Short story

#ಸಣ್ಣ ಕಥೆ

ಅವಳೊಬ್ಬಳು ಅಹಲ್ಯೆ

0
ಪ್ರಭಾಕರ ಶಿಶಿಲ
Latest posts by ಪ್ರಭಾಕರ ಶಿಶಿಲ (see all)

ಅವಳು ಕಿಟಕಿಯಿಂದ ಹೊರಗಿನ ಕತ್ತಲನ್ನು ನೋಡುತ್ತಿದ್ದಳು. ಮನೆಯ ಲೈಟನ್ನು ಆರಿಸಿ ಕತ್ತಲಲ್ಲಿ ನಿಂತು ಕತ್ತಲನ್ನು ನೋಡುವುದನ್ನು ಅವಳು ಅಭ್ಯಾಸ ಮಾಡಿಕೊಂಡಿದ್ದಳು. ಹೊರಗಿನ ಕತ್ತಲೆಯಿಂದ ಎದ್ದು ಬಂದವನೊಬ್ಬ ಒಳಗಿನ ಕತ್ತಲೆಯನ್ನು ಹೋಗಲಾಡಿಸಬಾರದೇ ಎಂದು ಹಂಬಲಿಸುತ್ತಿದ್ದಳು. ಮದುವೆಯಾಗಿ ಮೂರು ವರ್ಷಗಳು ಉರುಳಿವೆ. ಎಷ್ಟೊಂದು ಕತ್ತಲರಾತ್ರಿಗಳನ್ನು ಅವಳು ಹಾಗೆ ಕಳೆದಿಲ್ಲ? ಗಂಡ ಸೋಮಯ್ಯ ಬೆಂಗಳೂರಿನಲ್ಲಿರುತ್ತಿದ್ದುದೇ ಹೆಚ್ಚು. ಮುತ್ತಮ್ಮ ಇಲ್ಲಿ ಹಗಲಲ್ಲಿ […]

#ಸಣ್ಣ ಕಥೆ

ಸನ್ಯಾಸಿ ರತ್ನ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

– ೧ – ರಾಜ, ರತ್ನ ಇಬ್ಬರೂ ಸ್ನೇಹಿತರು. ಒಂದೇ ಕ್ಲಾಸಿನಲ್ಲಿ ಅವರಿಬ್ಬರೂ ಓದುತ್ತಿದ್ದುದು, ಒಂದೇ ಹಾಸ್ಟೆಲಿನಲ್ಲಿ ಅವರಿಬ್ಬರಿಗೂ ವಾಸ. ಇಬ್ಬರ ಪ್ರಾಯವೂ ಒಂದೇ; ಜಾತಿಯ ಒಂದೇ. ರಾಜ ತಂದೆತಾಯಿ ಯರಿಗೊಬ್ಬನೇ ಮಗ. ರತ್ನನಿಗೆ ಒಬ್ಬಳು ತಂಗಿ ಇದ್ದಳು. ಒಂದು ವಿಷಯ ಹೊರತು ಬೇರೆಲ್ಲಾ ವಿಷಯಗಳಲ್ಲಿ ಇವರಿಬ್ಬರು ಒಂದು. ರಾಜನಿಗೆ ರತ್ನನ ತಂಗಿಯನ್ನು ಕೊಡುವುದು ನಿಶ್ಚಯವಾಗಿತ್ತು. […]

#ಸಣ್ಣ ಕಥೆ

ಕಾರಣ ಗೊತ್ತಿಲ್ಲ……..

0

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್ಟು ದಟ್ಟವಾಗಿದ್ದವು. ಆ ಮರದ ಕೆಳಗೆ ಅವನು ಕಳೆದ ಹತ್ತೊಂಬೊತ್ತು ವರ್ಷಗಳಿಂದ ಬೈಕ್ ನಿಲ್ಲಿಸಿ, ಕೆಲ ನಿಮಿಷ ನಿಂತು ಏನನ್ನೋ ಧ್ಯಾನಿಸಿ, […]

#ಸಣ್ಣ ಕಥೆ

ಒಂದು ಕೊಲೆ

0
ಡಾ || ವಿಶ್ವನಾಥ ಕಾರ್ನಾಡ
Latest posts by ಡಾ || ವಿಶ್ವನಾಥ ಕಾರ್ನಾಡ (see all)

ಏಳು ವರ್ಷದ ಮಗನ ಕೈಯಿಂದ ಚಿತೆಗೆ ಕೊಡಿಸಿದ ಬೆಂಕಿ ಸರಿಯಾಗಿ ಹತ್ತಿಕೊಳ್ಳಲು ನಾಕುಶಿಯನ್ನು ತೋರಿಸುತ್ತಿತ್ತು. ತೊಯ್ದ ಕಟ್ಟಿಗೆಯ ಕೊಳ್ಳಿ ಮತ್ತೆ ಮತ್ತೆ ತುಪ್ಪವನ್ನು ಬೇಡುತ್ತಿತ್ತು. ಸಂಬಂಧಪಟ್ಟವರು ಅದರ ಮೇಲೆ ಉಪ್ಪು ತುಪ್ಪವನ್ನು ಎರಚಿದರು. ಆಗೊಮ್ಮೆ ಬೆಂಕಿ ಬುಗ್ಗೆಂದು ಉರಿದು ಸಂಜೆಯನ್ನು ಸುತ್ತಲೂ ಬೆಳಗುವಂತೆ ಮಾಡಿ ಅಲ್ಲಿ ಸೇರಿರುವವರ ಮುಖ ಪರಿಚಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿತ್ತು. ಶಿವಾಜಿ […]

#ಸಣ್ಣ ಕಥೆ

ಪ್ರಿಯಂವದ

0
ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)

