ ಹಿಡಕೊಳ್ಳಲು ಮುಂದಾದರೆ ಸಣ್ಣ ಕಾಲುಗಳಿಂದ ಎದ್ದು ನಿಲ್ಲುತ್ತಾ ಎರಡು ಕೊಂಡಿಗಳನ್ನೂ ಗುರಿಸುತ್ತಾ ಕಡಿಯಲು ಪ್ರಯತ್ನಿಸಿತು ಉಪಾಯವಾಗಿ ಹಾವನ್ನು ಹಿಡಿಯುವಂತೆ ಎಡಗೈಯ್ಯನ್ನು ಒಂದು ಕಡೆ ಆಡಿಸುತ್ತಾ ಯಾಮಾರಿಸಿ ಬಲಗೈಯ್ಯಿಂದ ಹಿಡಿದುಬಿಟ್ಟ ಸರೆಂಡರ್ ಆದ ಅದು ಕಡ್ಡಿಯಂತಹ ಕಣ್ಣನ್ನ ಮುಚ್ಚುತ್ತಾ ಬಿಡುತ್ತಾ ಮುಂದೇನಾಗುವುದೋ ಎಂದು ನೋಡಲಾರಂಭಿಸಿತು ಗಿಡ್ಡಜ್ಜಗೆ ಮೇಲಿಂದ ತಾನು ಏನು ಮಾಡುತ್ತಿರುವನೆಂದು ಕಾಣದಂತಿರುವುದನ್ನು ಖಾತ್ರಿ ಪಡಿಸಿಕೊಂಡು ಈ ಕಾಲುಗಳು ಇದ್ದರೆ ತಾನೆ ಓಡಿಹೋಗುವುದು ಎಂದು ಉಳಿದಿದ್ದ ಎಲ್ಲಾ ಕಾಲುಗಳನ್ನು ಮುರಿದು ಬಿಸಾಕಿದ ಗಿಡ್ಡಜ್ಜ ಕೇಳಿದರೆ ಕೆಳಗೆ ಬಿದ್ದಾಗ ಎಲ್ಲಾ ಕಾಲುಗಳೂ ಮುರಿದು ಹೋಗಿಬಿಟ್ಟಿವೆಯೆಂದು ಹೇಳಿದರಾಯ್ತು ಎಂದುಕೊಂಡ ಮತ್ತೆ ಟಿಫನ್ ಬಾಕ್ಸ್ನಲ್ಲಿ ಬಂಧಿಸಲ್ಪಟ್ಟಿತು ಆ ಏಡಿ

ಮುಕ್ಕಾಲು ಭಾಗ ಹತ್ತಿದಾಗ ಸ್ವಲ್ಪ ವಿಶಾಲ ಜಾಗ ಕಂಡು ಸದ್ಯ ಸಲೀಸಾಗಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳಬಹುದೆಂಬ ಖುಷಿ ಎಲ್ಲರೂ ಕೈಕಾಲು ಚೆಲ್ಲಿ ತಂದದ್ದನ್ನು ಬಿಚ್ಚಿ ತಿಂದರು ಇಷ್ಟೊತ್ತಿನವರೆಗೆ ಈ ಚೀಲವೇ ಒಂದು ಭಾರವಾಗಿತ್ತು ಎಂದು ಪಾಟೀಲ ಜೋಕು ಹಾರಿಸಿದಂತೆ ನಕ್ಕರೂ ಯಾರೂ ನಗದೇ ಇದ್ದಾಗ ಅದರಲ್ಲಿ ಹಾಸ್ಯವೇನೂ ಇಲ್ಲವೇನೋ ಎಂದು ಸುಮ್ಮನಾದ ಅದನ್ನೆಲ್ಲಾ ಆ ಬ್ಯಾಗಿಗಿಂತ ಪ್ಯಾಂಟಿನ ಜೇಬುಗಳಲ್ಲೇ ತುಂಬಿಕೊಂಡು ಬಂದಿದ್ದರೆ ಭಾರವಾಗುತ್ತಿರಲಿಲ್ಲವೇನೋ ಎಂದು ವ್ಯಂಗ್ಯವಾಗಿ ನಕ್ಕ ಗಿಡ್ಡಜ್ಜ ಅಷ್ಟಕ್ಕೇ ಬಿಡದೇ ಆ ಏಡಿಯನ್ನ ಆ ಸ್ಟೀಲಿನ ಬಾಕ್ಸಿನಲ್ಲಿ ಬಂಧಿಸಿಡುವುದಕ್ಕಿಂತ ಈ ಜೇಬುಗಳಲ್ಲೇ ಇಟ್ಟುಕೊಳ್ಳಬಹುದಿತ್ತಲ್ಲ ಆಗಾಗ ಮೂತ್ರದ ಜಾಗದಲ್ಲಿ ರಕ್ತ ಬರುವಂತೆ ಮಾಡುತ್ತಿತ್ತು ಎಂದು ಅಪಹಾಸ್ಯ ಮಾಡಿದ ಓಬಳಪ್ಪ ಜೋರಾಗಿ ನಕ್ಕದ್ದಕ್ಕೆ ಪಾಟೀಲಗೆ ಅವಮಾನ ಆದಂಗಾಯ್ತು

