Home / K Sharifa

Browsing Tag: K Sharifa

ಯಾವ ಹೆಸರಿನಿಂದ ಕರೆಯಲೇ ನಿನಗೆ ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ| ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ ನಿನ್ನ ಹೆಸರು ನನಗೆ ಗೊತ್ತೇ ಇಲ್ಲ ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ| ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ ಪೀಡಿತಗಳ ನ್ಯಾ...

ಹೆದರದಿರು ಗೆಳತಿ ಕೂಡದೇ ಮೂಲೆಯಲಿ ನಡೆದಾಡು ಬಾ ಗೆಳತಿ ಲೋಕದ ದುಃಖಗಳು ನಿನ್ನ ಬಾಗಿಲನೇ ತಟ್ಟಲಿಲ್ಲ ಹಲವು ಬಾಗಿಲುಗಳ ತಟ್ಟಿವೆ. ಎದ್ದು ಸುಧಾರಿಸಿಕೋ ಕೆಲ ಸಮಯ ಭರವಸೆ ನಿಭಾಯಿಸಬೇಕಿದೆ ನನ್ನ ಜೊತೆಗೂಡಿ ನಡೆದಾಡು ಬಾ ಗೆಳತಿ ಹೆಜ್ಜೆ ಹಾಕು ಬಾ. ಗು...

ಏರುತಿವೆ ಏರುತ್ತಿವೆ ಬೆಲೆಗಳು ಗಗನಕೆ ಏರುತ್ತಿವೆ ಅಕ್ಕಿ, ಬೇಳೆ, ಎಣ್ಣೆ ಆಕಾಶದ ನಕ್ಷತ್ರಗಳು ||ಏರುತ್ತಿವೆ|| ಏಳುತಿವೆ ಏರುತ್ತಿವೆ ಬಂಗಲೆಗಳು ಗಗನಕೆ ಏರುತ್ತಿವೆ ಗುಡಿಸಲು ನೆಲಕಚ್ಚಿ ಬಡವರು ಬೀದಿಗೆ ಬಂದಿಹರು ||ಏರುತ್ತಿವೆ|| ಕಪ್ಪು ಕಣದ ಶ್ರ...

ಮಹಾನಗರಗಳ ಕಟ್ಟುವವರು ಬೀದಿಯಲ್ಲಿ ಮಲಗುವವರು ಮನೆಮನೆಯ ಮನೆಗೆಲಸ ಮಾಡಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡವರು ಎಲ್ಲಿಂದಲೋ ಬಂದವರು ಎಲ್ಲಿಯೂ ನೆಲೆ ಇಲ್ಲದವರು. ತರಕಾರಿ, ಬೇಳೆ, ಕಾಳು, ಅಕ್ಕಿ ಬೆಲೆ ಗಗನಕ್ಕೇರಿ ಕೊಳ್ಳಲು ಸಾಧ್ಯವಾಗದ ಸ್ಥಿತಿ...

ಈ ಶುಗರ್ ನನ್ನೊಂದಿಗೆ ನನ್ನ ಪತಿಯಂತೆ ನನ್ನ ಪತಿಯ ಜೊತೆ ನನಗೆ ಈ ಜನ್ಮಕೆ ಸಾಕು ಶುಗರಿನ ಜೊತೆ ಮಾತ್ರ ತಲೆಮಾರುಗಳಿಗೆ ಸಾಗುತ್ತದೆ. ಪತಿಯನ್ನು ಮೆನ್‌ಟೇನ್ ಮಾಡಿದಂತೆ ಶುಗರಿಗೂ ನಾನು ಮೆನ್‌ಟೇನ್‌ ಮಾಡಬೇಕು. ಸ್ವಲ್ಪ ಅಲಕ್ಷ ಮಾಡಿದರೂ ಪತಿರಾಯ ಕೆಂ...

ಧರ್ಮದ ಠೇಕೆದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು. ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು. ಧರ್ಮದ ರಾಜಕೀಯದಲ್ಲಿ ಅಧರ್ಮದ ಕತ್ತಿ ಝಳಪಿಸುವ ಗುಜರಾತನು ಕಣ್ಣಾರೆ ಕಂಡಿದ...

ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ ಇವರು ಇಲ್ಲಿ ಅಭಿನಂದಿಸುತ್ತಾರೆ. ಇಲ್ಲಿ ಬಾ...

“ಶಾಲೆಗೆ ಹೋಗುವುದು ಬೇಡ ಖುರಾನ್ ಓದು ಅಷ್ಟೇ ಸಾಕು. ಹೊರಗೆ ಹೋದಿಯಾ ಜೋಕೆ ಬುರ್ಖಾ ಧರಿಸು” ಇದು ಅಪ್ಪನ ಕಟ್ಟಾಜ್ಞೆ ಬಕ್ರೀದ್ ಹಬ್ಬ ಬಂದಿತು ಅಪ್ಪ ತಂದರು ಝುಮುಕಿ, ಬೆಂಡೋಲೆ ಸುರ್ಮಾ, ಬಟ್ಟೆ, ಚಪ್ಪಲಿ, ಅತ್ತರು, ಮೆಹಂದಿ, ಎಲ್ಲವು ಖುಶಿಪ...

ಎಡೆಬಿಡದೇ ಸುರಿದ ಮಳೆಗೆ ತತ್ತರಿಸಿದ ಮುಂಬೈ ನಗರಿ ಚೇತರಿಸಿ ಉಸಿರಾಡುತ್ತಿದ್ದಂತೆಯೇ ಒಂದರ ಹಿಂದೊಂದರಂತೆ ಸರಣಿ ಬಾಂಬುಗಳ ಸ್ಪೋಟ ದುರಂತಗಳ ಮಧ್ಯದಲ್ಲಿಯೇ ಎದ್ದು ನಿಲ್ಲುತ್ತದೆ ಮುಂಬೈನಗರಿ ಪಿನಿಕ್ಸ್ ಹಕ್ಕಿಯ ಸಾವಿನಂತೆ ಮತ್ತೆ ಮತ್ತೆ ಸತ್ತು ಬದು...

ಅರ್ಥವಾಗದ ಭಾಷೆಯ ದಪ್ಪದಪ್ಪ ಧರ್ಮಗ್ರಂಥಗಳ ಸುಮ್ಮನೆ ಒಟಗುಟ್ಟುವ ಅವನು ಏನೋ ಸಾಧಿಸಿದಂತೆ ಬೀಗುತ್ತಾನೆ ಸುಳ್ಳು ತೃಪ್ತಿಯ ಅಹಂಕಾರದ ಮೂಟೆಯ ಅಂತ್ಯ ಅದರಲ್ಲೇ ರೇಷ್ಮೆ ಹುಳುಕಟ್ಟಿದ ಗೂಡಿನಲ್ಲೇ ದೊಡ್ಡ ದೊಡ್ಡ ಮಣ್ಣಹೆಂಟೆಗಳ ದೂರ ದೂರಕೆ ಉರುಳಿಸಿ ಸು...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...