ಹಗುರವಾಗಿ ತೇಲಿ ಬರುವುದು ನೀರು ಹನಿ ಹನಿ ಮುಗಿಲ ಮಳೆಯಾಗಿ ನಾವು ನಿಂತ ಕಡೆಗೆ ಉತ್ಸವ ಮೂರ್‍ತಿಯಂತೆ ನಾವಾಗಿ ಹೋಗಿ ದಣಿದು ಮಣಿದು ನಮಿಸಿ ಬರಬೇಕು ಕಣ್ಣಿಗೆ ನಿಲುಕದ ಅಗಾಧ ಕಡಲಿಗೆ ಗರ್‍ಭಗುಡಿಯ ವಿಗ್ರಹದಂತೆ...
ಹಾಲಿನ ರುಚಿಯಿಲ್ಲ ಮೊಸರಿಗೆ ಮೊಸರಿನ ರುಚಿಯಿಲ್ಲ ಮಜ್ಜಿಗೆಗೆ ಮಜ್ಜಿಗೆಯ ರುಚಿಯಿಲ್ಲ ಬೆಣ್ಣೆಗೆ ಬೆಣ್ಣೆಯ ರುಚಿಯಿಲ್ಲ ತುಪ್ಪಕ್ಕೆ ದಿನ ಒಂದರಲ್ಲಿ ರುಚಿಗಳ ಹಲವು ಬಗೆ ಪ್ರತಿ ಹೆಜ್ಜೆಯಲ್ಲು ಕಾಲದ ಕುಹಕ ನಗೆ *****
ಮನೆಯಲ್ಲಿ ಬೆಳ್ಳಿಯ ತೊಟ್ಟಿಲು ಚಿನ್ನದ ಬಟ್ಟಲು ಬೆಣ್ಣೆ ತುಪ್ಪ ತಿಂದು ಬೆಳೆದ ಮಕ್ಕಳು ಮರಿ ಮಕ್ಕಳು ಎಲ್ಲೋ ಕಾಡಲ್ಲಿ ಬೆಳೆದ ಗೊಬ್ಬರ ನೀರೂ ಉಣಿಸದ ಬಿದಿರ ಊರುಗೋಲು ಎದುರಾದರೆ ಏನೋ ದಿಗಿಲು *****
ನನ್ನ ಬಾಲ್ಯ ಕಳೆದಿದ್ದು ಮಲೆನಾಡಿನ ಮೂಲೆಯಲ್ಲಿ, ಮಲೆನಾಡ ಎಂದರೆ ಊರಿಗೊಂದು ಮನೆ. ನಮ್ಮ ಗ್ರಾಮವು ದಂಡಕಾರಣ್ಯ ಮಧ್ಯದಲ್ಲಿತ್ತು. ಮಳೆಗಾಲ ಬಂತೆಂದರೆ ನಮ್ಮೂರು ಪೂರ್ಣ ದ್ವೀಪವೇ ಆಗಿಬಿಡುತ್ತಿತ್ತು. ಇದ್ದಕ್ಕಾಗಿ ಏನೋ ನಮ್ಮೂರಿಗೆ ‘ಹಾಳೂರು’ ಅಂತ ಹೆಸರು...