ಈ ಶುಗರ್ ನನ್ನೊಂದಿಗೆ
ನನ್ನ ಪತಿಯಂತೆ
ನನ್ನ ಪತಿಯ ಜೊತೆ ನನಗೆ
ಈ ಜನ್ಮಕೆ ಸಾಕು
ಶುಗರಿನ ಜೊತೆ ಮಾತ್ರ
ತಲೆಮಾರುಗಳಿಗೆ ಸಾಗುತ್ತದೆ.
ಪತಿಯನ್ನು ಮೆನ್‌ಟೇನ್
ಮಾಡಿದಂತೆ ಶುಗರಿಗೂ ನಾನು
ಮೆನ್‌ಟೇನ್ ಮಾಡಬೇಕು.
ಸ್ವಲ್ಪ ಅಲಕ್ಷ ಮಾಡಿದರೂ
ಪತಿರಾಯ ಕೆಂಡಾಮಂಡಲ
ಈ ಶುಗರ್ ಕೂಡ ಹಾಗೆಯೇ
ನನ್ನ ಪತಿಯ ಹಾಗೆ.
ಮನೆತನದ ಸಂಸ್ಕಾರಗಳನ್ನು
ತಲೆತಲೆಮಾರಿಗೂ ಸಾಗಿಸು
ಎನ್ನುತ್ತಾನೆ ನನ್ನ ಪತಿರಾಯ
ಮನೆತನದ ಸಂಸ್ಕಾರಗಳು
ತಲೆತಲಾಂತರಕ್ಕೆ ಸಾಗುವವೋ
ಇಲ್ಲವೋ ಖಚಿತ ಹೇಳಲಾರೆ.
ಶುಗರ್ ಮಾತ್ರ ವಂಶವಾಹಿನಿ
ತಲೆತಲಾಂತರಕ್ಕೂ ಬಳುವಳಿ.
*****



















