ಹೆದರದಿರು ಗೆಳತಿ
ಕೂಡದೇ ಮೂಲೆಯಲಿ
ನಡೆದಾಡು ಬಾ ಗೆಳತಿ
ಲೋಕದ ದುಃಖಗಳು
ನಿನ್ನ ಬಾಗಿಲನೇ ತಟ್ಟಲಿಲ್ಲ
ಹಲವು ಬಾಗಿಲುಗಳ ತಟ್ಟಿವೆ.
ಎದ್ದು ಸುಧಾರಿಸಿಕೋ ಕೆಲ ಸಮಯ
ಭರವಸೆ ನಿಭಾಯಿಸಬೇಕಿದೆ
ನನ್ನ ಜೊತೆಗೂಡಿ ನಡೆದಾಡು
ಬಾ ಗೆಳತಿ ಹೆಜ್ಜೆ ಹಾಕು ಬಾ.
ಗುರಿ ಮುಟ್ಟುವ ಬಯಕೆ
ದೂರ ಕ್ರಮಿಸುವ ಭರವಸೆ
ಹೆಜ್ಜೆ ಹಾಕು ಬಾ ನನ್ನೊಂದಿಗೆ
ದುಃಖಗಳು ಪ್ರತಿರಾತ್ರಿಯ ಸಂಗಾತಿ
ಬೆಳಕು ಹರಿಯುವ ಭರವಸೆ
ಹೊತ್ತು ನಡೆಯೋಣ ಜಗದಲ್ಲಿ
ಭರವಸೆಯ ಬುತ್ತಿಗಳ
ಹೆದರದಿರು ಬಾ ಗೆಳತಿ ಹಜ್ಜೆ ಹಾಕು.
ಅಮೂಲ್ಯ ಕ್ಷಣಗಳ ತೊರೆಯದಿರು
ದುಃಖದ ಕಪ್ಪು ಹೊಗೆಯಾಗಿ,
ಬಾಚಿಕೋ ನಿನ್ನ ತೆಕ್ಕೆಗೂ
ಕೆಲ ಸಂತಸದ ಕ್ಷಣಗಳನ್ನು
ಲೋಕದಲಿ ಹಂಚಿ ಬಿಡು ಸುಖ ದುಃಖ
ಆಯ್ದುಕೊಳ್ಳಲಿ ಜಗವೂ ಸ್ವಲ್ಪ
ಹರಿಸದಿರು ಕಣ್ಣೀರ ಹನಿಗಳು.
ಹನಿಗಳು ಪವಿತ್ರ ಗಂಗೋತ್ರಿ
ಕಲ್ಮಶ ಕಳೆದುಕೊಂಡೆನೆಂದುಕೋ
ಹೆಜ್ಜೆ ಹಾಕುವ ಬಾ ಗೆಳತಿ.
ಅನಂತ ದುಃಖಗಳಿವೆ ಜಗದಲಿ
ನಿನ್ನೊಬ್ಬಳ ದುಃಖ ಯಾವ ಲೆಕ್ಕ?
ದೀಪದಡಿ ತಮಂಧದವಾಸ
ಬೆಳಕು ಹರಿಯುವ ಭರವಸೆ.
*****

















