Day: July 23, 2024

ಉಮರನ ಒಸಗೆ – ೨೭

ಬಳಿಕ ನಾಂ ಬೇಸತ್ತು ಜೀವರಸವನು ಬಯಸಿ ಈ ತುಟಿಯನಾಮಣ್ಣು ಕುಡಿಕೆಗಾನಿಸಲು, ಅದರ ತುಟಿಯಿದಕೆ ತತ್ತ್ವವನುಸಿರಿತೀ ತೆರದಿ: “ಕುಡಿ, ಸತ್ತ ಬಳಿಕ ನೀನಿತ್ತ ಬರಲಾರೆ.” *****

ಗಗನವು ಯಾರದೊ

ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ […]

ಇಗೊ ಸಂಜೆ, ಸಖಿ

ಇಗೊ ಸಂಜೆ, ಸಖಿ, ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ ತುಸ ತುಟಿತೆರೆದು ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು; ನಿನ್ನು ಸಿ‌ರ್‌ ಕಂಪ ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ; ಓ […]