ವೃದ್ಧ ದಂಪತಿಗಳಿಗೆ ಆಕೆ ಅಡಿಗೆ ಕೆಲಸ ಮಾಡಿಕೊಡಲು ಬರುತ್ತಿದ್ದಳು. ಎರಡು ಮಕ್ಕಳ ತಾಯಿಯಾದ ಆಕೆ ನೀಟಾಗಿ ಸೀರೆ ಉಟ್ಟು, ಪೋನಿಟೈಲಿಗೆ ಹೂವಿಟ್ಟು, ಕೈ ಪರ್ಸಿನಲ್ಲಿ ಮೊಬೈಲ್ ಇಟ್ಟುಕೊಂಡು ಸ್ಟೈಲಾಗಿ ಬರುತಿದ್ದಳು. ಅವಳಿಗೆ ಅಡುಗೆ ಮಾಡುವಾಗ ಗಂಟೆಗೊಮ್ಮೆ ಮೊಬೈಲ್ ಕರೆ ಬರುತಿತ್ತು. ಮಾತನಾಡುತ್ತಾ ಅಡಿಗೆ ಮಾಡಿ ಬಡಿಸುತಿದ್ದಳು. “ಮೊಬೈಲ್ ಗಂಡನಿಂದಾ?” ಎಂದು ವೃದ್ಧೆ ಕೇಳಿದಳು. “ಅಲ್ಲ ಅದು ನಮ್ಮ ಭಾವಂದು, ಅವರು ನೈಟ್ ಷೋಗೆ ಹೋಗೋಣ ಬರ್ತೀಯಾ?” ಅಂತ ಕೇಳಿದರು. ‘ಅಷ್ಟೇ’ ಎಂದು ಸಂತಸದಿಂದ ಹೇಳಿದಳು. ಅವಳ ಭಾವನ ಜೊತೆಯ ‘ಭಾವ’ ಸಂಬಂಧ ವೃದ್ಧ ದಂಪತಿಗಳಿಗೆ ಅರ್ಥವಾಗಲೇ ಇಲ್ಲ.
*****