ವೇಣು ಬಿ ಎಲ್

#ಕಾದಂಬರಿ

ನವಿಲುಗರಿ – ೧೩

0

ಕಮಲಮ್ಮ ರಂಗನೊಂದಿಗೆ ಮನೆಯಲ್ಲಿ ಕಾಲಿಟ್ಟಾಗ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಕಾವೇರಿ ಒಬ್ಬಳು ಮೂಲೆಯಲ್ಲಿ ಕೂತು ಮ್ಲಾನವದನಳಾಗಿದ್ದಳು. ಒಬ್ಬರಿಗೊಬ್ಬರು ನಗೆಚಾಟಿಕೆಯಲ್ಲಿ ತೊಡಗಿದ್ದವರಿಗೆ ಒಳಬಂದ ತಾಯಿ ಮಗನನ್ನು ನೋಡಿ ಕ್ಷಣ ತಳಮಳ, ತಟ್ಟನೆ ಪ್ರತಿಭಟನಾ ವೇದಿಕೆ ಸಿದ್ಧ ಮಾಡಿಕೊಂಡರು. ‘ಯಾಕೆ ಈ ಕಳ್ಳನನ್ನು ಬಿಡಿಸಿಕೊಂಡು ಬಂದೆ?’ ಲಾಯರ್ ದರ್ಪದಿಂದ ಎದ್ದುನಿಂತ, ರಂಗನನ್ನು ಮನೆಯಿಂದಾಚೆಗೆ ನೂಕುವವನಂತೆ. ‘ಕಳ್ಳಕಾಕರಿಗೆಲ್ಲಾ ಈ ಮನೆಯಲ್ಲಿ […]

#ಕಾದಂಬರಿ

ನವಿಲುಗರಿ – ೧೨

0

ರಂಗನ ಮನೆ ಮುಂದೆ ಪೊಲೀಸ್ ಜೀಪ್ ಬಂದಾಗ ನೆರೆಹೊರೆಯವರಿಗೆ ಅಚ್ಚರಿ. ಕಮಲಮ್ಮ ಕಾವೇರಿಗೆ ಗಾಬರಿ. ಅಣ್ಣಂದಿರು ಅತ್ತಿಗೆಯರಿಗೆಂತದೋ ಸಂಭ್ರಮವೆನಿಸಿದರೂ ತೋರಗೊಳ್ಳುವಂತಿಲ್ಲ. ರಂಗ ತನ್ನ ರೂಮಿನಲ್ಲಿ ಓದುತ್ತಾ ಕುಳಿತಿದ್ದ. ಇನ್ಸ್‌ಪೆಕ್ಟರ್‌ ಪೇದೆಗಳೊಂದಿಗೆ ಒಳ ಬಂದಾಗ ಪ್ರಶ್ನಿಸಿದ್ದು ಕಮಲಮ್ಮ. ಇನ್ಸ್‌ಪೆಕ್ಟರ್‌ ಆಕೆಗೆ ಉತ್ತರಿಸದೆ ‘ಮನೇನೆಲ್ಲಾ ಸರ್ಚ್ ಮಾಡಿ’ ಪೇದೆಗಳಿಗೆ ಅಪ್ಪಣೆಯಿತ್ತ. ಪೇದೆಗಳ ಮನೆಯಲ್ಲೆಲ್ಲಾ ತಡಕಾಡುವಾಗ ರಂಗ ಹೊರಬಂದ. ‘ಏನ್ಸಾರ್ […]