ಪಾಟೀಲ ಓಬಳಪ್ಪ ಎಲ್ಲ ಸಾಮಾನುಗಳನ್ನು ಎತ್ತಿಕೊಂಡು ಹಿಂಬಾಲಿಸಿದರು ಮುಂದೆ ಮುಂದೆ ಗಿಡ್ಡಜ್ಜ ಹಿಂದೆ ಹಿಂದೆ ಪಾಟೀಲ ಓಬಳಪ್ಪ ಇಕ್ಕಟ್ಟಾದ ಸಂದಿಯಿಂದ ಮೇಲೇರುತ್ತಿದ್ದಂತೆ ಲ್ಯಾಂಡಿಂಗ್ ಥರ ಇದ್ದ ಒಂದು ಜಾಗದಲ್ಲಿ ಬಿದ್ದಿದ್ದ ಅಸ್ಥಿಪಂಜರವನ್ನು ನೋಡಿ ಅಯ್ಯೋ ಸ್ಕೆಲೆಟನ್ ಎಂದು ಕಿರುಚಿದ ಅಷ್ಟರಲ್ಲಾಗಲೇ ನಿರಾತಂಕವಾಗಿ ಅದನ್ನ ದಾಟಿಕೊಂಡು ಮುನ್ನಡೆದಿದ್ದ ಗಿಡ್ಡಜ್ಜ ಏನಾಯಿತೋ ಎಂದು ಹಿಂದಿರುಗಿ ನಿಂತ ಅದಾ ಅದು ಯಾರೋ ಆತ್ಮಹತ್ಯೆ ಮಾಡಿಕೊಂಡವರದಿರಬೇಕು ಎಂದು ಮುಂದುವರೆದ

ಇರಲಿಕ್ಕಿಲ್ಲ ಯಾರೋ ಇವನನ್ನು ಕೊಲೆ ಮಾಡಿರಬಹುದು ಪಾಟೀಲನೆಂದ

ಅದು ಗಂಡೇ ಏಕೆ ಹೆಣ್ಣೂ ಆಗಿರಬಹುದಲ್ವಾ ಆಕೆಯ ಪ್ರೇಮಿಯೇ ಯಾಕೆ ಕೊಲೆ ಮಾಡಿರಬಾರದು ಓಬಳಪ್ಪ ಪ್ರತಿಕ್ರಿಯಿಸಿದ

