ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ ಹೋಗದೆ ಇಲ್ಲ. ಬೆಟ್ಟದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ, ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ...
ಅಜ್ಜಯ್ಯಾ! ಎಂದರೆ ರಾಮಯ್ಯನವರಿಗೆ ಬಲು ಸಿಟ್ಟು. ಅದು ಊರ ಮಕ್ಕಳಿಗೆ ಗೊತ್ತು. ಆ ಸಿಟ್ಟಿನ ನೋಟ ನೋಡುವುದೆಂದರೆ ಅವರಿಗಿಷ್ಟ. ಆದುದರಿಂದ ರಾಮಯ್ಯನವರು ಎತ್ತ ಸುಳಿಯಲಿ, ಬೀದಿಯ ಎಡದಿಂದ ಬಲದಿಂದ, ಮುಂದಿಂದ ಹಿಂದಿಂದ. ಅಜ್ಜಯ್ಯಾ! ಅಜ್ಜಯ್ಯಾ!...
ಒಣಿಯು ತಿರುಗುವೆಡೆ ಕೆರೆಯೇರಿಯ ಮೇಲಿರುವ ಆ ದೀಪ ಸ್ತಂಭಕ್ಕೆ ‘ನಂದಾದೀಪ’ ಎನ್ನುವ ಹೆಸರು ವಿಲಕ್ಷಣವಾಗಿ ಕಾಣುವುದಿಲ್ಲವೆ? ಆದರೆ ಹಲವು ವೇಳೆ ವಿಲಕ್ಷಣವಾದ ಹೆಸರೇ ಲಕ್ಷಣವಾಗಿದೆ. ಲಕ್ಷಣವಾಗಿ ತೋರುವ ಹೆಸರೇ ಪರ್ಯಾಲೋಚಿಸಿದರೆ ವಿಲಕ್ಷಣ. ಇದಕ್ಕೊಂದು ನಿದರ್ಶನವಾಗಿ...
ಆರು ವರ್ಷದ ಹುಡುಗ, ಕಲ್ಲು ಮುಳ್ಳಿನ ಏರುತಗ್ಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮಲೇರಿಸುವನು....