ಹಸಿರಿನೇರುವೆ ಹಗಲ ಬೆಳಕಿನೊಳು ಬೆರೆದಂತೆ
ಸಂಜೆಮುಗಿಲಿನ ಮಳಲೊಳೋಲಗಿಸುವಂತೆ
ಭೀಷ್ಮ ಜಲಪಾತದೊಳು ಸ್ಥಿರಚಂಚಲೇಂದ್ರಧನು
ಎಸೆವ ಪರಿ ಭವದ ಮೇಲಾಡುತಿರುವಂತೆ
ಬಣ್ಣ ಬಣ್ಣದಿ ಬೆಳಕ ತಡೆದಿಡುವ ಹೂ ಮರಗ-
ಳಲುಗಿನೊಳು ಬಂದು ಸಾರಿದನೆನ್ನುವಂತೆ
ಮಲೆಯ ಘನಮೌನದೊಳು ಕನಸಾಂತು ನಿಂದಂತೆ
ಕೆಂದಳಿರ ಹೊಳಹಿನೊಳು ಉಯ್ಯಲಿಡುವಂತೆ-
ನನ್ನರಿವಿನೀ ಮನೆಯೊಳಂಜಿಯಡಗಿರುವಂಥ ಮುದದಾಪ್ತಗೆ
ಸನ್ನೆಗೈವನು ಹೊರಗೆ ಚೆಲುವುದೊರೆ ಬಳಿಯ ಸಾರೆಂಬ ಪರಿಗೆ.
*****


















