ಏನ ಕೊಡಲಿ

ಏನ ಕೊಡಲಿ ನಿನಗೇ ನಾ ತಂದೆ
ಏನನರ್ಪಿಸಿದರೆ ನಿನಗೇ ಪ್ರೀತಿಯೊ || ಪ ||

ಪೀಠವನರ್ಪಿಸಲೆ ಭೂಮಿಯೆ ಪೀಠ
ಗುಡಿಯನು ಕಟ್ಟಿಸಲೆ ಗಗನವೆ ದೇಗುಲ
ಜಲದಲಿ ತೊಳೆಯಲೆ ಸಾಗರ ನಿನ್ನದಯ್ಯ
ಹೂಗಳ ಮುಡಿಸಲೆ ವನವೆಲ್ಲ ನಿನ್ನದಯ್ಯ || ೧ ||

ದೀಪವ ಬೆಳಗಲೆ ರವಿತೇಜ ನಿನ್ನದಯ್ಯ
ಧೂಪವ ಹಾಕಲೆ ಮಲಯಜ ಬೀಸುವ
ಆರತಿ ಎತ್ತಲೆ ತಾರೆ ಬೆಳಗುತಿವೆ
ನೈವೇದ್ಯ ಅರ್ಪಿಸಲೆ ಅನ್ನ ನಿಮ್ಮಯ ದಾನ || ೨ ||

ವಿಶ್ವವ ತುಂಬಿದ ವಿಶ್ವೇಶ್ವರನೆ
ನನ್ನಲು ನೀನೇ ತುಂಬಿರುವಾಗ
ನನ್ನನೆ ನಿನ್ನಡಿಗೆ ಒಪ್ಪಿಸಿಕೊಳುವೆನು
ಸ್ವೀಕರಿಸಯ್ಯಾ ಪಾವನಗೊಳಿಸಿ || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಿಮ್ಮ ಮನೆಗಳಲ್ಲಿ
Next post ‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…