ಹೊಸ ಹಾಡು

ಹೊಸ ಹಾಡು

ಪ್ರಿಯ ಸಖಿ,Sangeeta
ಗಳಿಗೆ ಗಳಿಗೆಗೂ ಹೊಸ ಹೊಸರೀತಿಗೆ
ಈ ಜಗವೋಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಓ ಜಗವೋಡುತಿದೆ
ಕವಿ ಪುತಿನ ಅವರ ‘ಹೊಸಹಾಡು’ ಕವನದ ಈ ಸಾಲುಗಳನ್ನು ಕೇಳಿದ್ದೀಯಲ್ಲವೇ? ಬದುಕು ನಿಂತ ನೀರಲ್ಲ ಅದು ನಿರಂತರ ಹೊಸತರ ಅನ್ವೇಷಕ.  ರೀತಿನೀತಿಗಳಿಗೆ ಜಗತ್ತು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಜೊತೆಗೇ ಹಳತೆಲ್ಲವನ್ನೂ ಗೇಲಿಮಾಡಿ ನಗುತ್ತಲೂ ಇರುತ್ತದೆ. ಕವಿ ಇಲ್ಲಿ ಹಾಗಿದ್ದರೆ ಹಳತೆಲ್ಲವೂ ವ್ಯರ್ಥವೇ? ಹೊಸತು ಯಾವುದೇ ಆದರೂ ಸರಿಯೇ? ಅದರ ಪೂರ್ವಪರ ವಿವೇಚಿಸದೇ ಅದನ್ನು ಅಪ್ಪಿಕೊಳ್ಳುವುದು ಸರಿಯೇ? ಎಂದು ಚಿಂತಿಸುತ್ತಾರೆ.

ಹೊಸತರಲ್ಲಿ ಗುಣಾವಗುಣಗಳಿರುವಂತೆ ಹಳತರಲ್ಲಿ ಕೂಡ ಗುಣಾವಗುಣಗಳಿವೆ. ಹೊಸತು-ಹಳತು ಎರಡರ ಧನಾತ್ಮಕ ಗುಣಗಳನ್ನೂ ಹೀರಿಕೊಂಡು ನಡೆದಾಗ ಮಾತ್ರ ಜಗತ್ತು ಪ್ರಗತಿಯನ್ನು ಸಾಧಿಸುತ್ತದೆ. ಷೋಪೆನ್ ಹಾರ್ ಎಂಬ ಚಿಂತಕ ‘ಹೊಸದು ಬರುವುದು. ಯಾವಾಗಲೂ ಹಳೆಯದರ ಆಧಾರದ ಮೇಲೆಯೇ’ ಎನ್ನುತ್ತಾರೆ. ವಿವೇಚನೆಯಿಲ್ಲದೇ, ಹೂಸತೆನ್ನುತ್ತಾ ವಿಜ್ಞಾನ, ತಂತ್ರಜ್ಞಾನದ ಹೆಸರಿನಲ್ಲಿ ಪ್ರಗತಿಯನ್ನು ಸಾಧಿಸಿದ್ದೇನೆಂದುಕೊಳ್ಳುತ್ತಾ ತನ್ನ ವಿನಾಶವನ್ನು ತಾನೇ ತೋಡಿಕೊಂಡರೆ ಅದು ಮೂರ್ಖತನವಲ್ಲವೇ? ಕವನದ ಕೊನೆಯಲಿ ಕವಿ
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಪ್ರಗತಿಯ ಹಂತಕೊ?
ಪ್ರಣಯ ದುರಂತಕೋ?
ಎಂದು ಪ್ರಶ್ನಿಸುತ್ತಾರೆ. ಹೊಸತೆಲ್ಲವನ್ನೂ ವಿವೇಚನೆಯಿಲ್ಲದೇ ಒಪ್ಪಿಕೊಂಡು ನಡೆದಾಗ ಅದು ನಮ್ಮನ್ನು ಪ್ರಳಯದ ಅಂಚಿಗೂ ತಂದು ನಿಲ್ಲಿಸಬಹುದಲ್ಲವೇ?

ಪ್ರಿಯ ಸಖಿ, ಹೊಸತೇ ಆಗಲಿ, ಹಳತೇ ಆಗಲಿ ಎಲ್ಲವನ್ನೂ ವಿವೇಚನೆಯ ಮೂಸೆಯಲ್ಲಿ ಬೇಯಿಸಿ ಉತ್ತಮವಾದುದನ್ನು ತೆಗೆದುಕೊಂಡು ಕೆಟ್ಟದನ್ನು ಬಿಟ್ಟಾಗ ಮಾತ್ರ ಪ್ರಗತಿ ಸಾಧ್ಯ. ಕಣ್ಣುಮುಚ್ಚಿ ಎಲ್ಲವನ್ನೂ ಸ್ವೀಕರಿಸಿದಲ್ಲಿ ಖಂಡಿತಾ ಪ್ರಳಯವೇ! ನಮ್ಮ ಕವಿವಾಣಿಯೇ ಹೇಳಿಲ್ಲವೆ? ‘ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು’ ಎಂದು ಬರಿಯ ಹಳತಿನಿಂದ ಅಥವಾ ಬರಿಯ ಹೊಸತಿನಿಂದ ವಿನಾಶ ಖಿಂಡಿತಾ ಎರಡರ ಸಮನ್ವಯವೇ ನಿಜವಾದ ಪ್ರಗತಿ ನೀನೇನೆನ್ನುತ್ತಿ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲ್ಲು ಹೇಗೆ ಹಾಲಾಗುತ್ತೆ?
Next post ಹೊನ್ ಪದಕವೇಕೆ?

ಸಣ್ಣ ಕತೆ

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…