ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ
ನಮ್ಮ ಪುಟ್ಟಿಯ ಕಂಡಿರೇ

ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ದಿಟ್ಟಳಾಗಿ ಬರುವಳು
ಅಷ್ಟು ಮಾತುಗಳ ಆಡುವಳು
ಇಷ್ಟು ಪ್ರಶ್ನೆಗಳ ಕೇಳುವಳು

ಮಸಿ ಬೊಟ್ಟವಳ ಗಲ್ಲದಲ್ಲಿ
ಹುಸಿ ನಗೆ ಅವಳ ತುಟಿಗಳಲಿ
ನಸೆಯಿತ್ತರೆ ಬೆನ್ನು ಬಿಡಲು
ಬಿಸಿ ಹಾಲು ಸಕ್ಕರೆ ಬೇಕೆನುವಳು

ಅಡುಗೆಕೋಣೆಯಲಿ ಅಡ್ಡಾಡುವಳು
ಲಡ್ಡು ಎಲ್ಲಿದೆಯೆಂದು ಕಾಡುವಳು
ಮಡಿವಂತರ ಬಂದು ಮುಟ್ಟುವಳು
ಹಿಡಿಯ ಹೋದರೆ ದೇವರಾಣೆಗೂ ಅವಳು ಸಿಕ್ಕಳು

ಕುತ್ತಿಗೆ ತೋಳಲಿ ಬಳಸುವಳು
ಅತ್ತಿತ್ತ ಹೋಗಲು ಬಿಡಲೊಲ್ಲಳು
ಎತ್ತಿಕೋ ಎಂದು ಹಟ ಮಾಡುವಳು
ಮುತ್ತಿಕ್ಕಿಕೊಂಡವರ ಭಾಗ್ಯದಂಥವಳು

ಮೆಲ್ಲನೆ ಹೋಗಿ ನಿಲ್ಲುವಳು
ಝಲ್ಲೆಂದು ಗೆಜ್ಜೆಯ ಧ್ವನಿಸುವಳು
ಮಲ್ಲಿಗೆಯಂಥವಳಮ್ಮ ನಮ್ಮ ಮಗಳು
ಚೆನ್ನ ಮಲ್ಲಿಕಾರ್ಜುನನಿಗೆ ಪ್ರಿಯವಾದವಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗೇವಿ – ೨
Next post ಏನ ಕೊಡಲಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…