ಓ ನೋಡು ಬೆಳಗಾಯ್ತು ಮೂಡಲವು ಕೆಂಪಾಯ್ತು ಕೂಡಲದ ಸಂಗಯ್ಯ ಬಂದ ಬಂದ ಕಾಳರಾತ್ರಿಯ ಹಕ್ಕಿ ದೂರ ಹಾರುತ ಹೋತು ಶಿವತಂದೆ ಶುಭ ಬೆಳಗು ತಂದ ತಂದ ಶಿವಯೋಗದಾನಂದ ಶೃಂಗಾರ ಸುಂದರಿಯು ಶರಣಸುಂದರ ಪಾದ ತೊಳೆದಿರುವಳು...
ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್ಯನು ವತನ ಬಾಗಿಲು ತೆರೆವ...
ಬ್ರಹ್ಮಮಾನಸ ಸರೋವರದಲಿ ನಾವು ತೇಲುವ ಚಲುವರು ವಿಮಲ ಮಾನಸ ಕಮಲ ವನದಲಿ ನಾವು ನವಯುಗ ರಾಜರು ಉಸಿರು ಉಸಿರಲಿ ಶಿವನ ಹೆಸರನು ಬರೆದ ಶಿವಾಚಾರ್ಯರು ಲಕುಮಿ ನಾರಾಯಣರು ನಾವೇ ದೇವ ಯುಗದಾ ಪೂಜ್ಯರು ನಾವು...
ಬೆಳಗು ಬೆಳಗಲಿ ಹೂವು ಅರಳಲಿ ಆತ್ಮ ಪಕ್ಷಿಯು ಹಾರಲಿ ಸತ್ಯ ಗಾಳಿ ಬೀಸಲಿ ವಿಶ್ವ ಗಾನವ ಹಾಡಲಿ ಜಡವು ಜಾರಲಿ ಹಗುರವಾಗಲಿ ಬೆಳಕು ಮಾತ್ರವೆ ಉಳಿಯಲಿ ಮಿಂಚು ಮಿನುಗಲಿ ಶಕ್ತಿ ಸುರಿಯಲಿ ಯುಗದ ಬಾಗಿಲು...
ಪರಮ ಪರಮಾನಂದ ಪರಿಮಳ ಲಕ್ಷ ಪಕ್ಷಿಯ ನಗಿಸಿದೆ ಅಂತರಂಗದಿ ವಿಶ್ವರಂಗದ ರಂಗವಲ್ಲಿಯ ಬರೆದಿದೆ ನಗೆ ವಿಮಾನದ ಗಗನ ತುಂಬಿದೆ ಮುಗಿಲು ಮಲ್ಲಿಗೆ ಸುರಿದಿದೆ ದೂರ ಬೆಟ್ಟದ ಶಿಖರ ಕನ್ನಡಿ ಪ್ರೇಮ ಕರ್ಪುರ ಬೆಳಗಿದೆ ತಾಯ...
ರಂಗು ರಂಗಿನ ನೂರು ಗಂಧದ ಆತ್ಮ ಹೂಗಳು ಅರಳಿವೆ ಚಂಗುಲಾಬಿಯು ದುಂಡುಮಲ್ಲಿಗೆ ಕೆಂಡಸಂಪಿಗೆ ನಗುತಿವೆ ಯುಗದ ಮೇಲೆ ಯುಗವು ಬಂದಿತು ಹೆಗಲು ಏರಿತು ಕಾಲವು ಕಲ್ಪ ಕಾಲಕೆ ಪುಷ್ಪತಲ್ಪವು ತೂಗುಮಂಚವ ತೂಗಿತು ಗಂಧ ಪರಿಮಳ...