ಕೆಲವು ಸಲ ಪ್ರಾಪ್ತ ನಡುವಯಸ್ಸಿನ ಪುರುಷರಿಗೆ ಲೈಂಗಾಸಕ್ತಿಕುಂದಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ನಿರುತ್ಸಾಹ, ಜನನೇಂದ್ರಿಯ ಸಪ್ಪೆತನ, ಇವುಗಳಾಗವುದು ಸಹಜ. ಇದಕ್ಕೆ ಕಾರಣ ವಿಪರೀತ ಚಿಂತೆ, ಯೋಚನೆಗಳು, ಪೌಷ್ಠಿಕ ಆಹಾರದ ಕೊರತೆ, ಅಪರಾಧಿ ಪ್ರಜ್ಞೆ ಇವುಗಳಿಂದಾಗಿ ಪುರುಷರನ್ನು ನಿಶಕ್ತಿಗೊಳಗಾಗುತ್ತದೆ. ಈ ಬಗೆಗೆ ಚಿಂತಿಸುವಂತಾಗುತ್ತದೆ. ಇಂಥವರು ಉದ್ರೇಕಗೊಂಡು, ಲೈಂಗಿಕ ಕ್ರಿಯೆಯಲ್ಲಿ ಯಶಸ್ವಿಯಾಗಲು ಇತ್ತೀಚೆಗೆ “ವಯಾಗ್ರ” ಎಂಬ ಮಾತ್ರೆಯನ್ನು ಕಂಡುಹಿಡಿಯಲಾಗಿದೆ. ಮಾತ್ರವಲ್ಲ ಈ ಮಾತ್ರೆಯನ್ನು ಕಂಡು ಹಿಡಿದವರಿಗೆ ೧೯೯೮ರಲ್ಲಿ ನೊಬೆಲ್ ಪುರಸ್ಕಾರವನ್ನು ಸಹ ನೀಡಲಾಗಿದೆ. ಪುರುಷರ ಲೈಂಗಿಕ ದುರ್ಬಲತೆಯನ್ನು ನಿವಾರಿಸಲು, ಜನನೇಂದ್ರಿಯವನ್ನು ಉದ್ರೇಕಗೊಳಿಸಲು ಈ ಮಾತ್ರೆಯನ್ನು ಕಂಡು ಹಿಡಿಯಲಾಗಿದ್ದು ಆಂಗ್ಲ ಭಾಷೆಯ VIGORI (ಶಕ್ತಿ) ಮತ್ತು NIAGAR (ವಿಖ್ಯಾತ ನಯಾಗಾರ ಜಲಪಾತ) ಗಳ ಸಂಯುಕ್ತರೂಪವಾಗಿದೆ. VIAGAR ಪೈಜರ್ ಸಂಸ್ಥೆಯ ವಿಜ್ಞಾನಿಗಳ ಕೊಡುಗೆಯಾಗಿದೆ. ಇವರು ಈ ಮೊದಲು ‘ಸಿಲ್ಡೆನಾಶಿಲ್’ ಎಂಬ ಮದ್ದನ್ನು ಮೂಲತಃ ಅತಿರಕ್ತದೊತ್ತಡವನ್ನು ತಗ್ಗಿಸಲು ಹಾಗೂ ಹೃದಯಶೂಲೆಯನ್ನು ನಿಗ್ರಹಿಸಲು ತಯಾರಿಸಿದ್ದರು. ಈ ಮದ್ದು ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲೂ ಸಹ ಅನುಕೂಲವೆಂಬ ಸತ್ಯವನ್ನು ಕಂಡು ಒಂದು ವಿಚಿತ್ರ ಸನ್ನಿವೇಶದಲ್ಲಿ ಪ್ರಯೋಗಾರ್‍ಥ. ಸಿಲ್ಟೆಸಾಫಿಲ್, ಅನ್ನು ಕೆಲವರು ಸ್ವಯಂ ಸೇವಕರಿಗೆ ನೀಡಲಾಗಿತ್ತು. ಈ ಮಾತ್ರೆಗಳು ಅವರ ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲು ನೆರವಾದವು. ಅಂದೆ ಸಿಲ್ಡೆನಾಷಿಲ್ ಮಾತ್ರೆಗೆ ‘ವಯಾಗ್ರ’ ಎಂದು ಕರೆಯಲಾಯಿತು.
*****