#ಕಾದಂಬರಿ

ನವಿಲುಗರಿ – ೧೧

0

ಮನೆಯಲ್ಲಿ ಚಿನ್ನು ಇಲ್ಲದಿರುವುದನ್ನು ಮೊದಲಿಗೆ ಗಮನಿಸಿದವಳು ಚಿನ್ನಮ್ಮ. ಅವಳ ಕೋಣೆಯಲ್ಲಿಲ್ಲವೆಂದರೆ ಕೆಂಚಮ್ಮಳ ಕೋಣೆಯಲ್ಲಿರಬಹುದೆಂದು ಭಾವಿಸಿ ಅಲ್ಲಿಗೆ ಹೋದಳು. ಕೆಂಚಮ್ಮ ಪ್ಲಕರ್‌ನಿಂದ ಹುಬ್ಬಿನಲ್ಲಿ ಹೆಚ್ಚು ಬೆಳೆದ ಕೂದಲನ್ನು ಕೀಳುತ್ತಿದ್ದವಳು ಚಿನ್ನಮ್ಮ ಒಳಬಂದೊಡನೆ ಕನ್ನಡಿ ಬದಿಗಿಟ್ಟು ಎದ್ದುನಿಂತಳು ‘ಬಾ ಅಕ್ಕಾ’ ಎಂದಳು. ‘ಚಿನ್ನು ಇಲ್ಲಿಗೇನಾರ ಬಂದವಳೇನೋ ಅಂತ ಬಂದೆ ಕಣೆ… ಈಗ ಒಂದಿಷ್ಟು ಆತಂಕಿತಳಾದಳು ಚಿನ್ನಮ್ಮ. ‘ಎಲ್ಲಿ ಹೋಗ್ತಾಳಕ್ಕ […]

#ಕಾದಂಬರಿ

ನವಿಲುಗರಿ – ೧೦

0

ನಡೆದ ಪ್ರಕರಣದಿಂದಾಗಿ ಪಾಳೇಗಾರರ ಮನೆಯವರು ಹೆಚ್ಚು ಹುಶಾರಾದರು. ಚಿನ್ನುವನ್ನು ನಡೆದ ಘಟನೆ ಬಗ್ಗೆ ಯಾರೊಬ್ಬರೂ ಪ್ರಶ್ನಿಸಲಿಲ್ಲ. ಸುದ್ದಿಯನ್ನೇ ಪ್ರಸ್ತಾಪಿಸಲಿಲ್ಲ. ಆಸ್ಪತ್ರೆಯಲ್ಲಿ ಚಿಗಪ್ಪನನ್ನು ಕಂಡಾಗಲೂ ಆತನೂ ಹಳೆಯದನ್ನು ಮೆಲುಕು ಹಾಕಲಿಲ್ಲ. ನಗುನಗುತ್ತಲೇ ಮಾತನಾಡಿದಾಗ ಭೂಮಿ ಬಾಯಿದೆರೆದು ತನ್ನನ್ನು ನುಂಗಬಾರದೇ ಎನಿಸಿದ್ದೂ ಅವಳಿಗೇ. ಮೈಲಾರಿಯ ಆವೇಶವನ್ನು ಹತೋಟಿಗೆ ತರಲು ಭರಮಪ್ಪ ಹರಸಾಹಸ ಪಟ್ಟಿದ್ದರು. ದಿನಗಳೆದಂತೆ ಅವನೂ ಸುಧಾರಿಸಿದನಾದರೂ ಈ […]

#ಕಾದಂಬರಿ

ನವಿಲುಗರಿ – ೯

0

ಪದೆಪದೆ ಕೈ ಕೊಡುವ ಸ್ಕೂಟಿಯನ್ನು ಮಾರಿದ ಉಗ್ರಪ್ಪ ಮಗಳಿಗೆ ಹೊಸ ಕಂಪನಿಯ ಕೆಂಬಣ್ಣದ ಸ್ಕೂಟಿ ಕೊಡಿಸಿದ. ತನ್ನ ಮಗಳು ನಡೆದು ಬರುವುದರಿಂದ ತನಗಾಗುವ ಅಪಮಾನಕ್ಕಿಂತ ಅವಳಿಗಾಗುವ ನೋವೇ ಆತನನ್ನು ಕಂಗೆಡಿಸಿದ್ದರಿಂದ ಹೊಸ ಸ್ಕೂಟಿಯನ್ನೇ ಮನೆಯ ಮುಂದೆ ತಂದು ನಿಲ್ಲಿಸಿ ಮಗಳ ಮೋರೆ ಅರಳುವುದನ್ನೇ ನೋಡಲು ಕಾದ. ಮೋರೆ ಅರಳಲಿಲ್ಲ! ‘ನಾನೆಲ್ಲಿ ಹೊಸದು ತರೋಕೆ ಹೇಳಿದ್ದೆ. ನಿಮಗೆ […]

#ಕಾದಂಬರಿ

ನವಿಲುಗರಿ – ೮

0

ರಂಗ ಕಾಲೇಜು ಮುಗಿಸಿ ಹಳ್ಳಿದಾರಿ ಹಿಡಿದಿದ್ದ ಮತ್ತದೇ ಜಾಗದಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಬಿಸಿಲಲ್ಲಿ ಒಣಗುತ್ತಾ ಬೆವರೊರೆಸಿಕೊಳ್ಳುತ್ತ ನಿಂತ ಚಿನ್ನು ಕಂಡಳು. ರಂಗ ನೋಡಿಯೂ ನೋಡದವನಂತೆ ಹೋಗಬೇಕೆಂದುಕೊಂಡನಾದರೂ ಮಾನವೀಯತೆ ಬ್ರೇಕ್ ಹಾಕಿತು. ‘ಮತ್ತೇನಾಯಿತು ಭವಾನಿ ನಿನ್ನ ಸ್ಕೂಟಿಗೆ?’ ಕೇಳಿದ. ‘ಲಡಾಸ್‌ನನ್ಮಗಂದು, ಮುಂದಿನ ವೀಲ್ ಪಂಕ್ಚರ್‌ ಆಗಿದೆ ಕಣೋ…’ ನಿಟ್ಟುಸಿರು ಬಿಟ್ಟಳು. ‘ತಳ್ಕೊಂಡು ನಡಿಬೇಕಪ್ಪಾ’ ಸಲಹೆ ನೀಡಿದ. ‘ನಮ್ಮಂತಹ […]

#ಕಾದಂಬರಿ

ನವಿಲುಗರಿ – ೭

0

ಚಿನ್ನುಗೆ ರಾತ್ರಿ ಬೇಗ ನಿದ್ದೆ ಮಾಡಿ ಅಭ್ಯಾಸವಾಗಿ ಹೋಗಿದೆ. ಈ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ ಬದಲು ರಂಗ ಬಂದ. ಅವನೊಬ್ಬ ವಿಚಿತ್ರ ಹುಡುಗ ಅನ್ನಿಸಿತವಳಿಗೆ. ತನ್ನನ್ನು ಸಂಗ್ರಾಮದಿಂದ ಪಾರು ಮಾಡಿದಾಗಲೂ ಅದೇ ನೆಪಮಾಡಿಕೊಂಡು ತನ್ನ ಹಿಂದೆ ಬೀಳಲಿಲ್ಲ. ತಾನಾಗಿಯೇ ಮಾತನಾಡಿಸಿದರೂ ಅವನಲ್ಲಿ ಅಂತಹ ವ್ಯತ್ಯಾಸವೇನು ಕಾಣುವುದಿಲ್ಲ. ಯಾರನ್ನೂ ಮಾತನಾಡಿಸದ ತನ್ನ ಕುಡಿನೋಟಕ್ಕಾಗಿ ಹುಡುಗರಿರಲಿ ಕಾಲೇಜು […]

#ಕಾದಂಬರಿ

ನವಿಲುಗರಿ – ೬

0

ರಂಗ ಕುಸ್ತಿಯಲ್ಲಿ ಗೆದ್ದರೂ ಅಂತಹ ಸಂತೋಷವಾಗಲಿ ಪುಳಕವಾಗಲಿ ಉಂಟಾಗಿರಲಿಲ್ಲ. ಯಾರಿಂದಲೂ ಆಗದ್ದನ್ನು ಸಾಧಿಸಿದೆ. ಹಳ್ಳಿಮಾನವನ್ನು ಕಾಪಾಡಿದೆನೆಂಬ ಭ್ರಮೆಯೂ ಅವನನ್ನಾವರಿಸಿರಲಿಲ್ಲ. ಕಾಲೆಳೆದುಕೊಂಡೆ ಮನೆಗೆ ಬಂದ. ಅವನು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಸಭೆ ಸೇರಿತ್ತು. ಮನೆಯೊಳಗೆ ಹೆಜ್ಜೆ ಇರಿಸಿದಾಗ ಗೃಧ್‍ನೋಟಕ್ಕೆ ಬಲಿಯಾದ. ಅಡಿಗೆಮನೆ ಬಾಗಿಲಲ್ಲಿ ತಾಯಿ-ತಂಗಿ ನಿಂತಿದ್ದರಾದರೂ ಅವರದ್ದೂ ಕಳಾಹೀನ ಮುಖವೆ. ಎಲ್ಲರ ಮೌನ ಅವನನ್ನು ಇರಿಯಿತು. ಬಳಲಿದ್ದ ಅವನಿಗೆ […]

#ಕಾದಂಬರಿ

ನವಿಲುಗರಿ – ೫

0

ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯ ಫೈನಲ್‌ಗೆ ನಿರೀಕ್ಷೆಯನ್ನು ಮೀರಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದ್ದರು. ರಂಗನ ತಂಡ ಗೆಲ್ಲುವ ಬಗ್ಗೆ ಬೆಟ್ಸ್ ಶುರುವಾಗಿತ್ತು. ಲೆಕ್ಚರರ್‌ಗಳಲ್ಲೂ ಯಾವ ಅನುಮಾನವಿರಲಿಲ್ಲ. ಆಟ ಆರಂಭವಾಗುತ್ತಲೇ ಶೀಟಿ ಚಪ್ಪಾಳೆಗಳು ಮೊಳಗಿದವು. ರಂಗನಲ್ಲಿದ್ದ ಹಾರ್ಸ್ ಸ್ಟ್ರೆಂಥ್ ಜಿಂಕೆಯ ಜಂಪಿಂಗ್ ಸ್ಟೈಲ್, ಹಾವಿನಂತೆ ತಪ್ಪಿಸಿಕೊಂಡು ಹರಿವ ಪರಿ, ಕರಾರುವಕ್ಕಾಗಿ ಬ್ಯಾಸ್ಕೆಟ್ ಬಾಲ್ ಎಸೆವ ಗೆಲುವಿನ ಗುರಿ ವೈರಿಗಳನ್ನು ತಲ್ಲಣಗೊಳಿಸಿದರೂ […]

#ಸಣ್ಣ ಕಥೆ

ಪ್ರಿಯಂವದ

0

ಸಿನಿಮಾ ಜನರಿಂದ ಹಣ ಕೀಳುವುದೂ ಒಂದು ಯಾಗ ಮಾಡಿದಂತೆಯೆ. ಎಷ್ಟೋ ಸಲ ಅಡ್ವಾನ್ಸ್ ಕೊಟ್ಟಷ್ಟೇ ಗ್ಯಾರಂಟಿ. ನನ್ನ ಪುಣ್ಯ, ನನಗೆ ಸಿಕ್ಕವರು ತೀರಾ ಚಿಲ್ಲರೆಗಳೇನಲ್ಲ. ಚಿಲ್ಲರೆ ಕೊಟ್ಟವರೂ ಅಲ್ಲ. ದೊಡ್ಡ ಬ್ಯಾನರ್‌ನವರು ದೊಡ್ಡದಾಗಿ ಹಣ ಕೊಡದಿದ್ದರೂ (ಜನರು ತಿಳಿದಂತೆ) ಹೇಳಿದಕ್ಕೂ ಕೈ ಬೀಸುವವರಲ್ಲ. ಇನ್ನು ಕೆಲವರು ಕೇಳಿದ್ದಕ್ಕಿಂತ ಐದುಸಾವಿರ ಹೆಚ್ಚೇ ತಗೊಳ್ಳಿ ಸಾರ್, ಕೆಲಸ ಬೊಂಬಾಟ್ […]