ವೃಷಭೇಂದ್ರಾಚಾರ್‍ ಅರ್ಕಸಾಲಿ

#ಕವಿತೆ

ಎಲ್ಲಿಗೆ ಓಡುವುದು

0

ಗದಲ ಗೋಜಲು ದೂಳು ದುಮ್ಮು ದುರ್ವಾಸನೆ ಸಿಡಿಮದ್ದುಗಳ ಕಟುನಾತ ಕೊಳಚೆ ಹರಿವ ಓಣಿ ಬೀದಿಗಳು ದಾರಿಯಲ್ಲಿ ಬಿಡಾಡಿ ದನ-ಜನಗಳು ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ ನಿಂತು ಮೆಲುಕು ಹಾಕುತ್ತಿವೆ ಸರಭರ ವಾಹನಗಳು ಕಿವಿಕೊರೆಯುತ್ತಿವೆ ಧೂಳೆಬ್ಬಿಸಿ ಮೂಗಿಗಡರಿಸಿ ಉಸಿರುಕಟ್ಟಿಸಿವೆ ಕಣ್ಣಿಗಡರಿ ದಿಕ್ಕು ಕಾಣದ ಮಲಿನ ಪರಿಸರ ವ್ಯಕ್ತಿ ವ್ಯಕ್ತಿಗಳ ಸ್ವಾರ್ಥ ನೀಚ ಕುತಂತ್ರಗಳು ಜಾತಿಜಾತಿಗಳ ಕತ್ತಿ ಮಸೆತಗಳು […]

#ಕವಿತೆ

ವೇಸ್ಟ್‌ ಬಾಡೀಸ್

0

ಇದ್ದರು ಒಂದೇ ಇಲ್ಲದಿದ್ದರು ಒಂದೇ|| ಮುದಿ ತಂದೆ-ತಾಯಿ ಏಳಲು ಬಾರದೆ ಹಾಸಿಗೆ ಹಿಡಿದು ನರಳಾಡುತಿರಲು ಬಂದು ನೋಡದೆ ತಂದು ಉಣಿಸದೆ ದೂರವಾದ ಈ ಮಕ್ಕಳೆಲ್ಲರು || ಇದ್ದರು || ಮಕ್ಕಳಿಲ್ಲವೆಂದನೇಕ ದೇವರ ಹರಕೆ ಹೊತ್ತು ಪಡೆದವರಿಗೆ ಉಣಿಸಿ ಬೆಳೆಸಿ ದೊಡ್ಡವರ ಮಾಡಿ ಓದಿಸಿ ಬಾಳಿಗೆ ಮಾರ್ಗವ ಹಿಡಿಸಿ ದುಡಿದವರ ಕಾಲಲ್ಲಿ ಒದ್ದು ಬಯ್ಯುವ ಸಂತಾನ ಓದಲು […]

#ಕವಿತೆ

ದೀಪ ಆರದಿರಲಿ

0

ಎಷ್ಟು ದಿನಾದರು ಇಷ್ಟಿಷ್ಟೆ ಆಶೆಗಳು ನಷ್ಟವಾಗುತಾವೆ ಮನದಾಗೆ ತೇಲುವ ಕನಸೆಲ್ಲ ಆವ್ಯಾಗಿ ಹೋಗ್ತಾವೆ ಇಳಿವಲ್ದು ಮಳೆಯಾಗಿ ನೆಲದಾಗೆ ಕಾಲಕಾಲಕು ನಿನ್ನ ಕರಿತಾನೆ ಬದುಕೀನಿ ಕರೆಯೋದು ಒಂದೇ ಕೊನೆಯಾಸೆ ಏನೆಲ್ಲ ಇದ್ರೂನು ಏನೆಲ್ಲ ಬಂದ್ರೂನು ಕೊರಗೋದು ತಪ್ಪಿಲ್ಲ ಅಳಿಯಾಸೆ ಅಂದುಕೊಂಡದ್ದಲ್ಲ ಅವಲಕ್ಷಣಾದೀತು ಆಶೆ ಮಾಡಿದ್ದು ಹುಸಿಯಾತು ಮಾಡಿದ್ದು ಮುಟ್ಟಿದ್ದು ಎಡವಟ್ಟೆ ಆದೀತು ಕನಸಿನ ಮಂಟಪ ಕುಸಿದಿತ್ತು ಆಶೆಯ […]

