ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ?
ನಾಕಕ್ಸರಾ ಬಾಯಾಗಿಟಗಂಡು ನಾಕ ಸಾಲು ತಲಿಯಾಗಿಟಗಂಡು
ನಾಕ ಕಾಸು ಕೈಯಾಗಿಟಗಂಡು ಯಾಕ ಮೆರೀತಿಯಲೇ!
ಬಾಯಾಗೇ ಅಂತ್ರಕ್ಕೇಣೀ ಹಾಕಿ
ಸಮತಾ ಸೋದರತಾ ಗಾಂಧೀತಾತಾ ಅಂತಾ
ಒಳ್ಳೇ ನಾಣ್ಣೆಗಳನ್ನ ಒದರಿ ಒದರಿ ಒಡಕು ಬೋಕೀ ಮಾಡಿಟ್ಟಿ
ಗುಂಪು ಸೇರ್ಸಿ ಶಂಖಾ ಊದಿದ್ರೆ ಕೇಳಾವ್ರ್ನ ಸೋಡಾವ್ರ್ನ
ಕುರಿಗಳ ಮಾಡೀಯೇನ್ಲೇ!
ನಿನ ತಲಿ ದೊಡ್ಡದಿರಭೌದು ಲೇ ಕೈಕಾಲ್ಸಣ್ಯಾ
ಆದರೆ ದುಡಿಯೋದೀ ತೋಳು ನೆನಪಿರ್ಲಿ
ಅನ್ನಾ ಮೊದಲು ಹೋಗಬೇಕು ಹೊಟ್ಟಿಗೆ
ಅಲ್ಲಿಂದ ಜೀರ್ಣಾಗಿ ರಗತಾಗಿ ಹರೀಬೇಕೆಲ್ಲಾ ಕಡಿಗೆ
ತಲಿಗೂ ಕೂಡಾ
ನಾ ಮಾತನಾಡದೇ ಇರಭೌದು
ಆದ್ರೆ ಒಮ್ಮೆಗೇ ಮಾಡಿ ತೋರಿಸ್ತೀನಿ
ಎಚ್ಚರಾ
*****