ಏನೂ ಆಗಿರಬಹುದು ನಾನು ನಾಲ್ಕೈದು ವರ್ಷದ ಹಿಂದೆ ನೋಡಿದಾಗಿಂದಲೂ ಇದು ಇಲ್ಲೇ ಇದೆ ಗಿಡ್ಡಜ್ಜನೆಂದ

ಹಾಗಿದ್ದರೆ ಪೋಲೀಸರಿಗೆ ತಿಳಿಸೋದಲ್ವ ಪಾಟೀಲನೆಂದ

ತಿಳಿಸಿ ಏನು ಪ್ರಯೋಜನ ಇವೆಲ್ಲಾ ಕಾಮನ್ ಬಿಡ್ರೀ ಅಂತಾರೆ ಮೇಲಾಗಿ ಇನ್ವೆಸ್ಟಿಗೇಷನ್ ಅದೂ ಇದೂ ಯಾಕೆ ತಲೆನೋವು ಹೆಂಗೂ ಎಲ್ಲೋ ಒಂದು ಕಡೆ ಮಿಸ್ಸಿಂಗ್ ಅಂತ ಕೇಸಾಗಿರುತ್ತೆ ಏಳು ವರ್ಷ ಟ್ರೇಸ್ ಆಗಲಿಲ್ಲ ಅಂತ ಆಟೋಮೆಟಿಕ್ಕಾಗಿ ಡೆತ್ ಅಂತ ರೆಕಾರ್ಡ್ ಮಾಡಿ ಫೈಲ್ನ ಬಿಸಾಕಿಋತಾರೆ ಯಾರು ಯಾಕೆ ತಲೆ ಕೆಡುಸ್ಕೋತಾರೆ ನೀವೊಳ್ಳೆ ಎಂದು ಮುಂದುವರೆದ

ಗಿಡ್ಡಜ್ಜ ಮುಂದುವರೆದರೂ ಪಾಟೀಲ ಪಟ್ಟು ಬಿಡಲಿಲ್ಲ ಇಲ್ಲ ಇದಕ್ಕೆ ಏನಾದರೊಂದು ಪರಿಹಾರ ಕಂಡು ಹಿಡೀಲೇಬೇಕು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಕುಂತ

ನಾಳೆ ನೇ ಈ ಕೊಲೆ ಮಾಡಿರೋದು ಅಂತಲೋ ಇಲ್ಲ ಹೆಚ್ಚಿನ ವಿಚಾರಣೆಗೆ ಅಂತಲೋ ನಿನ್ನನ್ನೇ ಒಳಗೆ ಹಾಕಿ ಚಮ್ಡ ಸುಲೀತಾರೆ ಗೊತ್ತಾ ಏನೋ ಮಾಡಕ್ಕೆ ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಹಂಗೆ ಬೇಕಾ ನಿಂಗಿದು ನೋಡು ಅದರ ಸ್ಕಲ್ ಇಲ್ಲ ಆ ತಲೆಬುರುಡೇನ ಏನು ಮಾಡಿದೆ ಅಂತ ಇನ್ನೂ ನಾಲ್ಕು ಒದೀತಾರೆ ಅಷ್ಟಕ್ಕೂ ಇದು ಎಷ್ಟು ವರ್ಷ ಹಿಂದಿನದು ಅಂತ ನಿಂಗೊತ್ತಾ

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನಿಸಿದ ಯಾರೋ ದೇಶಪ್ರೇಮಿ ಇಲ್ಲಿ ತಲೆಮರೆಸಿಕೊಂಡು ಕೊನೆಗೆ ಆಹಾರ ಸಿಗದೇ ಸತ್ತಿರಲೂಬಹುದು ಅದಕ್ಕಿಂತಲೂ ಹಿಂದೆ ಅಂದರೆ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಈ ಗುಡ್ಡವನ್ನೇ ಶ್ರೀಪರ್ವತವೆಂದು ಕರೆಯುತ್ತಿದ್ದರೆಂದೂ ಸುತ್ತಲೂ ಭಯಂಕರವಾದ ಕಾಡು ಇದ್ದುದರಿಂದ ಮಯೂರವರ್ಮನು ಇಲ್ಲಿಯೇ ಅಡಗಿಕೊಂಡು ಸೈನ್ಯ ಕಟ್ಟಿ ಪಲ್ಲವರನ್ನು ಸೋಲಿಸಿ ಮೊಟ್ಟಮೊದಲ ಕನ್ನಡರಾಜ್ಯವನ್ನು ಕಟ್ಟಿದನೆಂತಲೂ ಒಳ್ಳೆ ಇತಿಹಾಸದ ಮೇಸ್ಟ್ರರಂತೆ ಮೈನವಿರೇಳುವಂತೆ ವಿವರಿಸಿದ

ಬಹುಶಃ ಈ ಸ್ಕೆಲೆಟನ್ ಮಯೂರ ಬಂಧಿಸಿ ತಂದ ಯಾವದಾದರೂ ಪಲ್ಲವರಾಜನದ್ದಿರಲೂಬಹುದಲ್ಲವೇ ಎಂದು ಇನ್ನಷ್ಟು ಅಳುಕು ಮೂಡಿಸಿದ ಈ ಮೂಳೆ ಮಣ್ಣಿನ ಸಂಪರ್ಕವಿರದೇ ಪೂರ್ಣ ಬಂಡೆಗಲ್ಲಿನ ಮೇಲೆಯೇ ಇರುವುದರಿಂದ ಬಹುಶಃ ಹಾಳಾಗದೇ ಉಳಿದಿರಲೂಬಹುದು ಎಂಬ ಸಾಧ್ಯತೆಯನ್ನು ಮುಂದಿಟ್ಟ ಪಾಟೀಲ ಈ ಮೂಳೆಯ ಹಿಂದೆ ಇಷ್ಟೆಲ್ಲಾ ಸಾಧ್ಯತೆಗಳಿರಲಿಕ್ಕಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ ಹಾಗಾದರೆ ಬಹುಶಃ ಈ ಮೂಳೆ ಮನುಷ್ಯನದೇ ಆಗಿರಲಿಕ್ಕಿಲ್ಲ ಬಿಡಿ ಎಂದು ವಿಷಯಾಂತರ ಮಾಡಿ ಮುಂದುವರೆದ

ಗುಡ್ಡದ ತುಟ್ಟ ತುದಿಯನ್ನು ಏರಿ ಹಿಮಾಲಯವನ್ನೇ ಏರಿದವನಂತೆ ಬೀಗಿದ ಈ ಗುಡ್ಡವನ್ನು ಅದೆಷ್ಟನೇ ಬಾರಿಗೆ ಏರಿದ್ದನೋ ಆದರೂ ಹಿಮಾಲಯವನ್ನು ಎಷ್ಟನೆ ಬಾರಿಗೆ ಏರಿದ್ದರೂ ಅದರಲ್ಲೇನೋ ಹೊಸತನವಿರುವಂತೆ ಗಿಡ್ಡಜ್ಜನ ಪಾಲಿಗೆ ಧವಳಪ್ಪನಗುಡ್ಡ ಒಂದೊಂದು ಸಲವೂ ಒಂದೊಂದು ಹೊಸ ಸಾಧ್ಯತೆಯನ್ನು ತೋರುತ್ತಿತ್ತು ಪಾಟೀಲ ಮತ್ತು ಓಬಳಪ್ಪ ಎರಡೂ ಕೈಯ್ಯನ್ನೂ ಬಾಯಿಗೆ ಅಡ್ಡಯಿಟ್ಟು ಜೀವಮಾನದಲ್ಲಿ ಮೊದಲ ಬಾರಿಗೆ ಈ ಎತ್ತರವನ್ನು ಏರಿದವರಂತೆ ಕೂಗು ಹಾಕಲಾರಂಭಿಸಿದರು ಉತ್ತುಂಗದ ತುಟ್ಟ ತುದಿಯಲ್ಲಿ ತಮ್ಮ ಇರುವನ್ನೇ ಮರೆತು ದೂರ ದೂರ ನೋಡಿದರು ಅಲ್ಲೆಲ್ಲೋ ದೂರದಲ್ಲಿ ಹೈವೇ ಮೇಲೆ ಓಡಾಡುತ್ತಿರುವ ಲಾರಿಗಳು ಸಾಲು ಹಿಡಿದು ಹೋಗುತ್ತಿರುವ ಇರುವೆಗಳಂತೆಯೂ ವಿಶಾಲವಾಗಿದ್ದ ಚಂದ್ರವಳ್ಳಿ ಕೆರೆ ಸಣ್ಣ ಹೊಂಡದಂತೆಯೂ ಕಾಣುತ್ತಿತ್ತು ನಾವು ಮೇಲೆ ಮೇಲೆ ಏರಿದಂತೆಲ್ಲಾ ಕೆಳಗಿನ ನಮ್ಮ ಆಸೆ ಮತ್ತು ಆಶಯಗಳು ಸಣ್ಣದಾಗಿಯೂ ಕ್ಷುಲ್ಲಕವಾಗಿಯೂ ಕಾಣಲಾರಂಭಿಸುತ್ತವೆ ಎಂದು ತನ್ನಷ್ಟಕ್ಕೇ ತಾನೇ ಒಳ್ಳೆ ದಾರ್ಶನಿಕನಂತೆ ಹೇಳಿಕೊಂಡ

