Home / ಕಥೆ / ಸಣ್ಣ ಕಥೆ / ಹೆಗ್ಗಡದೇವನಕೋಟೆ

ಹೆಗ್ಗಡದೇವನಕೋಟೆ

ರಾಜಒಡೆಯರ ತರುವಾಯ ಚಾಮರಾಜಒಡೆಯರೆಂಬುವರು ರಾಜ್ಯವನ್ನಾಳಿದರು. ಇವರ ಕಾಲದಲ್ಲಿ ರಾಜ್ಯವು ವಿಸ್ತಾರವಾಯಿತು. ಮೈಸೂರಿನ ಸೇನೆಯವರು ಸುತ್ತಮುತ್ತಣ ಸ್ಥಳಗಳನ್ನು ಗೆಲ್ಲುತ್ತಿದ್ದರು. ಆಗ ಹೆಗ್ಗಡದೇವನಕೋಟೆಯನ್ನು ಹಿಡಿಯಲು ಒಂದು ದಳವು ಹೊರಟಿತು.

ಆ ಕೋಟೆಯ ಯಜಮಾನನಾಗಿದ್ದ ಚನ್ನರಾಜಒಡೆಯನೆಂಬಾತನು ಆಗ ಕೋಟೆಯಲ್ಲಿರಲಿಲ್ಲ. ತನ್ನ ಸೈನ್ಯವನ್ನು ತೆಗೆದುಕೊಂಡು ದೂರವಾಗಿ ಹೋಗಿದ್ದರು. ಮೈಸೂರಿನ ದಳವು ಕೋಟೆಯನ್ನು ಮುತ್ತಿದಾಗ ಕೋಟೆಯ ಒಳಗಿದ್ದವರು ನಿಸ್ಸಹಾಯರಾಗಿದ್ದರು. ಅವರ ಕಡೆಯ ವಕೀಲನು ಅತಿಸಾಧುವಾಗಿದ್ದನು; ಆತನು ಕಾಣಿಸಿಕೊಂಡು “ನಮ್ಮ ಒಡೆಯರವರು ಸೈನ್ಯವನ್ನು ಕರೆದುಕೊಂಡು ದೂರದೇಶದಲ್ಲಿದ್ದಾರೆ. ರಾಣಿಯವರು ಗರ್ಭಿಣಿಯಾಗಿದ್ದಾರೆ ಮತ್ತು ನಿಮ್ಮ ಮುತ್ತಿಗೆಯಿಂದ ಬಹಳ ಗಾಬರಿಪಟ್ಟಿದ್ದಾರೆ. ಕೋಟೆಯಲ್ಲಿರುವವರು ೫೦ ಸೈನಿಕರು ಮಾತ್ರ. ಅಲ್ಲದೆ ದಕ್ಷಿಣಮುಖಕ್ಕೂ ಪೂರ್ವಮುಖಕ್ಕೂ ಮಳೆಗಾಲದ ಹಾವಳಿಯಿಂದ ಪೌಳಿಗೋಡೆಯು ಹಾಳಾಗಿದೆ. ಇಂತಹ ಸಮಯದಲ್ಲಿ ತೀವ್ರ ಬಂದು ಮುತ್ತುವುದು ಧರ್ಮವಲ್ಲ” ಎಂದು ಹೇಳಿದನು. ಮೈಸೂರಿನವರು ಕೊಳ್ಳೆಯನ್ನು ದಕ್ಕಿಸಿಕೊಂಡು ಹಿಂತಿರುಗಿದರು.
*****
[ವಿಲ್ಕ್ಸ್, ಸಂ. ೧ ಪುಟ ೨೯]

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...