ಸಿನಿಮಾ ಜನರಿಂದ ಹಣ ಕೀಳುವುದೂ ಒಂದು ಯಾಗ ಮಾಡಿದಂತೆಯೆ. ಎಷ್ಟೋ ಸಲ ಅಡ್ವಾನ್ಸ್ ಕೊಟ್ಟಷ್ಟೇ ಗ್ಯಾರಂಟಿ. ನನ್ನ ಪುಣ್ಯ, ನನಗೆ ಸಿಕ್ಕವರು ತೀರಾ ಚಿಲ್ಲರೆಗಳೇನಲ್ಲ. ಚಿಲ್ಲರೆ ಕೊಟ್ಟವರೂ ಅಲ್ಲ. ದೊಡ್ಡ ಬ್ಯಾನರ್‌ನವರು ದೊಡ್ಡದಾಗಿ ಹಣ ಕೊಡದಿದ್ದರೂ (ಜನರು ತಿಳಿದಂತೆ) ಹೇಳಿದಕ್ಕೂ ಕೈ ಬೀಸುವವರಲ್ಲ. ಇನ್ನು ಕೆಲವರು ಕೇಳಿದ್ದಕ್ಕಿಂತ ಐದುಸಾವಿರ ಹೆಚ್ಚೇ ತಗೊಳ್ಳಿ ಸಾರ್, ಕೆಲಸ ಬೊಂಬಾಟ್ […]

#ಸಣ್ಣ ಕಥೆ

ಬೇಟೆ

0
ಪ್ರಭಾಕರ ಶಿಶಿಲ
Latest posts by ಪ್ರಭಾಕರ ಶಿಶಿಲ (see all)

ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್‌. ಈ ಕತೆನ ನಾಯಕ ಈಗ ಬೊದ್ಕಿತ್ಲೆ. ಕತೆ ಹೇಳ್ದೊವೂ ಬೊದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬೊದುಕ್ಯೊಳೋ. ನಮ್ಮೊದ್‌ ಮಲೆನಾಡ್‌. ಕೊಡಗ್‌ಗೆ ಅಂಟಿಕಂಡೇ ಇರುವ ಊರ್‌. ಇಲ್ಲಿ ಒಂದ್‌ ಗುಡಿ ಉಟ್ಟು. ಅದ್‌ ಬೈನಾಟಿ ಭೂತದ್ದ್‌. ವರ್ಷಕ್ಕೊಮ್ಮೆ ಬೈನಾಟಿ ಭೂತದ ಜಾತ್ರೆ […]

#ಸಣ್ಣ ಕಥೆ

ಮನೆ “ಮಗಳು” ಗರ್ಭಿಣಿಯಾದಾಗ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಮನೆ ಮಗಳು “ಸೋನಿ” ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ದಕ್ಷಿಣ ಕನ್ನಡದವರು ‘ಬಸುರಿ ಊಟ’, ಉತ್ತರ ಕರ್ನಾಟಕದವರ ‘ಉಡಿ ತುಂಬುವಿಕೆ’, ಬೆಂಗಳೂರು ಮೈಸೂರು ಕಡೆ ‘ಬಳೆತೊಡಸುವಿಕೆ’ ಸಮಾರಂಭದಂತೆ ಉಡಿತುಂಬುವ ದಿನ ಮನೆಮಂದಿ, ಬಂಧು ಬಳಗ ಸ್ನೇಹಿತರು ಎಲ್ಲರೂ […]

#ಸಣ್ಣ ಕಥೆ

ಕಮಲಪುರದ ಹೊಟ್ಲಿನಲ್ಲಿ

0

ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ. ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ಕೈಯಲ್ಲಿದ್ದ ಮೀನನ್ನು ತರಿದು, ಬಳಿಯ ನೀರು ತುಂಬಿದ ಮಣ್ಣಿನ ಪಾತ್ರೆಗೆ ಒಟ್ಟುತ್ತಿದ್ದನು. ಆಗಾಗ ಹಾರಿ ಬರುವ ಕಾಗೆಗಳನ್ನು ಅಟ್ಟುತ್ತಿದ್ದನು. ಸ್ವಲ್ಪ ದೂರದಲ್ಲಿ […]

#ಸಣ್ಣ ಕಥೆ

ಆಹುತಿ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಹೆಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯೂ ನಿಶ್ಚಯವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ಇದ್ದರು. ಆದರೆ ಅವರು ಬಹಳ ಬಡವರಂತೆ, ನನಗೇನೋ ಐಶ್ವರ್ಯವಂತರ ಅಳಿಯನಾಗಬೇಕೆಂದು ಬಹಳ ಆಸೆಯಿತ್ತು. ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರನಾಗಬೇಕೆಂದು ಬಲವಾದ […]

#ಸಣ್ಣ ಕಥೆ

ಭಾರತ ಶ್ರವಣ

0

ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು. ವ್ಯಾಪಾರಕ್ಕೆ ಹೆದ್ದಾರಿಯಾದ ನೇತ್ರಾವತೀ ನದಿಯು ನೆರೆತುಂಬಿ ಸಾಗರೋಪಮಾನವಾಗಿ ಪ್ರವಹಿಸಿ, ವೀರಪುರವನ್ನು ದ್ವೀಪದಂತೆ ಆವರಿಸಿಕೊಂಡಿತ್ತು. ವೀರಪುರದ ವರ್ತಕರೆಲ್ಲರು ಬೇಸಿಗೆಯಲ್ಲಿ ಗಟ್ಟದ ಗೌಡರಿಂದ ದುಡಿದುದನ್ನು ಮಳೆಗಾಲದಲ್ಲಿ ಉಣ್ಣುತ್ತಿದ್ದರು. ಹಾಗೂ ಬೇಸಿಗೆಯಲ್ಲಿ […]