ಅಷ್ಟರಲ್ಲಿ ಸುಮ್ಮದ್ದ ಸ್ಟೀಲಿನ ಟಿಫನ್ ಕ್ಯಾರಿಯರ್ ಅಲುಗಾಡಲಾರಂಭಿಸಿದ್ದು ಉರುಳಲಾರಂಭಿಸಿತು ಹಾಗೇ ಉರುಳಿ ಬಿದ್ದು ಹೋದರೆ ಅಲ್ಲಿಗೆ ಇಳಿದು ಎತ್ತಿ ತರುವುದು ಅಸಾಧ್ಯವೆಂದರಿತ ಪಾಟೀಲ ಛಂಗನೆ ಎಗರಿ ಹಿಡಿದುಕೊಂಡ ಅಷ್ಟರೊಳಗೆ ಅದರ ಬಾಯಿ ಬಿಚ್ಚಿಕೊಂಡು ಏಡಿ ಒಂದು ಕಡೆ ಬಾಕ್ಸ್ ಒಂದು ಕಡೆ ಕ್ಯಾಪ್ ಒಂದು ಕಡೆ ಬಿದ್ದವು ನಿರ್ಜೀವ ವಸ್ತುಗಳು ಗಿರಕಿ ಹೊಡೆದು ಸುಮ್ಮನೇ ನಿಂತರೆ ಏಡಿ ಮಾತ್ರ ಅಳಿದುಳಿದಿದ್ದ ಕಾಲುಗಳಲ್ಲೇ ಕುಂಟುತ್ತಾ ಅಡ್ಡಡ್ಡ ನಡೆಯುತ್ತಾ ಎಲ್ಲಾದರೂ ಸಂದಿಗೊಂದಿ ಇದೆಯೇ ಎಂದು ಹುಡುಕಲಾರಂಭಿಸಿತು ಪಾಟೀಲ ಅದನ್ನು ಹಿಡಿಯಲು ಪ್ರಯತ್ನಿಸಿದಷ್ಟೂ ಅದು ಗಾಬರಿಗೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು ಆದರೂ ಅದರ ಕಾರಣದಿಂದ ತಾನು ಎಲ್ಲಿ ಜಾರಿ ಬಿಡುವೆನೋ ಎಂಬ ಆತಂಕದಲ್ಲಿ ಅದರ ಒಂದು ಕೊಂಡಿಯನ್ನು ಹಿಡಿದ ಅದೂ ಇನ್ನೊಂದು ಕೊಂಡಿಯಿಂದ ಅವನ ಕೈಯ್ಯನ್ನು ಹಿಡಿದುಕೊಂಡಿತು ಇವನು ಕೈ ಬಿಟ್ಟರೂ ಅದು ಇವನನ್ನು ಬಿಡದಂತೆ ಹಿಡಿದುಕೊಂಡಿತು ಹಿಂದೆ ಗಿಡ್ಡಜ್ಜನ ಕೈಯ್ಯನ್ನು ಹಿಡಿದಿದ್ದಂತೆ ಪಾಟೀಲ ಕಿರುಚಲಾರಂಭಿಸಿದ ಓಬಳಪ್ಪ ಆತಂಕಗೊಂಡ ಆದರೆ ಗಿಡ್ಡಜ್ಜ ಅದರ ಕಾಲು ಮುರಿದಿದ್ದೆಯಲ್ಲಾ ಅನುಭವಿಸು ಎಂದು ನಗಲಾರಂಭಿಸಿದ ಆದರೂ ಅದರ ಕೊಂಡಿಯನ್ನು ಹಿಗ್ಗಲಿಸಿ ಅದರ ಹಿಡಿತದಿಂದ ಬಿಡಿಸಲು ತನ್ನ ಒಂದು ಕೈಯ್ಯಿಂದಲೇ ಓಬಳಪ್ಪಗೆ ಸಹಕರಿಸಿದ

