ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ ಕುಳಿತು “ಸಾಯಂಕಾಲ ಬರ್ತೀವಿ ಎಲ್ಲಾ ನೋಡಿಕೊಳ್ಳಿ” ಎಂದು ಬುರ್ ಅಂತ ಹೊರಟು ಹೋದರು. ನೋಡುತ್ತಿದ್ದ ನಾನು ಅವರದು ಎಂತಹ ಸುಖಿ ಸಂಸಾರ!? ಎಂದು ಕೊಂಡೆ.
*****