Roopa Haasana

#ಇತರೆ

ಸುಧಾರಣೆ ಎಲ್ಲಿಂದ?

0

ಪ್ರಿಯ ಸಖಿ, ಸಮಾಜವಾದಿಗಳನ್ನು ಸದಾ ಕಾಡುತ್ತಾ ಬಂದಿರುವ ವಿಷಯವೆಂದರೆ ಸಮಾಜ ಸುಧಾರಣೆಯನ್ನು ವ್ಯಕ್ತಿಯಿಂದ ಪ್ರಾರಂಭಿಸಬೇಕೋ, ಸಮುದಾಯದಿಂದ ಪ್ರಾರಂಭಿಸಬೇಕೋ ಎಂಬುದು. ಸಹಜವಾಗೇ ಇದಕ್ಕೆ ಪೂರ್ವಪರವಾದಗಳೂ ಇವೆ. ಸಮುದಾಯದಿಂದ ಸುಧಾರಣೆ ಆಗಬೇಕೆನ್ನುವವರು, ಸಮಾಜದಲ್ಲಿ ಅನೇಕ ಅನಿಷ್ಟಗಳಿವೆ. ಅವುಗಳನ್ನೆಲ್ಲಾ ಸಂಘಟನೆಯ ಮೂಲಕ, ಸಮುದಾಯ ಜಾಗೃತಿಯ ಮೂಲಕ, ಸಿದ್ಧಾಂತಗಳನ್ನು ಅಳವಡಿಸುವ ಮೂಲಕ ಸರಿಪಡಿಸಬೇಕೆನ್ನುತ್ತಾರೆ. ಸಾಮಾಜಿಕ ಕ್ರಾಂತಿಯಿಂದ ಮಾತ್ರ ಸಮಾಜ ಸುಧಾರಣೆಯನ್ನುವುದು ಇವರ […]

#ಇತರೆ

ಧ್ಯಾನ

0

ಪ್ರಿಯ ಸಖಿ, ಭಾರತೀಯ ಸಂಸ್ಕೃತಿಯಲ್ಲಿ ಧ್ಯಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿತ್ತು. ಆದರೆ ಕಾಲಕ್ರಮೇಣ ಇಡೀ ವಿಶ್ವವೇ ಅರ್ಥ ಸಂಸ್ಕೃತಿಯೆಡೆಗೆ ಮುಖಮಾಡಿ ನಿಂತಾಗ ಇನ್ನಿತರ ತಾತ್ವಿಕ, ನೈತಿಕ ಮಾನವೀಯ ಮೌಲ್ಯಗಳಂತೆಯೇ ಧ್ಯಾನವೂ ಕೂಡ ಮೂಲೆ ಗುಂಪಾಗಿ ಹೋಗಿತ್ತು. ಆಧುನಿಕತೆಯೆನ್ನುವುದು ಬಾಹ್ಯಾಡಂಬರದ ಪ್ರತೀಕವೆನ್ನುವಂತೆ ಸೆಳೆದುಕೊಂಡು ಹೊರಟಿರುವಾಗ ಈ ಪ್ರವಾಹದಲ್ಲಿ ಕೊಂಚ ಹೊತ್ತು ನಿಂತು ಸರಿ ತಪ್ಪುಗಳನ್ನು ವಿವೇಚಿಸುವುದು ಸಾಧ್ಯವಿರುವುದು […]

#ಇತರೆ

ಸಣ್ಣ ತಪ್ಪುಗಳು

0

ಪ್ರಿಯ ಸಖಿ, ಏಳೆಂಟು ವರ್ಷ ಹುಡುಗಿಯೊಬ್ಬಳು ಆಟಕ್ಕಾಗಿ ಇರುವೆಗಳನ್ನು ಕೊಂದು ಸಣ್ಣ ಡಬ್ಬಿಯೊಂದರಲ್ಲಿ ಸಂಗ್ರಹಿಸಿಡುತ್ತಿದ್ದಾಳೆ. ಇದನ್ನು ಕಂಡ ಅವಳ ತಂದೆಗೆ ಸಿಟ್ಟುಕ್ಕಿ ಬಂದು ಅವಳ ಕೈಗಳೆರಡನ್ನೂ ಕಿಟಕಿಗೆ ಕಟ್ಟಿ ದಿನವಿಡೀ ನಿಲ್ಲಿಸಿದ. ಕಟ್ಟು ಬಿಚ್ಚಿದ ನಂತರ ಯಾವುದೇ ಪ್ರಾಣಿಗಾದರೂ ಹಿಂಸೆ ಮಾಡುವುದು ಎಂತಹಾ ಪಾಪವೆಂದು ತಿಳಿಹೇಳಿದ. ಆ ಕ್ಷಣಕ್ಕೆ ಹುಡುಗಿಗೆ ಅಪ್ಪನ ಮೇಲೆ ಕೋಪ ಬಂದರೂ […]

