ಮಲೆದೇಗುಲ – ೯
ಬೆರೆದರೂ ಬೇರೆಂದೆ ಸಮದೂರದೊಳು ಸರಿವ ವಿಷಯಾತ್ಮಸಂಗಮಿಸುವಾನಂತ್ಯವೇ, ಸೋ೦ಕಲರಿವೇ ಕರಗಿ ನೆನವೆಂಬ ನೆರಳುಳಿಯೆ ಪ್ರತ್ಯಕ್ಷವೆನಲಾಗದಾನಂದವೇ, ಪಡಲಿಲ್ಲವೆನಲಾಗದಪರೋಕ್ಷದನುಭವವೆ, ಅರಿತಿಲ್ಲವೆನಲಾಗದಂದದರುಳೇ, ಒಲಿವಂದಮೆನ್ನೆಸಗಿ ಒಲವ ಕೊಳೆ ಕೈತೆರೆಯು- ತಾವರ್ತತೇಜದೊಳು ಬೆಳಗುವಿರುಳೇ, ಮನಮನವ ಎಳೆಗೊಂಡು […]