#ಕವಿತೆ

ಎಲ್ಲಿ ಕುಂತಾನೊ ದೇವರು

0

ಎಲ್ಲಿ ಕುಂತಾನೊ ದೇವರು ಎಲ್ಲವ ನೋಡುತ ಕುಂತಾನೊ ದೇವರು|| ನ್ಯಾಯಾಲಯದಲಿ ಜಡ್ಜನ ಮುಂದೆ ದೇವರ ಮೇಲೆ ಪ್ರಮಾಣ ಮಾಡಿಸಿ ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ || ಪಾರ್ಲಿಮೆಂಟಿನಲಿ ವಿಧಾನಸೌಧದಿ ಜನಗಳ ಸೇವೆ ಮಾಡ್ತೀವಂತ ಪ್ರತಿಜ್ಞೆವಚನಾ ಮಾಡಿದ ಮಂತ್ರಿ ಕೋಟಿಗಟ್ಟಲೆ ನುಂಗುತ್ತಿರಲು || ಎಲ್ಲಿ || ಜೀವಾ ಉಳಿಸುವ ಪ್ರತಿಜ್ಞೆಮಾಡುತ […]

#ಕವಿತೆ

ರೊಕ್ಕದ ರೇಸು

0

ರೊಕ್ಕದ ರೇಸು ಹೊಂಟೈತೆ ತಗೊ ಸಿಕ್ಕಿದ ದಾರಿಯೆ ಹಿಡಿದೈತೆ ನನಗೇ ತನಗೇ ಎನ್ನುತ ನುಗ್ಗಿದೆ ಬಾಚುತ ದೋಚುತ ಗಳಿಸುತ ಬಲಿಯುತ ಓಡಲಾಗದೇ ಕಂಗೆಟ್ಟವರನು ತೊತ್ತಳ ತುಳಿಯುತ ಸಾಗೈತೆ ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ ಗೂಡು ಇಲ್ಲದೆ ಪಾಡು ಇಲ್ಲದೆ ನರಳುವ ಮಂದಿ ಹೊರಳಾಡೈತೆ ತುಳಿಯುವ ಕಾಲಾಗೆ ಬಿದ್ದೈತೆ ರೊಕ್ಕದ ದಾರ್ಯಾಗೆ ಕರುಣೆಯು ಬತ್ತೈತೆ ಹೃದಯವು ಕೊರಡೇ ಆಗೈತೆ ಮಾನವೀಯತೆಯು […]

#ಕವಿತೆ

ರೊಕ್ಕದ ಮಹಿಮೆ

0

ರೊಕ್ಕದ ಲೀಲೆಯು ದೊಡ್ಡದೋ ಜಗದಿ ರೊಕ್ಕದ ಮಹಿಮೆಯು ದೊಡ್ಡದೋ ಕಾಮದ ದಾಹಾ ಕರುಳಿನ ದಾಹ ಹಸಿವು ನೀರಡಿಕೆಗಳ ದಾಹವುಂಟು ನೋಡುವ ಮೂಸುವ ತಿನ್ನುವ ಸವಿಯುವ ಕೇಳುವ ದಾಹಾ ದೇಹಕ್ಕುಂಟು ಪ್ರೀತಿಯ ದಾಹಾ ಸ್ನೇಹದ ಮೋಹಾ ನಾನೂ ನೀನೂ ಜೀವಕೆ ಜೀವ ಎಲ್ಲ ದಾಹಗಳು ಹಣದ ದಾಹದಲಿ ಬಿಸಿಲಿಗೆ ಮಂಜಾಗಿ ಕರಗುತಾವ ಸತ್ಯ ಸಾದಾಸೀದ ಸಾಚಾಗುಣವೆಲ್ಲ ನರಸತ್ತು […]

#ಕವಿತೆ

ಸುವರ್ಣ ಸ್ವಾತಂತ್ರ್ಯ

0

ಭಾರತ ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಹಬ್ಬವ ಮಾಡೋಣ ಬನ್ನಿರಿ ಗೆಳೆಯರೆ ದೇಶ ಬಾಂಧವರೆ ಸ್ವಾತಂತ್ರ್ಯವ ಕೊಂಡಾಡೋಣ ತಿಲಕ್ ಗೋಖಲೆ ಮಹಾತ್ಮ ಗಾಂಧಿ ಸುಭಾಷ್ ವಲ್ಲಭ ಜವಾಹರ ಸಾವಿರ ಸಾವಿರ ದೇಶಭಕ್ತ ಜನ ಹೋರಾಡುತ ಗಳಿಸಿದಾ ವರ ಎಷ್ಟೋ ಜನ ಪ್ರಾಣಗಳನು ತೆತ್ತರೊ ತಾಯಿಯ ಪಾದಕ್ಕೆ ನೈವೇದ್ಯ ರಕ್ತದಿ ಬರೆದರೊ ತ್ಯಾಗದ ಕತೆಗಳ ಎಲರಿಗೂ ವಂದನೆಯಾದ್ಯ ಬ್ರಿಟಿಷರ […]

