“ಚೆಲುವನಾರಾಯಣಾ ಎಂಬುಲಿವು ಕಿವಿಸೋಕೆ
ಮಳಮಳನೆ ಕಣ್ಣ ಹನಿಯುದುರುವುದು” ಎಂದ
ಸತ್ಯಲೋಕನಿವಾಸಿ ರಸಕಾತರಂ ಮೌನಿ
ನನ್ನನುತ್ತರಿಸಲೀ ಭಾವಗಳ ತಂದ.
‘ಹರಿ’ ಎನ್ನೆ ಗರಿಕೆದರಿ ರೆಕ್ಕೆ ಹರಡುವ ಸಂತ-
ಚಿತ್ತದನುಕರಣೆಯೊಳು ಹಂಸಗತಿಗೆರೆದು
ದುರ್ಬಲಸ್ವಾಂತವಿದು ದೇವಕುಲನೀಡದೊಳು
ಚಡಪಡಿಸುತಿದೆ ತನ್ನ ಎಳಮೆಯನೆ ಮರೆದು;
ಕಾಮಭಯಲೋಭಾದಿ ಧೀವರರು ಹೊಂಚಿರಲು ಆತ್ಮದಾಮಿಷಕೆ ಕೆಳಗೆ
ಕರುಣಿಸದೆ ನೋಡುತಿದೆ ಸಾಧುತತಿ ನಸುನಗೆಯ ನೋಟದೊಳೆ ಕುದುರಿಸುತ ನಿರ್ಭಯವನೊಳಗೆ.
*****

