#ಇತರೆ

ಮನಸಿಗೆ ಪಾಠ

0

ಪ್ರಿಯ ಸಖಿ, ದುಃಖತಪ್ತ ಶಿಷ್ಯನೊಬ್ಬ ತನ್ನ ಗುರುವಿನ ಬಳಿಗೆ ಬಂದು ಗುರುಗಳೇ ಈ ಪ್ರಪಂಚದಲ್ಲಿ ನನ್ನನ್ನು ಯಾರೂ ಪ್ರೀತಿಸುವವರಿಲ್ಲ. ನಾನು ಯಾರಿಗೂ ಬೇಕಾಗಿಲ್ಲ. ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇನೆ ಎಂದ. ಗುರುಗಳು ಆ ಶಿಷ್ಯನನ್ನು ತೀಕ್ಷ್ಣವಾಗಿ ನೋಡಿ ಹೋಗಿ ಸಾಯಿ ಎಂದರು. ಗುರುಗಳಿಂದ ಇಂತಹ […]

#ಇತರೆ

ಹುಡುಕಾಟ

0

ಪ್ರಿಯ ಸಖಿ, ಈ ಬದುಕಿನಲ್ಲಿ ಎಲ್ಲರೂ ಏನಾದರೊಂದಕ್ಕಾಗಿ ಹುಡುಕಾಡುತ್ತಲೇ ಇರುತ್ತಾರೆ. ಸಂಪತ್ತು, ಪ್ರೀತಿ, ಶಾಂತಿ, ಅಧಿಕಾರ, ಹೆಸರು…. ಇತ್ಯಾದಿಗಾಗಿ ಹುಡುಕುವವರು ಕೆಲವರಾದರೆ, ಇರುವುದೆಲ್ಲವ ಬಿಟ್ಟು ಇಲ್ಲದ್ದನ್ನು ಹುಡುಕುವವರು, ತಾವು ಮತ್ತೆ ಮತ್ತೆ ಕಳೆದುಕೊಳ್ಳುತ್ತಲೇ ಇರುವುದನ್ನೆಲ್ಲಾ ಜೀವನ ಪೂರ್ತಿ ಹುಡುಕುವವರು, ಬದುಕಿನ ಕೊನೆಯವರೆಗೂ ಏನನ್ನು ಹುಡುಕುತ್ತಿದ್ದೇವೆಂದರಿಯದೆಯೂ ಹುಡುಕುತ್ತಲೇ ಇರುವವರು, ಇತರರಲ್ಲಿ ತಮ್ಮನ್ನು ಹುಡುಕುವವರು… ಇಂತಹ ಕೆಲ ಹುಡುಕಾಟದವರನ್ನೂ […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೫೧

0

ಮೂಕ ರೊಟ್ಟಿಗೆ ಆಸ್ಥೆಯಿಂದ ಹಾಡು ಕಲಿಸಿ ಸಂಭ್ರಮಿಸಿದ್ದ ಹಸಿವಿಗೀಗ ರೊಟ್ಟಿಯ ಸಂಗೀತ ಕೇಳಲು ಪುರುಸೊತ್ತಿಲ್ಲ. ಆಸಕ್ತಿಯೂ ಇಲ್ಲ. ಹಸಿವೆಗಾಗಿಯೇ ಕಲಿತ ಪದಗಳನ್ನು ಹಾಡಲೂ ಆಗದೇ ಬಿಡಲೂ ಆಗದೇ ರೊಟ್ಟಿಗೆ ತಳಮಳ. *****

#ಇತರೆ

ಕೃತಕತೆಯಂದ ನೈಜತೆಗೆ

0

ಪ್ರಿಯ ಸಖಿ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವಾಗುತ್ತಿದ್ದೇವೆ ಎಂದು ತನ್ನಷ್ಟಕ್ಕೇ ಗೋಚರವಾಗುತ್ತಾ ಸಾಗುತ್ತದೆ. ಇಂದು ಆಧುನಿಕ ಮಾನವನ ನಡೆನುಡಿಗಳೆಲ್ಲಾ ವ್ಯವಹಾರಿಕವಾಗಿವೆ. ತನಗೆ ಇಷ್ಟವಿರಲಿ ಬಿಡಲಿ ಕಾರ್ಯಸಾಧನೆಗೆ ಅನಿವಾರ್ಯವೆಂಬಂತೆ ಹಲವಾರು ಮುಖವಾಡಗಳನ್ನು […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೫೦

0

ರೊಟ್ಟಿ ಹಾಡುವುದು ತಪ್ಪಲ್ಲ ಹಸಿವೆಗೆ ಅರ್ಥವಾಗದಂತೆ….. ಅಲ್ಲಲ್ಲ ಅನುಭವಿಸಲಾಗದಂತೆ ಹಾಡುವುದು ತಪ್ಪು. ಹಸಿವು ಅಸೂಕ್ಷ್ಮವಾಗಿ ಸೃಷ್ಟಿಗೊಂಡ ಆ ಕ್ಷಣದ ತಪ್ಪು. *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೨೭

ರೊಟ್ಟಿಯಂತೆಹಸಿವೆಗೆ ಮಿತಿಗಳಿಲ್ಲ. ಇಂಚಿಂಚೂ ಬಿಡದಂತೆ ಹಸಿವು ಮುತ್ತುವಂತೆ ರೊಟ್ಟಿ ಆವರಿಸುವುದಿಲ್ಲ. *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೪೯

ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****