ನಾಳೀಜಂಘ

ಬಾನ ಗೂಡಾರವನು, ಬೆಟ್ಟ, ನಡುಗೋಲಂತೆ ತುಟ್ಟತುದಿಗೋಪುರದ ಮೇಲೆತ್ತಿ ಹಿಡಿದಂತೆ ನಿಂತಿರಲು ದೂರದೊಳು, ಸುತ್ತ ನಭವಿಳಿದಿರಲು ಸಂಜೆರಂಗಿನ ಮೋಡ ಅದನಂದಗೊಳಿಸಿರಲು, ಸರಸಿಯೊಳು ಝಗಝಗಿಸಿ ರವಿಯ ಛವಿಯಾರುವೊಲು ಹಕ್ಕಿವಿಂಡಿಂಚರಿಸಿ ಮರದೊಳಡಗುತಲಿರಲು, ಬೈಗಿನ ಮಲರ್ವುಡಿಯೊ ಎಂಬ ತೆರ ಕಣಿವೆಯೊಳು...

ಹಸು-ಕರು

ಹಸುವಿನ ಹೆಸರು ಯಶೋದಾ ಅದರ ಬಣ್ಣ ಊದಾ ಅದೊಂದು ಕರುವನು ಈದ ಸಂಗತಿಯೇನು ಪ್ರಮಾದ? ಅದರಿಂದೆನಗೀ ಕವಿತೆಯ ಬಾಧ ಪ್ರಾಸವ ಬರೆವ ವಿನೋದ. ನಾನದಕಿತ್ತುದು ನೂರು ರುಪಾಯಿ ಮಧ್ಯಸ್ಥಿಕೆಗಿರೆ ರಂಗಾಬೋಯಿ ನೆರೆಮನೆಯೊಳಗಿದಕಾಯಿತು ಸಾಲ ಬಿತ್ತರಿಸಿತೆಮ್ಮ...

ಜುಟ್ಟು

ನನ್ನ ಜುಟ್ಟನದಾರು ಮೆಚ್ಚರು ನೋಡು ನೋಡಿದರಾವುಟ ನನ್ನ ನೇಹಿಗರೆಲ್ಲರಚ್ಚರಿ ನನ್ನ ತಲೆಯೇ ಬಾವುಟ. 'ಭಟ್ಟವಂಶದಿ ಹುಟ್ಟ ಪಡೆದುದು ಸಾರ್ಥವೆನಿಸಿದನೀ ಭಟ ಮ್ಲೇಚ್ಛರಿದಿರೊಳು ಸ್ವೇಚ್ಛೆಯಿಂದಲಿ ಮತವ ಮೆರೆದಿಹನೇಹಟ!' ಎಂದು ಮುತ್ತಣ್ಣಾದಿ ಮುಖ್ಯರು ನನ್ನ ಹೊಗಳುವ ತೆರದೊಳು...

ಮುತ್ತಣ-ಸಾಬಿ-ದೊರೆಸಾಮಿ-ದೇವರು

ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ!...

ಬಿನದ

೧ ಬಾ ಕೆಳೆಯ, ಬಾ ಕೆಳೆಯ ಹೋಗೋಣ ಬಾ- ಗುಡ್ಡವೆದ್ದಿಹ ಕಡೆಗೆ ಕಣಿವೆ ಬಿದ್ದಿಹ ಕಡೆಗೆ ತೊರೆಯುರುಳಿ ದನಿಹರಳ ಹೊಳೆಸುವೆಡೆಗೆ. ಇಲ್ಲದಿರೆ, ಜಲದ ಜಲ್ಪವ ಕೇಳೆ ಕೊಳದ ತಡಿಗೆ. ಹೆಡೆಯ ತೆರದೊಳು ಮಲೆಯ ನೆಳಲನಾಡಿಪ...

ವಿಮರ್ಶಕನ ಕಷ್ಟ

ಅಗೊ ಅಗೊ ಬಂದ ಓ ಹೊತ್ತಗೆಯನೆ ತಂದ! ನಾಚುತ ನಿಂದ "ಬಿಡುವಿಹುದೇ?” ಎಂದ. ಬಿಡುವಿಲ್ಲದೆ ಏನು?- ಇದು ಈತನ ಜಾಣು. ಬಾ ಇನ್ನೇನು, ಆಡಿಸು ಗೋಣು. ಕಟತಟಕಟವೆನುತ ಏನೀ ನುಡಿಸಿಡಿತ! ಇದೆ ಈತನ ಬೆರಗು,...

ಪ್ರಶ್ನೆ-ಉತ್ತರ

ಮಾಮರ ತಳಿತಿಹುದೇತಕ್ಕೆ?- ಕೋಗಿಲೆ ಸರಗೈಯಲಿ ಎಂದು. ಹೂಗಿಡ ಮಲಗಿಹುದೇತಕ್ಕೆ?- ತುಂಬಿಯು ಬಂಬಲಿಸಲಿ ಎಂದು ಪಾರ್ಕೊಳು ಹಚ್ಚನೆ ಹಸುರೇತಕ್ಕೆ?- ಗರಿಕೆಯ ರಸವನ್ನು ಹೀರುತ್ತ ಭಾವಾವೇಶವ ಹೊಂದಲಿ ಎಂದೇ ಕವಿಜನ ನಿಟ್ಟಿಸಿ ಬಾನತ್ತ! *****

ಯುದ್ಧಸಮರ್ಥನ ವಾದ

ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ ಮುಖ್ಯ ಶಾಂತಿಯಸಹ್ಯ. ಸಂಗ್ರಾಮದೊಳೇ ಸತ್ಯದ ಸುಳಿವು...

ನವಿರಂಗಿ

ಒಂದೂರಿನಲ್ಲಿ ಒಬ್ಬರಸಿದ್ದ ಅವನುಡುಪೆಂದರೆ ಬಹು ಪ್ರಸಿದ್ದ. ಒಮ್ಮೆಗೆ ಓಲಗದೊಳು ಕುಳಿತಿರಲು ಬಂದೆರೆಡೆಗೆ ಇಬ್ಬರು ದರ್ಜಿಗಳು, “ಕಂಡೂ ಕಾಣದ ತೆರ ನವಿರಾಗಿಹ ಗಾಳಿಗು ಆಕಾಶಕು ತೆಳುವಾಗಿಹ ಸೋಜಿಗದುಡುಪನು ಹೊಲಿಯುವೆ"ವೆಂದು ಆಣೆಯನಿಟ್ಟರು ಎಲ್ಲರ ಮುಂದು. ಅರಸಗೆ ಉಡುಪೆಂದರೆ...

ಓ ನಲ್ಲೆ-ಬಾ ಇಲ್ಲೆ

(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ ಎನಗೆನ್ನ ಸು ದಕ್ಕದೆ ಇದೆಯಲ್ಲೇ ನನ್ನೆಲ್ಲವನೀ...