ಅದು ಕೈಬಿಟ್ಟ ಮೇಲೆ ಪಾಟೀಲ ಹಲ್ಲು ಹಲ್ಲು ಕಡಿದ ತನ್ನ ಕೈಯ್ಯಲ್ಲಿ ಹರಿಯುತ್ತಿರುವ ರಕ್ತವನ್ನೂ ಲೆಕ್ಕಿಸದೇ ಇಕ್ಕಳದಂತೆ ಆಡುವ ಎರಡೂ ಕೊಂಡಿಗಳ ಹೆಬ್ಬೆರಳನ್ನು ಕಡಿತಿಯಾ ಈಗ ಕಡಿ ಎನ್ನುತ್ತಾ ಮುರಿದು ಹಾಕಿದ ಆದರೂ ಒಂದು ಕೊಂಡಿಯಿಂದಲೇ ತಿವಿಯುವಂತೆ ಮಾಡುತ್ತಾ ಉಳಿದಿದ್ದ ಕಾಲುಗಳಲ್ಲಿ ಅತ್ತ ಇತ್ತ ಚಲಿಸಲಾರಂಭಿಸಿತು ಓ ಈ ಕಾಲುಗಳು ಇರೋದಕ್ಕೆ ತಾನೇ ಇನ್ನೂ ಹಿಂಗೆ ಆಡ್ತಾ ಇರೋದು ಎಂದು ಅವುಗಳನ್ನೂ ಮರಿದುಹಾಕಿದ

ವಿಕಲಾಂಗನಂತೆ ಬಿದ್ದುಕೊಂಡ ಅದು ಅತ್ತಇತ್ತ ಚಲಿಸಲಾರದೇ ಬಾಯಿಯನ್ನು ಲಲುವುತ್ತಾ ಕಣ್ಣನ್ನು ಮೇಲೆತ್ತುವುದು ಬಿಡುವುದು ಮಾಡುತ್ತಿತ್ತು ಪಾಟೀಲ ನೋಡ್ರೀ ಸಾಹೇಬ್ರೇ ಇಷ್ಟಾದರೂ ಅದು ಮುರಿದುಹೋಗಿರೊ ನಿಮ್ಮ ಎಡಗೈ ತರ ಆಡುಸ್ತಾ ನಿಮ್ಮನ್ನ ಅಣಗಿಸ್ತಾಯಿದೆ ಎಂದು ಗಿಡ್ಡಜ್ಜಗೆ ಕಿಚಾಯಿಸಿದ ಗಿಡ್ಡಜ್ಜ ಒಂದು ಕ್ಷಣಕ್ಕೆ ನಕ್ಕರೂ ಈ ಕೈಯ್ಯದ್ದು ಒಂದು ದೊಡ್ಡ ಕಥೆ ಎನ್ನುತ್ತಾ ಗಂಭೀರನಾಗಿ ಗುಡ್ಡದ ತುದಿಯಲ್ಲಿ ಮಿಂಚುಸೆಳವಿನಂತಿರುವ ಬಾವುಟ ಕಟ್ಟುವಂತೆಯೂ ಇರುವ ಕಳಸ ಇಡಲೆಂದು ಮಾಡಿರಬಹುದಾದ ತಾಮ್ರದ ಕೋಲನ್ನು ಹಿಡಿದು ಬಹುಶಃ ನೂರಾರು ವರ್ಷಗಳ ಹಿಂದೆ ಈ ಬೃಉಹತ್ ಬಂಡೆಗೆ ಸಿಡಿಲು ಬಡಿದು ಹೀಗೆ ಬಾಯಿ ಬಿಟ್ಟಿರಬಹುದೇನೋ ಎಂದ ಹಿಂದಿನ ಕಾಲದ ಸಿಡಿಲುಗಳೂ ಕೂಡ ಈಗಿನದಕ್ಕಿಂತ ಪವರ್ಫುಲ್ ಆಗಿರುತ್ತಿದ್ದವೇನೋ ಎನ್ನುವಂತೆ