#ಕವಿತೆ

ನಾವು ಮನುಜರು

0

ನಾವು ಸಾಮಾನ್ಯರು ಕಡಿಯುತ್ತೇವೆ ಕುಡಿಯುತ್ತೇವೆ ತಿನ್ನುತ್ತೇವೆ ಮಲಗುತ್ತೇವೆ ಬಾಧೆಗಳಿಂದ ಮುಲುಗುತ್ತೇವೆ ಹಸಿಯುತ್ತೇವೆ ಹುಸಿಯುತ್ತೇವೆ ನುಸಿಯುತ್ತೇವೆ ಮಸೆಯುತ್ತೇವೆ ಸಂದುಗಳಲ್ಲಿ ನುಸುಳುತ್ತೇವೆ ಸಿಕ್ಕಷ್ಟು ಕಬಳಿಸುತ್ತೇವೆ ಸಿಗಲಾರದ್ದಕ್ಕೆ ಹಳಹಳಿಸುತ್ತೇವೆ ಕನಸುಗಳ ಹೆಣೆಯುತ್ತೇವೆ ನನಸಾಗದೆ ದಣಿಯುತ್ತೇವೆ ಪರದೆಗಳಲ್ಲಿ ಕುಣಿಯುತ್ತೇವೆ ಕಾಣದುದರ ಬೆದರಿಕೆಗೆ ಮಣಿಯುತ್ತೇವೆ ಹೊರಗೆ ಬಂದು ಬೀದಿಗಳಲ್ಲಿ ನಿಸೂರಾಗಿ ನಡೆಯುತ್ತೇವೆ ಗುಂಪಿನಲ್ಲಿ ಗೋವಿಂದಾ ಸೀದಾ ಸಾದಾ ಸಾಚಾತನಗಳಿಗೆ ನಾವೇ ಹಕ್ಕುದಾರರು ನ್ಯಾಯ […]

#ಕವಿತೆ

ವಿಶ್ವಕರ್ಮ ಸೂಕ್ತ

0

ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು ಹೋತಾರನಾಗಿ ಯಜ್ಞದಲಿ ಅರ್ಪಿಸಿದ ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ ಮೊದಲಿಗನು ತಾನಾಗಿ ಸೇರಿಹೋದ ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು ಯಾವುದದು ತಾನಿತ್ತು ಹೇಗೆ ಇತ್ತು ವಿಶ್ವಚಕ್ಷುವು ವಿಶ್ವಕರ್ಮನಾ ಮಹಿಮೆಯದು ಈ ಭೂಮಿಗಗನಗಳ ಸೃಷ್ಟಿಸಿತ್ತು ವಿಶ್ವವೆಲ್ಲಾ ಕಣ್ಣು ವಿಶ್ವವೆಲ್ಲಾ ಬಾಯಿ ವಿಶ್ವವೆಲ್ಲಾ ಬಾಹು ಪಾದವಿರುವ ಹಕ್ಕಿ ರೆಕ್ಕೆಗಳಂತೆ ತೆಕ್ಕೆಯಲಿ […]

#ಕವಿತೆ

ದೇಶ ದೇಹ

0

ಈ ದೇಶ ದೇಹದ ಶಕ್ತಿ ಕುಂದುತ್ತಿದೆ ಚೈತನ್ಯಹೀನವಾಗುತ್ತಿದೆ ರಕ್ತ ಕಡಿಮೆಯಾಗುತ್ತಿದೆ ಯುವ ಪೀಳಿಗೆ ಪೋಲು ಪೋಲಿಗಳಾದಂತೆ ಹಲ್ಲುಗಳು ಒಂದೊಂದೇ ನೋವು ನರಳಿ ಉದುರುತಿವೆ ಕೋಲಾರ ಚಿನ್ನದ ಗಣಿ ಕಿರ್ಲೊಸ್ಕರ ಕಂಪನಿ ಅಸಂಖ್ಯ ಬಟ್ಟೆ ಗಿರಣಿ ಸಿಕ್ ಇಂಡಸ್ಟ್ರೀಸ್ ಒಂದೊಂದೇ ಉದುರಿದಂತೆ ಕೂದಲು ಬೆಳ್ಳಗಾಗುತ್ತಿದೆ ಕಪ್ಪು ಮಾಯ ಹಚ್ಚಹರಿತ್ತಿನ ಗಿಡಮರಗಳು ಕಡಿದುರುಳಿ ನೆಲಬಂಜೆ ಬರಡಾದಂತೆ ಕೂದಲುದುರಿ ಬೋಳು […]