ಚೀನಾ ದೇಶ ನಮ್ಮ ಭವ್ಯ ಭಾರತದ ಮೇಲೆ ಮೇಲಿಂದಮೇಲೆ ಕಾಲು ಕೆದರಿ ಜಗಳ ತೆಗೆಯುತ್ತಿದೆ. “ಮಾರಿ ಕಣ್ಣು ಹೋರಿ ಮೇಲೆ” – ಎನ್ನುವಂತೆ ಚೀನಾದ ಕಣ್ಣು ನಮ್ಮ ಭವ್ಯ ಭಾರತದ ಮೇಲೆ.
ಚೀನಾ ದೇಶ ತನ್ನ ಮನೆಯನ್ನು ತಾನು ಸರಿಮಾಡಿಕೊಂಡು ಉನ್ನತಿ ಸಾಧಿಸಲು ಸಾಧ್ಯವಾಗುತ್ತಿಲ್ಲ! ದಿನದಿಂದ ದಿನಕ್ಕೆ ತಬ್ಬಲಿ ಚೀನಾವಾಗುತ್ತಿದೆ. ತಳ ಸೋರುವ ಮಡಿಕೆ ಕುಡಿಕೆಯಾಗುತ್ತಿದೆ.
ಇತ್ತೀಚಿನ ೨೦೧೫ರ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಉದ್ಯೋಗದ ಬೆನ್ನು ಹತ್ತಿದ ತಂದೆತಾಯಿ ಅಜ್ಜಅಜ್ಜಿಯರಿಂದ ತಬ್ಬಲಿಗೊಳಗಾದ ಸುಮಾರು ೬.೧ ಕೋಟಿ ಕೋಟಿ ಮಕ್ಕಳು ಚೀನಾದ ಗ್ರಾಮೀಣ ಭಾಗಗಳಲ್ಲಿದ್ದಾರೆಂಬಾ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದೆ.
ಇನ್ನೊಂದು ಧಾರುಣವಾದ ಸಂಗತಿಯೆಂದರೆ… ನೈರುತ್ಯ ಚೀನಾದ ತಬ್ಬಲಿ ಗ್ರಾಮವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ! ಅಲ್ಲಿ ೧೩೨ ತಬ್ಬಲಿಯಾದ ಸಣ್ಣ ಪುಟ್ಟ ಕಂದಮ್ಮಗಳಿದ್ದಾರೆ!
ಹೆತ್ತ ಹೊತ್ತ ಅಪ್ಪ ಅಮ್ಮ ಸಂಬಂಧಿಕರಿಲ್ಲದೆ, ಈ ತಬ್ಬಲಿಗಳು ಲೈಂಗಿಕ ವೃತ್ತಿಗೆ ಬಳಕೆಯಾಗುವ ಅಪಾಯಗಳು ತೀರಾ ಹೆಚ್ಚು ಎಂದು ಆತಂಕಕಾರಿ ಸುದ್ದಿಯನ್ನು ಸ್ಥಳೀಯ ಪತ್ರಿಕೆಯಾದ “ಪೀಪಲ್ಸ್ ಡೈಲಿ”ಯು ಅಲ್ಲಿ ಬಹಿರಂಗ ಪಡಿಸಿರುವುದು.
ಅಲ್ಲಿ ವಿಶೇಷವಾಗಿ ಚೀನಾದ ಕೇಂದ್ರ ಭಾಗದಲ್ಲೇ ಇರುವ ಹುನಾನ್ ಪ್ರಾಂತ್ಯದ ಹುವಾಂಗ್ ಜಿಂಗ್ ಗ್ರಾಮ ವ್ಯಾಪ್ತಿಯ ಶಾವೊಯಾಂಗ್ ಕೌಂಟಿ ಎಂಬ ಗ್ರಾಮದಲ್ಲಿರುವ ೧೩೨ ತಬ್ಬಲಿ ಮಕ್ಕಳ ಕಥೆ ಅರಣ್ಯ ರೋದನವಾಗಿದೆ!! ಇದನ್ನು ತಬ್ಬಲಿ ಗ್ರಾಮ ಎಂಬ ಕುಖ್ಯಾತಿಗಳಿಸಿದೆ.
ಇಲ್ಲಿನ ೧೩೨ ಮಕ್ಕಳಲ್ಲಿ ೧೧೬ ಮಕ್ಕಳು ತಾಯಂದಿರನ್ನು ಕಳೆದುಕೊಂಡಿದ್ದಾರೆ. ಮರು ಮದುವೆ, ಮನೆ ಬಿಟ್ಟು ಓಡಿ ಹೋದವರು, ಮೃತ ಪಟ್ಟಿರುವುದು… ಕೆಲಸದಲ್ಲಿರುವುದು ಇತ್ಯಾದಿ ಕಾರಣಗಳೆಂದು ವರದಿಯು ಖಚಿತಪಡಿಸಿದೆ.
ಇಡೀ ವಿಶ್ವದಲ್ಲೇ ತೀರಾ ಬೃಹತ್ ಆರ್ಥಿಕ, ಸಮಾಜಿಕ, ರಾಜಕೀಯ ಶಕ್ತಿಯೆನಿಸಿರುವ ಬೃಹತ್ ರಾಷ್ಟ್ರ ಚೀನಾದಲ್ಲಿ ಈಗಾಗಲೇ ಸುಮಾರು ೨೬ ಕೋಟಿ ಕೋಟಿ ವಲಸೆ ಕೂಲಿ ಕಾರ್ಮಿಕರಿರುವರೆಂದು ಅಲ್ಲಿನ ಘನ ಸರ್ಕಾರ ೨೦೧೪ ರ ಸಾಲಿನಲ್ಲಿ ಅಧಿಕೃತವಾಗಿ ಅಂಕಿ ಅಂಶ ಹೊರಗೆಡವಿದೆ.
ಇಲ್ಲಿನ ಬಲು ವಿಚಿತ್ರವಾದ ಸಮಸ್ಯೆಯೆಂದರೆ, ತನ್ನಮ್ಮ ತನ್ನಪ್ಪ ಹೇಗಿದ್ದರೆಂದು ಯಾವ ಮಕ್ಕಳಿಗೂ ನೆನಪಿಲ್ಲ. ಭಾವನಾತ್ಮಕ ನಂಟಿನ ಅಂಟು ಅಲ್ಲಿಲ್ಲದೆ ವಿಲಿವಿಲಿ ಒದ್ದಾಡುತ್ತಿರುವರೆಂಬ ಸತ್ಯ ಸಂಗತಿಯನ್ನು ಸ್ಥಳೀಯ ಪತ್ರಿಕೆ ಆತಂಕ ವ್ಯಕ್ತಪಡಿಸಿದೆ.
ಇದೇ ನಗರದಲ್ಲಿ ಕೆಲಸ ಅರಸಿ ತನ್ನ ನಾಲ್ಕು ಮಕ್ಕಳನ್ನು ತೊರೆದು ಗ್ಯುಜೋವ್ ಪ್ರಾಂತ್ಯದ ತಾಯಿಯೊಬ್ಬಳು ಹೋದಾಗ ದಿಕ್ಕು ತೋಚದೆ ಇವರೆಲ್ಲ ಏಕಕಾಲಕ್ಕೆ ಜುಲೈ ತಿಂಗಳು ೨೦೧೫ ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ಜರುಗಿದೆ.
ಇಂಥಾ ದುಃಸ್ಥಿತಿ ಭವ್ಯ ಭಾರತಕ್ಕೆ ಎಂದೂ ಭಾರದಿರಲಿ ಅಲ್ಲವೇ??
*****

