೧೯೬೨ ರ ಭಾರತಚೈನಾ ಯುದ್ಧದಲ್ಲಿದ್ದಾಗ ಬಾರ್ಡರ್ನಲ್ಲಿ ಆ ಸಿಡಿಲಿಗಿಂತಲೂ ಶಕ್ತಿಯುತವಾದ ಬಾಂಬ್ವೊಂದು ಸ್ಫೋಟಿಸಿತ್ತು ನನ್ನ ಕೈಕಾಲುಗಳಿಗೆ ಬಲವಾದ ಪೆಟ್ಟುಬಿದ್ದು ಎರಡು ದಿನ ಪ್ರಜ್ಜೆ ತಪ್ಪಿಹೋಗಿತ್ತಂತೆ ಆ ಬಾಂಬ್ನ ವಿಷದ ಅವಶೇಷವೊಂದು ನನ್ನ ಎಡಗೈಯ್ಯನ್ನು ಹೊಕ್ಕಿತ್ತಂತೆ ಕೈಯ್ಯನ್ನು ಕತ್ತರಿಸದಿದ್ದರೆ ಜೀವಕ್ಕೇ ಅಪಾಯವಿತ್ತು ಅಂತ ನಮ್ಮ ಮಿಲಿಟರಿ ಡಾಕ್ಟರರು ಎಲ್ಲಾ ಮುಗಿದಾದ ಮೇಲೆ ನನಗೆ ಹೇಳಿದರು ಎಂದು ತನ್ನ ಕರುಣಾಜನಕ ಕಥೆ ಹೇಳಿ ಯುದ್ಧದ ಕಲ್ಪನೆಯೇ ಇರದ ಹುಡುಗರ ಮೈನವಿರೇಳುವಂತೆ ಮಾಡಿದ

ಸೀರಿಯಸ್ಸಾಗಿದ್ದ ಗಿಡ್ಡಜ್ಜ ಏಕದಂ ತಮಾಷೆಯ ಮೂಡಿಗೆ ಬಂದು ನೋಡಿ ಪಾಟೀಲ್ ಹೇಳಿದಂತೆ ಹೇಗೆ ನನ್ನ ಕೈ ಏಡಿಯ ಅಸಹಾಯಕ ಕಣ್ಣಿನಂತೆ ಆಗಿದೆ ಎಂದು ಮೋಟು ಕೈಯ್ಯನ್ನು ಅಲ್ಲಾಡಿಸಿ ಅಲ್ಲಾಡಿಸಿ ಲಘುವಾಗಿ ನಕ್ಕ ಕಣ್ಣಂಚಿನ ನೀರು ಹಾಗೆಯೇ ಇತ್ತು ಆದರೆ ಯಾಕೋ ಪಾಟೀಲಗೆ ನಗಲಾಗಲಿಲ್ಲ ಏಡಿಯ ಕಣ್ಣನ್ನೇ ನೋಡುತ್ತಾ ಕುಂತುಬಿಟ್ಟ

ಅದರ ಕಣ್ಣಿನಲ್ಲೇ ನೂರಾರು ಅರ್ಥಗಳು ಹೊಳೆಯಲಾರಂಭಿಸಿದವು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗತ್ತು ಬದಲಾತು
Next post ಲೆವೆಲ್ ಕ್ರಾಸಿಂಗ್

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…