ರೆಡ್ಡಿ ಸೋಲಿಲ್ಲ, ಸುಸ್ಮಕ್ಕ ಗೆಲ್ಲಿಲ್ಲ, ವರಮಹಾಲಕ್ಷ್ಮಿ ವರ ನೀಡ್ಲಿಲ್ಲ.

ವರಮಹಾಲಕ್ಷ್ಮಿ ಪೂಜೆಗಾಗಿ ತನ್ನ ಕ್ಯಾಪಿಟಲ್ ಬಳ್ಳಾರಿಗೆ ಬಂದರು ನಾಳೆ ಮುತ್ತೈದೆ ಸುಸ್ಮಸ್ವರಾಜು ಇನ್ನೆಲ್ಡು ದಿನ ತಡ್ಕಳಿ ಓಲ್ ಸೇಲಾಗಿ ಎಲ್ಲಾ ಪ್ರಾಬ್ಲಮ್ನು ಫಿನಿಶ್ ಮಾಡ್ತೀನಿ. ಬಚ್ಕೊಂ ಇನ್ ಬಿಟ್ಟೀನ್ ಬಿಜೆಪಿ ನೂತನ ಕಚೇರಿ ಡೋನೂ ತೆಗಿತೀನಿ ಅಂತ ಬಂದ ಸುಸ್ಮಕ್ಕ, ತನ್ನ ಮನೆಯ ಕೂಸು ಬಳ್ಳಾರಿ ರೆಡ್ಡಿ ಓಲ್ಡ್ ರೆಕಾಲ್ಡ್ ಪ್ಲೇಟನಂಗೆ ಪದೇ ಪದೇ ೧೫೦ ಕೋಟಿನಾ ಸಿ‌ಎಂ ನುಂಗವ್ನೆ ಅನ್ನೋ ಹೊಲಸು ಬಾಯಿಗೂ ಬೀಗ ಜಡಿತೀನಿ ಅಂತ ಬಿಜೆಪಿ ಗಡವರಿಗೆ ಆಸ್ವಾಸ್ನೇ ನೀಡಿದ್ದರಿಂದಾಗಿ ಯಡ್ಡಿ ಅಂಡ್ ಪಾಲ್ಟಿ ದಿಲ್ ಖುಷ್ ಆತು. ಬಳ್ಳಾರಿನಾಗೆ ನಡೆದ ಸಾಮೂಹಿಕ ಲಗ್ನದಾಗೆ ಸುಸ್ಮಕ್ಕನ ಮಗ್ಗಲದಾಗೆ ರೆಡ್ಡಿ ಕುಂತ್ಕಂಡ್ರೂ ಆಯಮ್ಮ ಕಣ್ಣೆತ್ತಿಯೂ ನೋಡ್ಲಿಲ್ಲ. ಡೆಲ್ಲಿನಾಗೆ ತಮ್ಮಂಗೆ ತಲೆ ಆಡಿಸಿ ಬೆಂಗಳೂರಿಗೆ ಬಂತ್ಲು ಕಲರ್ ಚೇಂಜ್ ಮಾಡಿ ಬಾಯಿಗೆ ಬಂದಂಗೆ ಒದರ್ತಾ ಮೈಮ್ಯಾಗೆ ದೆವ್ವ ಬಂದೋರಂಗೆ ಕುಣ್ಕಂಡು ಸಿಬಿ‌ಐ ತನಿಖೆಗೂ ಸಿದ್ಧ ಎಂದು ಭರತನಾಟ್ಯ ಮಾಡಿದ್ದಲ್ದೆ ಬಿಜೆಪಿಯ ಪ್ರಾಣದಾತ ಕುಮಾಸಾಮಿ ಮ್ಯಾಗೆ ಮಾನನಷ್ಟದ ಕೇಸ್ ಹೂಡ್ಲಿಕ್ಕೆ ಸಿದ್ಧನಾದ ರೆಡ್ಡಿ ನೆರಳು ಕಂಡ್ರೂ ಸುಸ್ಮಾಗೀಗ ವಾಮಿಟ್ ಸೆನ್ಸೇಶನ್ನು. ಸಮಾರಂಭದಾಗೆ ಸಂಸದ ಕರುಣಾಕರ, ‘ಎನ್ನೋಬಲ್ ಇಂಡಿಯಾ’ ವ್ಯವಸ್ಥಾಪಕ ನಿರ್ದೇಶಕ ಬ್ರದರ್ ಜನಾರ್ಧನ ರೆಡ್ಡಿ ಅಂದರೆ, ನಮ್ಮ ಹಿರಿಯ ಸೋದರ ಪಕ್ಷದ ಏಳ್ಗೆಗಾಗಿ ಡೇ ಆಂಡ್ ನೈಟ್ ದುಡಿದ ಮೈ ಡಿಯರ್ ಬ್ರದರ್ ಅಂದೋರು ಸಚಿವ ಶ್ರೀರಾಮುಲು. ಆದರೆ ಸುಸ್ಮಕ್ಕ ಮಾತ್ರ ವೇದಿಕೆ ಮೇಗಿದ್ದ ರೆಡ್ಡಿ ಹೆಸರೇ ಹೇಳ್ಳಿಲ್ಲ. ವಧು-ವರರಿಗೆ ತಾಳಿ ಡಿಸ್ಟ್ರಿಬ್ಯೂಟ್ ಮಾಡೋವಾಗ ಸಾಥ್ ಕೊಟ್ಟ ರೆಡ್ಡಿ ಹಲ್ಕಿರಿದರೊ ಸುಸ್ಮಕ್ಕಂದು ನೋ ಸ್ಮೈಲಿಂಗು! ಹಿಂಗೆ ರೆಡ್ಡೀಸು ಕಂಗಾಲು ಪಡಿಸಿದನೆಂದು ಬೀಗಿದ ಆಕಿ ಪಕ್ಷ ಬೀಳಲು ಬಿಡೆನೆಂದು ಇಲ್ಲಿನ ಬಿಜೆಪಿ ಲೀಡಸ್ ಗೆ ಆಸ್ವಾಸ್ನೇ ನೀಡಿ ಕತ್ತಿ ಹಿಡಿದು ಝಾನ್ಸಿರಾಣಿ ಫೋಜ್ ಕೊಟ್ಟಿದ್ದೂ ಆತು. ಮಿಡ್ ನ್ನೆಟ್ ಮೀಟುಗ್ನಾಗೆ ರೆಡ್ಡಿ ಕೂಡಿಸ್ಕ್ಯಂಡು ತಲೆ ಸವರಿ ಬುದ್ಧಿ ಹೇಳಿದ್ದೂ ಆತು. ಸಿ‌ಎಂ ಮ್ಯಾಗೆ ಮಾಡ್ತಿರೋ ಅರೋಪಕ್ಕೆ ಎವಿಡೆನ್ಸ್ ಇದ್ದರೆ ತಂದು ನಮ್ಮ ಮುಂದೆ ಇಕ್ಕು. ಬರಿ ಮಾತ್ನಾಗೇ ಬಯಲಾಟ ಆಡಬ್ಯಾಡ್ಲೆ ಬಚ್ಚ. ಪೇಪರ್ನೋರ್ತಾವ ಬಾತ್ ಚೀತ್ ಮತ್ ಕರ್ನಾರೆ ಲುಚ್ಚೆ. ಹಮಾರಿ ಪಕ್ಷಮೆ ಶಿಸ್ತಿಗೆ ಬೋತ್ ಬಡಾಸ್ಥಾನ್ ಹೈರೆ ಬಚ್ಚೆ. ಅಂತ ಬೈದಾಡು ಮುದ್ದು ಮಾಡಿದ್ದೂ ನೆಡದೋತು. ರೆಡ್ಡಿ ಎಲ್ಲದಕ್ಕೂ ಮಗುನಂಗೆ ಗೋಣೂ ಆಡಿಸ್ದ. ಬೀಗಿದ ಸುಸ್ಮಕ್ಕ ‘ರೆಡ್ಡಿಯ ಮುಹ್‍ಕೋ ಲಾಕ್‍ಕರ್ದಿಯಾ ಹೈ ಮೈನೆ’ ಅಂತ ಲೇಡಿ ಅಮಿತಾಭ್ ಪೋಜ್ ಕೊಟ್ಟು ವರಮಾಲಕ್ಷ್ಮಿ ಕಾಪಾಡಮ್ಮ ಅಂತ ನಾಕಾಣೆ ಮುಡಿಪು ಕಟ್ಟಿ ಡೆಲ್ಲಿಗೆ ಹಾರಿ ಹೋದ್ಲು ಆ ತಾಯಿ ಇನ್ನು ಡೆಲ್ಲಿಗೆ ರೀಚ್ ಆಗೇ ಇಲ್ಲ ಮೆಂಟ್ಲು ರೆಡ್ಡಿ ಬಾಯಿಬೀಗ ತೆಗೆದೊಗೆದು, ಸಿ‌ಎಂ ಮ್ಯಾಗಿನ ಕೇಸಸ್ನ ವಿಥ್ ಡ್ರಾ ಮಾಡಂಗಿಲ್ಲ. ಅಂತ ಹಳೇವರಸೆ ತೆಗೆದವ್ನೆ! ಈ ರೆಡ್ಡಿ ಎಂಬ ಮುಳ್ಳು ಕಡ್ಡಿ ಬಿಸಿತುಪ್ಪವಾಗ್ಯಾನೆ. ಉಗುಳಿದರೋ ಕೋಟಿಗೊಬ್ಬ ರೆಡ್ಡಿ ಕೈ ಜಾರಿ ಕಾಂಗ್ರೆಸ್ನೋರ ಪಾಲಾಗ್ತಾನೆ. ನುಂಗಿದರೋ ಸರ್ಕಾರಾನೇ ಉಲ್ಡು ಹೋಯ್ತದೆ. ಮತ್ತೆ ಕರ್ನಾಟಕದಾಗೆ ಹಾರಫನ್ ಆಗೋಯ್ತದೆ ಅಂಬೋ ಫೀಲಿಂಗ್ನಾಗೆ ಯಡೂರಿ ವೀಕ್ ಬೈ ವೀಕ್ ಶ್ಯಾನೆ ವೀಕ್ ಆಗ್ತಾ ಹೊಲಿಸಿದ ಸಫಾರಿಗಳೆಲ್ಲಾ ಲೂಸ್ ಆಗೋದ್ನ ನೋಡಿ ಬಿಕ್ಕಲಿಕತ್ತಾನ್ರಿ.

ಇದು ಒಳ್ಳೇ ಟೇಂ ಅಂತ ಆಂಧ್ರದ ಸೀ‌ಎಂ ರಾಜಶೇಖರ ರೆಡ್ಡಿಯಿಂದ ರೆಡ್ಡಿ ಮ್ಯಾಗೆ ಬಲೆ ಬೀಸಲಿಕತ್ತಾರೆ ಕಾಂಗ್ರೆಸ್ಸಿಗರು. ಕೊಮಾಸಾಮಿ ಮ್ಯಾಗೆ ನಾನಾ ನಮೊನೆ ಆರೋಪನೂ ಎಸೀಲಿಕತ್ತಾರೆ. ೮೫ ಕೋಟಿ ಆಸ್ತಿ ಮಾಡವ್ನೆ ಅಂತ ಗುಲ್ಲೆಬಿಸವ್ರೆ. ಮೊದ್ಲು ಅದೆಲ್ಲಾ ಸುಳ್ಳು, ಅಂತ ಧಿಮಾಕು ಮಾಡ್ದ ಕೂಮಾರ. ಈಗ ಪ್ಲೇಟ್ ಚೇಂಜ್ ಮಾಡಿ ೩೬ ಕೋಟಿ ಆಸ್ತಿ ಖರೀದಿ ಮಾಡಿವ್ನಿ. ಅದು ಕರ್ನಾಟಕ ಬ್ಯಾಂಕ್ನಾಗೆ ಲೋನ್ ಬೇಸಿಸ್ ಮೇಲೆ ಅಂತ ಬೇಸ್ ಲೆಸ್ ಮಾತಿಗಿಳಿದವ್ನೆ. ಇದೆಲ್ಲಾ ಬ್ಯಾಂಕ್ನಾಗೆ ಕೊಮಾರ ಮಾಡಿದ ದಾಖಲೆ ಸೃಷ್ಟಿ. ಶುಂಠಿ ಆಲೂಗುಡ್ಡೆ ಬೆಳ್ಕೊಂಡಿರೋ ಬಡರೈತನ ಮಣ್ಣಿನ ಮಗ ದ್ಯಾವೇ ಗೌಡನ ಡಾಂಬರ‍್ಮಗ ಕೋಟಿಗಟ್ಟಲೆ ಅಸ್ತಿ ಹ್ಯಾಂಗ್ರಿ ಖರೀದಿ ಮಾಡಾಕೆ ಸಾಧ್ಯ ಅಂತ ಡಿಕೆಶಿ ಬಾಂಬ್ ಹಾಕವ್ನೆ. ‘ಯಾವೋನು ಏನೇ ಲಾಗಾ ಹಾಕ್ಲಿ ಐ ಆಮ್ ನಾಟ್ ಓನ್ಲಿ ಎ ಪೊಲಿಟಿಕಲ್ ಮ್ಯಾನು. ನಾನು ಫಿಲಿಂ ಮ್ಯಾನು ಸಹ ಅಂಬೋದ್ನ ಮರಿಬ್ಯಾಡ್ರಿ ಸಿನಿಮಾದಾಗೆ ರಗ್ಗಡ ರೊಕ್ಕ ಮಾಡೀನಿ’ ಅಂತ ತರಾವರಿ ಎಕ್ಸಪ್ಲನೇಶನ್ ಕೊಟ್ರೂ ಯಾರೂ ಒಪ್ಪಂಗಿಲ್ಲ. ಹಿಂಗಾಗಿ ಹೈರಾಣಾದ ಕೊಮಾಸಾಮಿ ಸಂಕಟ ಬಂದಾಗ ವೆಂಕಟ್ರಮಣ ಅನ್ನಂಗೆ ಮೊನ್ನೆ ಡೆಲ್ಲಿಗೆ ಹೋದಾಗ ಭೀಷ್ಮ ಪಿತಾಮಹ ವಾಜಪೇಯಿ ಕಾಲಿಡಿದು ಪಾದ ತೊಳೆದು ನೀರು ಕುಡಿದು ಮುದುಕನ್ನ ಮಳ್ಳು ಮಾಡವ್ನೆ. ಅಡ್ವಾಣಿ ಮುಂದೂ ಧೀಮಾಕ್ ಮಾಡ್ದಂಗೆ ಅಡ್ಡ ಅದ್ದಬಿದ್ದವ್ನೆ ಅಂಬೋ ಸುದ್ದಿ ಹಬ್ಬೇತೆ. “ರಾಜಕೀಯ ನಿಮಿತ್ತಂ ಬಹು ಕೃತ ವೇಷಂ.” ತನ್ನ ಮಗನ ಹೀನಸ್ಥಿತಿ ಕಂಡು ಒಳ್ಗೆ ಅಂಗಾರಾಗಿರೋ ಗೋಡ ‘ಸಮಯ ಬಂದಾಗ ಎಲ್ಲಾ ಹೇಳ್ತೀನ್ರಿ’ ಅಂತ ಮೌನ ಮುರಿದವ್ರೆ. ಆದ್ರೆ ಪ್ರಶ್ನೆ ಕೇಳಿದ ಪೇಪರ್ನೋರ್ಗೆ ಮಿಕ್ಸ್ಚರ್
ಸರ್ಕಾರದ ಆಡಳಿತದ ಬಗ್ಗೆ ನೊ ಕಾಮೆಂಟ್ಸ್ ಅಂತಾರೆ. ನೀವು ಬಿಜೆಪಿನೋರಂಗೆ ನಿಮ್ಮ ಪಕ್ಷದವರಿಗೆ ಎಕ್ಸಾಂ ತಗೊಳಲ್ವೆ ಸಾ ಅಂದ್ರೆ, ‘ಅದೆಲ್ಲಾ ಸಿ ಎಂ ವರ್ಕು. ಆತ ಅಪ್ಪಟ ಗೋಲ್ಡು. ಒಳ್ಳೆ ವರ್ಕರ್’ ಎಂದು ಗುಣಗಾನ ಮಾಡೋದ್ನ ಮಾತ್ರ ಮರೆಯಂಗಿಲ್ಲ. ನಮಗೂ ಗೋಡ್ರಿಗೂ ಯಾವುದೇ ರಿಲೇಶನ್ ಶಿಪ್ ಇಲ್ಲ. ನಮ್ಮ ಲವ್ ರಿಲೇಸನ್ಸ್ ಕೊಮಾರಂತಾವ ಅನ್ನೋ ಬಿಜೆಪಿಯ ಡಿವಿ‌ಎಸ್ ಗೋಡನ ಬಗ್ಗೆ ಕೇಳಿದ್ರೆ, ‘ಅದು ನಿಜ. ಅವರವರು ಏನಾರ ಮಾಡ್ಕೊಂಡು ಸಾಯ್ಲಿ. ಅದಕ್ಕೆ ನಾನು ಪಕ್ಷಾನ ಸಾಯೋಕೆ ಬಿಡೋಲ್ಲ. ಸಿದ್ದು ಎಲ್ಲಾರ ನಿಲ್ಲಿ ಗೆಲ್ಲೋಕೂ ಬಿಡೊಲ್ಲ ಅಂತ ಸ್ಟ್ರಾಂಗ್ ಆಗವರೆ. ಮೊನ್ನೆ ಸಭೆನಾಗೆ ಪಕ್ಷದ ಕಾರ್ಯಕರ್ತರನ್ನೆಲ್ಲಾ ಕಲೆಹಾಕ್ಕಂಡು ಭಾಸ್ಣ ಸುರಿಸ್ತಾ ನನ್ನ ಮಗನ್ನ ನನ್ನ ಕುಟುಂಬನಾ ಯಾರಿಂದ್ಲೂ ಫಿನಿಶ್ ಮಾಡೋಕೆ ಸಾಧ್ಯವಿಲ್ಲ. ಕುಟುಂಬ ರಾಜಕೀಯ ಡೆಲ್ಲಿನಾಗೆ ನೆಡಿತಿಲ್ವೆ? ಅಂತ ಗುಟುರು ಹಾಕಿದ ಗೋಡ. ‘ಕಾರ್ಯಕರ್ತರೆ ನಿಮಗೆ ನಾನು ಬ್ಯಾಡವಾದ್ರೆ ನೇರವಾಗಿ ಹೇಳಿ. ಸೆಂಟ್ರಲ್ ರಾಜಕೀಯದ ಗೊಡವೆ ಸಧ್ಯಕ್ಕೆ ನಂಗೆ ಬೇಡ. ಸ್ಟೇಟ್ ರಾಜಕೀಯ ರಿಪೇರಿ ಮಾದೋದಷ್ಟೇ ನನ್ನ ಟ್ಟೆಂಟಿ ಮಂಥ್ಸ್ ಪ್ರೋಗ್ರಾಂ. ಸಮಯ ಬಂದಾಗ ಎಲ್ಲಾರ ಬಂಡವಾಳಾನೊ ಬಯಲಿಗೆಳಿತೀನಿ’ ಅಂತ ಹೆದರಿಸಲಿಕತ್ತಾರೆ, ಆ ಸಮಯ ಬ್ಯಾಗ ಬಲಿ ಅಂತ ಕಾಂಗ್ರಸ್ ನೋವ್ರು ಕುಕ್ಕೆ ಸುಬ್ರಮಣ್ಯಂಗೆ ಹರಕೆ ಕಟ್ಕಂಡು ಕತ್ತಿ ಮಸ್ಕಂಡು ವಾ‍ಗೆ ರೆಡಿಯಾಗಿ ನಿಂತವೆ. ಈಗ ಗೋಡ್ರು ಅಂತಾರೆ, ಕಾರ್ಯಕರ್ತರು ನನ್ನ ಹಿಕಮತ್‍ಗಳನ್ನು ಒಪ್ಪದಿದ್ದರೆ ಗುಡ್ ಬೈ ಹೇಳಿ ರಾಜೀನಾಮೆ ಒಗಾಸಿ ಹೋಗ್ತೀನಿ ಅಂತ. ಹಂಗೆ ಒಂದೇ ಉಸಿನಾಗೆ ಪಕ್ಷನಾ ಸ್ಟ್ರಾಂಗ್ ಮಾಡ್ಲಿಕ್ಕೆ ರಾಜ್ಯದ್ಯಂತ ಟೂರ್ ಸೆಪ್ಟೆಂಬನಾಗಿಂದ ಶುರು ಹಚ್ಕಂತೀನಿ ಅಂತ್ಲೂ ಅಂತಾರ್ರಿ! ಯಾವುದನ್ನ ನಂಬ್ತಿರಾ ಯಾವುದನ್ನು ಬಿಡ್ತೀರಾ ನೀವೇ ಹೇಳ್ರಲಾ ………
*****
(ದಿ. ೨೪-೦೮-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಟ್ಟೆಪಾಡು
Next post ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys