ಪೂರ್‍ವ ಕಾಲದಲ್ಲಿ ಅಡುಗೆಮನೆಯಲ್ಲಿ ಅಡುಗೆಮಾಡಲು ಸೌದೆ, ನಂತರ ಸೀಮೆ ಎಣ್ಣೆ, ಗ್ಯಾಸ್, ಸ್ಟೌವ್ ಬಂದವು. ಈದೀಗ ಆಧುನಿಕ ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಯ ಬಹುಭಾಗವನ್ನು ವಿದ್ಯುತ್‌ಚಾಲಿತ ಮೈಕ್ರೋವೇವ್ ಒಲೆಗಳನ್ನು ಅಡುಗೆಮಾಡಲು ಬಳೆಸಲಾಗುತ್ತದೆ. ನೋಡಲು ಆಕರ್ಷಕವಾಗಿರುವ ಹಾಗೂ ಸುಲಭವಾಗಿ ಬಳಸಬಹುದಾದ ಮೈಕ್ರೋವೇವ್ ಒಲೆಗಳ ಬಳಕೆಯಿಂದಾಗಿ ತರಕಾರಿ, ಕಾಯಿಪಲ್ಯಗಳಲ್ಲಿರುವ ಮತ್ತು ಧವಸ ಧಾನ್ಯಗಳಲ್ಲಿರುವ ಆಯಂಟಿ ಆಕ್ಸಿಡೆಂಟ್‌ಗಳನ್ನು (ಇವು ನಮ್ಮದೇಹಕ್ಕೆ ಅವಶ್ಯಕವಾದ ವಸ್ತುಗಳು) ನಾಶಮಾಡುತ್ತವೆ ಎಂದು ಸ್ಪೇನ್ ದೇಶದ ವಿಜ್ಞಾನಿ ಡಾ|| ಕ್ರಿಸ್ಟನ್ ಗಾರ್‍ಸಿಯಾ ಅಭಿಪ್ರಾಯ ಪಡುತ್ತಾರೆ. ಮೈಕ್ರೋವೇವ್ ಒಲೆಗಳಲ್ಲಿ ಸೂಕ್ಷ್ಮ ಕಿರಣಗಳು ಅತಿಯಾದ ಶಾಖವನ್ನು ಉಂಟು ಮಾಡಿ ಅವು ತ್ವರಿತಗತಿಯಲ್ಲಿ ಆಹಾರ ಪದಾರ್ಥಗಳನ್ನು ಬೇಯಿಸುತ್ತವೆ ಅಥವಾ ಬಿಸಿಯನ್ನಾಗಿ ಇಡುತ್ತವೆ. ಈ ಕಾರಣದಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಉದ್ಯೋಗದಲ್ಲಿರುವ ದಂಪತಿಗಳು ಆಹಾರಪದಾರ್ಥಗಳ ಬೇಯಿಸುವಿಕೆಗೆ ದುಬಾರಿಯಾದ ಈ ಮೈಕ್ರೋವೇವ್ ಓವನ್‌ಗಳ ಆಕರ್ಷಣೆಗೆ ಒಳಗಾಗುತ್ತಾರೆ. ತರಕಾರಿಗಳಲ್ಲಿ ಅಯಂಟಿ ಆಕ್ಸಿಡೆಂಟ್ಗಳು ಪ್ಲೆವಿನಾಯ್ಡ್ಸ್ , ಕೆರೊಟಿನಾಯ್ಡ್ಸ್ ಮುಂತಾದ ವಸ್ತುಗಳಿದ್ದು ಅವು ನಮ್ಮದೇಹದ ಆರೋಗ್ಯದ ದೃಷ್ಟಿಯಿಂದ ಅತಿಪ್ರಮುಖವಾದ ಪಾತ್ರ ವಹಿಸುತ್ತವೆ. ನಮ್ಮ ದೇಹದಲ್ಲಿ ಕೆಲವೊಂದು ಕ್ರಿಯೆಗಳಿಂದ ಉಂಟಾಗುವ ಫ್ರಿರೆಡಿಕಲ್ಸ್ ಎಂಬ ವಸ್ತುಗಳು ಕ್ಯಾನ್ಸ್‌ರ್ ಮುಂತಾದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ನಿರಿಗೆಗಳ (ಗುಳ್ಳೆಗಳು) ಉಂಟಾಗುವುದು ಕೂಡ ಈ ಫ್ರಿರೆಡಿಕಲ್ಸ್‌ಗಳಿಂದಲೇ (ಅಂದರೆ ದೇಹವು ಹೆಚ್ಚಿ ವಯಸ್ಸಾದಂತೆ ಕಾಣುವುದು) ತರಕಾರಿಗಳಲ್ಲಿ ಯಥೆಚ್ಛೆವಾಗಿರುವ ಅಯಂಟಿ ಆಕ್ಸಿಡೆಂಟ್ಗಳು. ಈ ಪ್ರಿರೆಡಿಕಲ್ಸ್‌ಗಳನ್ನು ನಾಶಮಾಡಿ ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡುತ್ತವೆ. ತರಕಾರಿಗಳನ್ನು ಮೈಕ್ರೋ ವೇವ್ ಓವನ್‌ಗಳಲ್ಲಿ ಬೇಯಿಸುವುದರಿಂದ ಅದರಲ್ಲಿ ಉಂಟಾಗುವ ಅತಿಯಾದ ಉಷ್ಣತೆಯಿಂದಾಗಿ ಆಂಟಿ ಆಕ್ಸಿಡಂಟ್‌ಗಳು ಬಹುತೇಕವಾಗಿ ನಾಶವಾಗುತ್ತವೆ. ಪ್ರಶರ್‌ಕುಕ್ಕರ್ ಅಥವಾ ಹವೆಯಲ್ಲಿ ಮಿತವಾಗಿ ಬೇಯಿಸುವುದರಿಂದ ಅಯಂಟಿ ಆಕ್ಸಿಡಂಟ್‌ಗಳು ಯಾವುದೇ ತೆರನಾಗಿ ನಾಶವಾಗದೇ ಹಾಗೆಯೇ ಉಳಿಯುತ್ತವೆ. ಹೀಗಾಗಿ ಹಬೆಯಲ್ಲಿ ಮಿತವಾಗಿ ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಯಂಟಿ ಆಕ್ಸಿಡೆಂಟ್‌ಗಳ ಹೀರಿಕೊಳ್ಳುವಿಕೆ ಉಂಟಾಗಿ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತದೆ.
ಅದಕ್ಕಾಗಿ ವೇಗವಾಗಿ ಓಡುವ ತಂತ್ರಜ್ಞಾನ ಮತ್ತು ಮೈಕ್ರೋ ವ್ಯವಸ್ಥೆಗಳಿಗೆ ಅಂತರಂಗವನ್ನು ಅರಿಯದೇ ಮಾರು ಹೋಗಬಾರದು. ಬೇಗನೆ ಮತ್ತು ಸ್ವಯಂ ಚಾಲಿತವೆಂದು ಬಗೆದು ಹಣಸುರಿದು ಕೊಂಡು ತಂದ ಇಂಥಹ ಮೈಕ್ರೋ ವ್ಯವಸ್ಥೆಗಳ ಬಗೆಗೆ ಆದಷ್ಟು ಅಧ್ಯಯನ ಮಾಡಿ ಉಪಯೋಗಿಸುವುದು ಒಳ್ಳೆಯದು.
*****



















