ಗುರುತು
ಗುಂಡ ಊಟ ಮಾಡುವಾಗ ಮನೆಯೊಡೆಯನನ್ನು ಕೇಳಿದ. “ಯಾಕೆ ನಿಮ್ಮ ನಾಯಿ ನಾನು ತಿಂಡಿ ತಿನ್ನುವಾಗೆಲ್ಲ ಜೋರಾಗಿ ಬೊಗಳುತ್ತೆ?” ಅದಕ್ಕೆ ಮನೆಯೊಡೆಯ ಹೇಳಿದ “ಅದರ ತಟ್ಟೆಯಲ್ಲಿ ಬೇರೆ ಯಾರಿಗೆ ತಿಂಡಿ ಕೊಟ್ಟರು ಅದಕ್ಕೆ ಸಿಟ್ಟು.” *****
ಎಂಕ್ಟ : “ನನ್ನ ಹೆಂಡ್ತಿ ಕಣ್ಣಿಗೆ ಕಸ ಬಿದ್ದು ನೂರು ರೂಪಾಯಿ ಖರ್ಚಾಯ್ತು.” ತಿಮ್ಮ : “ನನ್ನ ಹೆಂಡ್ತಿ ಕಣ್ಣಿಗೆ ರೇಷ್ಮೆ ಸೀರೆ ಬಿದ್ದು ನನಗೆ ಸಾವಿರ ರೂಪಾಯಿ ಖರ್ಚಾಯ್ತು.” *****
ತಿಮ್ಮ : “ನೀವು ಕರಾಟೆ ಕಲಿತಿದ್ರು ಕಳ್ಳ ಮನೆಗೆ ಬಂದಾಗ ಯಾಕೆ ಸುಮ್ಮನಿದ್ರಿ…” ಗುಂಡ : “ಹಾಳಾದ್ದು ಎಷ್ಟು ಹುಡುಕಿದರೂ ಕರಾಟೆ ಡ್ರೆಸ್ ಸಿಗಲಿಲ್ಲ.” *****
ಗುಂಡ : “ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ.” ಶಾಶ್ತ್ರಿಗಳು : “ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ” ಗುಂಡ : “ಇಲ್ಲ ಸ್ವಾಮಿಗಳೇ ನನ್ನ ಹೆಂಡತಿಯೇ ಓಡಿ ಹೋದಳು.” *****
ನಿರ್ದೇಶಕನೊಬ್ಬ ನವ ನಾಯಕ ನಟನಿಗೆ ಹೇಳಿದ. “ನೀನು ಆ ದೊಡ್ಡ ಕಟ್ಟಡದಿಂದ ಧುಮುಕುವ ದೃಶ್ಯ ಬಾಕಿ ಇದೆ” ನಾಯಕ ನಟ ಹೇಳಿದ, “ಅಲ್ಲಿಂದ ಧುಮುಕಿದರೆ ನಾನು ಸತ್ತೇ ಹೋಗುವೆ.” ಅದಕ್ಕೆ ನಿರ್ದೇಶಕ ಹೇಳಿದನು. “ಇರಲಿ ಬಿಡಿ ಇದು ಚಿತ್ರದ ಕಡೆ ದೃಶ್ಯ” *****
ಗುಂಡ ತನ್ನ ಅಮ್ಮನನ್ನು ಕೇಳಿದ “ಅಮ್ಮಾ ಅಕ್ಕನ ಊರಿನಲ್ಲಿ ನೀರಿಗೆ ತುಂಬಾ ಬರುವೆ?” ಅಮ್ಮ ಕೇಳಿದ್ಲು “ಯಾಕೆ ಮಗು?” ಗುಂಡ ಹೇಳಿದ “ಮತ್ತೆ ನಿನ್ನ ಫೋನಿನಲ್ಲಿ ಹೇಳಿದ್ಲು ನಾನು ಇಲ್ಲಿ ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುವೆ” *****
ಭಿಕ್ಷಿಕನೊಬ್ಬ ಮನೆಯೊಡತಿಗೆ ಹೇಳುತ್ತಿದ್ದ. “ನೀವು ನನಗೆ ಊಟ ಕೊಡದಿದ್ದರೆ ಹೋದೂರಿನಲ್ಲಿ ಮಾಡಿದಂತೆ ಮಾಡುವೆ?” ಮನೆಯೊಡತಿ ಗಾಬರಿಯಿಂದ ಕೇಳಿದಳು. “ಹೋದೂರಿನಲ್ಲಿ ನೀನು ಏನು ಮಾಡಿದೆ?” ಭಿಕ್ಷುಕ ಹೇಳಿದ “ಉಪವಾಸ” *****
ತಿಮ್ಮ ಸ್ವಲ್ಪ ಪೆದ್ದ. ನಲವತ್ತಾದರು ಮದುವೆಯಾಗಿರಲಿಲ್ಲ. ಶ್ರೀಮಂತ ಕನ್ಯೆಯೊಬ್ಬಳನ್ನು ನೋಡಲು ಮನೆಯವರೆಲ್ಲಾ ಹೋಗಿದ್ದರು. ತಿಮ್ಮನ ತಾಯಿ ಮೊದಲೇ ಹೇಳಿದ್ರು, ಹೋದಾಗ ಹುಡುಗಿ ಮನೆಯವರೆದರು ದೊಡ್ಡ ದೊಡ್ಡ ಮಾತನಾಡೆಂದು. ಹುಡುಗಿಯ ಊರಿಗೆ ಬಸ್ಸಲ್ಲೇ ಹೋಗಿ ಅಲ್ಲಿಂದ ಕಾರುಮಾಡಿಸಿಕೊಂಡು ಹೋದರು. ಹುಡುಗಿ ಕಡೆಯವರು ಕಾರಿನಲ್ಲಿ ಬಂದಿರಾ ಎಂದಾಗ ತಮ್ಮ “ಇಲ್ಲ ಬಸ್ಸಿನಲ್ಲಿ ಬಂದೆ ಎಂದನು. ಯಾಕೆಂದ್ರೆ ಕಾರಿಗಿಂತ ಬಸ್ಸೇ […]