Home / Vrushabendrachar Arkasali

Browsing Tag: Vrushabendrachar Arkasali

ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ ತೇಜದ ಸೂರ್ಯನ ಕಣ್ಣಲಿ || ೧ || ಕ...

ಕಾಲವು ಸರಿಯುತಿದೆ ಗೆಳೆಯಾ ಮೇಲಕೆ ಏಳೋ ಎಚ್ಚರ ತಾಳೋ ಕಾಲ ಮೀರುವ ಮುನ್ನ ಕಾಲನ ಮೀರಿಸೊ || ಪ || ನೆಲದಲಿ ಹಾವು ಜಲದಲಿ ಮೀನು ಅರಿಯದ ಪರಿಯಲಿ ಸರಿಯುವ ರೀತಿ ಹನಿಹನಿ ರಕುತದಿ ದೇಹದಿ ಹರಿಯುತೆ ಎಳೆ ಎಳೆ ಉಸಿರಲಿ ಎದೆಯಲಿ ಮಿಡಿದು || ೧ || ಸೂರ್ಯನು...

ಬಾರ ಬಾರ ದೇವ ಬಾರ ತಾರ ತಾರ ಬೆಳಕ ತಾರ ಬಾಳ ತಮವ ಕಳೆಯ ಬಾರ ತಿಳಿವ ದೀಪ ಬೆಳಗು ಬಾರ || ಪ || ದೇಶದ ಮನೆ ಕಸುವು ತುಂಬಿ ವಾಸನೆಯಲಿ ಮಲಿನ ವಾಸ ಮಾಡುವಂತೆ ಮಾಡೊ ಶುದ್ಧಗೊಳಿಸಿ ಜನಮನ || ೧ || ಅಂಧ ಶ್ರದ್ಧೆ ಕೂಪಗಳಲಿ ಕೊಳೆಯುವವರ ನೋಡಿದೊ ಮುಂದುಗಾ...

ಮಾತೇ ಜ್ಯೋತಿರ್ಲಿಂಗ ಅನುಭವ ಮಾತೇ ಜ್ಯೋತಿರ್ಲಿಂಗ ಸತ್ಯದ ಕಿಡಿಯಿರೆ ಒಳಗೇ ನಿತ್ಯವು ಬಾಳನು ಬೆಳಗೇ || ಪ || ಮಾನವ ಪಡೆದಿಹ ಸಂಪದ ಮಾತು ಜಾಣರ ಸಾಧನೆ ಬೇರು ಮೌನದ ಗರ್ಭವು ತಳೆಯುವ ಮಗುವು ಜ್ಞಾನದ ಫಲವನು ತಂದಿಹುದು || ೧ || ಪ್ರೀತಿಯ ಪುಷ್ಪವು ಮ...

ಲೋಕ ನೀತಿ ವಿಧ ವಿಧ ರೀತಿ ಮೇಲೇ ಕಾಣದು ಸತ್ಯದ ಜ್ಯೋತಿ || ಪ || ಕಲ್ಲುಗಳೆಲ್ಲ ರತ್ನಗಳಲ್ಲ ಮಣ್ಣುಗಳೆಲ್ಲ ಸತ್ವಗಳಲ್ಲ ಗುಡ್ಡಗಳೆಲ್ಲ ಲೋಹಾದ್ರಿಯಲ್ಲ ಕಾಡುಗಳೆಲ್ಲ ಶ್ರೀಗಂಧವಲ್ಲ || ೧ || ಮೋಡಗಳೆಲ್ಲ ಮಳೆಯವು ಅಲ್ಲ ಜಾಡುಗಳೆಲ್ಲ ಸತ್ಪಥವಲ್ಲ ಹೂವ...

ಏನು ಪೇಳಿದನಮ್ಮ ನನ್ನಯ ಪ್ರಿಯನು ಏನು ಸಂದೇಶವ ನೀ ತಂದೆ ಸಖಿಯೆ || ಪ || ಏತಕೆ ಬಾರನೋ ಪ್ರಾಣಪ್ರಿಯನಮ್ಮ ಕಾತರಿಸಿದೆ ಜೀವಾ ತಾಳಲಾರೆನಮ್ಮ ಯಾತನೆ ತಾಳೆನು ಮುಳ್ಳ ಮೇಲಿನ ಬಾಳು ಆತನ ಮಾತೇನು ಪೇಳೆ ಸಖಿ || ೧ || ಕಣ್ಣಲಿ ಅವನದೆ ರೂಪವು ಕುಣಿದಿದೆ ...

ಏನ ಬೇಡಲಿ ನಿನ್ನ ಪ್ರಾಣದಾತನೆ ತಂದೆ ಮೂಜಗವನಾಡಿಸುವ ವಿಶ್ವದಾ ತಂದೆ || ಪ || ಈ ಜಗದಿ ಜೀವಿಸುವ ಸೌಭಾಗ್ಯ ಮೊದಲಾಗಿ ಸಾಜದಲಿ ನನಗಿತ್ತೆ ಮನುಜತೆಯ ದೇವಾ ಉತ್ತುಂಗ ಬೆಟ್ಟ ಇದೆ ನಗುತಿರುವ ಸೃಷ್ಟಿ ಇದೆ ನರ್ತಿಸುತ ಹರಿಯುತಿದೆ ಆನಂದ ಭಾವ || ೧ || ನ...

ಏನ ಕೊಡಲಿ ನಿನಗೇ ನಾ ತಂದೆ ಏನನರ್ಪಿಸಿದರೆ ನಿನಗೇ ಪ್ರೀತಿಯೊ || ಪ || ಪೀಠವನರ್ಪಿಸಲೆ ಭೂಮಿಯೆ ಪೀಠ ಗುಡಿಯನು ಕಟ್ಟಿಸಲೆ ಗಗನವೆ ದೇಗುಲ ಜಲದಲಿ ತೊಳೆಯಲೆ ಸಾಗರ ನಿನ್ನದಯ್ಯ ಹೂಗಳ ಮುಡಿಸಲೆ ವನವೆಲ್ಲ ನಿನ್ನದಯ್ಯ || ೧ || ದೀಪವ ಬೆಳಗಲೆ ರವಿತೇಜ ನ...

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ || ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. || ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ ಆತ್ಮದ | ಅಗಣಿತ ರೂಪ ಸಲೀಲಾ ಮಾನಸ ಲೋಕದ ಮತಿಯ...

ವಿಶ್ವಂಭರನೆ ವಿಶ್ವೇಶ್ವರನೆ | ವಿಚಿತ್ರ ನಿನ್ನಯಲೀಲೆ ತಂದೇ || ಪ || ವಿಶ್ವ ವಿಶ್ವಗಳ ತಿರುಗಿಸುತಿರುವೆ | ಎಲ್ಲಿಯೊ ಇರುವುದು ಸೂತ್ರ ವಿಶ್ವದ ಕಣಕಣದಲ್ಲಿಯು ಕೂಡ | ಹೊಳೆವುದು ನಿನ್ನಯ ಚಿತ್ರ || ೧ || ಅದೃಶ್ಯವೆಂಬರು ನಿನ್ನಯ ರೂಪ | ಕೋಟಿ ರೂಪ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...